Skip to main content

Posts

Showing posts with the label Sanu Nayak of young boy of Gokarn built muddam for hightide back water of Aganashini river

Blog number 1313. ಸಾನು ನಾಯಕನೆಂಬ ಸ್ಥಳಿಯ ಯುವಕ ಅಘನಾಶಿನಿ ನದಿ ಅಳಿವೆಗೆ ಗೋಕರ್ಣ ಮತ್ತು ತೊರ್ಕೆ ಗುಡ್ಡ ಜೋಡಿಸುವ ಕಟ್ಟು ಕಟ್ಟಿದ್ದರಿಂದ ಉಪ್ಪು ಉತ್ಪಾದಕರು 50 ಎಕರೆಯಿಂದ 500 ಎಕರೆ ವಿಸ್ತಿಣ೯ದಲ್ಲಿ ಉಪ್ಪು ಉತ್ಪಾದಿಸಲು ಕಾರಣವಾಗಿದ್ದರಿಂದ ಈ ಕಟ್ಟಿಗೆ ಸಾಣಿಕಟ್ಟು ಎ೦ಬ ಹೆಸರು ಬಂತು ಮತ್ತು ಇಲ್ಲಿ ಉತ್ಪಾದಿಸುವ ಉಪ್ಪು ಸಾಣಿಕಟ್ಟು ಉಪ್ಪು ಎಂದೇ ಜಗತ್ ಪ್ರಸಿಧ್ಧಿ ಆಯಿತು.

#ಗೋಕರ್ಣದ_ಸಾಣಿಕಟ್ಟು_ಉಪ್ಪಿನ_ಕಥೆ. #ಈ_ಹೆಸರು_ಬರಲು_ಕಾರಣ_ಪುರುಷನ_ಗೌರವಿಸೋಣ. #ವಾರ್ಷಿಕ_10ರಿಂದ_15ಸಾವಿರ_ಟನ್_ಉಪ್ಪು_ಉತ್ಪಾದಿಸುವ #ದಿ_ನಾಗರಬೈಲು_ಸಾಲ್ಟ್_ಕೋಆಪರೇಟಿವ್_ಸೊಸೈಟಿ #ಸಾಣೆಕಟ್ಟು_ಎಂಬ_ಹೆಸರು_ಬರಲು_ಕಾರಣ_ಅವಿದ್ಯಾವಂತ_ತಾ೦ತ್ರಿಕ_ಕೌಶಲ್ಯದ_ಯುವಕ #ಸಾನು_ನಾಯ್ಕ_ಕಟ್ಟಿದ_ಒಡ್ಡು_ಕಾರಣ #ಸಾಣಿಕಟ್ಟು_ಅಯೋಡಿನ್_ಯುಕ್ತ_ಒಂದು_ಕೇಜಿ_ಉಪ್ಪಿನ_ಬೆಲೆ_20_ರೂಪಾಯಿ.  ಸಾಣಿಕಟ್ಟು ಉಪ್ಪು ಸದ್ಯದಲ್ಲೇ ಬರಲಿರುವ ಮಾವಿನ ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಗಾಗಿ ಹುಡುಕಾಡಿದರೂ ಸಾಗರದಲ್ಲಿ ಇದು ಅಲಭ್ಯ, ಒಂದು ಅಂಗಡಿಯವರು ಒ0ದೆರೆಡು ದಿನ ಕಾಯಿಸಿ ತಂದು ಕೊಟ್ಟರು.   ಸಾಣಿಕಟ್ಟು ಉಪ್ಪಿಗೆ ಕರ್ನಾಟಕ ಮಾತ್ರವಲ್ಲ ಗೋವಾ ರಾಜ್ಯದಲ್ಲೂ ಅಪಾರ ಬೇಡಿಕೆ ಇದೆ ಕಾರಣ ಈ ಉಪ್ಪು ಪ್ರಕೃತಿ ದತ್ತವಾದ ಬೌಗೋಳಿಕ ಪರಿಸರವನ್ನು ಬಳಸಿ ಆಘನಾಶಿನಿ ನದಿ ಅರಬ್ಬಿ ಸಮುದ್ರ ಸೇರುವ ಗೋಕರ್ಣದಲ್ಲಿ ತಯಾರು ಆಗುವುದು ಒಂದು ಕಾರಣ ಇರಬಹುದು.    ನಮ್ಮ ರಾಜ್ಯದ ಏಕ್ಯೆಕ ಉಪ್ಪು ತಯಾರಾಗುವ ಈ ಕೇಂದ್ರಕ್ಕೆ ಕೆಳದಿ ಅರಸರ ಕಾಲದಲ್ಲಿ ಪ್ರೋತ್ಸಾಹವಿತ್ತು ಮತ್ರು ತೆರಿಗೆ ಇರಲಿಲ್ಲ ಆದರೆ ಕೆಳದಿ ಸಂಸ್ಥಾನ ಟಿಪ್ಪು ಸುಲ್ತಾನರ ಆಳ್ವಿಕೆ ವಶಕ್ಕೆ ಬಂದ ನಂತರದಲ್ಲಿ ಮೈಸೂರು ಸಂಸ್ಥಾನ ಉಪ್ಪು ಸರ್ಕಾರದ ಆದಾಯದ ಮೂಲವಾಗಿ ಕರ ವಿದಿಸಿದ ದಾಖಲೆಗಳು ಇದೆ.    1720 ರಲ್ಲಿ ಕೇವಲ 50 ಎಕರೆ ಪ್ರದೇಶದಲ್ಲಿ ಕೆಲವೇ ಕುಟುಂಬಗಳು ವಂಶ ಪಾರ...