Blog number 1942. ನಮ್ಮ ಮನೆ ಪಕ್ಕದ ರಾಮಾಚಾರರ ಕುಲುಮೆಯ ಕ್ಯಾಷ್ಟನ್ ಬಚ್ಚಾಚಾರ್ ಮಗಳು ಲಲಿತಕ್ಕ ಇವತ್ತು ಸುಮಾರು 28 ವರ್ಷದ ನಂತರ ನನ್ನ ಅತಿಥಿ ಅವರಿಗೆ ಅವರ ತಂದೆಯ ಪೋಟೋದ ಉಡುಗೊರೆ ನೀಡಿದಾಗ....
https://youtu.be/ibBu1IBHkEU?feature=shared
https://youtu.be/Nlum8Ubn58g?feature=shared
#ನಮ್ಮೂರಿನ_ಕುಲುಮೆ_ಬಚ್ಚಾಚಾರ್_ಮಗಳು_ಲಲಿತಕ್ಕ_ನನ್ನ_ಅತಿಥಿ
#ಇವರು_ಹದ_ಹಾಕಿದ_ಕತ್ತಿ_ಕುಡುಗೋಲು_ಕೊಡಲಿ_ಎತ್ತಿನಗಾಡಿ_ಹಳಿ_ಈ_ಭಾಗದ_ರೈತರು_ಈಗಲೂ_ಸ್ಮರಿಸುತ್ತಾರೆ.
#ಮುವತ್ತೈದು_ವರ್ಷದ_ಹಿಂದೆ_ಬಚ್ಚಾಚಾರ್_ಇಹಲೋಕ_ತ್ಯಜಿಸಿದ್ದರು.
#ಅವರ_ಒಂದು_ಪೋಟೋ_ಕೂಡ_ತನ್ನ_ಹತ್ತಿರ_ಇಲ್ಲ_ಅಂದಾಗ....
#ಬಚ್ಚಾಚಾರ್_ಪೋಟೋ_ಪ್ರಿಂಟ್_ಹಾಕಿಸಿ_ಪ್ರೇಂ_ಹಾಕಿಸಿ_ಉಡುಗೊರೆ_ನೀಡಿದಾಗ.....
ತನ್ನ ತಂದೆ ಪೋಟೋ ತನ್ನ ಜೀವಮಾನದಲ್ಲೇ ನೋಡುತ್ತೇನೆ ಅಂದು ಕೊಂಡಿರಲಿಲ್ಲ... 35 ವರ್ಷದ ಹಿಂದೆ ಮೃತರಾದರು ಅವರ ಒಂದೇ ಒಂದು ಪೋಟೋ ಇರಲಿಲ್ಲ.... ಅಂತ ಸುಮಾರು 27 ವಷ೯ದ ನಂತರ ನನ್ನ ಕಛೇರಿಗೆ ಬಂದಿದ್ದ ಗೌತಮಪುರದ ಲಲಿತಕ್ಕ ಕಣ್ಣೀರಾಗಿದ್ದಳು.
ಇವರ ತಂದೆ ಬಚ್ಚಾಚಾರ್ ತಾಯಿ ಪದ್ದಮ್ಮ ಕುಂದಾಪುರ ಮೂಲದವರು, ಬಚ್ಚಾಚಾರ್ ರನ್ನು ನಮ್ಮ ಪಕ್ಕದ ಮನೆಯ ರಾಮಾಚಾರ್ ಕುಲುಮೆ ಕೆಲಸಕ್ಕೆ ಕರೆತಂದಿದ್ದು.
ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ದಲ್ಲಿ ಬರುವ ಒಂದು ಕಥೆಯಾದ #ಮಂಜ_ಬ್ರಹ್ಮ_ರಾಕ್ಷಸನಾದರೆ... ಕಥೆಯಲ್ಲಿ ಬಚ್ಚಾಚಾರ್ ಮತ್ತು ಆ ಕಾಲದ ಕುಲಿಮೆ ನನ್ನ ಕಣ್ಣಲ್ಲಿ ಗ್ರಹಿಸಿದ ವರ್ಣನೆ ದಾಖಲಿಸಿದ್ದೇನೆ.
