ಭಾಗ - 48, ಆನಂದಪುರಂ ಇತಿಹಾಸ, 1960 ರಲ್ಲಿ ಮಾಸಿಕ 40 ರೂಪಾಯಿ ವೇತನಕ್ಕೆ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆಗಿನ ಅಧ್ಯಕ್ಷರಾದ ವೆಂಕಟಾಚಲ ಅಯ್ಯಂಗಾರರಿಂದ ನೇಮಕ ಆಗಿದ್ದ ಸುಣಗಾರ್ ಸತ್ಯಪ್ಪ ನಿವೃತ್ತಿ ಆಗಬೇಕಾದಾಗ 1200 ರೂಪಾಯಿ ವೇತನ ಪಡೆಯುತ್ತಿದ್ದರು.
#ಭಾಗ_48. #ಆನಂದಪುರಂ_ಇತಿಹಾಸ #ಆನಂದಪುರಂನ_ಮೊದಲ_ವಾಟರ್_ಮನ್, #ಸುಣಗಾರ್_ಸತ್ಯಪ್ಪ_ಬದರಿನಾರಾಯಣ_ಅಯ್ಯ೦ಗಾರ್_ಸಹೋದರ_ವೆಂಕಟಾಚಲ_ಅಯ್ಯ೦ಗಾರರಿಗೆ_ಆಪ್ತ #ಆನಂದಪುರಂಗೆ_1965ರಲ್ಲಿ_ಸಾರ್ವಜನಿಕ_ನಲ್ಲಿ_ನೀರುಸರಭರಾಜು_ಪ್ರಾರಂಭ. #ಆಗ_ಇದ್ದದ್ದು_30_ಪಬ್ಲಿಕ್_ಟ್ಯಾಪ್ 1960ರಲ್ಲಿ ಆನಂದಪುರಂ ವಿಲೇಜ್ ಪ೦ಚಾಯತ್ ಅಧ್ಯಕ್ಷರು ಭೂ ಮಾಲಿಕರು, ಇನಾಂದಾರರು ಕೊಡುಗೈ ದಾನಿಗಳಾಗಿದ್ದ ರಾಮಕೃಷ್ಣ ಅಯ್ಯಂಗಾರರ ಸುಪುತ್ರ ವೆಂಕಟಾಚಲ ಅಯ್ಯಂಗಾರರು, ಆಗ ಸಾಗರ - ಹೊಸನಗರ-ತೀರ್ಥಹಳ್ಳಿ ಜಂಟಿ ವಿಧಾನಸಭಾ ಕ್ಷೇತ್ರದ ಶಾಸಕರು ಇವರ ಸಹೋದರ ಬದರಿನಾರಾಯಣ ಅಯ್ಯಂಗಾರ್ ಆಗ ವಿಲೇಜ್ ಪಂಚಾಯತ್ ಗೆ 7ನೇ ತರಗತಿ ತನಕ ಓದಿದ್ದ ಸುಣಗಾರ್ ಸತ್ಯಪ್ಪರಿಗೆ ಆನಂದಪುರಂ ವಿಲೇಜ್ ಪಂಚಾಯತಿಯಲ್ಲಿ ಮಾಸಿಕ 40 ರೂಪಾಯಿ ವೇತನದಲ್ಲಿ ಸಹಾಯಕನಾಗಿ ನೇಮಿಸುತ್ತಾರೆ. ಆನಂದಪುರಂ, ದಾಸಕೊಪ್ಪ, ಮಲಂದೂರು, ತಾವರೆಗಳ್ಳಿ, ಯಡೇಹಳ್ಳಿ, ಆಚಾಪುರ, ಅಂದಾಸುರ ಮತ್ತು ಮುರುಘಾಮಠ ವ್ಯಾಪ್ತಿಯ ಮನೆ ಕಂದಾಯ ವಸೂಲಿ, ಆನಂದಪುರಂ ದೊಡ್ಡಿ ನಿವ೯ಹಣೆ, ಸಾಗರ ಟ್ರಿಜರಿಗೆ ಹಣ ಸಂದಾಯ, ಸದಸ್ಯರಿಗೆ ಮೀಟಿಂಗ್ ನೋಟೀಸ್ ಕೊಡುವುದು ಇತ್ಯಾದಿ ಕೆಲಸ, ಇಷ್ಟು ದೊಡ್ಡ ವ್ಯಾಪ್ತಿಯ ಕೆಲಸ ಕಾರ್ಯಕ್ಕೆ ಒಡಾಡಲು ವಿಲೇಜ್ ಪಂಚಾಯತ್ ವಾಹನ ಸೈಕಲ್ ಈ ಸೈಕಲ್ ಟ್ಯೂಬ್ ಪ್ಯಾಚ್ ಆದರೆ ವಿಲೇಜ್ ಪಂಚಾಯತ್ ನ ಹಣದಿಂದ ದುರಸ್ತಿ ಮಾಡಿಸಬೇಕಿತ್ತು. ...