ಭಾಗ - 48, ಆನಂದಪುರಂ ಇತಿಹಾಸ, 1960 ರಲ್ಲಿ ಮಾಸಿಕ 40 ರೂಪಾಯಿ ವೇತನಕ್ಕೆ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆಗಿನ ಅಧ್ಯಕ್ಷರಾದ ವೆಂಕಟಾಚಲ ಅಯ್ಯಂಗಾರರಿಂದ ನೇಮಕ ಆಗಿದ್ದ ಸುಣಗಾರ್ ಸತ್ಯಪ್ಪ ನಿವೃತ್ತಿ ಆಗಬೇಕಾದಾಗ 1200 ರೂಪಾಯಿ ವೇತನ ಪಡೆಯುತ್ತಿದ್ದರು.
#ಆನಂದಪುರಂ_ಇತಿಹಾಸ
#ಆನಂದಪುರಂನ_ಮೊದಲ_ವಾಟರ್_ಮನ್,
#ಸುಣಗಾರ್_ಸತ್ಯಪ್ಪ_ಬದರಿನಾರಾಯಣ_ಅಯ್ಯ೦ಗಾರ್_ಸಹೋದರ_ವೆಂಕಟಾಚಲ_ಅಯ್ಯ೦ಗಾರರಿಗೆ_ಆಪ್ತ
#ಆನಂದಪುರಂಗೆ_1965ರಲ್ಲಿ_ಸಾರ್ವಜನಿಕ_ನಲ್ಲಿ_ನೀರುಸರಭರಾಜು_ಪ್ರಾರಂಭ.
#ಆಗ_ಇದ್ದದ್ದು_30_ಪಬ್ಲಿಕ್_ಟ್ಯಾಪ್
1960ರಲ್ಲಿ ಆನಂದಪುರಂ ವಿಲೇಜ್ ಪ೦ಚಾಯತ್ ಅಧ್ಯಕ್ಷರು ಭೂ ಮಾಲಿಕರು, ಇನಾಂದಾರರು ಕೊಡುಗೈ ದಾನಿಗಳಾಗಿದ್ದ ರಾಮಕೃಷ್ಣ ಅಯ್ಯಂಗಾರರ ಸುಪುತ್ರ ವೆಂಕಟಾಚಲ ಅಯ್ಯಂಗಾರರು, ಆಗ ಸಾಗರ - ಹೊಸನಗರ-ತೀರ್ಥಹಳ್ಳಿ ಜಂಟಿ ವಿಧಾನಸಭಾ ಕ್ಷೇತ್ರದ ಶಾಸಕರು ಇವರ ಸಹೋದರ ಬದರಿನಾರಾಯಣ ಅಯ್ಯಂಗಾರ್ ಆಗ ವಿಲೇಜ್ ಪಂಚಾಯತ್ ಗೆ 7ನೇ ತರಗತಿ ತನಕ ಓದಿದ್ದ ಸುಣಗಾರ್ ಸತ್ಯಪ್ಪರಿಗೆ ಆನಂದಪುರಂ ವಿಲೇಜ್ ಪಂಚಾಯತಿಯಲ್ಲಿ ಮಾಸಿಕ 40 ರೂಪಾಯಿ ವೇತನದಲ್ಲಿ ಸಹಾಯಕನಾಗಿ ನೇಮಿಸುತ್ತಾರೆ.
