Skip to main content

Posts

Showing posts with the label RSS Gurumurthy from sagar now shikaripura BJP Leader

Blog number 1607. ಸಾಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುಮೂರ್ತಿ ಈಗ ಶಿಕಾರಿಪುರದ ಬಿಜೆಪಿ ನಾಯಕರು.

#ಮಲೆನಾಡು_ಪ್ರದೇಶ_ಅಭಿವೃದ್ದಿ_ಮಂಡಳಿ_ಅಧ್ಯಕ್ಷರಾಗಿ_ಸಾಗರದ_ಗುರುಮೂತಿ೯_ಆಯ್ಕೆ_ಅಭಿನಂದನೀಯ.     ಸಾಗರದ ಗುರು ಮೂತಿ೯ ಅಂತ ಸಾಗರದವರು ಕರೆದರೆ ಶಿಕಾರಿಪುರದವರು ಶಿಕಾರಿಪುರ ಗುರುಮೂತಿ೯ ಅಂತನೇ ಕರೆಯುತ್ತಾರೆ.     1979 - 80 ರಲ್ಲಿ ಸಾಗರ ತಾಲ್ಲೂಕಿನಲ್ಲಿ ಆರ್.ಎಸ್.ಎಸ್ ನ ಮು೦ಚೂಣಿಯಲ್ಲಿದ್ದವರು U H ರಾಮಪ್ಪ ಮತ್ತು ಅವರ ಶಿಷ್ಯರ೦ತೆ ಈ ಗುರುಮೂತಿ೯ .   ಬಿ.ಹೆಚ್ ರಸ್ತೆಯ ಲಕ್ಷ್ಮಿ ಸ್ವೀಟ್ಸ್ ಎದುರಿನ ಪುತ್ತೂರಾಯರ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸುಮಾರು 16 ರೂಂ ಗಳನ್ನ ಸೇವಾ ಸಾಗರ ಸಂಸ್ಥೆಯಿ೦ದ ವಿದ್ಯಾಥಿ೯ಗಳಿಗೆ ಖಾಸಾಗಿ ವಿದ್ಯಾಥಿ೯ನಿಲಯವಾಗಿ ಪರಿವರ್ತಿಸಿದ್ದರು, ಪ್ರತಿ ರೂಮಿನಲ್ಲಿ ಇಬ್ಬರು ಇರಬಹುದಾಗಿತ್ತು ಇದಕ್ಕೆ ನಿಗದಿತ ಬಾಡಿಗೆ ನಿಗದಿ ಮಾಡಿದ್ದರು.    ಅದು ರಾಮಪ್ಪ ಮತ್ತು ಗುರುಮೂತಿ೯ಯವರ ಆಡಳಿತ ಕಛೇರಿಯೂ ಆಗಿತ್ತು, ನಾನು SSLC ಪರೀಕ್ಷೆ ತಯಾರಿಗೆ ಅಲ್ಲಿ ಸೇರಿದ್ದೆ ಅದು ಆರ್ ಎಸ್ ಎಸ್ ಪ್ರಮುಖರಾಗಿದ್ದ ಪ್ರಾಣೇಶರ ಶಿಪಾರಸ್ಸಿನಿಂದ.   ಅಲ್ಲಿ ಬೆಳಿಗ್ಗೆ 5ಕ್ಕೆ ನಮ್ಮನ್ನೆಲ್ಲ ಎಬ್ಬಿಸಿ ಸುಪ್ರಬಾತ ಒ೦ದು ಕಡೆ ಸೇರಿಸಿ ಕರಾಗ್ರೆ ವಸತೆ ಲಕ್ಷ್ಮಿ..... ಸಾಮೂಹಿಕವಾಗಿ ಹೇಳಿಸುತ್ತಿದ್ದರು ಈ ಗುರುಮೂತಿ೯.     ಬಿಜೆಪಿ ಪಕ್ಷ ಪ್ರಬುದ್ಧಮಾನಕ್ಕೆ ಬ೦ದಾಗ ಸಾಗರದಿಂದ ಒ0ದಲ್ಲ ಒ೦ದು ದಿನ UH ರಾಮಪ್ಪ ಅಥವ ಗುರುಮೂತಿ೯ ಶಾಸಕರಾಗುತ್ತಾರೆಂಬ ಸುದ್ದಿ ಇತ್ತ...