https://youtu.be/5eXkuL1CdMs #ಸುದ್ದಿವಾಹಿನಿ_ಸುದ್ದಿಗಳು_ಮು೦ದಿನ_ಗಂಡಾಂತರ_ತೆರೆದಿಡುತ್ತಿದೆ. #ಪಶ್ಚಿಮಘಟ್ಟಗಳ_ಜನವಸತಿ_ಪ್ರದೇಶದಲ್ಲಿ_ಅವರಿಸಿರುವ_ಗಾಂಜಾ_ಗಮಲು. #ಪ್ರಾರಂಭದಲ್ಲಿ_ಗಾಂಜಾ_ಬೆಳೆಯುತ್ತಿದ್ದರು_ಆಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಇರಲಿಲ್ಲ #ಈಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಹೆಚ್ಚಾಗಿದ್ದಾರೆ_ಗಾಂಜಾ_ಬೆಳೆಯುವವರು_ಕಡಿಮೆ_ಆಗಿದ್ದಾರೆ. #ಬೇರೆ_ಕಡೆಯಿಂದ_ಗಾಂಜಾ_ಇಲ್ಲಿ_ಮಾರಾಟ_ಆಗುತ್ತದೆ. #ಅಮಲು_ಪದಾರ್ಥದ_ಮೇಲಿನ_ಸದ್ಬಾವನೆ_ನಂತರದ_ಪಲಾನುಭವಿ_ಆ_ಕುಟುಂಬದವರೆ_ಆಗುವ_ವಿಪರ್ಯಾಸ. #ಇದು_ಎಲ್ಲಾ_ನಮ್ಮ_ಪಶ್ಚಿಮಘಟ್ಟದ_ಹಳ್ಳಿ_ಕಥೆ ಪಶ್ಚಿಮ ಘಟ್ಟಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು. ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬರಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು. ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು...