#ಶುಂಠಿ_ಬಗ್ಗೆ_ಪಿ_ಹೆಚ್_ಡಿ_ಮಾಡುತ್ತಿರುವವರು_ಬಂದಿದ್ದರು.
#ನಮ್ಮ_ಆನಂದಪುರಂ_ಶುಂಠಿ_ಟ್ರೇಡಿಂಗ್_ಹಬ್
#ಈ_ಉತ್ಸಾಹಿ_ಸಂಶೋದಕರನ್ನು_ಕಳಿಸಿದ್ದು_ಪ್ರಜಾವಾಣಿ_ಬ್ಯೂರೋ_ಚೀಪ್_ಆಗಿದ್ದ_ಪ್ರಕಾಶ್_ಕುಗ್ವೆ
#ಸುಮಾರು_ಒಂದೂವರೆ_ಗಂಟೆ_ವಿಡಿಯೋ_ಸಂದರ್ಶನ_ಅವರ_ಸಂಶೋದನೆಗೆಷ್ಟು_ಎಟುಗುತ್ತದೋ?
#ನಮ್ಮ_ಊರ_ಜಾತ್ರೆಯಲ್ಲಿ_ಒಟ್ಟಾಗಿ_ಕುಳಿತು_ಅನ್ನಸಂತರ್ಪಣೆ_ಪ್ರಸಾದ_ಸ್ವೀಕರಿಸಿದೆವು
#ಅವರ_ಸಂಶೋಧನಾ_ವರದಿ_2025ರಲ್ಲಿ_ಬರಲಿದೆ
ಮೊನ್ನೆ ಮಂಗಳವಾರ 13 - ಪೆಬ್ರವರಿ -2024 ಸೋಮವಾರ ನಮ್ಮ ವರಸಿದ್ದಿ ವಿನಾಯಕ ದೇವರ ರಥೋತ್ಸವ ಮುಗಿಸಿ ಅವರಣದ ಮೂಲ ದೇವರುಗಳಾದ ಕೆಂಡದ ಮಾಸ್ತಿಯಮ್ಮ ದೇವರಿಗೆ ಜಾತ್ರಾ ಸಮಿತಿ ಮತ್ತು ಗ್ರಾಮಸ್ಥರ ಪರವಾಗಿ ಪೂಜೆ ಸಲ್ಲಿಸಿ, ರಥೋತ್ಸವದ ದಿನದ ಅನ್ನ ಸಂತರ್ಪಣೆಗೆ ಹೋಳಿಗೆ ತುಪ್ಪದ ಊಟ ನಮ್ಮ ಕುಟುಂಬದಿಂದ ನೀಡುವ ಪದ್ದತಿ ಆದ್ದರಿಂದ ಅಡುಗೆ ಮನೆಯಲ್ಲಿ ಅರ್ಚಕರಿಂದ ಅನ್ನಪೂರ್ಣೇಶ್ವರಿ ಪೂಜೆ ಮುಗಿಸಿ, ಅನ್ನ ಸಂತರ್ಪಣೆ ಪ್ರಾರಂಬಿಸಿದೆವು.
ಪ್ರತಿ ವರ್ಷದಂತೆ ಈ ಸಂದರ್ಭದಲ್ಲಿ ಸಾಗರದ ಸಿದ್ಧ ಸಮಾದಿ ಸಂಸ್ಥೆ ಗುರುಗಳಾದ ಶೀ ಗಣೇಶ್ ಗುರೂಜಿ ಭಜನೆ ಪ್ರಾರಂಬಿಸಿದಾಗ ಒಂದು ಕಾಲದ ಪ್ರಜಾವಾಣಿ ಬ್ಯೂರೋ ಚೀಪ್ ಆಗಿದ್ದ ಯುವ ಪತ್ರಕರ್ತ ಪ್ರಕಾಶ್ ಕುಗ್ವೆ ಪೋನ್ ಬಂದಿತು.
