Skip to main content

Posts

Showing posts from 2017

# ಪರಿಸರ ಹೋರಾಟಗಳು ರಾಜಕೀಯ ಪಕ್ಷಗಳ ಕೈ ಬೋ೦ಬೆ ಆಗುತ್ತಿದೆ.#

# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ#    ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ನಾ.ಡಿಸೋಜರಾದಿಯಾಗಿ ಅನೇಕರು ವಿರೋದ ಮಾಡಿದರು ಆದರೆ ಅನಂತ ಹೆಗಡೆ ಅಶೀಸರ ಈ ಬಗ್ಗೆ ವಿರೋದಿಸಲಿಲ್ಲ.    ಈಗ ಶರಾವತಿ ಕಣಿವೆಯಲ್ಲಿ ಭೂಗಭ೯ ವಿದ್ಯುತ್ ಯೋಜನೆ ಒಂದು (ವರಾಹಿ ಯೋಜನೆಯಂತೆ) ಪ್ರಾರಂಭವಾಗಲಿದ್ದು ಇದಕ್ಕೆ ಅನಂತ ಹೆಗಡೆ ಅಶೀಸರರ ನೇತೃತ್ವದ ಸಂಘಟನೆ ವಿರೋದಿಸುತ್ತಿದೆ ಆದರೆ ನಾ.ಡಿಸೋಜರ ಒಡನಾಡಿಗಳು ವಿರೋದಿಸುತ್ತಿಲ್ಲ.    ಇದೇ ರೀತಿ ಅರಣ್ಯ ಭೂಮಿ ಸಕ್ರಮದಲ್ಲಿ ಕೂಡ ಎರೆಡು ಗುಂಪಾಗಿದ್ದು ಒಂದು ಪರ ಇನ್ನೊಂದು ವಿರೋದ.   ಒಂದೊಂದು ರಾಜಕೀಯ ಪಕ್ಷಗಳ ಪರಿಸರ ಹೋರಾಟದ ದಿಕ್ಕು ಒಂದೊಂದು ಕಡೆ ಮುಖ ಮಾಡಿದೆ ಇದರಿ೦ದ ರಾಜಕೀಯ ಪಕ್ಷಕ್ಕೆ ಲಾಭವಾಗಬಹುದೇ ಹೊರತು ಪರಿಸರಕ್ಕಲ್ಲ.   ಪಶ್ಚಿಮ ಘಟ್ಟದ ಪರಿಸರ ಉಳಿವಿಗೆ ಎಲ್ಲರ ಕಾಳಜಿ ಸ್ವಾಗತೀಯ ಆದರೆ ಪಕ್ಷ, ದಮ೯ಗಳ ಆಧಾರದಲ್ಲಿ ಪರಿಸರ ಹೋರಾಟ ವಿಭಜನೆಯಾಗಿ ಸಾಗುತ್ತಿರುವುದು ಬೇಸರದ ಸಂಗತಿ.

#ಕವಿಶೈಲದಲ್ಲಿದೆ ತೇಜಸ್ವಿಯವರ ಸಮಾದಿ#

#ತೇಜಸ್ವಿ ಒಂದು ನೆನಪು# ಮೊದಲೆಲ್ಲ ಕವಿಶೈಲಕ್ಕೆ ಹೋದರೆ ಕುವೆಂಪುರವರ ಮನೆ, ಕವಿ ಶೈಲದ ಬಂಡೆ ಮತ್ತು ಕುವೆಂಪುರವರ ಸಮಾದಿ ಸಂದಶಿ೯ಸುತ್ತಿದ್ದೆವು ಈಗ ಕವಿಶೈಲದ ಪ್ರಾರಂಭದಲ್ಲಿಯೆ ಎಡ ಭಾಗದಲ್ಲಿ ತೇಜಸ್ವಿಯವರ ಸಮಾದಿಯನ್ನು ಸಹ ನೋಡಬಹುದು.   ಮೊನ್ನೆ ಕವಿಶೈಲಕ್ಕೆ ಹೋದಾಗ ತೇಜಸ್ವಿ ಸಮಾದಿಗೆ ಬೇಟಿ ನೀಡಿದ್ದೆ, ತೇಜಸ್ವಿಯವರ ಎಲ್ಲಾ ಲೇಖನಗಳ ಮತ್ತು ಅವರ ವಿಚಾರ, ವ್ಯಕ್ತಿತ್ವದ ಅಭಿಮಾನಿಯಾದ ನಾನು ಅವರನ್ನ ಮೊದಲ ಮತ್ತು ಕೊನೆಯ ಬಾರಿಯ ಬೇಟಿ ಮಾಡಿದ್ದು ಕುವೆಂಪುರವರ ಮನೆ ರಾಷ್ಟ್ರಕ್ಕೆ ಅಪಿ೯ಸುವ ದಿನ 2000ನೆ ಇಸವಿಯಲ್ಲಿ.   ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ತೀಥ೯ಹಳ್ಳಿ ತಲುಪಿ ಅಲ್ಲಿಂದ ಎಡಕ್ಕೆ ಹೊರಳಿ ಕೊಪ್ಪ ಮಾಗ೯ದಲ್ಲಿ ತುಂಗಾ ನದಿಯ ಪ್ರಖ್ಯಾತ ಕಮಾನು ಸೇತುವೆ ದಾಟಿ ಕೆಲವು ಕಿ.ಮಿ. ಪ್ರಯಾಣದ ನಂತರ ಎಡ ಬಾಗಕ್ಕೆ ತೆರಳಿದರೆ ಅಲ್ಲಿದೆ ಕವಿಶೈಲು.