ಆನಂದಪುರಂ, ದಾಸಕೊಪ್ಪ, ಮಲಂದೂರು, ತಾವರೆಗಳ್ಳಿ, ಯಡೇಹಳ್ಳಿ, ಆಚಾಪುರ, ಅಂದಾಸುರ ಮತ್ತು ಮುರುಘಾಮಠ ವ್ಯಾಪ್ತಿಯ ಮನೆ ಕಂದಾಯ ವಸೂಲಿ, ಆನಂದಪುರಂ ದೊಡ್ಡಿ ನಿವ೯ಹಣೆ, ಸಾಗರ ಟ್ರಿಜರಿಗೆ ಹಣ ಸಂದಾಯ, ಸದಸ್ಯರಿಗೆ ಮೀಟಿಂಗ್ ನೋಟೀಸ್ ಕೊಡುವುದು ಇತ್ಯಾದಿ ಕೆಲಸ, ಇಷ್ಟು ದೊಡ್ಡ ವ್ಯಾಪ್ತಿಯ ಕೆಲಸ ಕಾರ್ಯಕ್ಕೆ ಒಡಾಡಲು ವಿಲೇಜ್ ಪಂಚಾಯತ್ ವಾಹನ ಸೈಕಲ್ ಈ ಸೈಕಲ್ ಟ್ಯೂಬ್ ಪ್ಯಾಚ್ ಆದರೆ ವಿಲೇಜ್ ಪಂಚಾಯತ್ ನ ಹಣದಿಂದ ದುರಸ್ತಿ ಮಾಡಿಸಬೇಕಿತ್ತು. 1962 ರಲ್ಲಿ ಆನಂದಪುರಂನ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು 30 ಸಾರ್ವಜನಿಕ ಬೀದಿ ನಲ್ಲಿ ನೀರಿಗಾಗಿ ಬೋರ್ ವೆಲ್ ಮತ್ತು ಪಂಪ್ ಯಡೇಹಳ್ಳಿ ಕೆರೆ ಕೆಳಗೆ ಬೋರ್ ವೆಲ್ ಕೊರೆಯಲು ತಿಂಗಳುಗಟ್ಟಲೆ ಬೋರ್ ವೆಲ್ ಮೆಷಿನ್ ಕೆಲಸ ಮಾಡುವುದು ನೋಡಲು ಸುತ್ತಮುತ್ತಲಿಂದ ನೂರಾರು ಜನ ಬರುತ್ತಿದ್ದರಂತೆ (ಈಗ 5-6 ಗಂಟೆ ಸಾಕು) ಅಲ್ಲಿಂದ ನೀರು ಆನಂದಪುರಂ ಹಳೇ ಪೋಲಿಸ್ ಸ್ಟೇಷನ್ ಪಕ್ಕದಲ್ಲಿ ನಿರ್ಮಿಸಿದ್ದ ನೀರಿನ ಟ್ಯಾಂಕ್ ಗೆ ಬಂದು ಸಂಗ್ರಹ ಮಾಡುವ ಕಾಮಗಾರಿ ಪ್ರಾರಂಭ ಆಗಿ 1965 ರಲ್ಲಿ ಕಾರ್ಯಾರಂಭ ಆದಾಗ ಪ್ರತಿನಿತ್ಯ ನೀರಿನ ಟ್ಯಾಂಕ್ ತುಂಬಿಸಿ ಆನಂದಪುರಂನ ಬೀದಿಗಳಲ್ಲಿನ ನಲ್ಲಿಗಳಿಗೆ ನೀರು ಬಿಡುವ ಕೆಲಸ ಕೂಡ ಸತ್ಯಪ್ಪನವರದ್ದೇ ಆಗಿತ್ತು.
ಈಗಿನ ರೀತಿ ಆಟೋ ಸ್ವಿಚ್ ಗಳಿಲ್ಲದ ಕಾಲ, ನಿರಂತರ ವಿದ್ಯುತ್ ಕೂಡ ಇರುತ್ತಿರಲಿಲ್ಲ ಆದರೆ ಸತ್ಯಪ್ಪ ರಾತ್ರಿ ಹಗಲು ಎನ್ನದೆ ಮಳೆ ಚಳಿ ಅನ್ನದೆ ಸೈಕಲ್ ಮೇಲೆ ಹೋಗಿ ಬೋರ್ ವೆಲ್ ಚಾಲು ಮಾಡಬೇಕಾಗಿತ್ತು.
ಸತ್ಯಪ್ಪ ಮತ್ತು ಇವರ ಅಣ್ಣ ಭರ್ಮಣ್ಣ ಅವರ ಕುಟುಂಬದ ತಲತಲಾಂತರದಿಂದ ಬಂದ ಆನಂದಪುರಂ ಮಾರಿಗುಡಿ ಮತ್ತು ಗುತ್ಯಮ್ಮ ದೇವಿ ದೇವಸ್ಥಾನದ ಪೂಜಾರಿಕೆ ವೃತ್ತಿ ಕೂಡ ಮಾಡಿಕೊಂಡಿದ್ದರು ಸತ್ಯಪ್ಪ ವಿಲೇಜ್ ಪಂಚಾಯಿತಿ ಸೇರಿದ ಮೇಲೆ ಇವರ ಸಹೋದರ ಪೂಜೆ ಮುಂದುವರಿಸಿದ್ದರು.
