Blog number 1956. ಜಾತ್ರೆ ಲಕ್ಕಿಡಿಪ್ ಊಟರಿಯಲ್ಲಿ ವಾಷಿಂಗ್ ಮೆಷಿನ್ ಬಹುಮಾನ ನಿನಗೇ ಬರುತ್ತೆ ಅಂದಿದ್ದೆ ಡ್ರಾ ನಡೆದಾಗ ಹಾಗೆಯೇ ಆಯಿತು ಇದೊಂದು ಕಾಕತಾಳಿಯ ಆಕಸ್ಮಿಕ ಘಟನೆ ಆದರೆ ನನ್ನ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದೆ.
#ಮಳೆ_ನಿಂತರೂ_ಹನಿ....
#ಎಂಬಂತೆ_ನಮ್ಮ_ಊರಿನ_ಜಾತ್ರೆ_ಪ್ರಸಂಗಳು_ಮುಗಿಯುವುದಿಲ್ಲ
#ಜಾತ್ರಾ_ಸಮಿತಿ_ಯುವಕರು_ಜಾತ್ರೆಗಾಗಿ_ಲಕ್ಕಿಡಿಪ್_ಲಾಟರಿ_ಇಟ್ಟಿದ್ದರು
#ಎಂಬತ್ತರ_ದಶಕದಲ್ಲಿ_ನಮ್ಮ_ರೈಸ್_ವಿಲ್_ಡ್ರೈವರ್_ಆಗಿದ್ದ
#ಬಸವನಹೊಂಡದ_ರಾಜನಾಯ್ಕರ_ಮಗ_ಬಸವಣ್ಣರ_ಮಗ
#ನಾಗರಾಜನಿಗೆ_ಜಾತ್ರೆಯ_ಲಾಟರಿ_ಎರಡನೆ_ಬಹುಮಾನ_ವಾಷಿಂಗ್_ಮೆಷಿನ್
#ಲಾಟರಿಯಲ್ಲಿ_ಎರಡನೆ_ಬಹುಮಾನ_ವಾಷಿಂಗ್_ಮಿಷನ್_ಸಿಗುತ್ತದೆ_ಎಂದಿದ್ದೆ
#ಇದೊಂದು_ಕಾಕತಾಳೀಯ_ಘಟನೆ
ನಮ್ಮೂರ ಜಾತ್ರೆ ಮೊನ್ನೆ 14 ಫೆಬ್ರವರಿ 2024ಕ್ಕೆ ಮುಗಿಯಿತು ಆದರೂ ಪ್ರತಿ ಜಾತ್ರೆಯಲ್ಲಿನ ನೆನಪುಗಳು ನೂರಾರು... ಇದೊಂದು ರೀತಿ ಮಳೆ ನಿಂತರು ಮಳೆ ಹನಿ ನಿಲ್ಲಲಿಲ್ಲ ಎಂಬಂತೆ.
ರಥೋತ್ಸವದ ಹಿಂದಿನ ದಿನ ದೇವಾಲಯದಲ್ಲಿ ಹೋಮ ದ್ವಜಾರೋಹಣ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಆಗ ಈ ನಾಗರಾಜ ಬಂದು ಮಾತಾಡಿಸಿದ.
ಪ್ರತಿ ವರ್ಷ ಜಾತ್ರೆಯಲ್ಲಿ ಈ ರೀತಿ ಸಿಗುತ್ತಾನೆ, ಇವನ ತಂದೆ ಬಸವಣ್ಣ, ಇವನ ಅಜ್ಜನ ಹೆಸರು ರಾಜ ನಾಯಕರು,ಒಂದು ಕಾಲದಲ್ಲಿ ದೊಡ್ಡ ಜಮೀನ್ದಾರರು, ಇವತ್ತಿನ ಭಂಗಿ ಬೂತಪ್ಪ ದೇವಸ್ಥಾನದ ಸಮೀಪ ಇರುವ ಕಲ್ಯಾಣಿ ಬಸವನಹೊ೦ಡದ ಮೇಲಿನ ಫಲವತ್ತಾದ ಸುಮಾರು 12 ಎಕರೆ ಭತ್ತದ ಕೃಷಿ ಮಾಡುವ ಜಮೀನು ಹೊಂದಿದ್ದರು,ಆದರೆ ದುರಾದೃಷ್ಟದಿಂದ ಕಂದಾಯ ಬಾಕಿ ಎಂದು ಆ ಜಮೀನು ಹರಾಜಿನಲ್ಲಿ ಯಾರದ್ದೋ ಪಾಲಾಯಿತು.