ಹೋರಾಟಗಾರ ಗಣಪತಿ ಭಟ್ಟ ಜಿಗಳೆಮನೆ ಜೈಲಿಗೆ ಕಳಿಸಿದ ಸುದ್ದಿ

# ಸುದ್ದಿಯನ್ನ ಸುದ್ದಿ ಮಾಡದ ಈ ಸುದ್ದಿ#    ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.    ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಕಳೆದ ಶನಿವಾರ ಬಂದಿಸಿ ಕೋಟ್೯ ರಜಾದಿನದ ಲಾಭ ಪಡೆದು ಜೈಲಿಗೆ ಕಳಿಸಿ ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠಒಂದರ ಕಾಣದ ಕೈಗಳು ಎನ್ನುವುದು ಬಹಿರಂಗ ಸತ್ಯ.   ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು ಇವತ್ತಿನವರೆಗೆ ರಾಜಕೀಯಕ್ಕೆ ಬರದವರು ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು.   ನಿರಂಜನ ಕುಗ್ವೆ ಉದಯೋನ್ಮುಖ ವ್ಯಂಗ್ಯಚಿತ್ರಗಾರರು ಇವರ ವ್ಯಂಗ್ಯಚಿತ್ರಗಳನ್ನ ಖ್ಯಾತ ಪಂಜು ಗಂಗೋಲೀಯವರು ಅಭಿನಂದಿಸಿದ್ದಾರೆ.   ಇವರಿಬ್ಬರು ಮಾಡಿದ ಅಪರಾದ ಇವರ ಜಾತಿಗೆ ಸಂಬಂದಪಟ್ಟ ಸ್ವಾಮಿ ಒಬ್ಬರ  ಅತ್ಯಾಚಾರ ಪ್ರಕರಣ ಮತ್ತು ಆ ಮಠದಲ್ಲಿ ಆ ಸಮಾಜದ ಹೆಣ್ಣು ಮಕ್ಕಳಿಗೆ ದೇವರ ಹೆಸರಲ್ಲಿ ಭಕ್ತಿ ಮತ್ತು ಸಂಸ್ಕಾರದ ಭಯ ಬಿತ್ತಿ ಕನ್ಯಾ ಸಂಸ್ಕಾರ ಎಂಬ ಸ್ವಾಮಿಗಳ ಏಕಾಂತ೦ಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳಿಸುವ ಕಾಯ೯ಕ್ರಮ ವಿರೋದಿಸಿ ಅಭಿಯಾನ ಪ್ರಾರಂಭಿಸಿದ್ದರು.   ಇವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಬೆಂಬಲಿಸಿದ್ದಾರೆ ಆದರೆ ಪ್ರತ್ಯಕ್ಷವಾಗಿ ಬೆಂಬಲಿಸಲು ಅವರಿಗೆಲ್

ಮಲೆನಾಡಿನ ಸಾದಕ ಡಾಕ್ಟರ್ ವಿಗ್ನೇಶ್ ಮOಚಾಲೆ

# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ# ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ 777 ಎಕರೆ ಜಮೀನು ಯಾವುದೇ ತೊಂದರೆ ವಿರೋದವಿಲ್ಲದೆ ಪಡೆದು ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕಾರಣಕತ೯ರು.   ಇವರ ಅಣ್ಣ ಡಾII ತಿಮ್ಮಪ್ಪ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಮ್ಮ ಸಾಗರ ತಾಲ್ಲೂಕಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀತಿ೯ ತಂದವರು, ಇವರ ತಮ್ಮ ಸಾಗರದ ಲಾಲ್ ಬಹುದೂರು ಪದವಿ ಕಾಲೇಜಿನ ಗಣಿತ ಪ್ರಾಧ್ಯಾಪಕರು.   ಇವರು ನಮ್ಮ ದೇಶದ ಪ್ರಖ್ಯಾತ ಒತ್ತಡ ನಿವಾ೯ಹಣೆ(stress Management) ತರಬೇತುದಾರರು ಮತ್ತು ಅಪ್ತ ಸಲಹೆಗಾರರು ಹಾಗಂತ ಇದು ಸ್ಥಳೀಯ ಜಿಲ್ಲೆಯವರಿಗೆ ಗೊತ್ತಿಲ್ಲ ಅವರು ಹೇಳಿಕೊಳ್ಳುವುದಿಲ್ಲ.   ಇವರು ಈಗ ಹಿಮಾಚಲಪ್ರದೇಶದ ಪಲಾ೦ಪುರದ ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರೋಪಸರ್ ಗಳಿಗೆ ಮತ್ತು ವಿದ್ಯಾಥಿ೯ಗಳಿಗೆ ಒತ್ತಡ ನಿವ೯ಹಣೆ ಮತ್ತು ಆಪ್ತ ಸಲಹೆಗಾಗಿ ತರಬೇತಿಗಾಗಿ ಇವರನ್ನ ಅಲ್ಲಿಗೆ ಕರೆಸಿದ್ದಾರೆ ನಂತರ ಶಿಮ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ.   ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಅಹ೯ತೆ ಇರುವ ಥೆರಪಿಸ್ಟ ಮತ್ತು ಟ್ರಯಿನರ್ ಆಗಿರುವ ಇವರು ಇಂತಹ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ತರಬೇತಿ ನೀಡಿದ್ದಾರೆಂದು ಹಿಮಾಚಲದ ಕೃಷಿ ವಿದ್ಯಾಲಯದ ಗೆಳೆಯ

