Skip to main content

Blog number 2259. ಮಲೆನಾಡಿನ ಹಳ್ಳಿಗಳಲ್ಲಿ ಗಾಂಜಾ ಘಮಲು

#ಗಾಂಜಾದಲ್ಲಿ_ಬೇರೇನೋ_ಮಾದಕ_ವಸ್ತು_ಬೆರೆಸುತ್ತಾರೆಂಬ_ಸುದ್ದಿ_ಇದೆ.

#ಪೋಷಕರೇ_ನಿಮ್ಮ_ಮಕ್ಕಳ_ಬಗ್ಗೆ_ಕಾಳಜಿ_ಮತ್ತು_ಎಚ್ಚರ_ವಹಿಸಿ

#ಸುದ್ದಿವಾಹಿನಿ_ಸುದ್ದಿಗಳು_ಮು೦ದಿನ_ಗಂಡಾಂತರ_ತೆರೆದಿಡುತ್ತಿದೆ.

#ಪಶ್ಚಿಮಘಟ್ಟಗಳ_ಜನವಸತಿ_ಪ್ರದೇಶದಲ್ಲಿ_ಅವರಿಸಿರುವ_ಗಾಂಜಾ_ಗಮಲು.

#ಪ್ರಾರಂಭದಲ್ಲಿ_ಗಾಂಜಾ_ಬೆಳೆಯುತ್ತಿದ್ದರು_ಆಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಇರಲಿಲ್ಲ

#ಈಗ_ಹಳ್ಳಿಗಳಲ್ಲಿ_ಗಾಂಜಾ_ವ್ಯಸನಿಗಳು_ಹೆಚ್ಚಾಗಿದ್ದಾರೆ_ಗಾಂಜಾ_ಬೆಳೆಯುವವರು_ಕಡಿಮೆ_ಆಗಿದ್ದಾರೆ.

#ಬೇರೆ_ಕಡೆಯಿಂದ_ಗಾಂಜಾ_ಇಲ್ಲಿ_ಮಾರಾಟ_ಆಗುತ್ತದೆ.

#ಅಮಲು_ಪದಾರ್ಥದ_ಮೇಲಿನ_ಸದ್ಬಾವನೆ_ನಂತರದ_ಪಲಾನುಭವಿ_ಆ_ಕುಟುಂಬದವರೆ_ಆಗುವ_ವಿಪರ್ಯಾಸ.

#ಇದು_ಎಲ್ಲಾ_ನಮ್ಮ_ಪಶ್ಚಿಮಘಟ್ಟದ_ಹಳ್ಳಿ_ಕಥೆ.

  ಒಂದು ಕಾಲದಲ್ಲಿ ಬಂಗಿ/ ಗಾಂಜಾ ದೂಮ ಪಾನ ಮತ್ತು ಪಾನಕವಾಗಿ ಅಪರೂಪದ ವಿಶೇಷ ಹಬ್ಬ ಹರಿದಿನಗಳಲ್ಲಿ ಸೇವಿಸುತ್ತಿದ್ದರು ಇದು ಸಾದು ಸಂತರ ಭಕ್ತಿ ಮಾರ್ಗದ ಏಕಾಗ್ರತೆಗೆ ದಾರಿ ಆಗಿತ್ತು, ಇದನ್ನು ಸೇವಿಸಿದರೆ ವಿಪರೀತ ಭಯ ಉಂಟಾಗುತ್ತಿತ್ತು ಮತ್ತು ಸಣ್ಣ ನಾಕಾರು ಮೆಟ್ಟಲು ಇಳಿಯಲೂ ದೈರ್ಯ ಬರುತ್ತಿರಲಿಲ್ಲ, ಬೈಕ್ ಕಾರ್ ಬಿಡಿ ಸೈಕಲ್ ಚಲಾಯಿಸಲೂ ಸಾಧ್ಯವಾಗುವುದಿಲ್ಲ, ದೇವರ ನಾಮ ಶಿವ ಶಿವ ಅನ್ನುತ್ತಾ (ಬಂಗಿ ಶಿವನ ಪ್ರೀತಿಯದ್ದು ಎಂದು ಪುರಾಣದಲ್ಲಿದೆ) ಶಾಂತಿ ಮಂತ್ರ ಪಠಿಸುತ್ತಾ ಒಂದು ಕಡೆ ಕುಳಿತಿರುತ್ತಿದ್ದರು.
   ಈಗಿನ ಗಾಂಜಾ ಸೇವಿಸಿದವರು ವಿಪರೀತ ವೇಗದಲ್ಲಿ ವಾಹನ ಚಲಾಯಿಸುತ್ತಾರೆ, ಹೊಡಿ - ಬಡಿ ಜಗಳ ಕೊಲೆ ದರೋಡೆಗಳಲ್ಲಿ ಭಾಗಿ ಆಗುತ್ತಿದ್ದಾರೆ ಅಂದರೆ ಇದು ಅಸಲಿ ಬಂಗಿ/ ಗಾಂಜಾ ಅಲ್ಲ!!... ಡ್ರಗ್ಸ್ ಮಿಶ್ರ ಮಾಡಿದ ಕಲಬೆರಕೆ ಗಾಂಜಾ ಆಗಿರಲೇಬೇಕು.

