Blog number 1976.ಡಯಾಬಿಟೀಸ್ ಸಂಪೂರ್ಣ ಗುಣ ಪಡಿಸಲು ಸಾಧ್ಯ ಈ ಪುಸ್ತಕ ಓದಿರಿ ಮತ್ತು ಈ ಪುಸ್ತಕ ಬರೆದ ತಜ್ಞ ವೈದ್ಯರಾದ ಡಾ. ಪ್ರೀತಮ್ ಬೇಟಿ ಮಾಡಿ.
#ಡಯಾಬಿಟೀಸ್_ರಿವರ್ಸಲ್_ಸತ್ಯ_ಮತ್ತು_ಮಿಥ್ಯೆ_ಪುಸ್ತಕ
#ಡಯಾಬಿಟೀಸ್_ತಜ್ಞ_ವೈದ್ಯ_ಡಾಕ್ಟರ್_ಪ್ರೀತಂ_ಬರೆದು_ಪ್ರಕಟಿಸಿದ_ಪುಸ್ತಕ
#ನಾವೆಲ್ಲ_ಬಹುದಿನದಿಂದ_ಕಾಯುತ್ತಿದ್ದ_ಪುಸ್ತಕ_ಬಿಡುಗಡೆ
#ಇದು_ಡಯಾಬಿಟೀಸ್_ರೋಗಿಗಳು_ಮಾತ್ರವಲ್ಲ_ಅವರ_ಮನೆಯವರೂ_ಓದಲೇ_ಬೇಕಾದ_ಪುಸ್ತಕ
#ಪ್ರತಿಯೊಬ್ಬರು_ಓದಿ_ತಿಳಿದುಕೊಳ್ಳ_ಬೇಕಾದ_ಮಾಹಿತಿ
ನಾನು ನನ್ನ ಪ್ರಾಯದ ದಿನಗಳಲ್ಲಿ ಬಿ.ಪಿ. ಶುಗರ್ ನನಗೆ ಬರುವುದು ಸಾಧ್ಯವೇ ಇಲ್ಲ ಎಂಬ ಹುಮ್ಮಸ್ಸಿನಲ್ಲಿದ್ದೆ ಅಂತಹ ಒಂದು ದಿನ ಬೆಂಗಳೂರಿಂದ ಮೈಸೂರಿಗೆ ಪ್ರಯಾಣ ಮಾಡುವಾಗ ವಿಪರೀತ ಬಾಯಾರಿಕೆ ಅನುಭವಿಸಿದೆ, ಕೋಲ್ಡ್ ನೀರು, ಕೋಲ್ಡ್ 7 UP ಬಾಟಲಿ ಬಾಟಲಿ ಕುಡಿದರೂ ದಾಹ ತಣಿಯಲಿಲ್ಲ ಆಗ ನಾನು ಪೋನಾಯಿಸಿದ್ದು ಅವತ್ತಿನ ನನ್ನ ಪ್ಯಾಮಿಲಿ ಡಾಕ್ಟರ್ ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಹೊಂ ಡಾಕ್ಟರ್ ನಾಗೇಂದ್ರರಿಗೆ ಈಗ ಅವರು ಶಿವಮೊಗ್ಗದ ಪ್ರಖ್ಯಾತ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾಲಿಕರು.
ಅವರು ಆಗ ಹೇಳಿದ್ದು ನಿಮಗೆ ಡಯಾಬಿಟೀಸ್ ಪ್ರಾರಂಭ ಆಗಿದೆ ಭಯ ಬೀಳಬೇಡಿ ನೀರು ಕುಡಿಯಿರಿ ಸಿಹಿ ಪೇಯ ಸೇವಿಸ ಬೇಡಿ ನಿಮ್ಮ ಕೆಲಸ ಮುಗಿಸಿ ಊರು ತಲುಪಿದಾಗ ತಪಾಸಣೆಗೆ ಬನ್ನಿ ಅಂದರು ಆಗ ನಾನು ಮಂಡ್ಯ ಮೈಸೂರು ಮಧ್ಯದ ಬಾಬುರಾವ್ ಕೊಪ್ಪಲಿನ ಪ್ರಖ್ಯಾತ ಬನ್ನೂರು ಕುರಿ ಖಾದ್ಯದ ಹೋಟೆಲ್ ನಲ್ಲಿದ್ದೆ.
