Blog number 1945.ಮಹಾತ್ಮಾ ಗಾಂಧೀಜಿ ಜಗತ್ತಿನ ಅಹಿಂಸಾವಾದಿಗಳಿಗೆ ನೀಡಿದ ಹೋರಾಟದ ಅಸ್ತ್ರ ಸತ್ಯಾಗ್ರಹ ಇವತ್ತು ಮಹಾತ್ಮಾ ಗಾಂಧಿ ವಿರೋದಿಸುವರೂ ಬಳಸುವ ಅಸ್ತ್ರ ಈ ಮೂಲಕ ಮಹಾತ್ಮ ಗಾಂಧಿ ದಾರಿಯಲ್ಲಿ ಸಾಗುವ ಅವರ ವಿರೋದಿಗಳು ಇದು ಸತ್ಯಮೇವಾ ಜಯತೆ ಅಲ್ಲವೇ?
#ಮಹಾತ್ಮಾಗಾಂಧೀಜಿ_ಜಗತ್ತಿಗೆ_ನೀಡಿದ_ಪ್ರತಿಭಟನೆಯ_ಅಸ್ತ್ರ
#ಅಹಿಂಸಾ_ಮಾಗ೯ದ_ಸತ್ಯಾಗ್ರಹ_ಇದಕ್ಕೆ_ಕಾರಣವಾಗುವ_ಅವರ_ಜೀವನದ_ಅನೇಕ_ಘಟನೆಗಳು
#ಡರ್ಬಾನ್_ನ್ಯಾಯಾಲಯದಲ್ಲಿ_1893ರ_ಘಟನೆ
#ಗಾಂಧೀಜಿ_ಪೇಟಾ_ಧರಿಸಿದ್ದರಿಂದ_ಕೋರ್ಟ್_ಪ್ರವೇಶ_ನಿರಾಕರಿಸಲಾಗಿತ್ತು
#ಇದನ್ನು_ಪ್ರತಿಭಟಿಸಿ_ಗಾಂಧೀಜಿ_ನ್ಯಾಯಾಲಯದಿಂದ_ಹೊರನಡೆಯುತ್ತಾರೆ.
#ಗಾಂಧೀಜಿ_ವಿರೋಧಿಸುವವರೂ_ಗಾಂಧೀಜಿಯ_ಈ_ಅಸ್ತ್ರ_ಬಳಸಿ_ಗಾಂಧೀ_ಹಾದಿಯಲ್ಲಿ_ನಡೆಯುತ್ತಾರೆ.
#ಇದು_ಸತ್ಯ_ಮೇವ_ಜಯತೆ
#ಗಾಂಧೀಜಿ_ವಿರೋಧಿಸಿ_ಕೆಟ್ಟದಾಗಿ_ಪೋಸ್ಟ್_ಮಾಡಿದ್ದ_ಯುವಕ
#ಗಾಂಧೀಜಿ_ಆತ್ಮಚರಿತ್ರೆ_ಓದೇ_ಇಲ್ಲ
#ಗಾಂಧೀಜಿ_ಇಹಲೋಕ_ತ್ಯಜಿಸಿದ_55_ವರ್ಷದ_ನಂತರ_ಜನಿಸಿದಾತ.
1893 ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದ ಶ್ರೀಮಂತ ವರ್ತಕರಾದ ದಾದಾ ಅಬ್ದುಲ್ಲಾ & ಕಂಪನಿ ನಟಾಲ್ ಇವರ ವ್ಯಾಜ್ಯ ಬಗೆಹರಿಸಲು ಅವರ ಆಹ್ವಾನದ ಮೇರೆಗೆ ಆಫ್ರಿಕಾಗೆ ಹೋಗುತ್ತಾರೆ.
ಡರ್ಬಾನ್ ನ ನ್ಯಾಯಾಲಯಕ್ಕೆ ದಾದಾ ಅಬ್ದುಲ್ಲಾರ ಜೊತೆಗೆ ಹೋಗಿ ನ್ಯಾಯಾಲಯದಲ್ಲಿ ವಕೀಲರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಕೊಳ್ಳುತ್ತಾರೆ.
ಅಲ್ಲಿನ ಮ್ಯಾಜಿಸ್ಟ್ರೇಟರ್ (ಯುರೋಪಿಯನ್ ) ಗಾಂಧೀಜಿಗೆ ನಿಮ್ಮ ಪೇಟಾ (ಟರ್ಬನ್) ಹೊರಗಿಟ್ಟು ಬನ್ನಿ ಅನ್ನುತ್ತಾರೆ, ಗಾಂಧೀಜಿಗೆ ಇದು ತಕ್ಷಣ ಅರ್ಥವಾಗುವುದಿಲ್ಲ, ಮ್ಯಾಜಿಸ್ಟ್ರೇಟರ್ ತಮ್ಮ ಕೈ ಬೆರಳು ಗಾಂಧೀಜಿಗೆ ತೋರಿಸಿ ನಿಮಗೆ ಹೇಳುತ್ತಿರುವುದಾಗಿ ತಿಳಿಸಿದಾಗ ಗಾಂಧೀಜಿ ಸುತ್ತಲೂ ನೋಡುತ್ತಾರೆ ಅಲ್ಲಿ ಮುಸ್ಲಿಂ ಮತ್ತು ಪಾರ್ಸಿ ವಕೀಲರುಗಳು ಅವರವರ ದರ್ಮಾದಾಧಾರಿತ ಟರ್ಬನ್ ಧರಿಸಿ ಕುಳಿತಿರುತ್ತಾರೆ!