ಸೈOಟ್ ಮೇರಿಸ್ ಐಲ್ಯಾಂಡ್ ಮಲ್ಪೆ

# St MARY'S ISLAND MALPE# # ಸೈOಟ್ ಮೆರೀಸ್ ಐಲ್ಯಾ೦ಡ್# ಕರಾವಳಿಯ ಉಡುಪಿ ಸಮೀಪದ ಮಲ್ಪೆ ಬಂದರಿನ ಹಿಂಬಾಗ ಪ್ರವಾಸೋದ್ಯಮ ಇಲಾಖೆ ಸೈOಟ್ ಮೆರೀಸ್ ಐಲ್ಯಾಂಡ್ ಗೆ ಹೋಗಲು ಪ್ರವಾಸಿ ಬೋಟುಗಳಲ್ಲಿ ಪ್ರತಿ ಪ್ರವಾಸಿಗೆ ರೂಪಾಯಿ 250 ಪಡೆದು ಕರೆದೊಯುತ್ತಾರೆ, ಸಮುದ್ರದಲ್ಲಿ 20 ನಿಮಿಷ ಪ್ರಯಾಣದ ನಂತರ ಸಣ್ಣ ದೋಣಿಗೆ ಪ್ರಯಾಣಿಕರನ್ನ ವಗಾ೯ಯಿಸುತ್ತಾರೆ. (ಕಾರಣ ದೊಡ್ಡ ಬೋಟುನಿಂದ ಇಳಿಯಲು ಜಟ್ಟಿ ಇಲ್ಲಿ ನಿಮಾ೯ಣವಾಗಿಲ್ಲ). 40 ಎಕರೆ ಪ್ರದೇಶದ ಈ ಪ್ರಶಾಂತವಾದ ದ್ವೀಪ ವಾಸ್ಕೋಡಗಾಮ ಬಂದು ತಂಗಿದ್ದರಿಂದ ಅವರಿಂದ ಈ ಹೆಸರು ಬಂದ ಬಗ್ಗೆ ಮಾಹಿತಿ ಪಲಕವಿದೆ.    ಟಾಯಿಲೆಟ್, ಬಾತ್ ರೂಂ, ಉಪಹಾರ ಮಂದಿರವಿದೆ, ಅಲ್ಲಲ್ಲಿ ನೆರಳಿಗಾಗಿ ಕುಟಿರಗಳನ್ನ ನಿಮಿ೯ಸಿದ್ದಾರೆ.    ಪ್ರವಾಸಿಗಳಿಗೆ ಈಜಾಡಲು ಆಯ್ದ ಬೀಚ್ನಲ್ಲಿ ರಕ್ಷಣಕವಚಗಳು ಲಭ್ಯವಿದೆ, ಲೈಪ್ ಗಾಡ್೯ಗಳನ್ನ ನೇಮಿಸಿದ್ದಾರೆ.   ಹಾಗಾಗಿ ಶಾಲಾ ವಿದ್ಯಾಥಿ೯ಗಳನ್ನ ರಜಾ ಪ್ರವಾಸಕ್ಕೆ ಶಿಕ್ಷಕರು ಇಲ್ಲಿಗೆ ಕರೆದೊಯ್ತಾರೆ, ಅದ೯ ದಿನದ ಈ ಸಮುದ್ರಯಾನ, ದ್ವೀಪ ಪ್ರವಾಸ ಹೊಸ ಅನುಭವ ನೀಡುತ್ತದೆ.

ಪ್ರಕೃತಿ ಮುದ್ರಣದ ಪಿ. ಪುಟ್ಟಯ್ಯ ಶಿವಮೊಗ್ಗ.

