Blog number 1940. ಭಾಗ 3 ಆನಂದಪುರಂ ವೇದ ನಾರಾಯಣ ಭಟ್ಟರ ಕಿರಿಯ ಪುತ್ರ ಕೆ.ವಿ.ಸುರೇಶರೊಂದಿಗೆ ದ್ವಾರಕಾ ಸಂಶೋಧಿಸಿದ S.R.ರಾವ್ ಇವರ ಮನೆಯಲ್ಲಿ ಜನಿಸಿದ ಬಗ್ಗೆ ಮಾತು ಕತೆ,
#ಆನಂದಪುರಂನ_ವೇದನಾರಾಯಣ_ಭಟ್ಟರ_ಕಿರಿಯ_ಪ್ರತ್ರ_ಕೆ_ವಿ_ಸುರೇಶ್_ಜೊತೆ_ಮಾತುಕಥೆ_ಭಾಗ_3
#ಶ್ರೀಕೃಷ್ಣನ_ಮುಳುಗಿದ್ದ_ದ್ವಾರಕೆ_ಸಂಶೋಧಿಸಿದ್ದ_ಎಸ್_ಆರ್_ರಾವ್_ಜನಿಸಿದ್ದು
#ಆನಂದಪುರಂನ_ಇವರ_ಮನೆಯಲ್ಲೇ
#ಎಸ್_ಆರ್_ರಾವ್_ಪೋಟೋ_ಆನಂದಪುರಂನಲ್ಲಿ_ಅಳವಡಿಸುವ_ಅಭಿಯಾನ_ಆಗಬೇಕಾಗಿದೆ.
#ನಾನು_ಎಸ್_ಆರ್_ರಾವ್_ಬೇಟಿ_ಮಾಡಿದ್ದು_ಅವರು_ಬರೆದ_ಪತ್ರ_ಕಳಿಸಿದ_ಅವರ_ಪುಸ್ತಕ_ನನ್ನ_ಭಾಗ್ಯ.
ಆನಂದಪುರಂನ ವೇದ ನಾರಾಯಣ ಭಟ್ಟರ ಜ್ಞಾನ ವ್ಯಕ್ತಿತ್ವ ಆ ಕಾಲದಲ್ಲೇ ವಿಶೇಷವಾದದ್ದು ಇವರದ್ದೇ ಮನೆಯಲ್ಲೇ ಬಾಡಿಗೆಗೆ ಇದ್ದವರು ಮುಳುಗಿದ್ದ ದ್ವಾರಕೆ ಸಂಶೋಧಿಸಿದ S.R.ರಾವ್ ತಂದೆ.
ಈ ಮನೆಯಲ್ಲೇ ಎಸ್. ಆರ್.ರಾವ್ ಜನಿಸುತ್ತಾರೆ ಅವರಿಗೆ ಬಾಣಂತನ ಮಾಡಿದವರು ಆನಂದಪುರಂ ಬ್ರಹ್ಮಪುರಿ ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಪ್ರಾಣೇಶ್ ಆಚಾರ್ ಅಜ್ಜಿ ಭಾಗಿರಥಿ ಬಾಯಿ.
ಆನಂದಪುರಂನ ಆರಾಧ್ಯ ದೈವ ರಂಗನಾಥನ ಹೆಸರು S.R.ರಾವ್ ಗೆ ಅವರ ತಂದೆ ನಾಮಕರಣ ಮಾಡಲು ಒಂದು ಘಟನೆ ಕಾರಣ ಆಗುತ್ತದೆ ಅದು ಅವರ ಪತ್ನಿಯ ಆಭರಣ ಕಳ್ಳತನ ಆಗುತ್ತದೆ ಆದರೆ ಆ ರಾತ್ರಿ ಕಾರ್ಯನಿಮಿತ್ತ ದೂರದ ಸಾಗರದಲ್ಲಿದ್ದ ಅವರಿಗೆ ಇದೆಲ್ಲ ಕನಸಲ್ಲಿ ಕಾಣುತ್ತದೆ.
ಬೆಳಿಗ್ಗೆ ಊರಿಗೆ ಬಂದಾಗ ಮನೆಯಲ್ಲಿ ಊರಲ್ಲಿ ಗೌಜುಂಟು ಮಾಡಿದ್ದ ಕಳ್ಳತನದ ಆತಂಕ ಅವರ ಕನಸಿನಲ್ಲಿ ಕಂಡಂತೆ ಆಭರಣದ ಪೆಟ್ಟಿಗೆ ಆ ಜಾಗದಲ್ಲೇ ಸಿಗುವುದು ಮಹದಾಶ್ಚರ್ಯ ಅನ್ನಿಸುತ್ತದೆ ಮತ್ತು ಪವಾಡದಂತೆ ಸುಖಾಂತ್ಯವಾದ ಈ ಪ್ರಕರಣಕ್ಕೆ ಆನಂದಪುರಂನ ಆರಾಧ್ಯ ದೈವ ಶ್ರೀರಂಗನಾಥನೆ ಕಾರಣ ಅನ್ನಿಸುತ್ತದೆ.
ಈ ಘಟನೆಯ ಮರುದಿನವೇ ದಿನಾಂಕ 1 - ಜುಲೈ-1922 ರಂದು ಜನಿಸುವ ಗಂಡು ಮಗುವಿಗೆ ರಂಗನಾಥನೆಂದೇ ನಾಮಕರಣ ಮಾಡುತ್ತಾರೆ ಅವರೇ ಪ್ರಖ್ಯಾತರಾದ S.R.ರಾವ್, ದ್ವಾರಕೆ ಸಂಶೋದನೆಗಾಗಿಯೇ ಶ್ರೀರಂಗನಾಥ ಈ ಪವಾಡ ಅವರು ಜನಿಸುವ ಮೊದಲು ಮಾಡಿರಬೇಕು.
ನನ್ನ ಬಾಗ್ಯ ನಾನು S.R.ರಾವ್ ಭೇಟಿ ಮಾಡಿದ್ದು, ಅವರು ಬರೆದ ಪುಸ್ತಕ ಮತ್ತು ಪತ್ರ ನನ್ನ ಸಂಗ್ರಹದಲ್ಲಿರುವುದು.
S.R.ರಾವ್ ಪೋಟೋ ಆನಂದಪುರಂನ ರಂಗನಾಥ ಸ್ವಾಮಿ ದೇವಾಲಯದಲ್ಲಿ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮತ್ತು ಸ್ಥಳೀಯ ಶಾಲಾ ಕಾಲೇಜುಗಳಲ್ಲಿ ಇರಬೇಕು ಪ್ರತಿ ವರ್ಷ ಅವರ ಸ್ಮರಣೆಯ ಕಾರ್ಯಕ್ರಮ ನಡೆಯಬೇಕು.
ಎಸ್. ಆರ್. ರಾವ್ ಜನನ 1-ಜುಲ್ವೆ -1922 ಆನಂದಪುರಂನಲ್ಲಿ -ಮರಣ 3- ಜನವರಿ-2013 ಬೆಂಗಳೂರಿನಲ್ಲಿ ಅವರಿಗೆ ಅವರ ಹುಟ್ಟೂರು ಆನಂದಪುರಂ ಅಂದರೆ ಅತಿ ಹೆಚ್ಚು ಅಭಿಮಾನ ಹೊಂದಿದ್ದರು.
Comments
Post a Comment