ಬೀಗರ_ಊಟ #ಮಾಂಸಹಾರಿಗಳ_ಸಂಪ್ರದಾಯ_ಹೇಗಿರಬೇಕು? #ಈಗ_ಹೇಗಿದೆ!... ಮಲೆನಾಡಿನಲ್ಲಿ ಶ್ರೀಮಂತರ ಮನೆಯ ಬೀಗರ ಬಾಡೂಟದ ದಾಮ್ ದೂಮ್ ಆಚರಣೆ ಇತ್ತೀಚಿನ ದಿನಗಳಲ್ಲಿ ಮಧ್ಯಮ ಮತ್ತು ಬಡ ಕುಟುಂಬಗಳೂ ಅನುಕರಿಸಲು ಪ್ರಾರಂಬಿಸಿದೆ. ಬೀಗರ ಊಟ,ಬಾಡೂಟಕ್ಕೆ ವಿರೋದವಿಲ್ಲ ಆದರೆ ಪದ್ಧತಿಗೆ ಅನುಸಾರವಾಗಿ ಮದುವೆ ದಿನ ವದು ವರರ ಗೃಹ ಪ್ರವೇಶದ ದಿನ ಬೇಡ ಅಂತ ಕೆಲವರು ಹೇಳುತ್ತಾರೆ. ಇನ್ನು ಕೆಲವರು ಶ್ರೀಮಂತರನ್ನ ಅನುಕರಿಸಲು ಹೋಗಿ ಮಧ್ಯಮ ಮತ್ತು ಬಡ ಕುಟುಂಬಗಳು ಸಂಕಷ್ಟಕ್ಕೆ ಈಡಾಗುವ ಈ ಅನಿಷ್ಟ ಪದ್ದತಿಗೆ ನಿಶೇದ ಹೇರಲೇ ಬೇಕು ಎನ್ನುತ್ತಾರೆ. ಇದರಿಂದಾಗಿ ಒಂದು ಕಡೆ ಆರ್ಥಿಕ ಸಂಕಷ್ಟ ಇನ್ನೊಂದು ಕಡೆ ನೂತನ ವದು ವರರ ಗೃಹ ಪ್ರವೇಶದ ದಾರ್ಮಿಕ ವಿಧಿಗಳು ಕಡಿಮೆ ಪ್ರಾಮುಖ್ಯತೆ ಪಡೆದಿದೆ. ಶಿವಮೊಗ್ಗ ಜಿಲ್ಲೆಯ #ಶಿಕಾರಿಪುರ ತಾಲ್ಲೂಕಿನ #ಹರಗಿ ಎಂಬ ಗ್ರಾಮದಲ್ಲಿ ಗ್ರಾಮದ ಮುಖಂಡರು ಇಂತಹ ಬಾಡೂಟದ ಬೀಗರ ಊಟಕ್ಕೆ #ನಿಶೇದ ಹೇರಿದ್ದಾರೆ ಮತ್ತು ಗ್ರಾಮದ ತೀರ್ಮಾನ ಮೀರಿದರೆ ಒಂದು ಲಕ್ಷ ರೂಪಾಯಿ ದಂಡ ವಿದಿಸುವುದಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನ ಮಲೆನಾಡಿನಾದ್ಯಂತ ವಿಶೇಷ ಗಮನ ಸೆಳೆದಿದೆ ಹೊಸ ಆಚರಣೆ ಆಗಿ ಆರ್ಥಿಕವಾಗಿ ಮತ್ತು ಅನೇಕ ಸಮಸ್ಯೆಗೆ ಕಾರಣ ಆಗಿರುವ ಈ ದುಬಾರಿ ಬಾಡೂಟದ ಬೀಗರ ಊಟದ ವಿರುದ್ಧ ಅನೇಕ ಯುವಕರು ತಮ್ಮ ಧ್ವನಿ ಎತ್ತಿದ್ದಾರೆ. ಇದು ಮುಂ...