#ಮೀನಿನ_ಮೊಟ್ಟೆಕಾಲ_ಮತ್ತು_ಅದರ_ರುಚಿ_ಬಲ್ಲವನೇ_ಬಲ್ಲ
#ಮುಂಗಾರಿನಲ್ಲಿ_ಮೊಟ್ಟೆ_ಮೀನುಗಳು_ಮರಿ_ಮಾಡುವ_ಕಾಲ
#ಹರಿಯುವ_ನೀರಿನ_ವಿರುದ್ದ_ಸಾಗುವ_ಕಾಲ
#ತಾನಿರುವ_ಜಾಗದಿಂದ_ಹೊಸಜಾಗದತ್ತ_ಸಾಗುವ_ಮೀನು
#ಇದಕ್ಕೆ_ಹತ್ತಮೀನು_ಎಂದು_ಗ್ರಾಮೀಣ_ಜನ_ಕರೆಯುತ್ತಾರೆ
#ತನ್ನ_ಬೀಜ_ಪ್ರಸಾರದ_ಸ್ಥಳ_ವಿಸ್ತರಿಸುವ_ಪ್ರಕೃತಿ_ನಿಯಮ
#ಈ_ಕಾಲದಲ್ಲಿಯೇ_ತತ್ತಿ_ಮೀನು_ಶಿಕಾರಿಗೆ_ಮೀನು_ಪ್ರಿಯರು_ರಾತ್ರಿ_ಹಗಲು_ಕಾದು_ಕುಳಿತಿರುತ್ತಾರೆ.
https://youtube.com/shorts/Jhg0ViMaowo?si=s4DIf4jfB0dy5skk
ಮುಂಗಾರಿನ ಈ ದಿನಗಳೇ ಮೀನಿನ ಸಂತಾನೋತ್ಪತಿಯ ಕಾಲ,ಸಮುದ್ರ ಮತ್ತು ಒಳನಾಡಿನ ಎಲ್ಲಾ ಜಾತಿಯ ಮೀನುಗಳು ತತ್ತಿ ಹೊತ್ತ ಮೀನುಗಳು.
ಆದ್ದರಿಂದಲೇ ಈ ತಿಂಗಳು ಮೀನು ಬಲೆ ಹಾಕಿ ಹಿಡಿಯಲು ಮೀನುಗಾರಿಕೆ ಇಲಾಖೆ ನಿಶೇದ ಇರುತ್ತದೆ, ಸಮುದ್ರದಲ್ಲೂ ದೋಣಿ ಯಾಂತ್ರಿಕ ಬೋಟಿನ ಮೀನುಗಾರಿಕೆಗೆ ಅವಕಾಶ ಇರುವುದಿಲ್ಲ.
ಪಂಜಾಬಿನಲ್ಲಿ ಸಿಖ್ಖರಲ್ಲಿ ಒಂದು ಪದ್ದತಿ ಇದೆ ಮೀನಿನ ಮೊಟ್ಟೆ ಕಾಲದಲ್ಲಿ ಅವರಾರು ಮೀನು ತಿನ್ನುವ ಹಾಗಿಲ್ಲ ಇದರ ಉದ್ದೇಶ ಮೀನು ಸಂತತಿ ರಕ್ಷಣೆ.
ಆದರೆ ಮಲೆನಾಡಿನಲ್ಲಿ ತತ್ತಿ ಇರುವ ಮೀನಿನ ಕಾಲದಲ್ಲಿ ಆ ಮೀನುಗಳ ರುಚಿ ಮತ್ತು ಘಮ ಅರಿತಿರುವ ಮತ್ಸ್ಯ ಬೋಜನ ಪ್ರಿಯರು ಮೊಟ್ಟೆ ಮೀನುಗಳ ಶಿಕಾರಿಗಾಗಿ ರಾತ್ರಿ ಹಗಲು ಕೆರೆ ಹಳ್ಳಕ್ಕೆ ಬಂದು ಸೇರುವ ಮಳೆಯ ಹೊಸ ನೀರಿನ ಹರಿವಿನಲ್ಲಿ ಕಾಯುತ್ತಿರುತ್ತಾರೆ.
