Blog number 1938. ನನ್ನ ಹಳೇ ಶಿಷ್ಯ, ನನ್ನ ಕಥಾ ಸಂಕಲದ ಒಂದು ಕಥೆಯ ಕಥಾ ನಾಯಕ ಹೋರಿ ಮಂಜ ಆಲಿಯಾಸ್ ಮೀಸೆ ಮಂಜ ನನ್ನ ಅತಿಥಿ.
#ಹೋರಿ_ಮಂಜ_ಅಲಿಯಾಸ್_ಮೀಸೆ_ಮಂಜ.
#ನನ್ನ_ಒಂದು_ಕಾಲದ_ಶಿಷ್ಯ
#ಅಡೂರಿನ_ರಾಯರ_ಪರಮಾಪ್ತ_ಕೆಲಸಗಾರ
#ನನ್ನ_ಕಥಾ_ಸಂಕಲನ_ಬಿಲಾಲಿ_ಬಿಲ್ಲಿ_ಪುಸ್ತಕದಲ್ಲಿ_ಇವನದ್ದೇ_ಒಂದು_ಕಥೆ_ಇದೆ
#ಅದರ_ಶಿರ್ಷಿಕೆ_ಹೋರಿ_ಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ.
#ಆರು_ವರ್ಷದ_ನಂತರ_ನಿನ್ನೆ_ಬಂದಿದ್ದಾನೆ.
#ಕಥಾ_ಸಂಕಲನ_ಓದಲು_ಕೊಟ್ಟಿದ್ದೇನೆ.
https://youtu.be/BmjSQIo-BXE?feature=shared
ನಮ್ಮ ಆಫೀಸಿನ ಗಾಜಿನ ಬಾಗಿಲ ಹಿಂಭಾಗದಿಂದ ಒಂದು ಮುಖ ಗೋಚರಿಸಿತು ಇದು ನನ್ನ ಒಂದು ಕಾಲದ ಶಿಷ್ಯ ಹೋರಿ ಮಂಜ,ಒಳಗೆ ಬರಬಹುದಾ? ಎಂದ ಬಾರೋ ಒಳಗೆ ಅಂದೆ.
ಇವನು ನನ್ನ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯಂಜನದ ಪುಸ್ತಕದಲ್ಲಿ ಒಂದು ನಿಜ ಕಥೆಯ ಕಥಾನಾಯಕ ಅದರ ಶಿರ್ಷಿಕೆ #ಹೋರಿಮಂಜ_ಮತ್ತು_ಗಾಡಿ_ಎತ್ತಿನ_ಬ್ರಾಂಡಿ.
2012ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲೂಕಿನಲ್ಲಿ ನಡೆಸಿದ #ಎತ್ತಿನ_ಗಾಡಿ_ಯಾತ್ರೆಯಲ್ಲಿ ಗಾಡಿ ಎತ್ತುಗಳಿಗೆ ಆಯಾಸ ಆಗ ಬಾರದೆಂದು ಸಂಜೆ ಗಾಡಿಯವರು ಕುಡಿಸುತ್ತಿದ್ದ ಬ್ರಾಂಡಿ ಮಂಜನೆ ಕುಡಿದು ಟೈಟಾಗಿ ಮಾಡಿದ ಎಡವಟ್ಟಿನ ಕಥೆ ಇದು.
ಈ ಕಥಾ ಸಂಕಲನ ಕಥಾನಾಯಕನಿಗೆ ಕೊಡಬೇಕಾಗಿತ್ತು. ಆದರೆ ಹೋರಿ ಮಂಜ ಸಿಗದೇ ಆರು ವರ್ಷ ಆಗಿತ್ತು ನಿನ್ನೆ ಈ ಪುಸ್ತಕವನ್ನು ಅವನಿಗೆ ಕೊಟ್ಟಿದ್ದೇನೆ, ಎಂಟು- ಒಂಬತ್ತನೇ ಕ್ಲಾಸ್ ಓದಿದ್ದಾನೆ ಆದ್ದರಿಂದ ಓದಬಹುದು ಎನ್ನುವ ನಂಬಿಕೆ ನನ್ನದು.
ಹೋರಿ ಮಂಜ .. ಮೀಸೆ ಮಂಜ ..ಎಂದು ಜನ ಪ್ರೀತಿಯಿಂದ ಕರೆಯುವ ಇವನು ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಆಡೂರಿನ ಕರಿ ಸೀನಣ್ಣನ ಮಗ ಇವನ ಆಸಲಿ ಹೆಸರು ಮಂಜುನಾಥ ಹಾಗಂತ ಮಂಜುನಾಥ ಅಂತ ಕರೆದರೆ ಇವನು ಓ ಅನ್ನುವುದಿಲ್ಲ " ಮಂಜ " ಅಂದರೆ ತಕ್ಷಣ ಪ್ರತಿಕ್ರಿಯಿಸುವಷ್ಟು ಇವನ ಅಸಲಿ ಹೆಸರು ಚಾಲ್ತಿ ಕಳೆದು ಕೊಂಡಿದೆ.
ಈಗ ಬೋರ್ವೆಲ್ ಹೊಡಿಸಿ ಅಡಿಕೆ ತೋಟ ಮಾಡಿರುವುದಾಗಿ,ಓಡಾಡಲು ಮೋಟಾರ್ ಬೈಕ್ ಇಟ್ಟುಕೊಂಡಿರುವುದಾಗಿ,ಮರ ಕತ್ತರಿಸುವ ಯಂತ್ರ ಕೂಡ ಹೊಂದಿದ್ದಾಗಿ ತಿಳಿಸಿದ.
ಈಗ ಕುಡಿಯುವುದು ಬಿಟ್ಟು ಆರು ವರ್ಷ ಆಯಿತು ಎಂದು ಹೇಳಿದ ಆದರೆ ಗಮ್ ಎನ್ನುವ ಮಧ್ಯದ ವಾಸನೆ ಯಾರದ್ದು?.. ಎಂದರೆ ನನ್ನ ಕಚೇರಿಯಲ್ಲಿ ಕುಳಿತಿದ್ದ ಗಣ್ಯರ ಮುಖವನ್ನು ಅವಲೋಕಿಸಿದ ಅಂದರೆ ಅವರು ಯಾರೋ ಕುಡಿದು ಬಂದಿರಬೇಕು ಎನ್ನುವಂತ ನೋಟ ಅವನದ್ದು !?. . .
ಇಂತದೇ ನಿತ್ಯವೂ ಕುಡಿಯುವ ರಂಪಾಟ ಮಾಡುವ ರಗಳೆ ಮಾಡುವ ನನ್ನ ಹಳೆಯ ಶಿಷ್ಯ ಮೀಸೆ ಮಂಜ ಒಂದು ಚೂರು ಬದಲಾಗಿಲ್ಲ ಅವನ ವಿಡಿಯೋ ಸಂದರ್ಶನ ನೋಡಿ.
Comments
Post a Comment