Blog number 1944. ನಾನು ಪಂಚೆದಾರಿಯಾಗಿ 11 ವರ್ಷವಾಯಿತು, ಹಿಂದೂ ಜೈನ ಮತ್ತು ಮುಸ್ಲಿಂರಲ್ಲಿ ಹೊಲಿಗೆ ರಹಿತ ಉಡುಪಾದ ಪಂಚೆ ದಾರ್ಮಿಕ ಯಾತ್ರೆಯಲ್ಲಿ ಕಡ್ಡಾಯ ಬಳಕೆಯಲ್ಲಿದೆ.
#ಶಿವಮೊಗ್ಗದ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯನವರ_ಉಡುಗೊರೆ_ಪಂಚೆಗಳು
#ನಾನು_ಪ್ಯಾಂಟಿನಿಂದ_ಪಂಚೆಗೆ_ಬದಲಾಗಿ_ಹತ್ತು_ವರ್ಷ_ಆಯಿತು
#ವಿಚಾರವಾದಿ_ಹೆಚ್_ಎನ್_ನರಸಿಂಹಯ್ಯ_ಮಾಜಿ_ಪ್ರಧಾನಿ_ದೇವೇಗೌಡರು
#ಮುಖ್ಯಮಂತ್ರಿ_ಸಿದ್ಧರಾಮಯ್ಯ_ಪಂಚೆ_ಪ್ರಿಯರು
#ಪಂಚೆ_ಧರಿಸಿ_ಬಂದರೆ_ಪ್ರವೇಶ_ನಿರಾಕರಿಸುವ_ಕ್ಲಬ್_ಗಳಿದೆ
#ನಾನ್ಯಾಕೆ_ಪಂಚೆಗೆ_ಬದಲಾದೆ_ಗೊತ್ತಾ...
ನನ್ನ ಮಗ ಈ ವರ್ಷದ ಆಲೇ ಮನೆ ಬೆಲ್ಲ ಶಿವಮೊಗ್ಗದ ಹಿರಿಯ ಸಮಾಜವಾದಿ,ಮಾಜಿ ರಾಜ್ಯಾದ್ಯಕ್ಷರು ಲೋಕದಳ (ಚೌದುರಿ ಚರಣ್ ಸಿಂಗ್ ಪಾರ್ಟಿ) ಪಿ.ಪುಟ್ಟಯ್ಯ ಇವರಿಗೆ ತಲುಪಿಸಲು ಹೋಗಿದ್ದ ಅವರು ಅವರ ಅನೇಕ ಗೆಳೆಯರಿಗೆ ಪ್ರತಿ ವರ್ಷ ಮಲೆನಾಡಿನ ಆಲೇಮನೆ ಬೆಲ್ಲ ನೀಡುತ್ತಾರೆ.
ಮಲ್ನಾಡಳ್ಳಿಯ ಮರಿ ಸ್ವಾಮಿಗಳಾಗುವವರೆಂದೇ ಭಾವಿಸಲಾಗಿದ್ದ ಪುಟ್ಟಯ್ಯನವರು ಅದನ್ನು ನಿರಾಕರಿಸಿ ಬಂದವರು ಅವರು ನನ್ನ ಮಗನ ಹತ್ತಿರ ಬೆಲೆ ಬಾಳುವ ಮೂರು ಬಿಳಿ ಪಂಚೆಗಳನ್ನು ಉಡುಗೊರೆ ಆಗಿ ಕಳಿಸಿದ್ದಾರೆ ಆಗಾಗ್ಗೆ ಪುಟ್ಟಯ್ಯನವರು ನೀಡುವ ಪಂಚೆಗಳು ನನಗೆ ಪಂಚ ಪ್ರಾಣ ಅಂತವರು ನೀಡುವ ವಸ್ತ್ರದಾನ ಶೇಷ್ಟವೂ ಹೌದು.
2013ರ ತನಕ ಪ್ಯಾಂಟ್ ಶರ್ಟ್, ಖಾದಿ ಜುಬ್ಬಾ ಪೈಜಾಮದಾರಿ ಆಗಿದ್ದೆ, 1980ರ ತನಕ SSLC ವರೆಗೆ ಚಡ್ಡಿ ಅಂಗಿದಾರಿ ಆಗಿದ್ದು ಮೊದಲ ವರ್ಷದ ಡಿಪ್ಲೋಮ ತರಗತಿಗೆ ಸೇರುವಾಗ ಆನಂದಪುರಂನ ಸರ್ಕಾರಿ ಆಸ್ಪತ್ರೆ ಎದುರಿನ ಖ್ಯಾತ ಟೈಲರ್ ವಾಜೀದ್ ಸಾಬರಿಂದ ನನಗೆ ಪ್ಯಾಂಟ್ ಶರ್ಟ್ ನನ್ನಣ್ಣ ಹೊಲಿಸಿ ಕೊಟ್ಟಿದ್ದ.