1984ರಲ್ಲಿ ನಾನು ಖರೀದಿಸಿದ್ದ ನಿಕಾನ್ ಕ್ಯಾಮೆರಾದಲ್ಲಿ ಬ್ಲಾಕ್ & ವೈಟ್ ಪೋಟೋದಲ್ಲಿ ನಾನು ಬಚ್ಚಾಚಾರ್ ಫೋಟೋ ನನ್ನಣ್ಣ ಮತ್ತು ನಮ್ಮ ಊರಿನ ಅಮ್ಜಾದ್ ಸಾಹೇಬರ ಜೊತೆ ಸೆರೆ ಹಿಡಿದಿದ್ದೆ.
ಇವತ್ತು ಅವರ ಮಗಳು ತಂದೆಯ ಪೋಟೋ ಇಲ್ಲ ಅಂತ ರೋದಿಸಿದಾಗ ಬಚ್ಚಾಚಾರ್ ಪೋಟೋ ನೆನಪಾಗಿ ಮಗನಿಗೆ ಹೇಳಿ ಎಡಿಟ್ ಮಾಡಿಸಿ ನಮ್ಮದೇ ಪ್ರಿಂಟರ್ ನಲ್ಲಿ ಪ್ರಿಂಟ್ ತೆಗೆದು ನನ್ನಣ್ಣನ ಮಗನಿಗೆ ಆನಂದಪುರOಗೆ ಕಳಿಸಿ ಪೋಟೋ ಪ್ರೇಂ ಹಾಕಿಸಿ ತರಿಸಿ ಲಲಿತಕ್ಕನಿಗೆ ನೀಡಿದಾಗ ಅವರ ಮುಖದಲ್ಲಿ ವ್ಯಕ್ತವಾದ ಸಂತೋಷಕ್ಕೆ ಬೆಲೆ ಕಟ್ಟಲಾಗಲಿಲ್ಲ ಈ ಸಂದರ್ಭದಲ್ಲಿ ಲಲಿತಕ್ಕ ಜೀವಮಾನದಲ್ಲೂ ನಿರೀಕ್ಷಿಸದ ತಂದೆಯ ಪೋಟೋದ ಬೆಲೆ ಲಕ್ಷ ರೂಪಾಯಿ ಕೊಟ್ಟರೂ ಕಡಿಮೆ ಅಂದರು.
ಇವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದಾಗ ನನ್ನ ತಾಯಿ ನಮ್ಮ ಮನೆಯಲ್ಲೇ ಎರೆಡು ತಿಂಗಳು ಇಟ್ಟುಕೊಂಡು ಸಲಹಿದ್ದು...ನಮ್ಮ ತಂದೆ ಚಿಕಿತ್ಸೆ ನೀಡಿದ್ದು... ಆಗ ನನ್ನ ದೊಡ್ಡಕ್ಕ ಜಲಜಕ್ಕನ ಕೈ ಬಳೆಗಳ ದೊಡ್ಡ ಪೆಟ್ಟಿಗೆ ಅಷ್ಟು ಸಂಗ್ರಹ..., ಪ್ರತಿ ವರ್ಷ ದೀಪಾವಳಿಯಲ್ಲಿ ಲಲಿತಕ್ಕ ತನ್ನ ತಂದೆ ಬಚ್ಚಾಚಾರ್ ಗೆ ಪಿತೃ ತರ್ಪಣದ ಎಡೆ ತಪ್ಪದೆ ಇಡುವುದು... ಎಲ್ಲಾ ನೆನಪಿಸಿಕೊಂಡರು.
ಗೌತಮಪುರದಲ್ಲಿ ಇವರು ನೆಲೆನಿಲ್ಲಲು ಕಾರಣರಾದ #ಕೊಗ್ಗಾಚಾರ್.... ಹಾಲಿ ಗೌತಮಪುರದ ಜನತಾ ಕಾಲೋನಿಯಲ್ಲಿ ಜಾಗ ಮತ್ತು ಮನೆ ಮಂಜೂರಿ ಮಾಡಿಸಿಕೊಟ್ಟ ಸ್ಥಳಿಯ ಮುಖಂಡರಾದ #ಕಲ್ಲಪ್ಪರನ್ನು ಸ್ಮರಿಸಿದರು
Comments
Post a Comment