ಬಿಳಿ ವಸ್ತ್ರದ ಶುಭ್ರ ಮನಸ್ಸಿನ ಸಮಾಜವಾದಿ ಪುಟ್ಟಯ್ಯ ಇವರನ್ನು ಸನ್ಮಾನಕ್ಕೆ ಅದಾವ ರೀತಿ ಒಪ್ಪಿಸಿದರೋ ಭಗವಂತನೆ ಬಲ್ಲ.ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಡೂರಿನಿಂದ ಶಿವಮೊಗ್ಗಕ್ಕೆ ಬಂದವರಿಗೆ ಸಮಾಜವಾದಿ ಚಳುವಳಿ ಕೈಬೀಸಿ ಕರೆಯಿತು. ಡಾ,ಲೋಹಿಯಾರವರ ಆಂಗ್ರೇಜಿ ಹಟಾವೋ ಚಳುವಳಿಯಲ್ಲ ಸಕ್ರಿಯರಾದರು. ಇದಕ್ಕೂ ಮೊದಲು ಮಲ್ಲಾಡಿ ಹಳ್ಳಿಯ ರಾಘವೇಂದ್ರ ಸ್ವಾಮೀಜಿಯವರಿಂದ ಪ್ರೇರೇಪಿತರಾಗಿ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಎಂಬ ಹಳ್ಳಿಯಲ್ಲಿ ಶಾಲೆಯೊಂದನ್ನು ಆರಂಭಿಸಿದರು.ಅಲ್ಲೇ ಹಾಸ್ಟೆಲ್ ಆರಂಭಿಸಿ ಹಿಂದುಳಿದವರ ಮಕ್ಕಳು ಶಾಲೆಗೆ ಬರುವಂತೆ ಮಾಡಿದರು. ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗಿನ ನಾಲ್ಕು ಗಂಟೆಗೆ ಬೇರೆ ಬೇರೆ ಊರುಗಳಿಗೆ ಉದಯವಾಣಿ ಪತ್ರಿಕೆಗಳನ್ನು ವಿಂಗಡಿಸುತ್ತಾ ರಾಜಕಾರಣವನ್ನು ಶುದ್ದಗೊಳಿಸುವ ಬಗ್ಗೆ ಯೋಚಿಸತೊಡಗಿದರು.ಇವರು ತೆರೆದಿದ್ದ ಪ್ರಕೃತಿ ಪ್ರಿಂಟರ್ಸ್ ಹಲವು ಚಳುವಳಿಗಳಿಗೆ ಪ್ರೇರಕವಾಯಿತು. ಸಮಾಜವಾದಿ ಚಳುವಳಿಗಾಗಾರರಂತೂ ಇವರ ಪ್ರಿಂಟಿಂಗ್ ಪ್ರೆಸ್ ಗೆ ಬಹು ಹತ್ತಿರ. ಜನತಾದಳ ಅಧಿಕಾರಕ್ಕೆ ಬಂದಾಗ ಬಹಳ ಮಂದಿ ಸಮಾಜವಾದಿಗಳು ಅಧಿಕಾರದ ಸವಿಯುಂಡರು.ಆದರೆ ಪುಟ್ಟಯ್ಯ ಅದರ ಹತ್ತಿರವೂ ಸುಳಿಯಲಿಲ್ಲ.ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಇವರಿಗೆ ಅಧಿಕಾರದ ರುಚಿಯಡುಗೆ ತಿನ್ನುವ ಬಹಳಷ್ಟು ಅವಕಾಶಗಳಿದ್ದವು. ಎಲ್ಲವನ್ನು ನಿರಾಕರಿಸಿದರು. ಅದಕ್ಕಿಂತ ಮುಖ್ಯುವಾಗಿ ಅದರ ಹತ್ತಿರವೂ ಹೋಗಲಿಲ್ಲ. ಭಾರತ ರತ್ನದಂತಹ ಅತ್ಯುಚ್ಚವಾದ ಪ್ರಶಸ್ತಿ

#AUGUMBE EXCELLENT VIEW POINT FOR SUN RISE AND SUN SET#

#AUGUMBE EXCELLENT VIEW POINT FOR SUN RISE AND SUN SET# THIS VIEW IS AUGUMBE OF SHIMOGA DIST,IT'S WELL KNOWN HEAVY RAINFALL AREA AS SOUTH INDIAN CHIRAPUNJI, TODAY NOW 11AM YOU CANT DRIVE WITHOUT HEAD LIGHT. # ಆಗುOಬೆ ಸೂಯೋ೯ದಯ ಮತ್ತು ಆಸ್ತಮಾನ ನೋಡಲು ಅತ್ಯುತ್ತಮ ತಾಣ# ಇವತ್ತು ಮಧ್ಯಾನವಾದರೂ ಆಗುಂಬೆಯಲ್ಲಿ ಮಳೆ, ಮೊಡಗಳಿಂದ ಊರೆಲ್ಲ ಮಂಜು ಆವರಿಸಿತ್ತು, ಜಿಲ್ಲೆಯಲ್ಲಿ ನ ಪ್ರವಾಸಿಗಳಿಗಳಿಗೆ ಆಗುಂಬೆ ಪ್ರವಾಸಕ್ಕೆ ಇದು ಸಕಾಲ.

ದೇವಾಲಯಗಳು ಪುಣ್ಯ ಮಾರುವ ಅಂಗಡಿಗಳಾಗುತ್ತಿದೆ.