2012ರಲ್ಲಿ ನಮ್ಮ ಮೊದಲ ಲಾಡ್ಜ್ ಪ್ರಾರಂಬಿಸಿದಾಗ ನಾನು ಬಣ್ಣ ಬಣ್ಣದ ಲುಂಗಿ ಧರಿಸಿ ಆಫೀಸಿಗೆ ಹೋಗುತ್ತಿದ್ದೆ ಒಂದು ದಿನ ಬಿಲ್ಡರ್ ಆಗಿರುವ ಮಿತ್ರರಾದ ರವೀಂದ್ರ ಗಂಗೊಳ್ಳಿ ಬಂದವರು ನನ್ನ ಲುಂಗಿದಾರಣೆಗೆ ಆಕ್ಷೇಪಿಸಿದರು, ಪ್ರಂಟ್ ಆಫೀಸಿನಲ್ಲಿರುವವರ ಡ್ರೆಸ್ ಕೋಡ್ ಜ್ಞಾಪಿಸಿದ್ದರು ಪಂಚೆಯೇ ಧರಿಸುವುದಾದರೆ ಶುದ್ಧ ಬಿಳಿ ಪಂಚೆ ಧರಿಸಿ ಆಫೀಸಿಗೆ ಬನ್ನಿ ಅಂದಿದ್ದೇ ನನಗೆ ಪ್ಯಾಂಟಿನಿಂದ ಖಾಯಂ ಪಂಚೆದಾರಿಯಾಗಲು ಕಾರಣ ಆಯಿತು.
ಮೊದಲ ಬಾರಿಗೆ ಪಂಚೆ ಧರಿಸಿ ಶಿವಮೊಗ್ಗಕ್ಕೆ ಹೋದಾಗ ಒಂದು ರೀತಿ ಮುಜುಗರ ನಾಚಿಕೆ ಅನ್ನಿಸಿತ್ತು ಆದರೆ ಕಳೆದ 11 ವರ್ಷದ ಅಭ್ಯಾಸದಿಂದ ಪ್ಯಾಂಟ್ ಬಳಸುವುದು ಸಂಪೂರ್ಣ ತ್ಯಜಿಸಿದೆ.
ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಡುಪಾದ ಪಂಚೆ ಭಾರತ ಮತ್ತು ನೇಪಾಳದಲ್ಲಿ ಹೆಚ್ಚು ಜನಪ್ರಿಯವಾಗಿದೆ ಪಂಚೆ-ದೋತಿ-ವೇಷ್ಠಿ - ಮರ್ಧಾನಿ - ಚಾದ್ರಾ - ದೋತರ್-ಜೈನ್ ಬೋಹ್ - ಕಚ್ಚೆಪಂಜೆ-ದೋತ್ರ - ಚುರಿಯಾ - ದುತಿ-ದೊಂಪರ್ - ಅಂಗೋಸ್ತರ್ - ಮುಂದೆ - ಪಂಚ- ವೇಟ್ಟ - ದೌಟಿ ಅಂತೆಲ್ಲ ಭಾರತೀಯ ಬಾಷೆಗಳಲ್ಲಿ ಕರೆಯುವ ಪಂಚೆ ತಯಾರಿಸುವ ರಾಮರಾಜ್ ನಂತಹ ಪ್ರಸಿದ್ಧ ಕಂಪನಿಗಳು ಸಾವಿರಾರು ಕೋಟಿ ಉದ್ಯಮವಾಗಿದೆ ಪಂಚೆಗಳಿಗೆ ಪ್ರಸಿದ್ಧ ಸಿನಿಮಾ ತಾರೆಯರು ರೂಪದರ್ಶಿಗಳಾಗಿದ್ದಾರೆ.
ಮೆಕ್ಕಾ ಯಾತ್ರೆಗೆ ಇರುವ ಡ್ರೆಸ್ ಕೋಡ್ ಕೂಡ ಬಿಳಿಯ ದೋತಿ ಮತ್ತು ಬಿಳಿಯ ಹೊದೆಯುವ ಶಾಲು ಮಾತ್ರ ಇದೇ ರೀತಿ ಹಿಂದೂ ಧರ್ಮದಲ್ಲಿ ಜೈನದರ್ಮದಲ್ಲಿ ಆಚರಣೆಯಲ್ಲಿದೆ, ಹೊಲಿಗೆ ಮಾಡದ ಬಟ್ಟೆಗಳು ಮಾಲಿನ್ಯಕ್ಕೆ ಕಡಿಮೆ ಪ್ರವೇಶ ಸಾಧ್ಯ ಎಂಬ ನಂಬಿಕೆ ಈ ಮೂರು ಧರ್ಮಗಳಲ್ಲಿದೆ.
ಹರೇ ಕೃಷ್ಣ ಪಂಥದ ಡ್ರೆಸ್ ಕೋಡ್, ಪಂಜಾಬ್ ರೈತರ ನಿತ್ಯ ಉಡುಗೆ, ಮಹಾತ್ಮ ಗಾಂಧಿ, ದೇವೇಗೌಡರು,ಸಿದ್ದರಾಮಯ್ಯರ ಉಡುಪು ಪಂಚೆ.
ಒಂದನೆ ಶತಮಾನದ ಶಿಲ್ಪ ಚಿತ್ರದಲ್ಲಿ ಪಂಚೆ ಧರಿಸಿದ ಚಿತ್ರ ಕಡೆದಿದ್ದಾರೆ, ವಿಚಾರವಾದಿ ಹೆಚ್.ಎನ್. ನರಸಿಂಹಯ್ಯನವರು ವಿದೇಶದಲ್ಲಿ ವ್ಯಾಸಂಗ ಮಾಡುವಾಗಲೂ ಪಂಚೆ ತ್ಯಜಿಸಲಿಲ್ಲ ವಿದೇಶಿಗರು ಇವರ ಪಂಚೆ ಬಗ್ಗೆ ವ್ಯಕ್ತಪಡಿಸುತ್ತಿದ್ದ ಕುತೂಹಲದ ಘಟನೆ ಅವರ ಆತ್ಮ ಚರಿತ್ರೆಯಲ್ಲಿ ನಮೂದಿಸಿದ್ದಾರೆ.
Comments
Post a Comment