ಊರಿಗೆ ವಾಪಾಸಾಗಿ ಡಾ.ನಾಗೇಂದ್ರರಲ್ಲಿ ಹೋದಾಗ ನನ್ನ ಶುಗರ್ ಲೆವೆಲ್ 390 ದಾಟಿತ್ತು ಆಗಲೇ ಡಾಕ್ಟರ್ ಪ್ರೀತಂ ಡಯಾಬಿಟೀಸ್ ತಜ್ಞರಾಗಿ ನನಗೆ ಪರಿಚಯ ಆದರು ಕಳೆದ 15 ವರ್ಷದಿಂದ.
ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾಕ್ಟರ್ ಭುಜಂಗ ಶೆಟ್ಟರು ಡಯಾಬಿಟಿಸ್ ರಿವರ್ಸಲ್ ಬಗ್ಗೆ ಹೇಳಲು ಪ್ರಾರಂಬಿಸಿದಾಗ ಎಲ್ಲಾ ಡಯಾಬಿಟಿಸ್ ರೋಗಿಗಳಂತೆ ಆಸಕ್ತಿವಹಿಸಿದೆ ಅದರಿಂದ ಸಂಪೂರ್ಣ ಡಯಾಬಿಟೀಸ್ ಗುಣವಾದವರೊಡನೆ ಮಾತಾಡಿದ್ದೆ.
ಶಿವಮೊಗ್ಗ ಜಿಲ್ಲೆಯ ನಮಗೆ ನಮ್ಮ ಜಿಲ್ಲೆಯಲ್ಲಿ ಇಂತಹ ವೈದ್ಯರು ಯಾರಾದರೂ ಬಂದಾರಾ ಎನ್ನುವಾಗ ಡಾಕ್ಟರ್ ಪ್ರೀತಂ ಡಯಾಬಿಟೀಸ್ ರಿವರ್ಸಲ್ ಪ್ರಾರಂಬಿಸಿದರು ಅವರ ಸಲಹೆ ಪಾಲಿಸಿದ್ದರಿಂದ ಕಳೆದ 13 ವರ್ಷದಿಂದ ಬಳಸುತ್ತಿದ್ದ ಇನ್ಸುಲಿನ್ ಚುಚ್ಚುಮದ್ದು 2 ವರ್ಷದಿಂದ ನಿಂತಿದೆ.
ಇವತ್ತು ಬೆಳಿಗ್ಗೆ ಡಾಕ್ಟರ್ ಪ್ರೀತಂ ಮಾರ್ಗ ಮಧ್ಯದ ಪ್ರಯಾಣದಲ್ಲಿ ನನ್ನ ಕಛೇರಿಗೆ ಬಂದಿದ್ದಾರೆ ನಾನು ಇಲ್ಲದಿದ್ದರೂ ಅವರ ಪುಸ್ತಕ ತಲುಪಿಸಿ ಹೋಗಿದ್ದಾರೆ.
ದಿನಾಂಕ 29 ಫೆಬ್ರುವರಿ 2024ರ ಗುರುವಾರ ಪುಸ್ತಕ ಬಿಡುಗಡೆ ಇದೆ, 40 ಪುಟದ ಚಿಕ್ಕದಾದ ಚೊಕ್ಕದಾದ ಪುಸ್ತಕ ಯಾರು ಸುಲಭವಾಗಿ ಅರ್ದ ಗಂಟೆಯಲ್ಲಿ ಓದಲು ಸಾಧ್ಯವಿದೆ.
ಈ ಪುಸ್ತಕ ಓದಿದ ಯಾವುದೇ ಡಯಾಬಿಟಿಕ್ ರೋಗಿಗೆ ತನ್ನ ಡಯಾಬಿಟೀಸ್ ಕಾಯಿಲೆ ಸಂಪೂರ್ಣ ಗುಣಪಡಿಸಲು ಸಾಧ್ಯ ಎಂಬ ಆಶಾಭಾವನೆ ಮೂಡಿಸಲಿದೆ.