ದೇವರನ್ನ ಮಾರಾಟಕ್ಕೆ ಇಟ್ಟಿರುವ ದೇವಾಲಯದ ಮತ್ತು ಮಠಗಳ ಮಾಲಿಕರಾದ ಅಚ೯ ಕರು, ಸ್ವಾಮೀಜಿಗಳು ಹಣ, ಖ್ಯಾತಿ ಮತ್ತು ಅಧಿಕಾರ ಹೊಂದಿರುವವರನ್ನ ಹೇಗಾದರೂ ಮಾಡಿ ತಮ್ಮಲ್ಲಿಗೆ ಕರೆಸಿ ಅದನ್ನ ಪತ್ರಿಕೆ ಟಿವಿಗಳಲ್ಲಿ ಸುದ್ದಿ ಮಾಡುವ ವರದಿಗಾರರನ್ನ ತಾಜಾ ಮಾಡಿ ಸುದ್ದಿ ಮಾಡಿಸಿದರೆ ನಮ್ಮoತ ಸಾಮಾನ್ಯರು ಜಾಹಿರಾತು ನೋಡಿ ಸೋಪು, ಶಾಂಪು ಖರೀದಿಸಲು ಮುಗಿ ಬೀಳುವಂತೆ ಸದರಿ ದೇವಸ್ಥಾನಕ್ಕೆ ಹೋಗುತ್ತೇವೆ, ಅಲ್ಲಿನ ಸೇವಾ ಬೋಡ್೯ನOತೆ ಮೆನು ಆಯ್ಕೆ ಮಾಡಿ ಹಣ ಪಾವತಿ ಮಾಡಿ, ಹುಂಡಿ ತುಂಬಿಸಿ, ಅಚ೯ಕರಿಗೆ ಟಿಪ್ಸ್ ನೀಡಿ ಪಾಪ ಕಳೆದು ಕೊಂಡ ಭ್ರಮೆಯಲ್ಲಿ ಶೂದ್ರರಿಗೆ  ಮೀಸಲಿಟ್ಟ ಜಾಗದಲ್ಲಿ ಉಂಡು ಬರುತ್ತಾರೆ.   ಅಂಗಡಿ ಮಾಲಿಕರು ಲಾಭದಿಂದ ಸುಖ ಪಟ್ಟಿ, ಸಕಾ೯ರದಿಂದ ಹೆಚ್ಚಿನ ಸವಲತ್ತು, ಪ್ರಶಸ್ತಿ ಪಡೆದು, ಹೆಚ್ಚು ಲಾಭ ನೀಡುವ ಪಕ್ಷಕ್ಕೆ ಓಟು ಕೊಡಿಸಲು ವ್ಯವಹಾರ ಕುದುರಿಸುತ್ತಾರೆ.   ದೇವರು ಸವಾ೯೦ತರಯಾಮಿ ಅನ್ನುವುದು ಮರೆಸಿ ಬಿಡುತ್ತಾರೆ ಹಾಗೆ ಭಕ್ತರೂ ಮರೆಯುತ್ತಾರೆ ಇದು ಇವತ್ತಿನ ದೇವಸ್ಥಾನ ಮತ್ತು ಮಠಗಳು ಕಾಪೊ೯ರೇಟ್ ಮಟ್ಟಕ್ಕೆ ಬೆಳೆಯುತ್ತಿರುವ ಕ್ರಮ.   ISO,ISI ಮುಂತಾದ ಸಟಿ೯ಫಿಕೇಟು ಈಗಾಗಲೆ ಗೋಕಣ೯ ದೇವಸ್ಥಾನಕ್ಕೆ ಬಂದಿದೆ ಅಂತ ಅಲ್ಲಿನ ಸ್ವಾಮಿಗಳು ಪತ್ರಿಕಾ ಹೇಳಿಕೆ ನೀಡಿರುವುದು ಇದಕ್ಕೆ ಸಾಕ್ಷಿ.

# ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಅನುಯಾಯಿ 3 ಬಾರಿ ಹೆಗ್ಗೋಡು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದರು#

# ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಅನುಯಾಯಿ 3 ಬಾರಿ ಹೆಗ್ಗೋಡು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದರು# ಹೆಗ್ಗೋಡಿನ ಮಂಜುನಾಥ ಭಂಡಾರಿಯವರು ಸಾಗರದ ಪ್ರಥಮ ಶಾಸಕರಾದ ಶಾಂತವೇರಿ ಗೋಪಾಲಗೌಡರ ಕಟ್ಟಾ ಅಭಿಮಾನಿಗಳು, ಶಾಂತವೇರಿ ಗೋಪಾಲಗೌಡರು ನಮ್ಮ ರಾಜ್ಯದ ಸಮಾಜವಾದಿ ದುರೀಣರು ರಾಮಮನೋಹರ ಲೋಹಿಯಾರ ಅನುಯಾಯಿಗಳು ಇವರ ಜೀವನ ಚರಿತ್ರೆ "ಜೀವಂತ ಜ್ವಾಲೆ" ಬರೆದವರು ಸಮಾಜವಾದಿ ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು ಒಮ್ಮೆ ವೆಂಕಪ್ಪ ಗೌಡರು ಹೆಗ್ಗೋಡಿನ ಮಂಜುನಾಥರ ಬಗ್ಗೆ ಹೇಳಿದ್ದರು ಗೋಪಾಲಗೌಡರು ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗೆಲ್ಲ ಅವರ ಸಭೆಗೆ ಕುಚಿ೯ ಹಾಕುತ್ತಿದ್ದ ಬಗ್ಗೆ ಗೋಪಾಲಗೌಡರು ಹೇಳುತ್ತಿದ್ದರು ಅವರು ಇದಾರಾ? ಅಂತ ಕೇಳಿದರು.   ವೆಂಕಪ್ಪ ಗೌಡರೆ ಅವರು ಇದ್ದಾರೆ ನಾನು ಸಾಗರ ವಿದಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪದೆ೯ ಮಾಡಿದಾಗ ಚುನಾವಣಾ ಪ್ರಚಾರಕ್ಕೆ ಹೆಗ್ಗೋಡಿಗೆ ಹೋದಾಗ ಅವರೇ ಸಭೆ ನಡೆಸಲು ಅನುಕೂಲ ಮಾಡಿದ್ದರು ಅಂದಾಗ ವೆಂಕಪ್ಪ ಗೌಡರು ಅವರನ್ನ ಬೇಟಿ ಮಾಡಿಸು ಅಂದಾಗ ಅವರನ್ನ ಕರೆದು ಕೊಂಡು ಹೆಗ್ಗೋಡಿನ ಅವರ ಸೆಲೂನ್ಗೆ ಕರೆದುಕೊಂಡು ಹೋಗಿ ಬೇಟೆ ಮಾಡಿದಾಗ ಮಂಜುನಾಥರು ಗೋಪಾಲಗೌಡರ ನೆನಪು ಮಾಡಿಕೊಂಡು ಅವರಿಗಿಂತ ಅವರ ತಂದೆ ಗೋಪಾಲಗೌಡರ ದೊಡ್ಡ ಅಭಿಮಾನಿ ಅಂದ ನೆನಪು, ಮಂಜುನಾಥರ ಮಗ ರವಿ ಪ್ರಕಾಶ ಕೂಡ ಜಾತ್ಯತೀತ ಸಮಾಜವಾದ ತತ್ವ ಜೀವನದಲ್ಲಿ ಅಳವಡಿಸಿಕೊಂಡಿರುವುದು ಅಭಿನಂದನೀಯ. ಅವರ ಸೆಲೂನಿನ ಎದುರೇ ಇರು

DETAILS ABOUT AYURVEDIC CANCER TREATMENT CENTRE OF VAIDYA NARAYAN MURTHY NARASIPURA.

VAIDYA NARAYAN MURTHY NARASIPURA AYURVEDIC CANCER TREATMENT CENTRE. _______________________________________    HE IS WORLD FAMOUS AYURVEDIC TREATMENT FOR ALL DIESES. ________________________________________    HIS POSTAL ADDRESS IS --------------------------------------------------+- VAIDYA NARAYAN MURTHY NARASIPURA VILLAGE ANANDAPURAM POST SAGAR TAHASIL SHIMOGA DIST KARNATAKA STATE INDIA. (08183-258033) •••••••••••••••••••••••••••••••••••••  Note: He is not available on cell phone or land line.     One person one medicine is strictly following. __________________________________________ Medicine distribution days and times +++++++++++++++++++++++++++++ All Sunday and Thursday from morning to till finish the line he is available.  All Wednesday and Saturday afternoon also he distribute medicine. ++++++++++++++++++++++++++++++++ FAQ #### 1.HOWMANY DAYS MEDICINE GIVING? * He gives only 27 days medic FRESH MEDICINE CURING RATE IS MORE. ______________________________

ROUTE MAP FROM HOMBUJA RESIDENCY LODGE TO VAIDYA NARAYAN MURTHY NARASIPURA

Shared route From (14.0689326,75.2138911) to Vaidya Naranamurthy Cancer Center, Narasipura, Karnataka via SH1. 20 min (9.6 km) 19 min in current traffic 1. Head north-east towards NH206 2. Turn left onto NH206 3. Turn right onto SH1 4. Turn left 5. Arrive at location: Vaidya Naranamurthy Cancer Center For the best route in current traffic visit https://goo.gl/maps/WXa8LRX32wn

#HOMBUJA RESIDENCY LODGE (VAIDYA NARAYAN MURTHY)

HOMBUJA RESIDENCY LODGE NH 206, YADEHALLI CIRCLE ANANDAPURAM,577412 SAGAR TALUK, SHIMOGA DIST, KARNATAKA STATE,INDIA. *Nearest lodge to Vaidyji home NARASIPURA only 10km from lodge. *Daily Bangalore Talaguppa express arriving 6am ANANDAPURAM railway station.(Bangalore railway station departure time 11pm). * Nearest Airport are MANGALORE,GOA AND BANGALORE .   Bangalore airport is convenient.  * Frequently kSRTC and private busses from Mumbai,Chenai, Coimbatore, Hyderabad,Hubli,Goa, Mangalore, Kerala to Shimoga city.  From SHIMOGA to ANANDAPURAM every 10 Minutes one Bus available. https://m.facebook.com/story.php?story_fbid=797785663705366&id=349347101882560

