#ಐದು_ವಷ೯ದ_ಹಿಂದೆ_ರಾತ್ರಿ_ಈ_ಸಮಯದಲ್ಲಿ_ಬಂದಿದ್ದ
#ದಮ೯ರಾಯನಂತ_ಗುಣದ_ಹಾದಿಗಲ್ಲು_ದಮ೯_ಕುಮಾರ್
#ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾಗಿರುವ_ಮಂಜುನಾಥ_ಗೌಡರ_ಸಹೋದರ
#ಶಿವಮೊಗ್ಗದ_ಜನಪರ_ಹೋರಾಟಗಾರ_ವಕೀಲರಾದ_ಜಿ_ನಾಗೇಶರ_ಅಣ್ಣ
#ಇವತ್ತು_ನಿವೃತ್ತರಾಗಿದ್ದಾರೆ_ತೀರ್ಥಹಳ್ಳಿ_ಸಾಹಿತ್ಯ_ಪರಿಷತನಲ್ಲಿ_ಸಕ್ರಿಯರಾಗಿದ್ದಾರೆ
#ಅವತ್ತು_ಇವರ_ಮೂಲಕ_ಮಂಜುನಾಥ_ಗೌಡರಿಗೆ_ವಿನಂತಿಸಿದ
#ಶಾಂತವೇರಿ_ಗೋಪಾಲಗೌಡರ_ಕಂಚಿನ_ಪ್ರತಿಮೆ_ಈಡೇರ_ಬಹುದಾ?
. ಇವತ್ತಿಗೆ ಸರಿಯಾಗಿ 5 ವರ್ಷದ ಹಿಂದೆ ತಡ ರಾತ್ರಿ ಧರ್ಮ ಕುಮಾರ್ ಬಂದಿದ್ದರು, ಅವತ್ತು ನಮ್ಮ ಊರಿನ ವರಸಿದ್ಧಿವಿನಾಯಕ ಸ್ವಾಮಿಯ 13 ನೇ ವರ್ಷದ ಜಾತ್ರೆಯ ಮುಗಿಸಿ ಮನೆಗೆ ಬಂದು ಕುಳಿತಿದ್ದಾಗ ಬಂದರು, ಸುಮಾರು 19 ವಷ೯ ಆಗಿತ್ತು ನನ್ನ ಇವರ ಬೇಟಿ ಆಗದೆ.
ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995 - 2000) ನನ್ನ ಭಾಗದಲ್ಲಿನ ಉತ್ಸಾಹಿ ಮತ್ತು ಪ್ರಾಮಾಣಿಕ ಕೃಷಿ ಸೇವಕರಾಗಿ ಜನಾನುರಾಗಿಗಳಾಗಿದ್ದರು, ರೈತ ಸ್ನೇಹಿ ಆಗಿದ್ದ ಇವರಂತಹ ಇನ್ನೊಬ್ಬರನ್ನು ನಾನು ಈವರೆಗೆ ನೋಡಿಲ್ಲ, ಈಗೆಲ್ಲ ಕೃಷಿ ಸೇವಕರು ಯಾರೂ ಅಂತಲೇ ನನಗೆ ಗೊತ್ತಿಲ್ಲ.
ಆನಂದಪುರಂನ ಆ ದಿನಗಳಲ್ಲಿ ನಾವೆಲ್ಲ ಯುವಕರು ಹಮ್ಮಿಕೊಳ್ಳುತ್ತಿದ್ದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯, ಮೋದಿ ಡಾಕ್ಟರ ಕಣ್ಣಿನ ಶಸ್ತ್ರಚಿಕಿತ್ಸಾ ಶಿಭಿರಗಳ ಯಶಸ್ವಿಗೊಳಿಸುವಲ್ಲಿ ತೆರೆ ಮರೆಯಲ್ಲಿ ಈ ದಮ೯ ಕುಮಾರರ ಶ್ರಮ ಇರುತ್ತಿತ್ತು.
ನನಗೆ ಇವರ ತಮ್ಮ ಶಿವಮೊಗ್ಗದ ವಕೀಲರಾದ ಜಿ.ನಾಗೇಶನ್ ಹಳೆ ಗೆಳೆಯರು ನಂತರ ಇವರ ಗೆಳೆತನ.
ತೀಥ೯ಳ್ಳಿಯಲ್ಲಿ ನೌಕರಿ, ಮನೆ ಮತ್ತು ಅಡಿಕೆ ತೋಟ ಮಾಡಿಕೊಂಡಿರುವುದಾಗಿ ಹೇಳಿದರು, ಇವರ ಅಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ ಗೌಡರು ಈಗ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮುಖಂಡರು, ಆಗ ತೀಥ೯ಹಳ್ಳಿಯ ರಾಜಕಾರಣದಲ್ಲಿ ಮಂಜುನಾಥ ಗೌಡರು, ಕಿಮ್ಮನೆ ಮತ್ತು ಆರಗ ಜ್ಞಾನೇಂದ್ರ ಪರಸ್ಪರ ರಾಜಕೀಯ ಕೆಸರೆರಾಚಾಟ ನಡೆದಿದ್ದರು, ಅವರೆಲ್ಲರ ಜೊತೆ ದಮ೯ ಕುಮಾರರದ್ದು ಪ್ರೀತಿ ವಿಶ್ವಾಸದ ದಮ೯ಕಾರಣ.
