Blog number 1969. ಎಪ್ಪತ್ತೆರೆಡು ದಿನ ದಾರಿ ತಪ್ಪಿ ಆನಂದಪುರಂ ಸುತ್ತಮುತ್ತ ಆತಂಕ ಮೂಡಿಸಿದ್ದ ಐದು ಕಾಡಾನೆಗಳು ಸುರಕ್ಷಿತವಾಗಿ ಭದ್ರಾ ಅಭಯಾರಣ್ಯ ಸೇರಲಿ ಮತ್ತು ಈ ಭಾಗದಲ್ಲಿ ಯಾವುದೇ ಜೀವಹಾನಿ ಆಗದಿರಲಿ ಎಂಬ ನಮ್ಮ ಹರಕೆಯ108 ಕಾಯಿಗಳನ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವರಲ್ಲಿ ಸಮರ್ಪಿಸಿದ್ದು,
https://youtu.be/3lsizhoTxL8?feature=shared
#ಜಾತ್ರೆ_ಮುಗಿದರೂ.....
#ನಮ್ಮೂರ_ಸಮೀಪ_ದಾರಿ_ತಪ್ಪಿದ್ದ_ಕಾಡಾನೆ_ಸುರಕ್ಷಿತ_ವಾಪಾಸಾತಿಗಾಗಿ
#ನೂರಾ_ಎಂಟು_ಕಾಯಿ_ಒಡೆಯುವ_ಹರಕೆ
#ಶ್ರೀವರಸಿದ್ದಿ_ವಿನಾಯಕ_ಸ್ವಾಮಿಗೆ_ಹರಕೆ_ಕಾಯಿ_ಸಮರ್ಪಿಸುವ_ಸಮಯಕ್ಕೆ
#ಆಗಮಿಸಿದ_ಮಾಜಿ_ಮಂತ್ರಿ_ಹರತಾಳು_ಹಾಲಪ್ಪನವರು
#ಭಕ್ತಿ_ಪೂರ್ವಕವಾಗಿ_ಹರಕೆ_ತೀರಿಸಿದೆವು.
ನಮ್ಮ ಭಾಗದಲ್ಲಿ ಕಾಡಾನೆ ಯಾವಾಗಲೂ ಬಂದೇ ಇಲ್ಲ 16 ಅಕ್ಟೋಬರ್ 2023 ರಂದು ಸಂಜೆ ರಿಪ್ಪನ್ ಪೇಟೆ ಸಮೀಪದ ಕೆಂಚನಾಲು ಭಾಗದಲ್ಲಿ ಒಂದು ತಾಯಿ ಆನೆ ತನ್ನ ಮರಿ ಜೊತೆ ಕಾಣಿಸಿಕೊಂಡಿದ್ದು ಚಿತ್ರ ಸಹಿತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿ ಹರಡಿತ್ತು.
ನಂತರ ಇನ್ನೆರೆಡು ಗಂಡಾನೆ ಮತ್ತು ಇನ್ನೊಂದು ಪ್ರಾಯಕ್ಕೆ ಬರುತ್ತಿರುವ ಮರಿ ಆನೆ ಈ ಭಾಗದಲ್ಲಿ ಸಂಚರಿಸುತ್ತಾ ಗಿಳಾಲಗುಂಡಿ - ಲಕ್ಕವಳ್ಳಿ -ಪತ್ರೆಹೊಂಡ- ಕೊಲ್ಲಿ ಬಚ್ಚಲು ಡ್ಯಾಂ - ಉದನೂರು- ಹಿರೆಯರಕರ- ಬೈರಾಪುರ ಮಾಗ೯ವಾಗಿ ಅಂಬ್ಲಿಗೊಳ ಜಲಾಶಯ, ಕಣ್ಣೂರಿಗೂ ಅಲ್ಲಿನ ಮಲ್ಡಿ (ಘಾಟಿಯಿಂದ) ಇಳಿದು ಬಂದಿತ್ತು.
