Skip to main content

Posts

Showing posts with the label Ethino will destroy Rubber tree within 4years

ಶಿವಮೊಗ್ಗಾ ಜಿಲ್ಲಾ ಮಲೆನಾಡ ರಬ್ಬರ್ ಬೆಳೆಗಾರರೇ ಎಚ್ಚರ! ಹೆಚ್ಚು ರಬ್ಬರ್ ಬರಲು ಎಥಿನೋ ಎಂಬ ಮಾರಕ ರಾಸಾಯನಿಕ ರಬ್ಬರ್ ಪಸಲು ಗುತ್ತಿಗೆದಾರರು ಬಳಸುತ್ತಿದ್ದಾರೆ ಇದರಿಂದ 40 ವರ್ಷ ಪಸಲು ಬರುವ ಮರ 4 ವಷ೯ದಲ್ಲಿ ನಿನಾ೯ಮವಾಗಲಿದೆ.

ಶಿವಮೊಗ್ಗ ಜಿಲ್ಲಾ ರಬ್ಬರ್ ಬೆಳೆಗಾರರ ಗಮನಕ್ಕಾಗಿ     ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ  ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್ ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.    ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ  ರಬ್ಬರ್ ಬೆಳೆಸಿದ್ದಾರೆ.     ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ 10 ವರ್ಷದಿಂದ ರಬ್ಬರ್ ಖರೀದಿ ಬೆಲೆ 100 ರಿಂದ 150 ರ ಒಳಗೆ ಉಳಿದು ಬಿಟ್ಟಿದ್ದು ಮಾತ್ರ ಸೋಜಿಗ ಇದರಿ೦ದ ಮಲೆನಾಡಿನ ರಬ್ಬರ್ ಬೆಳೆಗಾರರು ರಬ್ಬರ್ ಬೆಳೆಯ ಮೇಲೆ ವಿಶ್ವಾಸ ಕಳ...