Skip to main content

Posts

Showing posts with the label Family tree of Anandapuram Landlord Ramakrishna Iyengar.

ಭಾಗ-4, ಆನಂದಪುರಂ ನ ನಿಮಾ೯ತೃ ಜಮೀನ್ದಾರ್ ರಾಮಕೃಷ್ಣ ಅಯ್ಯ೦ಗಾರರ ಕುಟುಂಬದ ವಿವರ

#ಭಾಗ_4 #ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.  ಮೊದಲ ಪತ್ನಿ ಮೃತರಾದಾಗ ಇನ್ನೊಂದು ವಿವಾಹ ಆಗುತ್ತಾರೆ ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.      ಮೊದಲ ಪುತ್ರ ಜಗನ್ನಾಥ ಅಯ್ಯ೦ಗಾರರು ಮೃತರಾಗುತ್ತಾರೆ. ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.     ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ್ರೋತ್ಸವಕ್ಕೆ ಬಂದು ತಮ್ಮ ಭಕ್ತಿ ಸಮಪಿ೯ಸುತ್ತಾರೆ ಮತ್ತು ಇದಕ್ಕಾಗಿ ಕೆಲ ಲಕ್ಷ ರೂಪಾಯಿ ವ್ಯಯಿಸುತ್ತಾರೆ.     ವೆಂಕಟಚಲಯ್ಯಂಗಾರರ ಮಕ್ಕಳು ಮೊಮ್ಮಕ್ಕಳು ಕುಟುಂಬ ಸಮೇತ ಪ್ರತಿ ತಿಂಗಳು ಆನಂದಪುರಂಗೆ ಬರುತ್ತಾರೆ ಮತ್ತು ವಾರಗಟ್ಟಲೆ ಇಲ್...