ಈ ಭಾಗದ ರೈತರು ಆತಂಕಕ್ಕೆ ಈಡಿಗಿದ್ದರು ಸುಗ್ಗಿ ಕಾಲದ ಡಿಸೆಂಬರ್ ನಲ್ಲಿ ತಮ್ಮ ಜಮೀನಿಗೆ ಹೋಗುಲು ಜನ ಹೆದರುವಂತಾಗಿತ್ತು, ಆನೆಗಳು ತಾವು ಬಂದ ದಾರಿಯಲ್ಲೇ ವಾಪಾಸು ಹೋಗಲು ಪ್ರಯತ್ನಿಸಿದೆ ಆದರೆ ತಮ್ಮ ಮನೆ- ತೋಟದ ರಕ್ಷಣೆಗಾಗಿ ಅರಣ್ಯ ಇಲಾಖೆ ನೀಡಿದ ಪಟಾಕಿ ರೈತರು ಸ್ಪೋಟಿಸುವುದರಿಂದ ಆನೆ ವಾಪಾಸು ಹೋಗಲು ಸಾಧ್ಯವಾಗದೆ ಸುಮಾರು 72 ದಿನ ನಮ್ಮ ಭಾಗದಲ್ಲೇ ಸಂಚರಿಸುತ್ತಿದ್ದವು.
ಆಹಾರ ನೀರು ನಿದ್ದೆ ಸರಿಯಾಗಿ ಸಿಗದೆ ಭಯದಿಂದ ದಾರಿ ತಪ್ಪಿದ್ದ ಈ ಕಾಡಾನೆ ಯಾರಿಗಾದರೂ ಜೀವ ಹಾನಿ ಮಾಡಿದರೆ ಎಂಬ ಭಯ ಇತ್ತು ಕಾರಣ ಆವಿನಹಳ್ಳಿ ಸಮೀಪದ ಗಿಣಿವಾರದಲ್ಲಿ ಕೆಲ ವರ್ಷಗಳ ಹಿಂದೆ ಆ ಗ್ರಾಮದವರು ಕಾಡಾನೆ ಊರಿಗೆ ಬಂದ ಬಗ್ಗೆ ಮುಂಜಾಗ್ರತೆಗಾಗಿ ಜನಜಾಗೃತಿ ಸಭ ಹಮ್ಮಿಕೊಂಡಿದ್ದರು ಆ ಸಭೆಗೆ ಹೊರಟಿದ್ದ ಗೃಹಣಿಯನ್ನು ಕಾಡಾನೆ ತುಳಿದು ಕೊಂದಿತ್ತು.
ಅಥವ ಕಾಡಾನೆ ಹಿಂಡಿನ ಮರಿಯಾನೆ ರೈತರ ಪಟಾಕಿಗೆ ಹೆದರಿ ಗುಡ್ಡ ಕಮರಿಗೆ ಬಿದ್ದು ಜೀವ ಕಳೆದು ಕೊಂಡರೆ ಎಂಬ ಆತಂಕವೂ ಇತ್ತು.
ಅಂತಹ ಸಂದರ್ಭದಲ್ಲಿ ಒಂದು ಮಧ್ಯರಾತ್ರಿ 25-ಡಿಸೆಂಬರ್ -2023 ದುಸ್ವಪ್ನ ಒಂದು ನನಗೆ ಭಯ ಉಂಟುಮಾಡಿತ್ತು ಆಗಲೇ ನಾನು ನಮ್ಮ ಊರಿನ ಆನಂದಪುರಂ ಹೋಬಳಿಯ ಏಕೈಕ ಶ್ರೀವರಸಿದ್ದಿ ವಿನಾಯಕ ಸ್ವಾಮಿಗೆ ಈ ಕಾಡಾನೆಗಳು ಸುರಕ್ಷಿತ ಮಾಗ೯ ಕಲ್ಪಿಸಿ ಅವುಗಳ ಮೂಲ ನೆಲೆ ಭದ್ರಾ ಅಭಯರಣ್ಯಾಕ್ಕೆ ಕಳಿಸು.... ಈ ಭಾಗದ ಯಾವುದೇ ನಾಗರೀಕ ಜೀವ ಹಾನಿ ಆಗದಂತೆ ರಕ್ಷಿಸೆಂದು ಆ ರಾತ್ರಿ ದೇವರಲ್ಲಿ ಪ್ರಾಥಿ೯ಸಿ ನಮ್ಮ ಊರ ಜಾತ್ರೆಯಂದು 108 ತೆಂಗಿನ ಕಾಯಿ ದೇವರಿಗೆ ಸಮರ್ಪಿಸುವ ಹರಕೆ ಹೊತ್ತಿದ್ದೆ.