ಹರಿದು ಬರುವ ಬೆಚ್ಚಗಿನ ಹೊಸ ನೀರಿನ ಪ್ರವಾಹದ ವಿರುದ್ದವಾಗಿ ಸಾಗುವ ಮೀನುಗಳು ತಮ್ಮ ದೇಹದಲ್ಲಿನ ಮೊಟ್ಟೆಗಳ ಪ್ರಸವಿಸುವ ಆತುರದಲ್ಲಿ ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ಗುಂಪು ಗುಂಪಾಗಿ ನೀರಿನಿಂದ ಮೇಲಕ್ಕೆ ಹತ್ತಲು ಪ್ರಾರಂಬಿಸುತ್ತವೆ.
ನಿಶ್ಯಬ್ದವಾಗಿ ಕುಳಿತ ಮೀನು ಶಿಕಾರಿಗಾರರು ಇಂತಹ ಮೊಟ್ಟೆ ಮೀನಿನ ಮೆರವಣಿಗೆ ಒಂದು ಜೋಷ್ ನಲ್ಲಿ ಯಾರ ಭಯವಿಲ್ಲದೆ ಮೇಲೆ ಹತ್ತಲು ಶುರುವಾದಾಗ ಒಮ್ಮೆಗೆ ಮುಗಿಬಿದ್ದು ತಮ್ಮ ಚೀಲ ತುಂಬಿಸಿಕೊಳ್ಳುತ್ತಾರೆ.
ಬಲೆ ಕಂಬಳಿಗಳಿಂದ ಬಾಚಿಕೊಳ್ಳುವ ಅಥವ ಮೀನು ಕಡಿಯುವ ಕತ್ತಿಗಳಲ್ಲಿ ಮೀನಿನ ತಲೆಗೆ ಹೊಡೆದು ಮೀನು ಹಿಡಿಯುವ ಈ ಹತ್ತು ಮೀನು ಶಿಕಾರಿ ಮಲೆನಾಡಿನಲ್ಲಿ ವಿಶೇಷ ಶಿಕಾರಿ.
ಮೀನಿನ ಖಾದ್ಯ ತಯಾರಿಸುವ ಗೃಹಿಣಿಯರು ಈ ಮೀನಿನ ಮೊಟ್ಟೆಯಿಂದ ತರಹೇವಾರಿ ಖಾದ್ಯ ತಯಾರಿಸುತ್ತಾರೆ ಚಿಕ್ಕ ಮಕ್ಕಳಿಗೆ ಈ ಮೀನಿನ ಮೊಟ್ಟೆ ಅಂದರೆ ತುಂಬಾ ಇಷ್ಟ ಮತ್ತು ಇದರಲ್ಲಿ ಪೌಷ್ಟಿಕಾಂಶ ಕೂಡ ಜಾಸ್ತಿ.
ದೊಡ್ಡ ದೊಡ್ಡ ಮೀನುಗಳಲ್ಲಿ ಕೇಜಿಗಟ್ಟಲೆ ಮೀನಿನ ತತ್ತಿ ಇರುತ್ತದೆ, ಸಮುದ್ರದ ದೊಡ್ಡ ಶಾಡೆ ಮೀನುಗಳ ಮೊಟ್ಟೆ ಗೋಲಿ ಗಾತ್ರದ್ದಾದರೆ ಸಣ್ಣ ಮೀನುಗಳ ಮೊಟ್ಟೆ ಗಸಗಸೆ ಕಾಳಿನ ಗಾತ್ರದಿಂದ ರಾಗಿ ಕಾಳಿನ ಗಾತ್ರದಷ್ಟಿರುತ್ತದೆ.
Comments
Post a Comment