Skip to main content

Posts

Showing posts with the label Pre Mansoon flower Rain Lilly

Blog number 2067.ಪೂರ್ವ ಮುಂಗಾರು ಮಳೆಗೆ ಹೂವಾಗಿ ಅರಳಿ ನಗು ಸೂಸುವ ಮಳೆ ಪುಷ್ಪಾ ರೈನ್ ಲಿಲ್ಲಿ.

https://youtu.be/VlkPSmYo9AE?feature=shared #ಪೂರ್ವ_ಮುಂಗಾರಿನ_ಮಳೆಯಲ್ಲಿದೆ #ಭೂಮಿ_ಹಸಿರು_ಮಾಡುವ_ನೈಟ್ರೋಜನ್ #ಕಳೆದ_ನವೆಂಬರ್_ತಿಂಗಳಿಂದ_ನನ್ನ_ಕೈತೋಟದ_ಗಿಡಗಳಿಗೆ_ನಿತ್ಯ_ನಾನುಣಿಸುತ್ತಿದ್ದ_ಕೈತಂಬಿಗೆ_ನೀರು #ಈ_ತಿಂಗಳ_ಒಂದು_ಹೂಮಳೆ_ಮತ್ತೆರೆಡು_ದೊಡ್ಡ_ಮಳೆಯಿಂದ_ಹುವಾಗಿ_ನಗು_ಬೀರುತ್ತಿದೆ    ಪ್ರಕೃತಿಯಲ್ಲಿರುವ ಹೂವುಗಳ ವಿದ-ಬಣ್ಣ-ಸುವಾಸನೆ_ಆಕೃತಿಗಳನ್ನು ಲೆಖ್ಖವಿಡಲು ಸಾಧ್ಯವೇ? ಲೆಖ್ಬ ಮಾಡಿಟ್ಟರೂ ಪ್ರಕೃತಿಯಲ್ಲಿ ಹೊಸ ರೂಪದ ಹೊಸ ಹೂವುಗಳು ಬರುತ್ತಲೇ ಇರುತ್ತದೆ.   ನನ್ನ ಕಳೆದ 5 ವರ್ಷದ ತೂಕ ಇಳಿಸುವ ವಾಕಿಂಗ್ ನಿತ್ಯವೂ ನವನವೀನ ಉಂಟು ಮಾಡಲು ನನ್ನ ಪ್ರೀತಿಯ ಶಂಭೂರಾಮ ಜೊತೆಯಾದಂತೆ ಈ ಕೈ ತೋಟದ ಹೂವಿನ ಗಿಡಗಳ ಆರೈಕೆ - ಆಯ್ಕೆ ಕೂಡ ಜೊತೆ ಜೊತೆ ಆಗಿ ಸಾಗಿದೆ. ಒಂದು ದಿನ ನೀರು ಉಣಿಸದೆ ಇರಲು ಸಾಧ್ಯವಿಲ್ಲ ಆ ಗಿಡಗಳು ನನ್ನ ಜೊತೆ ಮಾತಾಡಿದಂತ ಅನುಭೂತಿಯ ಅನುಭವ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು.   ಕಳೆದ ಅಕ್ಟೋಬರ್ ನವೆಂಬರ್ ತಿಂಗಳಿಂದಲೇ ನಿತ್ಯ ಬೆಳಿಗ್ಗೆ ವಾಕಿಂಗ್ ನಂತರ ಈ ಗಿಡಗಳಿಗೆ ನೀರುಣಿಸುತ್ತಿದ್ದೆ ಸರಿ ಸುಮಾರು ಏಳು ತಿಂಗಳ ಕಾಲ, ಬಿರು ಬೇಸಿಗೆ,ಮಧ್ಯದಲ್ಲಿ ಬರಬೇಕಾದ ಸಂಪ್ರದಾಯಿಕ ಮಳೆ ಬಾರದೇ ಹೋದದ್ದು ಹಾಗು ಅತಿ ಹೆಚ್ಚು ಉಷ್ಣಾಂಶ 43 ಡಿಗ್ರಿ ದಾಟಿದ್ದು ಸೂಕ್ಷ್ಮವಾಗಿರುವ ಹೂವಿನ ಗಿಡಗಳಿಗೆ ಕಷ್ಟವಾಗಿತ್ತು. ಈ ತಿಂಗಳ ಮೊದಲ ವಾರ...