ಇವರ ಮಗಳ ನಿಶ್ಚಿತಾಥ೯ಕ್ಕೆ ವಿವಾಹಕ್ಕೆ ಮೂರು ಮುಖಂಡರು ಹಾಜರಿದ್ದರಂತೆ.
ಅವತ್ತು ನಾನು ಧರ್ಮ ಕುಮಾರರಿಗೆ ಒಂದು ವಿನಂತಿ ಮಾಡಿದ್ದೆ, ಅದೇನೆಂದರೆ ನಿಮ್ಮ ಸಹೋದರ ಮುಖಂಡರಾದ ಮಂಜುನಾಥ ಗೌಡರಿಗೆ ಹೇಳಿ ದಿವ೦ಗತ ಶಾಂತವೇರಿ ಗೋಪಾಲಗೌಡರ ನಾಲ್ಕು ಕಂಚಿನ ಪ್ರತಿಮೆ ಮಾಡಿಸಿ ಗೋಪಾಲಗೌಡರನ್ನ ಮೊದಲ ಚುನಾವಣೆಯಲ್ಲಿ ಸಾಗರ ವಿದಾನ ಸಭಾ ಕ್ಷೇತ್ರದಿಂದ ಸಾಗರದಿಂದ ಆಯ್ಕೆ ಆಗಿದ್ದಕ್ಕೆ ಸಾಗರದಲ್ಲಿ, ಮುಂದೆ ಶಾಸಕರಾಗಿ ಆಯ್ಕೆ ಆದ ತೀಥ೯ಹಳ್ಳಿ ಮತ್ತು ಅವರ ಪ್ರಭಾವ ಕಾಯ೯ ಕ್ಷೇತ್ರಗಳಾಗಿದ್ದ ಸೊರಬ ಮತ್ತು ಹೊಸನಗರದಲ್ಲಿ ನಿಮಿ೯ಸಲು ನೀವು ನೆನಪಿಸಿ ಎಂದಿದ್ದೆ ಅವರು ಒಪ್ಪಿ ಭರವಸೆ ನೀಡಿದ್ದರು.
ಗೋಪಾಲಗೌಡರ ಮೊದಲ ಆತ್ಮಚರಿತ್ರೆ "ಜೀವಂತ ಜ್ವಾಲೆ" ಬರೆದದ್ದು ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರ ಅದರ ಬಿಡುಗಡೆಯ ಜವಾಬ್ದಾರಿ ವಹಿಸಿದ್ದು ಆಗಿನ ಯುವ ಮುಖಂಡ ಕಿಮ್ಮನೆ ರತ್ನಾಕರ್, ಕಿಮ್ಮನೆ ಅವತ್ತುಆನೆ ಮೇಲೆ ಶಾಂತವೇರಿ ಗೋಪಾಲಗೌಡರ ಆತ್ಮಚರಿತ್ರೆ #ಜೀವಂತ_ಜ್ವಾಲೆ ಪುಸ್ತಕ ಮೆರವಣಿಗೆ ಮಾಡಿಸಿದ್ದರು ಅಂತ ವೆಂಕಪ್ಪ ಗೌಡರು ನೆನಪಿಸಿ ಕೊಳ್ಳುತ್ತಿದ್ದನ್ನ ನೆನಪಿಸಿದೆ.
ಅವತ್ತು ಸಕಾ೯ರಿ ಸೇವೆಯಲ್ಲಿ ಇರುವುದರಿಂದ ಮಿತ್ರ ದಮ೯ ಕುಮಾರ್ ಏನೂ ಪ್ರತಿಕ್ರಿಯಿಸಲಿಲ್ಲ, ತೀಥ೯ಳ್ಳಿಯಲ್ಲಿ ಇವರಿಗೆ ರಾಜಕಾರಣ ದಮ೯ ಸಂಕಟ ಕೂಡ.
ಬಹಳ ವಷ೯ದ ನಂತರ ಆತ್ಮೀಯ ಗೆಳೆಯರ ಬೇಟಿ ಅವತ್ತಿನ ಮೂರು ದಿನದ ಜಾತ್ರೆ ಆಯಾಸವನ್ನೇ ಮರೆಸಿ ಬಿಟ್ಟಿತು.
ಈಗ ಐದು ವರ್ಷದ ಕಾಲಾವದಿಯಲ್ಲಿ ಧರ್ಮಕುಮಾರರು ನಿವೃತ್ತರಾಗಿದ್ದಾರೆ, ಇವರ ಸಹೋದರ ಮಂಜುನಾಥ ಗೌಡರು ಪ್ರಸಕ್ತ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗೆ ಆಪ್ತರೂ ಆಗಿದ್ದಾರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದಾರೆ ಮತ್ತು ಸರಕಾರದ ನಿಗಮ ಮಂಡಳಿ ಅಧ್ಯಕ್ಷರಾಗಿ ಘೋಷಣೆ ಆಗುವ ಪಟ್ಟಿಯಲ್ಲಿ ಅವರ ಹೆಸರಿದೆ ಎನ್ನುವ ಸುದ್ದಿ ಇದೆ.
ಅವರು ಮನಸ್ಸು ಮಾಡಿದರೆ ಈ ಕೆಲಸ ಸುಲಭ ಸಾಧ್ಯ,ಐದು ವರ್ಷದ ಹಿಂದೆ ನಾನು ಇವರ ಮೂಲಕ ವಿನಂತಿಸಿದ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆ ಈಡೇರಬಹುದೆಂಬ ಆಶಾಭಾವನೆ ನನ್ನದು.
Comments
Post a Comment