ಮಂಗಳೂರಿನ ನಾಲ್ಕು ದಶಕಗಳ ಕಾಲ ಪ್ರಸಿದ್ದವಾಗಿದ್ದ ಅತ್ರಿ ಬುಕ್ ಸೆಂಟರ್ ( ಎ.ಬಿ.ಸಿ.) ಮಾಲಿಕ ದಂಪತಿಗಳಿಂದ ಚಂಪಕ ಸರಸ್ಸು ದರ್ಶನ
#ಕ್ರಿಯಾಶೀಲ_ಸಾಧಕರು_ಆತ್ರಿ_ಬುಕ್_ಸೆಂಟರ್_ಎನ್_ಅಶೋಕವದ೯ನ್ #ನಮ್ಮ_ಊರಿನ_ಚಂಪಕ_ಸರಸ್ಸು_ಬೇಟಿ ಮಂಗಳೂರಿನ ABC ಅಂದ್ರೆ ಅತ್ರಿ ಬುಕ್ ಸೆಂಟರ್ ಮಾಲಿಕರಾದ ಎನ್.ಅಶೋಕವದ೯ನರು 2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ. ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರ ಅಶೋಕ ವನ ಮಾಡಿದ್ದಾರೆ. ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ, ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ. ಅನೇಕ ಪುಸ್ತಕ ಕೂಡ ಬರೆದು ಪ್ರಕಟಿಸಿದ್ದಾರೆ, ಮೊನ್ನೆ ಹೆಗ್ಗೋಡಿನ ನಿನಾಸಂಗೆ ಬೈಕ್ ನಲ್ಲಿ #ಅಶೋಕವರ್ಧನ್ ದಂಪತಿ ಬಂದಾಗ ಗೆಳೆಯ #ಶೈಲೇಂದ್ರಬಂದಗದ್ದೆ ಚಂಪಕ ಸರಸ್ಸುವಿನ ಬಗ್ಗೆ ಹೇಳಿದ್ದರಿಂದ ದಂಪತಿಗಳು ನಮ್ಮ ಊರಿನ ನಾನೂರು ವರ್ಷದ ಸ್ಮಾರಕ ಚಂಪಕ ಸರಸ್ಸು ಸಂದರ್ಶಿಸಿ ಅವರ FB ಯಲ್ಲಿ ಬರೆದ ಲೇಖನ ಇಲ್ಲಿ ಶೇರ್ ಮಾಡಿದ್ದೇನೆ ಮತ್ತು ಅವರಿಗೆ ನನ್ನ ಕಾದಂಬರಿ " ಬೆಸ್ತರ ರಾಣಿ ಚಂಪಕಾ " ಅಂಚೆಯಲ್ಲಿ ಗೌರವ ಪ್ರತಿಯಾಗಿ ಕಳಿಸಿದ್ದೇನೆ ಮತ್ತು ಸ್ಮ...