ಆಧ್ಯಕ್ಷರಾಗಿದ್ದ ವೆಂಕಟಚಲಾಯ್ಯಂಗಾರರಿಗೆ ನಿಷ್ಟಾವಂತರಾಗಿದ್ದ ಸತ್ಯಪ್ಪ ಆನಂದಪುರಂನ ಸುತ್ತಮುತ್ತಲಿನ ಮಾಹಿತಿ ನೀಡುವವರೂ ಆಗಿದ್ದರೆಂದು ಜನ ಸತ್ಯಪ್ಪರಿಗೆ ಹೆದರುವಂತಾಗಿತ್ತಂತೆ.
ಆನಂದಪುರಂ ವಿಲೇಜ್ ಪಂಚಾಯತ್ ಬದಲಾಗಿ ಮಂಡಲ್ ಪಂಚಾಯತ್ ಆಗಿ ವಿಭಜನೆ ಆಗಿ ನಂತರ ಆನಂದಪುರಂ ಪ್ರತ್ಯೇಕ ಗ್ರಾಮ ಪಂಚಾಯತ್ ಆಯಿತು, (ಯಡೇಹಳ್ಳಿ ಮತ್ತು ಆಚಾಪುರ ಬೇರೆ ಗ್ರಾಮ ಪಂಚಾಯತ್ ) ಅಲ್ಲೇ ನಿವೃತ್ತರಾದಾಗ ಇವರ ವೇತನ ಮಾಸಿಕ ಸಾವಿರ ಇನ್ನೂರರ ಮೇಲೆ ಹೋಗಲಿಲ್ಲ.
ಸತ್ಯಪ್ಪ ಮತ್ತು ಲಕ್ಷ್ಮಪ್ಪ ದಂಪತಿಗಳಿಗೆ ಮೂವರು ಪುತ್ರರು ಮತ್ತು ಒಂದು ಪುತ್ರಿ.
ಹಿರಿಯ ಪುತ್ರ ಮಹೇಶ್ವರ ತನ್ನ ತಂದೆ ದೀರ್ಘ ಕಾಲ ಸೇವೆ ಮಾಡಿದ್ದ ಆನಂದಪುರಂ ಗ್ರಾಮ ಪಂಚಾಯತ್ ನಲ್ಲೇ ಬಿಲ್ ಕಲೆಕ್ಟರ್ ಆಗಿದ್ದಾರೆ, ಎರಡನೆ ಪುತ್ರ ವೇಣಾಕ್ಷ ಆನಂದಪುರಂನ ಸಾವ೯ಜನಿಕ ಗ್ರಂಥಾಲಯದಲ್ಲಿ ಲೈಬ್ರೇರಿಯನ್ ಆಗಿದ್ದಾರೆ, ಮೂರನೇ ಪುತ್ರ ಇಂದೂದರ ಬೆಂಗಳೂರಲ್ಲಿ ಖಾಸಾಗಿ ಉದ್ಯೋಗ ಮಾಡುತ್ತಿದ್ದಾರೆ ಮತ್ತು ಪುತ್ರಿ ಭಾಗ್ಯ ವಿವಾಹವಾಗಿ ಸಾಗರದಲ್ಲಿ ನೆಲೆಸಿದ್ದಾರೆ.
ಊರು ಕಟ್ಟುವ ಕೆಲಸದಲ್ಲಿ ಎಲೆ ಮರೆಯ ಕಾಯಿಯಂತೆ ಅತ್ಯಂತ ಕನಿಷ್ಟ ವೇತನದಲ್ಲಿ ದೀರ್ಘ ಕಾಲ ಸೇವೆ ಮಾಡಿದ ಇ೦ತವರು ಸದಾ ಸ್ಮರಣೀಯರು, ನಿವೃತ್ತಿ ವೇತನವೂ ಇಲ್ಲದೆ 2006ರಲ್ಲಿ ಗ್ರಾಮ ಪಂಚಾಯತ್ ನವರು ನೀಡಿದ ಇಪ್ಪತ್ತೈದು ಸಾವಿರ ಇವರಿಗೆ ದೊರಕಿದ ದೊಡ್ಡ ಮೊತ್ತ.
Comments
Post a Comment