ಈ ಪುಸ್ತಕ ತೆರೆದಾಗ ಅಲ್ಲಿ ಬರೆದದ್ದು ತುಂಬಾ ಅರ್ಥಪೂರ್ಣ ನುಡಿಗಟ್ಟು #ಆಹಾರ_ಕ್ರಮವು_ತಪ್ಪಾಗಿದ್ದರೆ_ಔಷದಿಗಳು_ಪ್ರಯೋಜನವಿಲ್ಲ
#ಆಹಾರ_ಕ್ರಮವು_ಸರಿಯಾಗಿದ್ದರೆ_ಔಷದಿಗಳ_ಅವಶ್ಯಕತೆಯೇ_ಇಲ್ಲ ಆಕರ್ಷಿಸುತ್ತದೆ.
ಈ ಪುಸ್ತಕ ಅವರ ತಂದೆ ಡಾ. ಈಶ್ವರಪ್ಪರಿಗೆ ಮತ್ತು ಅವರ ಗುರು ಡಾ. ವಿಜಯ ವಿಶ್ವನಾಥಕ್ಕೆ ಅರ್ಪಿಸಿದ್ದಾರೆ,ಕೃತಜ್ಞತೆಯ ಸಾಲಿನಲ್ಲಿ ನನ್ನ ಹೆಸರೂ ಸೇರಿಸಿದ್ದಾರೆ.
ಶುದ್ಧ ಕನ್ನಡದಲ್ಲಿ ಸುಲಭವಾಗಿ ಅರ್ಥ ಆಗುವಂತೆ ಮತ್ತು ಡಯಾಬಿಟೀಸ್ ಸಂಪೂರ್ಣವಾಗಿ ಗುಣಪಡಿಸಿಕೊಳ್ಳುವ ಮಾಹಿತಿ ಈ ಪುಸ್ತಕದಲ್ಲಿದೆ 40 ಪುಟಗಳ ಈ ಪುಸ್ತಕದ ಬೆಲೆ ರೂ 70 ಮಾತ್ರ ನಾನು ಅವಶ್ಯಕತೆ ಇರುವ ಗೆಳೆಯರಿಗೆ ಗಿಪ್ಟ್ ಆಗಿ ನೀಡಲು 25 ಪುಸ್ತಕ ಖರೀದಿಸಲಿದ್ದೇನೆ.
ಡಾಕ್ಟರ್ ಪ್ರೀತಮ್ ಅವರ ಚಿಕಿತ್ಸೆಯಿಂದಲೇ ನಾನು ನನ್ನ ಡಯಾಬಿಟಿಸ್ ನಿಯಂತ್ರಣದಲ್ಲಿದೆ ಈ ಬರಹ ಬರೆಯುವ ಮುನ್ನ ಸಿಹಿಯಾದ ಗಿಣ್ಣ ತಿಂದಿದ್ದೇನೆ ಅಂದರೆ ನೀವೇ ಯೋಚನೆ ಮಾಡಿ ಡಾಕ್ಟರ್ ಪ್ರೀತಮ್ ಅವರ ಡಯಾಬಿಟೀಸ್ ತಜ್ಞತೆ.
ಅವರ ವಿಳಾಸ ಡಾ.ಪ್ರೀತಮ್ ಡಯಾಬಿಟೀಸ್ ಸೆಂಟರ್ ದುಗಿ೯ಗುಡಿ ಮೊದಲನೆ ಸಮಾನಾಂತರ ರಸ್ತೆ ಶಿವಮೊಗ್ಗ 7899838546, ವಾಟ್ಸಪ್ 9449138546. ಸಂಪರ್ಕಿಸಿ ಈ ಪುಸ್ತಕ ಖರೀದಿಸಬಹುದು ಮತ್ತು ಚಿಕಿತ್ಸೆ ಪಡೆಯಬಹುದು.
ಕನ್ನಡದಲ್ಲಿ ಡಯಾಬಿಟೀಸ್ ತಜ್ಞರು ಬರೆದ ಮೊದಲ ಪುಸ್ತಕ ಎಂಬುದು ನಮ್ಮ ಶಿವಮೊಗ್ಗದ ಡಾ. ಪ್ರೀತಮ್ ಅವರ ದಾಖಲೆ ಕೂಡ.
Comments
Post a Comment