Skip to main content

Posts

Showing posts with the label BHARA PANTH NATHA YATRA.

BHARAPANTH,JUNDI YATRA OF NATHA PANTH.ಬಾರಾ ಪಂಥ್, ಜೋOಡಿ ಹೀಗೆ ಕರೆಯುವ 12 ವಷ೯ಕೊಮ್ಮೆ ನಾಸಿಕ್ ನಿಂದ ಮಂಗಳೂರಿಗೆ ಬರುವ ನಾಥಪಂಥದ ಪಾದಯಾತ್ರೆ.

ನಾವೆಲ್ಲ ಆನಂದಪುರಂನಿಂದ ಪ್ರತಿದಿನ ರೈಲಿನಲ್ಲಿ ಪ್ರೌಡ ಶಿಕ್ಷಣಕ್ಕೆ ಸಾಗರಕ್ಕೆ ಹೋಗುತ್ತಿದ್ದೆವು, 1980ನೇ ಇಸವಿ ಇರಬೇಕು ಆ ದಿನ ಸಾಗರಕ್ಕೆ ಬೃಹತ್ ಖಾವಿದಾರಿಗಳ ಮೆರವಣಿಗೆ ಬಂತು, ಅದರಲ್ಲಿ ಗಡ್ಡದಾರಿಗಳು, ಬೆತ್ತಲೆ, ಅರೆಬೆತ್ತಲೆಯವರು ಇದ್ದರು.      ಅವರಾರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಂದ ಬಂದರು ಅಂತ ಯಾರಿಗೆ ಕೇಳಿದರೂ ಉತ್ತರ ಸಿಗಲಿಲ್ಲ, ವಿದ್ಯಾಥಿ೯ಗಳಾದ ನಮಗೆ ಕುತೂಹಲ ಮತ್ತು ನಾವು ಊರಿಗೆ ಹಿಂದಿರಿಗಿ ಹೋಗುವ ರೈಲು ಬರಲು ಸಾಕಷ್ಟು ವೇಳೆ ಇದ್ದಿದ್ದರಿಂದ ಆ ಮೆರವಣಿಗೆ ಹಿಂದೆಯೇ ನಾವೆಲ್ಲ ಹೋದವು, ಕೆಲವರು "ಓಹೋ ಇವೆರೆಲ್ಲ ಅಗೋರಿಗಳು, ನರಮಾಂಸ ಭಕ್ಷಕರು "ಅಂದಾಗ ಭಯಪಟ್ಟೆವಾದರೂ ನೋಡೇ ಬಿಡೋಣ ಎಲ್ಲಿ ತನಕ ಹೋಗುತ್ತಾರೆ ಅಂತ ನಮ್ಮ ನಡಿಗೆ ಮುಂದುವರಿಸಿದೆವು, ಅಂತಿಮವಾಗಿ ಸಾಗರದ ಗಣಪತಿ ದೇವಸ್ಥಾನ ತಲುಪಿತು.     ದೇವಸ್ಥಾನದ ಹೊರಭಾಗದ ದೊಡ್ಡ ಪೀಠದಲ್ಲಿ ಈ ಯಾತ್ರೆಯ ಮುಖ್ಯಸ್ಥರು ಕುಳಿತರು ಅಷ್ಟರಲ್ಲಿ ಅಲ್ಲಲ್ಲಿ ವಿಶ್ರಮಿಸಿದ ಅವರ ಸಂಗಾತಿಗಳೆಲ್ಲ ಗಾಂಜಾ ಸೇವನೆಯಲ್ಲಿ ತೊಡಗಿದಾಗ ಅಲ್ಲಿನ ವಾತಾವರಣ ಭಯದ ಆಲಯವಾಯಿತು, ಇವರನ್ನ ನೋಡಲು ಸೇರಿದ ಜನಸ೦ದಣಿ ಅವರವರ ಮಕ್ಕಳನ್ನ "ಸಾಕು ಮನೆಗೆ ಹೊರಡಿ ಅವರೆಲ್ಲ ಮೋಡಿ ಮಾಡಿ ಮಕ್ಕಳನ್ನ ಒಯತಾರೆ " ಅಂತ ಹೆದರಿಸಿ ಕರೆದೊಯ್ಯಲು ಶುರು ಮಾಡಿದಾಗ ನಾವು ಹೆದರಿಕೆ ಮತ್ತು ನಮ್ಮ ರೈಲಿನ ಸಮಯ ಆಗಿದ್ದರಿಂದ ಅಲ್ಲಿಂದ ಕಾಲು ಕಿತ್ತೆವು.   ...