Blog number 1966.ಶಿವಮೊಗ್ಗದ ಡಯಾಬಿಟೀಸ್ ತಜ್ಞ ವೈದ್ಯರಾದ ಡಾಕ್ಟರ್ ಪ್ರೀತಮ್ ಬರೆದಿರುವ ಪುಸ್ತಕ ಡಯಾಬಿಟೀಸ್ ರಿವರ್ಸಲ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
#ಡಯಾಬಿಟೀಸ್_ಸಂಪೂರ್ಣ_ಗುಣಪಡಿಸಬಹುದು
#ಇದೇ_ಡಯಾಬಿಟೀಸ್_ರಿವರ್ಸಲ್
#ಶಿವಮೊಗ್ಗದ_ಡಾಕ್ಟರ್_ಪ್ರೀತಮ್_ಈ_ಬಗ್ಗೆ_ಪುಸ್ತಕ_ಬರೆದಿದ್ದಾರೆ
#ಸದ್ಯದಲ್ಲೇ_ಬಿಡುಗಡೆ.
ಡಾಕ್ಟರ್ ಪ್ರೀತಂ ಶಿವಮೊಗ್ಗ ಜಿಲ್ಲೆಯ ಮದುಮೇಹ ರೋಗದ ತಜ್ಞ ವೈದ್ಯರು ಇವರ ಆಸ್ಪತ್ರೆ ಶಿವಮೊಗ್ಗದ ದುರ್ಗಿಗುಡಿ ವೃತ್ತದಲ್ಲಿ ಸಿಂಗರ್ ಶೋರೂಂ ಪಕ್ಕದಲ್ಲಿ ಪ್ಯಾರಲಲ್ ರಸ್ತೆಯಲ್ಲಿದೆ.
ಕಳೆದ 15 ವರ್ಷದಿಂದ ನನ್ನ ಡಯಾಬಿಟೀಸ್ ಇವರೇ ನಿಯಂತ್ರಣ ಮಾಡುತ್ತಿರುವುದು, ಕಳೆದ ಎರಡು ವರ್ಷಗಳಿಂದ ಇವರಿಂದ ನನ್ನ ಡಯಾಬಿಟೀಸ್ ಮತ್ತು ರಕ್ತದ ಒತ್ತಡ ನಾರ್ಮಲ್ ರೇಖೆಗಿಂತ ಕೆಳಗೆ ಇದೆ.
ಇನ್ಸುಲಿನ್ ಬೆಳಿಗ್ಗೆ 25 ಯುನಿಟ್ ರಾತ್ರಿ 25 ಯುನಿಟ್ ಕಳೆದ 12 ವರ್ಷದಿಂದ ತೆಗೆದುಕೊಳ್ಳುತ್ತಿದ್ದದ್ದು ಈಗ ಸಂಪೂರ್ಣ ನಿಂತಿದೆ ಇದಕ್ಕೆ ಕಾರಣ ಡಾಕ್ಟರ್ ಪ್ರೀತಂ.
ಸಣ್ಣ ವಯಸ್ಸಲ್ಲಿ ಡಯಾಬಿಟೀಸ್ ಪ್ರಾರಂಭವಾಗಿ ಜೀವನದಲ್ಲಿ ನಿರಾಶೆ ಅನುಭವಿಸುತ್ತಿದ್ದ ಅನೇಕರಿಗೆ ಡಾಕ್ಟರ್ ಪ್ರೀತಂ ಹತ್ತಿರ ಕಳಿಸಿ ಅವರಿಂದ ಡಯಾಬಿಟೀಸ್ ರಿವರ್ಸಲ್ ಮಾಡಿಸಿದ್ದು ನನ್ನ ಸ್ವಂತ ಅನುಭವ.
ಡಾಕ್ಟರ್ ಪ್ರೀತಂ ಕನ್ನಡದಲ್ಲಿ ಡಯಾಬಿಟೀಸ್ ಸಂಪೂರ್ಣ ಗುಣಪಡಿಸುವ #ಡಯಾಬಿಟೀಸ್_ರಿವರ್ಸಲ್ ಪುಸ್ತಕ ಬರೆದಿದ್ದಾರೆ ಸಧ್ಯದಲ್ಲೇ ಬಿಡುಗಡೆ ಆಗಲಿದೆ.
ಸ್ವತಃ ಡಯಾಬಿಟೀಸ್ ತಜ್ಞ ವೈದ್ಯರಾಗಿ ಪಡೆದ ಅಪಾರವಾದ ಅನುಭವವನ್ನು ಕನ್ನಡದಲ್ಲಿ ಪುಸ್ತಕವಾಗಿ ಡಯಾಬಿಟೀಸ್ ರೋಗಿಗಳಿಗೆ ನಿಮ್ಮ ಡಯಾಬಿಟೀಸ್ ಕಾಯಿಲೆ ಕಾಯಿಲೆ ಅಲ್ಲ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂಬ ಆಶಾದಾಯಕವಾದ ಸಂದೇಶ ನೀಡುತ್ತಿದ್ದಾರೆ.
Comments
Post a Comment