ಕುಟುಂಬದ ಜಮೀನು ಕಳೆದುಕೊಂಡ ಮೇಲೆ ಅಲ್ಲೇ ಅಕ್ಕಪಕ್ಕ ಸರ್ಕಾರಿ ಜಮೀನಿನಲ್ಲಿ ರಾಜನಾಯಕರ ಮಕ್ಕಳಾದ ರಾಮಣ್ಣ,ಬಸವಣ್ಣ ಮತ್ತು ಮಂಜಪ್ಪ ಗುಡಿಸಲು ಹಾಕಿ ಜೀವನ ಸಾಗಿಸುತ್ತಿದ್ದರು.
1993ರಲ್ಲಿ ಬಗರು ಹುಕುಂ ಕಾಯ್ದೆ ಜಾರಿಯಾದಾಗ ಈ ಮೂರು ಕುಟುಂಬಕ್ಕೆ ಅನದಿಕೃತ ಸಾಗುವಳಿ ಮಾಡುತ್ತಿದ್ದ ಖುಷ್ಕಿ ಜಮೀನು ದೊರೆಯಿತು, ಇಂತಹ ಜಮೀನಿನಲ್ಲಿ ಬಸವಣ್ಣನ ಮಗ ನಾಗರಾಜ ಅಡಿಕೆ ತೋಟ ಮಾಡಿದ್ದಾನೆ, ಹೊಸ ಪಸಲು ಇನ್ನೆರಡು ವರ್ಷದಲ್ಲಿ ಇವನಿಗೆ ಸಿಗಲಿದೆ.
ನಾಗರಾಜನ ತಂದೆ ಬಸವಣ್ಣ ಹಮಾಲಿ ಕೆಲಸ ಮಾಡುತ್ತಿದ್ದರು, ನಾನು ಅದನ್ನು ತಪ್ಪಿಸಿ ನಮ್ಮ ರೈಸ್ ಮಿಲ್ ನಲ್ಲಿ ತರಬೇತಿ ನೀಡಿ ರೈಸ್ ಮಿಲ್ ಡ್ರೈವರ್ ಮಾಡಿದ್ದೆ, ಇವರ ಕುಟುಂಬದಲ್ಲಿ ಎಂತಹದ್ದೊ ಬಿನ್ನಾಭಿಪ್ರಾಯದಿಂದ ಆತ್ಮಹತ್ಯೆ ಮಾಡಿಕೊಂಡರು.
ಆಗ ನಾಗರಾಜ ಮೂರ್ನಾಲ್ಕು ವರ್ಷದ ಸಣ್ಣ ಮಗು ಇವನು ದೊಡ್ಡವನಾದಾಗ ನನ್ನಲ್ಲಿ ಬಂದು ಕೇಳಿದ್ದು ತನ್ನ ತಂದೆಯ ಫೋಟೋ ಸಿಗುತ್ತದಾ? ..ಎಂದು ನಾನು ಕೇಳಿದ ಮರು ಪ್ರಶ್ನೆ ನಿನ್ನ ತಂದೆಯ ಫೋಟೋ ನಿನ್ನ ಮನೆಯಲ್ಲಿ ಇಲ್ಲವಾ?... ಅವನ ಉತ್ತರ "ತಂದೆ ಫೋಟೋ ಯಾವುದೂ ಇಲ್ಲ ಆದರೆ ನಾನು ಸಣ್ಣವನಿದ್ದಾಗ ತಂದೆಯ ನೋಡಿದ ನೆನಪುಗಳಿವೆ" ಎಂದು.
ನಂತರ ಎಲ್ಲಾ ಹಳೆಯ ಫೋಟೋಗಳನ್ನು ಹುಡುಕಿ, ಒಂದು ಗ್ರೂಪ್ ಫೋಟೋದಲ್ಲಿ ಬಸವಣ್ಣನ ಮುಖ ಕಂಡೆ ಅದನ್ನು ಎನ್ ಲಾರ್ಜ್ ಮಾಡಿಸಿ ನಾಗರಾಜನಿಗೆ ಫೋಟೋ ಕೊಟ್ಟಿದ್ದೆ, ಅದು ಅವನಿಗೆ ತುಂಬಾ ಸಂತೋಷದ ವಿಚಾರ ಆಗಿತ್ತು.