ಗಾಂಧೀಜಿಯವರಿಗೆ ಬ್ರಿಟಿಷರು ಭಾರತೀಯರನ್ನ ಈ ರೀತಿ ಕೂಲಿಯಂತೆ ಕಾಣುವ ಈ ವರ್ಣಬೇದ ನೀತಿ ಸಹಿಸಲಾಗದೆ ತಮ್ಮ ಪ್ರತಿಭಟನೆ ದಾಖಲಿಸಿ ನ್ಯಾಯಾಲಯ ಬಹಿಷ್ಕರಿಸಿ ಹೊರನಡೆಯುತ್ತಾರೆ.
ನಂತರ ಅಪ್ರಿಕಾದ ಪ್ರೆಸ್ ಗೆ ಸವಿವರವಾಗಿ ಈ ವರ್ಣಬೇದ ನೀತಿ ವಿವರಿಸುತ್ತಾರೆ, ಗಾಂಧೀಜಿ ಅವರ ಈ ಪತ್ರಿಕಾಗೋಷ್ಟಿ ಆ ಕಾಲದಲ್ಲಿ ಡರ್ಬಾನ್ ನ್ಯಾಯಾಲಯದ ಯುರೋಪಿಯನ್ ನ್ಯಾಯಾದೀಶರ ವರ್ಣಬೇದ ನೀತಿಯ ತಾರತಮ್ಯ ಎಂದು ದೊಡ್ಡ ಸುದ್ದಿ ಆಗುತ್ತದೆ.
ಇಂತಹ ನೂರಾರು ಘಟನೆಗಳು ಮಹಾತ್ಮಾ ಗಾಂಧೀಜಿ ಅವರಿಗೆ ಅಹಿಂಸಾ ಮಾರ್ಗದಲ್ಲಿ ಪ್ರತಿಭಟನೆ ದಾಖಲಿಸುವ ಸತ್ಯಾಗ್ರಹ ಎಂಬ ಸರಳ ಅಸ್ತ್ರ ಕಂಡು ಹಿಡಿಯಲು ಸಾಧ್ಯವಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗಲೂ ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹ ಧರಣಿಗಳು ಪ್ರಭಲ ಅಸ್ತ್ರವಾಗಿ ಬಳಸಿಕೊಂಡು ಬರುತ್ತಿದ್ದೇವೆ.
ಇತ್ತೀಚಿಗೆ ಮಹಾತ್ಮಾಗಾಂಧೀ ಅವರನ್ನು ಹಿಗ್ಗಾ ಮುಗ್ಗ ಅತ್ಯಂತ ಕೀಳು ಭಾಷೆಯಲ್ಲಿ ಹೋರಾಟಗಾರ ಯುವಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ... ಮೊನ್ನೆ ಅವನದ್ದೆ ಆದ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಲು ಬಂದಿದ್ದ, ಆಗ ಅವನು ಅವನಿಗೆ ತೊಂದರೆ ಉಂಟು ಮಾಡಿದ ಸದರಿ ಅಧಿಕಾರಿಯ ವಿರುದ್ಧ ದರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ.
ಆಗ ನಾನು ಮಹಾತ್ಮಾಗಾಂಧೀಜಿ ಅವರ ಆಫ್ರಿಕಾದ ಡರ್ಬಾನಿನ ಬ್ರಿಟೀಷ್ ನ್ಯಾಯಾದೀಶರ ವಿರುದ್ಧವಾಗಿ ಭಾರತೀಯ ಪೇಟಾ ನಿರಾಕರಿಸಿದ್ದಕ್ಕೆ ಯುರೋಪಿಯನ್ ನ್ಯಾಯಾದೀಶರ ವರ್ಣ ಬೇಧ ನೀತಿ ವಿರುದ್ದ ಅವರ ಪ್ರತಿಭಟನೆಯ ವಿವರ ವಿವರಿಸಿದೆ, ಪೆಚ್ಚಾಗಿ ಇದನ್ನು ಕೇಳಿಸಿಕೊಂಡ ಆತನಿಗೆ ನಾನು ಒಂದು ಪ್ರಶ್ನೆ ಕೇಳಿದೆ, ನೀವು ಗಾಂಧೀಜಿ ಆತ್ಮ ಚರಿತ್ರೆ ಓದಿದೀರಾ ?..ಇದಕ್ಕೆ ಉತ್ತರವಾಗಿ ಅಡ್ಡಡ್ಡ ತಲೆ ಆಡಿಸಿದ.
ಮತ್ಯಾಕೆ ಆ ಪರಿ ಗಾಂಧೀಜಿ ವಿರೋದ? ಅಂದರೆ ಅವನ ಹತ್ತಿರ ಉತ್ತರವಿಲ್ಲ, ಬಹುಶಃ ದರ್ಮಗ್ರಂಥಗಳನ್ನು ಓದದೇ ಅರಿಯದೇ ವೀರಾವೇಷದಿಂದ ಪರಧರ್ಮ ನಿಂದಿಸುವಂತವರ ಸಾಲಿನಲ್ಲಿ ಇಂತವರೇ ಇದ್ದಾರೆ.
Comments
Post a Comment