#ಸರ್ಕಾರಿ_ಮಾಧ್ಯಮಿಕ_ಶಾಲೆ_ಆನಂದಪುರಂ_ಶಾಲಾ_ಸಹಪಾಟಿಗಳು #ಕಣ್ಣೂರು_ಮಂಜಪ್ಪ_ಹೊಸಕೊಪ್ಪದ_ನಾಗಪ್ಪ_ಕೋಟೆಕೊಪ್ಪದ_ಖಂಡೋಜಿ_ಶಿವಪ್ಪ #ಗೆಳೆತನಗಳಲ್ಲಿ_ಕ್ಲಾಸ್_ಮೇಟ್_ಸಂಬಂದ_ವಿಶಿಷ್ಟವಾದದ್ದು #ಜೀವಮಾನ_ಪೂರ್ತಿ_ನೆನಪಿಸಿಕೊಳ್ಳುವ_ಆದಿನಗಳ_ನೆನಪು #ಹೀಗೆ_50_ವರ್ಷದ_ಹಿಂದೆ_ನಾವೆಲ್ಲ_ಒಂದೇ_ಶಾಲಾ_ಕೊಠಡಿಯಲ್ಲಿ_ವಿದ್ಯಾರ್ಥಿಗಳಾಗಿದ್ದೆವು. ನಾವೆಲ್ಲ 5 ನೇ ತರಗತಿಗೆ ಆನಂದಪುರಂನ ದಾಸಕೊಪ್ಪದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮಿಕ ಶಾಲೆಗೆ ಸೇರಿದಾಗ ಸುತ್ತ ಮುತ್ತಲಿನ ಹಳ್ಳಿಗಳಿಂದ ಪ್ರಾಥಮಿಕ ಶಿಕ್ಷಣ ಮುಗಿಸಿದ ಅನೇಕರು ಅವರ ಊರಲ್ಲಿ 1ನೇ ತರಗತಿಯಿಂದ 4ನೇ ತರಗತಿವರೆಗೆ ಮಾತ್ರ ಶಿಕ್ಷಣ ಇದ್ದಿದ್ದರಿಂದ ನಮ್ಮ ಜೊತೆ ಆದರು ಆಗೆಲ್ಲ 8 ರಿಂದ 10 ಕಿ.ಮಿ. ನಡೆದು ಬರುವುದು ದೊಡ್ಡ ವಿಷಯವಾಗಿರಲಿಲ್ಲ. ಬೆಳಿಗ್ಗೆ ಊಟ ಮಾಡಿ ಬರುತ್ತಿದ್ದ ಹಳ್ಳಿಯ ಮಕ್ಕಳು ಮತ್ತೆ ಆಹಾರ ಸೇವಿಸುವುದು ಸಂಜೆ ಶಾಲೆ ಬೆಲ್ ಹೊಡೆದಾಗ ನಡೆದು ಊರು ಸೇರಿ ಮನೆ ತಲುಪಿದಾಗಲೇ... ಆದರೆ ಬಾಲ್ಯದ ಆ ದಿನಗಳಲ್ಲಿ ಅದು ಕೊರತೆ ಅನ್ನಿಸುತ್ತಲೇ ಇರಲಿಲ್ಲ ಕಾಲಿಗೆ ಚಪ್ಪಲಿ ಯಾರೊಬ್ಬರೂ ದರಿಸುತ್ತಿರಲಿಲ್ಲ, ಆಗ ಬಳಸುತ್ತಿದ್ದ ಪೆನ್ನು ನಿಬ್ ನಿಂದ ಹರಿಯುವ ಇಂಕಿನಿಂದ ಬರೆಯುವ ಪೆನ್ನುಗಳು. ಆಗಿನ ಶಿಕ್ಷಕರೂ ಅತಿ ಕಡಿಮೆ ಸಂಬಳ ಪಡೆಯುವ ಬಡ ಶಿಕ್ಷಕರೇ ಆದರೆ ಅವತ್ತಿನ ಅವರ ಶ್ರಮ ಶಿಸ್ತು ಮಾತ್ರ ಈಗಿನ ಶಿಕ್ಷಣ ವ್ಯವಸ್ತೆಯಲ್ಲಿ ನಿರೀಕ್ಷಿಸಲು ...