Skip to main content

Posts

Showing posts with the label All villages of western ghats effected by Ganja kick

Blog number 2259. ಮಲೆನಾಡಿನ ಹಳ್ಳಿಗಳಲ್ಲಿ ಗಾಂಜಾ ಘಮಲು

#ಗಾಂಜಾದಲ್ಲಿ_ಬೇರೇನೋ_ಮಾದಕ_ವಸ್ತು_ಬೆರೆಸುತ್ತಾರೆಂಬ_ಸುದ್ದಿ_ಇದೆ. #ಪೋಷಕರೇ_ನಿಮ್ಮ_ಮಕ್ಕಳ_ಬಗ್ಗೆ_ಕಾಳಜಿ_ಮತ್ತು_ಎಚ್ಚರ_ವಹಿಸಿ #ಸುದ್ದಿವಾಹಿನಿ_ಸುದ್ದಿಗಳು_ಮು೦ದಿನ_ಗಂಡಾಂತರ_ತೆರೆದಿಡುತ್ತಿದೆ. #ಪಶ್ಚಿಮಘಟ್ಟಗಳ_ಜನವಸತಿ_ಪ್ರದೇಶದಲ್ಲಿ_ಅವರಿಸಿರುವ_ಗಾಂಜಾ_ಗಮಲು. #ಪ್ರಾರಂಭದಲ್ಲಿ_ಗಾಂಜಾ_ಬೆಳೆಯುತ್ತಿದ್ದರು_ಆಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಇರಲಿಲ್ಲ #ಈಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಹೆಚ್ಚಾಗಿದ್ದಾರೆ_ಗಾಂಜಾ_ಬೆಳೆಯುವವರು_ಕಡಿಮೆ_ಆಗಿದ್ದಾರೆ. #ಬೇರೆ_ಕಡೆಯಿಂದ_ಗಾಂಜಾ_ಇಲ್ಲಿ_ಮಾರಾಟ_ಆಗುತ್ತದೆ. #ಅಮಲು_ಪದಾರ್ಥದ_ಮೇಲಿನ_ಸದ್ಬಾವನೆ_ನಂತರದ_ಪಲಾನುಭವಿ_ಆ_ಕುಟುಂಬದವರೆ_ಆಗುವ_ವಿಪರ್ಯಾಸ. #ಇದು_ಎಲ್ಲಾ_ನಮ್ಮ_ಪಶ್ಚಿಮಘಟ್ಟದ_ಹಳ್ಳಿ_ಕಥೆ.   ಒಂದು ಕಾಲದಲ್ಲಿ ಬಂಗಿ/ ಗಾಂಜಾ ದೂಮ ಪಾನ ಮತ್ತು ಪಾನಕವಾಗಿ ಅಪರೂಪದ ವಿಶೇಷ ಹಬ್ಬ ಹರಿದಿನಗಳಲ್ಲಿ ಸೇವಿಸುತ್ತಿದ್ದರು ಇದು ಸಾದು ಸಂತರ ಭಕ್ತಿ ಮಾರ್ಗದ ಏಕಾಗ್ರತೆಗೆ ದಾರಿ ಆಗಿತ್ತು, ಇದನ್ನು ಸೇವಿಸಿದರೆ ವಿಪರೀತ ಭಯ ಉಂಟಾಗುತ್ತಿತ್ತು ಮತ್ತು ಸಣ್ಣ ನಾಕಾರು ಮೆಟ್ಟಲು ಇಳಿಯಲೂ ದೈರ್ಯ ಬರುತ್ತಿರಲಿಲ್ಲ, ಬೈಕ್ ಕಾರ್ ಬಿಡಿ ಸೈಕಲ್ ಚಲಾಯಿಸಲೂ ಸಾಧ್ಯವಾಗುವುದಿಲ್ಲ, ದೇವರ ನಾಮ ಶಿವ ಶಿವ ಅನ್ನುತ್ತಾ (ಬಂಗಿ ಶಿವನ ಪ್ರೀತಿಯದ್ದು ಎಂದು ಪುರಾಣದಲ್ಲಿದೆ) ಶಾಂತಿ ಮಂತ್ರ ಪಠಿಸುತ್ತಾ ಒಂದು ಕಡೆ ಕುಳಿತಿರುತ್ತಿದ್ದರು.    ಈಗಿನ ಗಾಂಜಾ ಸೇವಿಸಿದವರು ವಿಪರೀತ ವೇಗ...