Blog number 1969. ಎಪ್ಪತ್ತೆರೆಡು ದಿನ ದಾರಿ ತಪ್ಪಿ ಆನಂದಪುರಂ ಸುತ್ತಮುತ್ತ ಆತಂಕ ಮೂಡಿಸಿದ್ದ ಐದು ಕಾಡಾನೆಗಳು ಸುರಕ್ಷಿತವಾಗಿ ಭದ್ರಾ ಅಭಯಾರಣ್ಯ ಸೇರಲಿ ಮತ್ತು ಈ ಭಾಗದಲ್ಲಿ ಯಾವುದೇ ಜೀವಹಾನಿ ಆಗದಿರಲಿ ಎಂಬ ನಮ್ಮ ಹರಕೆಯ108 ಕಾಯಿಗಳನ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರಲ್ಲಿ ಸಮರ್ಪಿಸಿದ್ದು,
https://youtu.be/3lsizhoTxL8?feature=shared #ಜಾತ್ರೆ_ಮುಗಿದರೂ..... #ನಮ್ಮೂರ_ಸಮೀಪ_ದಾರಿ_ತಪ್ಪಿದ್ದ_ಕಾಡಾನೆ_ಸುರಕ್ಷಿತ_ವಾಪಾಸಾತಿಗಾಗಿ #ನೂರಾ_ಎಂಟು_ಕಾಯಿ_ಒಡೆಯುವ_ಹರಕೆ #ಶ್ರೀವರಸಿದ್ದಿ_ವಿನಾಯಕ_ಸ್ವಾಮಿಗೆ_ಹರಕೆ_ಕಾಯಿ_ಸಮರ್ಪಿಸುವ_ಸಮಯಕ್ಕೆ #ಆಗಮಿಸಿದ_ಮಾಜಿ_ಮಂತ್ರಿ_ಹರತಾಳು_ಹಾಲಪ್ಪನವರು #ಭಕ್ತಿ_ಪೂರ್ವಕವಾಗಿ_ಹರಕೆ_ತೀರಿಸಿದೆವು. ನಮ್ಮ ಭಾಗದಲ್ಲಿ ಕಾಡಾನೆ ಯಾವಾಗಲೂ ಬಂದೇ ಇಲ್ಲ 16 ಅಕ್ಟೋಬರ್ 2023 ರಂದು ಸಂಜೆ ರಿಪ್ಪನ್ ಪೇಟೆ ಸಮೀಪದ ಕೆಂಚನಾಲು ಭಾಗದಲ್ಲಿ ಒಂದು ತಾಯಿ ಆನೆ ತನ್ನ ಮರಿ ಜೊತೆ ಕಾಣಿಸಿಕೊಂಡಿದ್ದು ಚಿತ್ರ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಹರಡಿತ್ತು. ನಂತರ ಇನ್ನೆರೆಡು ಗಂಡಾನೆ ಮತ್ತು ಇನ್ನೊಂದು ಪ್ರಾಯಕ್ಕೆ ಬರುತ್ತಿರುವ ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಾ ಗಿಳಾಲಗುಂಡಿ - ಲಕ್ಕವಳ್ಳಿ -ಪತ್ರೆಹೊಂಡ- ಕೊಲ್ಲಿ ಬಚ್ಚಲು ಡ್ಯಾಂ - ಉದನೂರು- ಹಿರೆಯರಕರ- ಬೈರಾಪುರ ಮಾಗ೯ವಾಗಿ ಅಂಬ್ಲಿಗೊಳ ಜಲಾಶಯ, ಕಣ್ಣೂರಿಗೂ ಅಲ್ಲಿನ ಮಲ್ಡಿ (ಘಾಟಿಯಿಂದ) ಇಳಿದು ಬಂದಿತ್ತು. ಈ ಭಾಗದ ರೈತರು ಆತಂಕಕ್ಕೆ ಈಡಿಗಿದ್ದರು ಸುಗ್ಗಿ ಕಾಲದ ಡಿಸೆಂಬರ್ ನಲ್ಲಿ ತಮ್ಮ ಜಮೀನಿಗೆ ಹೋಗುಲು ಜನ ಹೆದರುವಂತಾಗಿತ್ತು, ಆನೆಗಳು ತಾವು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದೆ ಆದರೆ ತಮ್ಮ ಮನೆ- ತೋಟದ ರಕ್ಷಣೆಗಾಗಿ ಅರಣ್ಯ ಇಲಾಖೆ ನೀಡಿದ ಪಟಾಕಿ ರೈತರು ಸ್ಪೋಟಿಸುವ...