ಕನಿಷ್ಠ ಈ ನಾಲ್ಕು ಅಂಶ ಪಾಲಿಸಿದರೆ ಕನ್ನಡ ಬಾಷೆ ಸಮೃದ್ಧ

#ಕನ್ನಡ ರಾಜ್ಯೋತ್ಸವ ಶುಭಾಷಯ# ಕನ್ನಡ ಬಾಷೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ ಇದನ್ನ ನೀವು ಪಾಲಿಸಿರಿ *ನಿಮ್ಮ ಸಹಿ ಕನ್ನಡದಲ್ಲಿರಲಿ. *ನಿತ್ಯ ಕನಿಷ್ಠ ಒಂದು ಕನ್ನಡ ದಿನ ಪತ್ರಿಕೆ ಖರೀದಿಸಿ. *ನಿಮ್ಮ ಮಕ್ಕಳನ್ನ ಸಕಾ೯ರಿ ಕನ್ನಡ ಶಾಲೆಗೆ ಸೇರಿಸಿ. *ನಿಮ್ಮ ಉದ್ಯಮದ ನಾಮಪಲಕದಲ್ಲಿ ಕನ್ನಡವೂ ಇರಲಿ. ಕನಿಷ್ಠ ಇಷ್ಟು ಆಚರಿಸದೆ ಕನ್ನಡ ಭಾಷೆ ಬಗ್ಗೆ ನೀವು ಎಷ್ಟೇ ಅದ್ದೂರಿ ಆಡಂಬರ ಸಾರಿದರೂ ಅದು ಆತ್ಮವಂಚನೆ ಅಷ್ಟೆ.

ವೀಳೆಯದ ಎಲೆ ಕೀಳುವ ಕೈ ಬೆರಳ ಕತ್ತಿ.

#ವೀಳೆಯದ ಎಲೆ ಕತ್ತಿ,Betel leaves knife# ಹಲವಾರು ರೀತಿಯ ಕತ್ತಿ ದೈನಂದಿನ ಜೀವನದಲ್ಲಿ ನೋಡಿದ್ದೇನೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆದರೆ ಈ ಕತ್ತಿ ನೋಡಿದ್ದು ಮಾತ್ರ ಇತ್ತೀಚಿಗೆ    ಹೊಸನಗರದ ಬಿಲ್ ಸಾಗರದ ವಿದ್ಯುತ್ ಚಾಲಿತ ಬೋಟು ಚಲಾಯಿಸುವ ಶಂಕರ ಮೊನ್ನೆ ಬಂದಿದ್ದರು ಅವರು ನನಗೆ ಪರಿಚಯ ಆಗಿದ್ದು ಶಿವಮೊಗ್ಗದ ಸಾಹಸಿ ಆ.ನಾ.ವಿಜೇ೦ದ್ರರಿಂದ ನಮ್ಮ ಊರ ಕೆರೆ ಸ್ವಚ್ಚತೆಗೆ ಇವರು ಮತ್ತು ಇವರ ಡಿಸೇಲ್ ಬೋಟ್ ತಂದಿದ್ದ ಪರಿ ಚಯ.     ಮೊನ್ನೆ ನನ್ನ ಆಪೀಸಿಗೆ ಬಂದು ನನ್ನ ಪರಿಚಯ ಇದೆಯಾ ಅಂದರು, ಅರೆ ಬಿಲ್ ಸಾಗರದ ಶಂಕರ್ ರವರೆ ನಿಮ್ಮನ್ನ ಮರೆಯಲು ಹೇಗೆ ಸಾಧ್ಯ ಅಂತ ಒಳ ಕರೆದು ಕೂರಿಸಿ ಚಹಾ ಆತಿಥ್ಯ ನೀಡಿ ದೂರ ಹೋಗಿದ್ದಿರಿ ಅಂದೆ, ಹೌದು ಬೆಳಿಗ್ಗೆನೆ ಹೊನ್ನಾಳಿಗೆ ಹೋಗಿದ್ದೆ ವೀಳೆಯದೆಲೆ ಕತ್ತಿ ತರಲು ಅಂದರು, ಹಾಗೇ ಅದು ಇದು ಬೇರೆ ವಿಚಾರ ಮಾತಾಡಿ ಹೊರಟರು ಅವಾಗ ಕೇಳಿದೆ ನಿಮ್ಮ ಊರಲ್ಲಿ ಕತ್ತಿ ಮಾಡೋರು ಇಲ್ಲವಾ? ಅಷ್ಟು ದೂರ ಹೋಗಿದ್ದಿರಲ್ಲ ಅಂದಾಗ ಈ ಕತ್ತಿ ರಹಸ್ಯ ಹೊರಬಂತು.     ಇದು ಇಲ್ಲೆಲ್ಲೂ ಸಿಗುವುದಿಲ್ಲ, ಇದಿಲ್ಲದಿದ್ದರೆ ಎಲೆ ಕಟಾವು ಸಾಧ್ಯವಿಲ್ಲ ಅಂದರು. ಅದು ಯಾವ ರೀತಿ ಕತ್ತಿರಿ ಅಂದೆ, ತಡೆಯಿರಿ ತಂದು ತೋರಿಸುತ್ತೇನೆ ಅಂತ ಅವರ ಬೈಕಿನ ಹತ್ತಿರ ಹೋಗಿ ತಂದರು, ನಾನು ನಿತ್ಯ ಬಳಕೆಯ ಬೇರೆ ವಿನ್ಯಾಸದ ಕತ್ತಿ ಅಂತ ಮಾಡಿದ್ದೆ ಆದರೆ ಈ ಕತ್ತಿ ನೋಡಿ ಆಶ್ಚಯ೯ ಆಯಿತು.   ಇದು ಕೈಯ ಬೆರಳಿಗೆ ಅಳವಡಿಸಿಕೊಂಡು ಅಡಿ

Dr N.S.Vishwapathy shastri real astrologer.

