Skip to main content

Posts

Showing posts with the label Devanuru Mahadeva

4069. ದೇವನೂರು ಮಹಾದೇವರ ಎದೆಗೆ ಬಿದ್ದ ಅಕ್ಷರ

ದೇವನೂರು_ಮಹಾದೇವರ ಎದೆಗೆ_ಬಿದ್ದ_ಅಕ್ಷರ_ಪುಸ್ತಕ. ನನ್ನ ಓದಿನ ಅನಿಸಿಕೆಗಳು.    ನಾನು ಈ ಪುಸ್ತಕ ಶಿಕಾರಿಪುರದ #ಸುಪ್ರ_ಪ್ರಕಾಶನದವರಿಂದ ತರಿಸಿದ್ದೆ, ಯಾವುದೇ ಪುಸ್ತಕ ಬೇಕಾದರೂ ಅವರಿಗೆ ವಾಟ್ಸಪ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಅತ್ಯುತ್ತಮ ಪುಸ್ತಕ ಮಾರಾಟ ಸಂಸ್ಥೆಯ ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿ ಇದೆ. ಈ ಪುಸ್ತಕದಲ್ಲಿ  #ದಲಿತ_ನೌಕರರ_ಜೊತೆ_ಪಿಸುಮಾತು ಪುಟ ಸಂಖ್ಯೆ 257 ರಲ್ಲಿ ದೇವನೂರು ಮಹಾದೇವರು ಹೀಗೆ ಬರೆದಿದ್ದಾರೆ... ದಲಿತ ನೌಕರರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮಾತು ಹೀಗಿದೆ..."ತನಗೆ ಏನಾದರೂ ಅನ್ಯಾಯ ಕಷ್ಟ ಬಂದಾಗ ದಲಿತ ನೌಕರ ಅದನ್ನು ಇಡೀ ತನ್ನ ಜನಾಂಗಕ್ಕೆ ಆದ ಅನ್ಯಾಯ ಎಂಬಂತೆ ಗೋಳಾಡುತ್ತಾನೆ ಇಲ್ಲದಿದ್ದರೆ ಸುಮ್ಮನಿರುತ್ತಾನೆ" ಅಂತ.    ಇದೇ ರೀತಿ ಬ್ರಾಹ್ಮಣ ಅರ್ಚಕರು ತಮಗೆ ಏನಾದರು ಅನ್ಯಾಯ  ಅವಮಾನ ಆದರೆ ಅದನ್ನು ಇಡೀ ತನ್ನ ಬ್ರಾಹ್ಮಣ ಜನಾಂಗಕ್ಕೆ ಆದ ಅವಮಾನ ಎಂಬಂತೆ ಸುದ್ದಿ ಮಾಡುತ್ತಾನೆ ಅಂತ ಹೇಳಿದವರು ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿ ನನ್ನ ಅತಿಥಿ ಆಗಿ ಬಂದಾಗ ಮಾತಾಡುವಾಗ ಹೇಳಿದ್ದು.    ಇದು ಇಬ್ಬರು ಬೇರೆ ಬೇರೆ ಸಂದರ್ಭದ ಮಾತು ಇದು ಏನು ಹೇಳುತ್ತದೆ ಅಂದರೆ ಕಣ್ಣಿದ್ದು ಕುರುಡಾಗಿ ತಮ್ಮ ಜಾತಿಯ ಜನರ ತಪ್ಪು ಸಮರ್ಥಿಸಿಕೊಳ್ಳದ ಇಬ್ಬರು ಜ್ಞಾನಿಗಳು ಸಮಾಜವನ್ನ ತಮ್ಮ ಸಮತೋಲನದ ಬುದ್ದಿಯಿಂದ ಅವಲೋಕಿಸಿದ ರೀತಿ.   ...