 #ಅನೇಕ_ವರ್ಷದ_ಹಿಂದೆ_ನಾನು_ಬರೆದ_ಲೇಖನ_ಓದಿ....
  ಪಶ್ಚಿಮ ಘಟ್ಟಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು.
 ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬರಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು.
  ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು ಬಂತು ಜನಪ್ರತಿನಿಧಿಗಳು ಇವರ ಮನೆಗೆ ಬರಲು ಪ್ರಾರಂಭಿಸಿದರು ಎಲ್ಲೋ ಒಂದು ಕಡೆ ಸಿಕ್ಕಿಬಿದ್ದರೆ ಊರವರೆಲ್ಲ ಸೇರಿ ರಾಜಿ ಮಾಡಿ ಬಿಡಿಸಲು ಪ್ರಾರಂಭಿಸಿದರು ಅದಿಕಾರದಲ್ಲಿನ ರಾಜಕಾರಣಿಗಳೂ ಸಹಕರಿಸಿದರು.
  ಹಳ್ಳಿಯ ಮಕ್ಕಳಿಗೆ ಕಾನ್ವೆ೦ಟ್ ಶಾಲೆಗೆ ಸೇರಿಸುವ ಮತ್ತು ಅವರನ್ನ ನಿತ್ಯ ಬರುವ ಶಾಲಾ ವಾಹನದಲ್ಲಿ ಕಳಿಸುವ ಪದ್ದತಿ ಪ್ರಾರ೦ಭವಾಯಿತು ಮುಂದೆ ಹೆಚ್ಚಿನ ಶಿಕ್ಷಣಕ್ಕೆ ದೂರದ ದುಬಾರಿ ವಸತಿ ಶಾಲೆಗಳಿಗೆ ಸೇರಿಸಿದರು.
  ಎಲ್ಲಾ ಸುಖಾಂತ್ಯದಲ್ಲಿ ಆಗಲಿಲ್ಲ ಮಗು ಡ್ರಗ್ ವ್ಯಸನಿ ಆದ... ಅಲ್ಲಿ ಗಾಂಜಾದಿಂದ ಪ್ರಾರಂಭವಾಗಿ ಈಗ ಬಹಳ ಮುಂದುವರಿದಿದ್ದಾನೆ, ಇನ್ನು ಕೆಲವರ ಮಕ್ಕಳು ಗಾಂಜಾ ವ್ಯಾಪಾರವನ್ನೆ ಪ್ರಾರಂಭಿಸಿದ್ದಾರೆ.
  ಆದರೆ ಯಾರಿಗೂ ಇನ್ನು ಗೊತ್ತಾಗುತ್ತಿಲ್ಲ ಇದರ ಸಮಸ್ಯೆ ಎಲ್ಲಿಂದ ಶುರುವಾಯಿತು ಅಂತ ..., ಪತ್ರಿಕೆಗಳು ಪೋಲಿಸರು ಕ್ರಮ ಕೈಗೊಳ್ಳಬೇಕು ಅಂತ ಬರೆಯುತ್ತೆ, ಸದನದಲ್ಲಿ ಮಂತ್ರಿ ಉಡ್ತಾ ಕನಾ೯ಟಕ ಆಗಲು ಬಿಡುವುದಿಲ್ಲ ಎನ್ನುವ ಹೇಳಿಕೆ TV ಗಳಲ್ಲಿ ಹಾರಿದೆ.
  ನಮ್ಮ ಹಳ್ಳಿಯ ಗಾಂಜಾ ಮಾರುಕಟ್ಟೆಯ ಬೇರು ಉತ್ತರ ಬಾರತದಿಂದ, ನೇಪಾಳ, ಪಾಕಿಸ್ತಾನಕ್ಕೆ ಹರಡಿದ್ದು ಈ ಗಾಂಜಾ ಭಟ್ಟಿ ಇಳಿಸಿ ತೆಗೆಯುವ ಒಂದು ರಾಸಾಯನಿಕ ಇನ್ನಾವುದೊ ದೊಡ್ಡ ಅಮಲು ಪದಾಥ೯ಕ್ಕೆ ಕಚ್ಚಾ ವಸ್ತು ಎಂಬ ವದಂತಿಯ ಸತ್ಯಾಸತ್ಯತೆಗೊತ್ತಿಲ್ಲ.
 10 ವಷ೯ದ ಹಿಂದೆಯೆ ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ಊರು ಗಾಂಜಾ ಮಾರುಕಟ್ಟೆಯಲ್ಲಿ ಹೆಸರಾಗಿದೆ ಅಂದಾಗ ಯಾರೂ ನಂಬಲಿಲ್ಲ.
    ವಷ೯ ವರ್ಷ ಪಸಲು ಕೂಡ ನಿಸ್ತಾರವಾಗಿ ಬೆಳೆದು ನಿಲ್ಲ ತೊಡಗಿತು, ತಮ್ಮ ಲಾಭದ ಬೆಳೆ ಮುಂದಿನ ಜನಾಂಗವನ್ನ ಏನು ಮಾಡಲಿದೆ ಎಂಬ ಸತ್ಯ ಮರೆಮಾಚಿ ಮುಂದುವರಿಯುತ್ತಾ ಸಾಗಿತು.
  ಇದು ನಮ್ಮ ಹಳ್ಳಿಯ ದುರಂತದ ಕಥೆ ಮತ್ತು ವ್ಯಥೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...