ಆನಂದಪುರಂ ಇತಿಹಾಸ ಭಾಗ_8 #ಆನಂದಪುರ೦ಗೂ_ಶೃಂಗೇರಿಮಠಕ್ಕೂ_ಇದ್ದ_ದೀಘ೯_ಸಂಬಂದ #ಆನಂದಪುರಂದಿಂದ_ಪ್ರತಿ_ವರ್ಷ_ಎರೆಡು_ಟನ್_ಶ್ರೀಗಂದ_ಶೃಂಗೇರಿಗೆ #ಇದಕ್ಕಾಗಿ_ಆನಂದಪುರಂನಲ್ಲಿ_2000_ಎಕರೆ_ಕಾಡು_ಅಯ್ಯಂಗಾರ್_ಕುಟುಂಬಕ್ಕೆ_ಮೈಸೂರು_ರಾಜರು_ನೀಡಿದ್ದರು. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಅಯ್ಯಂಗಾರರ ಕುಟುಂಬದಿಂದ ಜಿಪಿಎ ಹೊಂದಿದ ಟಿಂಬರ್ ವ್ಯಾಪಾರಿ ನನ್ನ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೌತಮಪುರ ಮತ್ತು ಸಂಪಳ್ಳಿ ಭಾಗದಲ್ಲಿನ 2000 ಎಕರೆ ಕಾಡು ತನ್ನ ಮಾಲಿಕತ್ವದಲ್ಲಿದೆ ಅಲ್ಲಿನ ಮರ ಕಡಿತಲೆ ಮಾಡುತ್ತಾರಂತ 1998 ರಲ್ಲಿ ಸುದ್ದಿ ಹರಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಿಳಿದದ್ದು ಈ ಮಹತ್ವದ ವಿಚಾರ ಮತ್ತು ಏನೇ ಆದರೂ ಅರಣ್ಯ ಇಲಾಖೆ 2000 ಎಕರೆ ಟಿಂಬರ್ ಮಾಫಿಯಾ ಕೈಗೆ ಹೋಗುವುದಿಲ್ಲ ಎಂಬ ಅಭಯ ಆಗ ಶಿವಮೊಗ್ಗದ ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರ ತಿಮ್ಮಪ್ಪ ಮತ್ತು ನಾನು ಅರಣ್ಯ ಇಲಾಖೆ ACF ಲಕ್ಷ್ಮೀನಾರಾಯಣ್ ಅವರ ಜೀಪಲ್ಲಿ ಸಂಪಳ್ಳಿ ಕಾಡಿಗೆ ಬೇಟಿ ನೀಡಿದ್ದೆವು, ತಿಮ್ಮಪ್ಪ ಈ ಬಗ್ಗೆ ಸಂಯುಕ್ತ ಕನಾ೯ಟಕದಲ್ಲಿ ವಿಸ್ತಾರ ವರದಿ ಮಾಡಿದ್ದರು, ನಂತರ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲೂ ವಿಷಯ ಪ್ರಸ್ತಾಪಿಸಿ 2000 ಎಕರೆ ಅರಣ್ಯ ರಕ್ಷಣೆಗೆ ಧ್ವನಿ ಮೂಡಿಸಿದ್ದು ಈಗ ನೆನಪು. ಶಂಕರಾಚಾಯ೯ರಿಂದ ಸ್ಥಾಪಿಸಲ್ಪಟ್ಟು ಹಿಂದೂ ಧರ...