28 - ಡಿಸೆಂಬರ್- 2023ರ ಬೆಳಗಿನ ಜಾವ ಈ ಆನೆಗಳು ಅರಸಾಳು ರಿಪ್ಪನ್ ಪೇಟೆ ಮಾರ್ಗ ಮಧ್ಯೆ ದಾಟಿ ಮುಗುಡ್ತಿ ಅರಣ್ಯ ಸೇರಿ ಅಲ್ಲಿಂದ ಭದ್ರಾ ಅಭಯಾರಣ್ಯ ಸೇರಿದ ಸುದ್ದಿ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಿಳಿದು ಸಂತೋಷ ಆಗಿತ್ತು ಮತ್ತು ನೂರು ವರ್ಷದ ಹಿಂದೂ ಈ ಭಾಗದಲ್ಲಿ ಕಾಡಾನೆ ಸಂಚರಿಸಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ದಾರಿ ತಪ್ಪಿ 72 ದಿನ ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಪ್ರಕರಣ ಸುಖಾಂತ್ಯವಾಗಿತ್ತು.
13 - ಪೆಬ್ರವರಿ- 2024ರ ಮಂಗಳವಾರ ನಮ್ಮ ಊರಿನ ವರಸಿದ್ದಿ ವಿನಾಯಕ ಸ್ವಾಮಿ ದೇವರ 18 ನೇ ವರ್ಷದ ರಥೋತ್ಸವದ ಹಿಂದಿನ ಸಂಜೆ ಈ ಹರಕೆಯ 108 ಕಾಯಿ ದೇವರಿಗೆ ಸಮರ್ಪಿಸಲು ತಯಾರಿ ನಡೆಸುವಾಗಲೇ ಮಾಜಿ ಮಂತ್ರಿಗಳಾದ ಹರತಾಳು ಹಾಲಪ್ಪನವರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೊನಗೋಡು ರತ್ನಾಕರ ದೇವರ ದರ್ಶನಕ್ಕೆ ಆಗಮಿಸಿದರು ಅವರಿಗೆ ಜಾತ್ರಾ ಸಮಿತಿಯಿಂದ ಗೌರವ ಸಲ್ಲಿಸಿದರು.
ಅವರಿಗೆ ಕಾಡಾನೆಯ ಸುರಕ್ಷಿತ ವಾಪಾಸಾತಿ ಬಗ್ಗೆ 108 ತೆಂಗಿನಕಾಯಿ ಸಮರ್ಪಣೆಯ ಹರಕೆಯ ಮಾಹಿತಿ ತಿಳಿಸಿ ಅವರಿಂದ ಮೊದಲ ಹರಕೆಯ ಕಾಯಿ ಒಡೆಸಿ ನಂತರ ಎಲ್ಲರೂ ಸೇರಿ 108 ಕಾಯಿ ದೇವರಿಗೆ ಅರ್ಪಿಸಿದೆವು.
ಈ ರೀತಿ ಕಾಡಾನೆಗಾಗಿ ಮಾಡಿದ ಗಣಪತಿ ಹರಕೆ ನಮ್ಮ ಊರಿನ ಜಾತ್ರೆಯ ನೆನಪಾಗಿ ಉಳಿಯಿತು.
Comments
Post a Comment