ಡಾII ಎನ್.ಎಸ್. ವಿಶ್ವಪತಿ ಶಾಸ್ತಿ ಗಳು ಪ್ರಖ್ಯಾತ ಜೋತಿಷಿಗಳು ಆದರೆ ಪ್ರಚಾರದಿಂದ ದೂರ ದೇವೆಗೌಡರು ಪ್ರದಾನ ಮಂತ್ರಿ ಆದಾಗ ಇವರು ಪ್ರಮುಖರು, ಆದಿಚುಂಚನ ಗಿರಿಯ ಹಿರಿಯ ಸ್ವಾಮಿಗಳಿದ್ದಾಗ ಇವರು ಪ್ರತಿ ವಷ೯ ಅಚ೯ಕ ತರಬೇತಿ ಪ್ರಾರಂಭಿಸಿದ್ದರು, ಈಗಲೂ ಪ್ರತಿ ವಷ೯ ನೂರಾರು ಜನ ಅಚ೯ಕ ತರಬೇತಿ ಹೊಂದುತ್ತಾರೆ ವಿಶೇಶವೆಂದರೆ ಶೂದ್ರರು, ಮುಸ್ಲಿಂರೂ ಹೆಚ್ಚು ತರಬೇತಿಗೆ ಬರುತ್ತಾರೆ.   ನಮ್ಮ ಊರಲ್ಲಿ ಸಿದ್ಧಿವಿನಾಯಕ ದೇವಸ್ಥಾನ ಇವರ ನೇತೃತ್ವದಲ್ಲಿ ಪ್ರಾರಂಭಿಸಿದಾಗ ಸಾಮೂಹಿಕ ಬೋಜನದಲ್ಲಿ ಇವರು ಊಟ ಮಾಡಿದಾಗ ಸ್ಥಳೀಯ ಇವರ ಸ್ವಜಾತಿಯವರು ವಿರೋದಿಸಿದಾಗ ಇವರು ಅವರಿಗೆ ಪ್ರಶ್ನೆ ಮಾಡಿದರು ಏನೆಂದರೆ .....    ನೀವು ಮಸಾಲೆ ದೋಸೆ, ಪಾನಿಪೂರಿ ಹೋಟಲಲ್ಲಿ ತಿಂದಿದೀರಾ ? ಹಾಗಿದ್ದ ಮೇಲೆ ಮಡಿ ಏಕೆ? ಇಲ್ಲಿ ಭಕ್ತರು ಭಕ್ತಿಯಿಂದ ಸ್ನಾನ ಮಾಡಿ ಅಡುಗೆ ಮಾಡಿದ್ದಾರೆ ಜಾತಿ ಕಾರಣದಿಂದ ಇಲ್ಲಿ ಬಿಟ್ಟು ಹೋಟಲ್ಗೆ ಹೋಗ್ತೀರಾ ಅಲ್ಲಿ ಅಡುಗೆ ಮಾಡಿಟ್ಟು ಸ್ನಾನಗೆ ಹೋಗ್ತಾರೆ ಅಲ್ಲಿ ತಿಂತಿರಾ ಇಲ್ಲಿ ಜಾತಿ ಅಂತಿರಾ ಅಂದಿದ್ದರು.    ದೇವರು ಒಲಿದಿದ್ದು ಶೂದ್ರ , ದಲಿತರಿಗೆ ಪುರೋಹಿತರಿಗಲ್ಲ, ನಿಮ್ಮ ಆಹಾರ ಮುಖ್ಯ ಅಲ್ಲ ಭಕ್ತಿ ಮುಖ್ಯ, ಮೀನು ಮಾಂಸ ತಿಂದರೆ ದೇವಸ್ಥಾನಕ್ಕೆ ಹೋಗಬಾರದು ಅನ್ನೋದು ತಪ್ಪು ನೀವು ತಿ೦ದ ಮಾಂಸಹಾರ 48 ಗಂಟೆ ನಿಮ್ಮ ಹೊಟ್ಟೆಯಲ್ಲಿ ಇರುತ್ತೆ ಅಂತ ಹೇಳಿ ನಮ್ಮ ಊರ ಶೂದ್ರ ಭಕ್ತರಲ್ಲಿನ ಮೂಡನಂಬಿಕೆ ಆಚರಣೆ ಕಡಿಮೆ ಮಾಡಿದರು, ಇದೇ ರೀತಿ ಸ್