ಇದೇ ರೀತಿ ಇನ್ನೊಬ್ಬ ಬಾಲಕನ ಆಸೆ ಈವರೆಗೂ ಈಡೇರಿಸಲಾಗಲಿಲ್ಲ, ಆತ ತನ್ನ ತಂದೆಯ ಫೋಟೋ ಕೇಳಿದಾಗ ಸಿಗಲೇ ಇಲ್ಲ, ನಾವು ಕಾಲಮಿತಿ ಯಕ್ಷಗಾನದ ಕಾರ್ಯಕ್ರಮದಲ್ಲಿ ಆ ಬಾಲಕನ ತಂದೆಗೆ ಸನ್ಮಾನ ಮಾಡಿದ್ದ ಫೋಟೋ ಅವರಿಗೆ ತಲುಪಿಸಲು ಕಳಿಸಿದ್ದೆ ಆದರೆ ಅದು ಅವರಿಗೆ ತಲುಪಲಿಲ್ಲ, ಈಗ ಅವರ ಮನೆಯಲ್ಲಿ ಅವರ ತಂದೆಯ ಯಾವುದೇ ಫೋಟೋ ಇಲ್ಲ, ಇದು ನನ್ನ ಬಾಲ್ಯದ ಶಾಲಾ ಸಹಪಾಠಿ ಕೆಂಜಿಗಾಪುರದ ಕಲಾವಿದ ರಾಮಪ್ಪರ ಮಗನ ಆಸೆ ನೆರವೇರಿಸಲಾಗದ ಒಂದು ಘಟನೆ.
ಈ ವಷ೯ ದೇವಸ್ಥಾನದಲ್ಲಿ ಊರ ಯುವಕರು ಲಕ್ಕಿಡಿಪ್ ಲಾಟರಿ ಒಂದನ್ನು ಜಾತ್ರಾ ಪ್ರಯುಕ್ತ ಮಾಡಿದ್ದರು ಅದರ ಟಿಕೆಟನ್ನು ಮಾರಲು ನಾಗರಾಜನ ಹತ್ತಿರ ಬಂದಿದ್ದರು ಆದರೆ ನಾಗರಾಜ ಲಾಟರಿ ಟಿಕೇಟ್ ಖರೀದಿಸಲು ನಿರಾಕರಿಸಿದ್ದ ಆದರೆ ಯುವಕರು ಅವರ ಒತ್ತಾಯ ಬಿಡಲಿಲ್ಲ... ಆ ಸಂದರ್ಭದಲ್ಲಿ ನನಗೆ ಏನೋ ಅನಿಸಿತು "ನಾಗರಾಜ ಲಾಟರಿ ಟಿಕೆಟ್ ತೆಗೆದುಕೋ ನಿನಗೆ ವಾಷಿಂಗ್ ಮಿಷನ್ ಬಹುಮಾನ ಬರುತ್ತದೆ" ಎಂದೆ, ಅವನು ನನ್ನ ಮಾತಿಗೆ ಒಪ್ಪಿ ಒಂದು ಟಿಕೆಟ್ ತೆಗೆದುಕೊಂಡ.
ಜಾತ್ರೆಯ ಕೊನೆಯ ದಿನ ರಾತ್ರಿ ಹನ್ನೆರಡು ಇಪ್ಪತ್ತಕ್ಕೆ ಕಿರಿಯ ಗೆಳೆಯ ಜಾತ್ರಾ ಸಮಿತಿ ಪ್ರದಾನ ಕಾರ್ಯದರ್ಶಿ ಪ್ರಮೋದ್ ಒಂದು ವಾಟ್ಸಾಪ್ ಮೆಸೇಜ್ ಹಾಕಿದ್ದರು ಅದರಲ್ಲಿ #ನೀವು_ಹೇಳಿದಂತೆ_ನಾಗರಾಜನಿಗೆ_ವಾಷಿಂಗ್_ಮಿಷನ್_ಲಾಟರಿಯಲ್ಲಿ_ಬಂದಿದೆ ಅಂತ.
ಇದರ ಬಗ್ಗೆ ಊರಲ್ಲಿ ಅವರವರಿಗೆ ತೋಚಿದಂತೆ ಮಾತಾಡಿಕೊಂಡಿದ್ದಾರೆ, ನನ್ನ ಜೀವನದಲ್ಲಿ ಇಂತಹ ನೂರಾರು ಘಟನೆಗಳು ನಡೆದಿದೆ, ನನಗೂ ಗೊತ್ತಿಲ್ಲ ಇದು ಹೇಗೆ ಸಾಧ್ಯ? ಅಂತ.
ಇಂತಹ ಅನುಭವಗಳನ್ನು ಬರೆದಿಡುತ್ತಿದ್ದೇನೆ
ಇಲ್ಲಿ ಕ್ಲಿಕ್ ಮಾಡಿ ಇಂತಹ ಇನ್ನೋಂದು ಘಟನೆ ಓದಿ
https://arunprasadhombuja.blogspot.com/2023/05/blog-number-1480-2.html
Comments
Post a Comment