ಅತಿ ಸಣ್ಣ ವಯಸ್ಸಲ್ಲೇ ಅತಿ ದೊಡ್ಡ ವೃತ್ತಿ ಜೀವನಕ್ಕೆ ತಲುಪಿದ ಪ್ರಕಾಶ್ ಕುಗ್ವೆ ವಯೋವೃದ್ಧ ತಂದೆ ತಾಯಿ ಜೊತೆ ಇರಲು ಮತ್ತು ಅವರ ಕೃಷಿ ಭೂಮಿ ನೋಡಿಕೊಳ್ಳಲು ವೃತ್ತಿಜೀವನ ತೊರೆದು ಅವರ ಸಾಗರ ಪಟ್ಟಣ ಸಮೀಪದ ಕುಗ್ವೆಗೆ ಬಂದು ನೆಲೆಸಿದ್ದಾರೆ.
ನನ್ನ ಸಣ್ಣ ಕಥಾ ಸಂಕಲನ ಬಿಡುಗಡೆಯಲ್ಲಿ ಇವರು ಮಾತಾಡಿದ ವಿಡಿಯೋ ನನ್ನ ಸಂಗ್ರಹದಲ್ಲಿದೆ, ಜಾತ್ರೆಯ ಗೌಜಿನಲ್ಲಿ ನಮ್ಮಿಬರ ಸಂಭಾಷಣೆ ನಮ್ಮಿಬ್ಬರಿಗೂ ಕೇಳಲೇ ಇಲ್ಲ.
ಬುಧವಾರ ಬೆಳಗ್ಗೆ ಮಾತಾಡಿಕೊಂಡಾಗ PHD ಸಂಶೋದನಾ ವಿದ್ಯಾರ್ಥಿಗಳು ನಿಮ್ಮಲ್ಲಿಗೆ ಕಳಿಸುತ್ತೇನೆ, ಅವರು ಶುಂಠಿ ಬೆಳೆ ಬಗ್ಗೆ, ಬಗರ್ ಹುಕುಂ ಪರಿಸರ ಇತ್ಯಾದಿಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾರೆ ನಿಮಗೆ ಸಮಯ ಇದೆಯಾ? ಅಂದರು,ನನ್ನ ಅದ್ಯತೆಗೆ ತಕ್ಕ ಹಾಗೆ ನಾನು ಸಮಯ ಹೊಂದಿಸುವ ಅಭ್ಯಾಸ ಆದರೆ ದೂರದ ಮೈಸೂರು ಬೆಂಗಳೂರಿಂದ ಬಂದ ಸಂಶೋದಕರಿಗೆ ಅದರಲ್ಲೂ ರಾಜ್ಯದ ಮೊದಲ ಬಗರ್ ಹುಕುಂ ಹಕ್ಕುಪತ್ರ ನೀಡಿದ ನಮ್ಮ ಊರು ಈಗ ಶುಂಠಿ ಮಾರಾಟದಲ್ಲಿ ದೇಶದ ದೊಡ್ಡ ಕೇಂದ್ರವಾಗಿದೆ ಆದ್ದರಿಂದ ಬಂದಿದ್ದ ಭರತ್ ಮತ್ತು ವೈಶಾಕ್ ಸಿಂಹ ಹಾಗೂ ಅವರ ಕ್ಯಾಮರಾ ಸಹಾಯಕ ಸೇರಿದ ಸಂಶೋದಕ ತಂಡಕ್ಕೆ ಅವರು ಬಯಸಿದ ಮಾಹಿತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿದ್ದು ಸುಮಾರು ಒಂದೂವರೆ ಗಂಟೆ ಸಮಯ ಕಳೆದಿತ್ತು.
ಸಂಶೋದನೆ ಪೇಪರ್ ಜೊತೆ ಈ ಬಗ್ಗೆ ಡಾಕ್ಯುಮೆಂಟರಿ ಕೂಡ ಮಾಡುವ ದೂರದ ಆಲೋಚನೆ ಇವರದ್ದು ಅದಕ್ಕಾಗಿ ಈ ಸಂದರ್ಶನದ ಚಿತ್ರಿಕರಣ ಮಾಡಿದ್ದಾರೆ, ನಂತರ ಕೊನೆಯ ದಿನದ ಜಾತ್ರೆಗೆ ಹೋಗಿ ಅನ್ನಪ್ರಸಾದ ಸ್ಟೀಕರಿಸಿ ಅವರಿಗೆ ಶುಭ ಹಾರೈಸಿ ಬೀಳ್ಕೊಟ್ಟೆ.
Comments
Post a Comment