# ಸುದ್ದಿಯನ್ನ ಸುದ್ದಿ ಮಾಡದ ಈ ಸುದ್ದಿ#
ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.
ಇವರಿಬ್ಬರನ್ನ ಪೇಸ್ ಬುಕ್ನಲ್ಲಿ ಮಾನಹಾನಿ ಮಾಡಿದ್ದಾರಂತ ದೂರು ನೀಡಿಸಿ, ಕಳೆದ ಶನಿವಾರ ಬಂದಿಸಿ ಕೋಟ್೯ ರಜಾದಿನದ ಲಾಭ ಪಡೆದು ಜೈಲಿಗೆ ಕಳಿಸಿ ತಮ್ಮ ದುರುದ್ದೇಶ ಈಡೇರಿಸಿಕೊಂಡ ಈ ಪ್ರಕರಣದ ಹಿಂದೆ ಇವರ ಸಮಾಜದ ಮಠಒಂದರ ಕಾಣದ ಕೈಗಳು ಎನ್ನುವುದು ಬಹಿರಂಗ ಸತ್ಯ.
ಹಿರಿಯರಾದ ಗಣಪತಿ ಭಟ್ಟರು RSS ಪ್ರಚಾರಕರಾಗಿದ್ದವರು, ತುತು೯ ಪರಿಸ್ಥಿತಿ ವಿರೋದಿಸಿ ಜೈಲಿಗೆ ಹೋದವರು ಇವತ್ತಿನವರೆಗೆ ರಾಜಕೀಯಕ್ಕೆ ಬರದವರು ಸಾತ್ವಿಕರು, ವರದಳ್ಳಿಯ ಪವಾಡ ಪುರುಷ ಶ್ರೀಧರ ಸ್ವಾಮಿಯವರ ಶಿಷ್ಯರು.
ನಿರಂಜನ ಕುಗ್ವೆ ಉದಯೋನ್ಮುಖ ವ್ಯಂಗ್ಯಚಿತ್ರಗಾರರು ಇವರ ವ್ಯಂಗ್ಯಚಿತ್ರಗಳನ್ನ ಖ್ಯಾತ ಪಂಜು ಗಂಗೋಲೀಯವರು ಅಭಿನಂದಿಸಿದ್ದಾರೆ.
ಇವರಿಬ್ಬರು ಮಾಡಿದ ಅಪರಾದ ಇವರ ಜಾತಿಗೆ ಸಂಬಂದಪಟ್ಟ ಸ್ವಾಮಿ ಒಬ್ಬರ ಅತ್ಯಾಚಾರ ಪ್ರಕರಣ ಮತ್ತು ಆ ಮಠದಲ್ಲಿ ಆ ಸಮಾಜದ ಹೆಣ್ಣು ಮಕ್ಕಳಿಗೆ ದೇವರ ಹೆಸರಲ್ಲಿ ಭಕ್ತಿ ಮತ್ತು ಸಂಸ್ಕಾರದ ಭಯ ಬಿತ್ತಿ ಕನ್ಯಾ ಸಂಸ್ಕಾರ ಎಂಬ ಸ್ವಾಮಿಗಳ ಏಕಾಂತ೦ಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳಿಸುವ ಕಾಯ೯ಕ್ರಮ ವಿರೋದಿಸಿ ಅಭಿಯಾನ ಪ್ರಾರಂಭಿಸಿದ್ದರು.
ಇವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಬೆಂಬಲಿಸಿದ್ದಾರೆ ಆದರೆ ಪ್ರತ್ಯಕ್ಷವಾಗಿ ಬೆಂಬಲಿಸಲು ಅವರಿಗೆಲ್ಲ ಮಠದ ಕಾಳಹಸ್ತದ ಭಯ.
ನಿರಪರಾಧಿಗಳನ್ನ ಸಮಾಜ ಕಂಠಕರಲ್ಲದವರನ್ನ ಅವಮಾನಿಸುವ ಶಿಕ್ಷಿಸುವ ಈ ಪ್ರಕರಣ ಪ್ರಜಾಪ್ರಭುತ್ವದಲ್ಲಿ ಸುದ್ದಿ ಮಾಡಿ ವಿರೋದಿಸುವ ಸುದ್ದಿ ಯಾವ ಪತ್ರಿಕೆ ಮಾಧ್ಯಮದಲ್ಲೂ ಪ್ರಕಟವಾಗದ ಬಗ್ಗೆ ಆಶ್ಚಯ೯ ಮತ್ತು ಅನುಮಾನ ಸಾವ೯ಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಅತ್ಯಾಚಾರ, ಮೂಡನಂಬಿಕೆಯ ಕನ್ಯಾ ಸಂಸ್ಕಾರ ನಡೆಸುತ್ತಿರುವವರ ಹಣ ಮತ್ತು ಅಧಿಕಾರಗಳು ಅವರ ವಿರೋಧ ಮಾಡುವವರ ಧ್ವನಿ ಅಡಗಿಸುವಲ್ಲಿ ಯಶಸ್ವಿಯಾಗುತ್ತಿರುವುದು ವಿಷಾದನೀಯ.
Comments
Post a Comment