#ಶಿವಮೊಗ್ಗ_ಜಿಲ್ಲಾಧಿಕಾರಿಗಳಿಗೆ_ವಿನಂತಿ
#ಮಳೆ_ವಿಪರೀತ_ಬೀಳುತ್ತಿರುವ_ಮಲೆನಾಡ
#ತೀರ್ಥಹಳ್ಳಿ_ಹೊಸನಗರ_ಮತ್ತು_ಸಾಗರ_ತಾಲ್ಲೂಕಿನ
#ಗ್ರಾಮೀಣ_ಪ್ರದೇಶದ_ಶಾಲೆಗಳಿಗೆ_ಹವಾಮಾನ_ಇಲಾಖೆ
#ಮುನ್ಸೂಚನೆ_ಆದರಿಸಿ_ಒಂದು_ದಿನ_ಮೊದಲೇ_ರಜೆ_ನೀಡಿ.
#ಮಕ್ಕಳು_ಶಾಲೆ_ತಲುಪಿದ_ನಂತರ_ರಜಾ_ಘೋಷಣೆ_ಹಾಸ್ಯಾಸ್ಪದ_ಆಗಿದೆ
#Deputy_commissioner_Shimog
#Superident_of_police_Shimoga.
#Thahasildar_sagar_Hosanagara_Thirthahalli
ಇವತ್ತು ಶುಕ್ರವಾರ 26 - ಜುಲೈ - 2024 ನಿನ್ನೆ ರಾತ್ರಿ ಎಲ್ಲಾ ಮಲೆನಾಡಿನಲ್ಲಿ ಪುಷ್ಯಾ ಮಳೆ ಅರ್ಭಟಿಸಿದೆ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳು ಹಳ್ಳಿಗಳಲ್ಲಿ ನಡೆದು ಹಳ್ಳಗಳ ದಾಟಿ ಶಾಲೆಗೆ ಹೋಗಬೇಕು ಯಾವ ಪೋಷಕರೂ ಇಂತಹ ದಿನಗಳಲ್ಲಿ ತಮ್ಮ ಚಿಕ್ಕ ಮಕ್ಕಳನ್ನ ಅಪಾಯಕ್ಕೆ ದೂಡಲು ಸಾಧ್ಯವೇ ಇಲ್ಲ.
ಆದರೆ ಮಲೆನಾಡ ತಾಲೂಕುಗಳ ಶಾಲೆಗಳಿಗೆ ರಜಾ ಘೋಷಿಸಲು ತಾಲೂಕಿನ ಅಧಿಕಾರಿಗಳು ವಿಳಂಬ ಮಾಡುತ್ತಾರೆ ಬಹುಶಃ ಜಿಲ್ಲಾ ಆಡಳಿತದ ಅನುಮತಿ ದೊರೆಯುವುದು ತಡವಾಗಿರಬಹುದು.
ನಾಳೆ ಶನಿವಾರ ಬೆಳಗಿನ ಶಾಲೆ ನಾಡಿದ್ದು ಬಾನುವಾರ ನಾಳೆ ಕೂಡ ಹವಾಮಾನ ವರದಿ ಪ್ರಕಾರ ಮಳೆ ಹೆಚ್ಚು ಎನ್ನುತ್ತಿದೆ ಇದು ಮುಂದಿನ 5 ದಿನ ಮುಂದುವರಿಯಲಿದೆ.
ಶುಕ್ರವಾರ ರಜೆ ನೀಡಿದ ತಾಲ್ಲೂಕು ಅಧಿಕಾರಿಗಳು ಶನಿವಾರದ ಅರ್ದ ದಿನಕ್ಕೂ ರಜೆ ನೀಡಬಹುದಾಗಿತ್ತು ನಾಡಿದ್ದು ಭಾನುವಾರ ಹೇಗೂ ಪೂರ್ತಿ ರಜೆ ಇದೆ.
ಒಂದು ದಿನ ಮೊದಲೇ ರಜಾ ಘೋಷಣೆ ಮಾಡಬೇಕು ಮತ್ತು ಹವಾಮಾನ ವರದಿ ಆಧರಿಸಿ ಮಳೆ ವಿಪರೀತ ಇದ್ದರೆ ಆ ಎಲ್ಲಾ ದಿನಗಳಲ್ಲಿ ರಜೆ ನೀಡಬೇಕು.
Comments
Post a Comment