#ಕೆಳದಿ_ರಾಜ_ವಂಶಸ್ಥ_ತೀರ್ಥಹಳ್ಳಿ_ಬಾಂಡ್ಯಾ_ಕುಟುಂಬ
#ಯಾವುದೇ_ಉತ್ಪ್ರೇಕ್ಷೆ_ಇಲ್ಲದೆ_ಶಾಂತ_ಚಿತ್ತತೆಯಿಂದ
#ವಿವರಿಸುತ್ತಿರುವ_ಕಲ್ಯಾಣಕುಮಾರ್_ಬಾಂಡ್ಯಾ
#ಕೆಳದಿ_ಇತಿಹಾಸ_ಮತ್ತೊಮ್ಮೆ_ಜನಮಾನಸದಲ್ಲಿ_ವಿಜೃಂಬಿಸುತ್ತಿದೆ
#ಜನರ_ಮರೆವಿನ_ಮಣ್ಣು_ಸರಿಸುವ_ಕೆಲಸ_ಪ್ರಾರಂಭವಾಗಿದೆ
#ಇತಿಹಾಸ_ಸಂಶೋದನೆ_ಕೆಲಸದಲ್ಲಿ_ತೊಡಗಿರುವ_ಶಿವಮೊಗ್ಗ_ಜಿಲ್ಲೆಯ
#ಉದಯೋನ್ಮುಖ_ಇತಿಹಾಸ_ಸಂಶೋಧಕರು_ಅವರಿಂದ_ಕೆಳದಿ_ಇತಿಹಾಸ
#ಇನ್ನೊಮ್ಮೆ_ಎಕ್ಸ್_ಫ್ಲೋರ್_ಮಾಡುತ್ತಿರುವ_ರಾಜ್ಯದ
#ಪ್ರಖ್ಯಾತ_ಡಿಜಿಟಲ್_ಮಾಧ್ಯಮದ_ನಂದಿನಿ_ಆಕರ್ಷ_ದಂಪತಿಗಳು.
ನೀವು ಈ ಕೆಳಗಿನ ಎರೆಡು ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ನೋಡಿ ಈವರೆಗೂ ನಮಗೆ ಯಾವುದೇ ಕೆಳದಿ ಇತಿಹಾಸ ಸಂಶೋಧಕರು ತಿಳಿಸದ ಇತಿಹಾಸ ನೀವು ನೋಡಬಹುದು.
I).https://youtu.be/LrOkmE3S95k?si=PSKr7uPSjNvQJwXO.
ಕೆಳದಿ ಇತಿಹಾಸ ಸಂಶೋಧನೆಯನ್ನು ಸರ್ಕಾರ ಕೆಳದಿ ಮ್ಯೂಸಿಯಂ ಮೂಲಕ ಮಾಡುತ್ತಿತ್ತು ಅದಕ್ಕೆ ಸಾಕಷ್ಟು ಹಣ ಹರಿದು ಬಂದಿತ್ತು ಆದರೆ ಅಲ್ಲಿ ಸಮಗ್ರ ಕೆಳದಿ ಇತಿಹಾಸ ಅಧ್ಯಯನ ನಡೆಯಲಿಲ್ಲ ಎನ್ನಿಸುತ್ತದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಅರಣ್ಯ ಭೂಮಿಯಲ್ಲೇ ಉಳಿದ ಕೆಳದಿ ಸ್ಮಾರಕ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಲೇ ಇಲ್ಲ.
ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮರಿಗೆ ಮಾತ್ರ ಹೆಚ್ಚು ಪ್ರಚಾರ ನೀಡಿ ಉಳಿದ ರಾಜರ ರಾಣಿಯರ ಸಾಧನೆಗಳನ್ನ ಜನಸಾಮಾನ್ಯರಿಗೆ ತಿಳಿಸುವ ಫುಸ್ತಕಗಳು ಬರಲಿಲ್ಲ.
ಕೆಳದಿ ಅರಸರ ವಂಶಸ್ಥರು ಶಿವಮೊಗ್ಗ ಜಿಲ್ಲೆಯಲ್ಲೇ ಇಲ್ಲ ಎನ್ನುತ್ತಿದ್ದರು.... ಹಾಗಾದರೆ ಇತಿಹಾಸ ಸಂಶೋಧಕರೆ ತೀಥ೯ಹಳ್ಳಿಯ ಬಾಂಡ್ಯದಲ್ಲಿರುವ ಕಾಡಿನ ಅರಮನೆ ಅಲ್ಲಿ ವಾಸ ಇರುವ ರಾಜವಂಶಸ್ಥರು ಅವರಲ್ಲಿರುವ ಐತಿಹಾಸಿಕ ದಾಖಲೆಗಳನ್ನ ನೋಡಿ.
ಕೆಳದಿ ವಂಶಸ್ಥರಾದ ಈಗಿನ ತಲೆಮಾರಿನ ಯುವಕ ಕಲ್ಯಾಣ ಕುಮಾರ್ ಬಾಂಡ್ಯ ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ತಣ್ಣಗೆ ದಾಖಲಾಗದ ಕೆಳದಿ ಇತಿಹಾಸವನ್ನ ತನ್ನ ವಂಶಸ್ಥರ ಅರಮನೆಯಲ್ಲಿ ದಾಖಲೆ ಸಮೇತ #ಡಿಜಿಟಲ್_ಮಾಧ್ಯಮದ ಮೂಲಕ ವಿವರಿಸುತ್ತಿರುವುದು ನನಗೆ ಖುಷಿ ಅನ್ನಿಸಿತು ಅವರಿಗೆ ಅಭಿನಂದಿಸುತ್ತೇನೆ.
ಮಣ್ಣಿನಲ್ಲಿ ಮುಚ್ಟಿ ಹೋದ ಶಾಸನ ತೆಗೆಯುವುದು ಸಂಶೋದನೆ ಜೊತೆಗೆ ಜನಮಾನಸದಲ್ಲಿ ಮರೆವಿನಿಂದ ಮುಚ್ಚಿ ಹೋದ ಇತಿಹಾಸದ ಕಥೆ, ಕಳೆದು ಹೋದ ಜನಪದ ಕಥೆಯಲ್ಲಿರುವ ನಿಜ ಇತಿಹಾಸದ ಸಂಪರ್ಕದ ತಂತುಗಳನ್ನು ಜೋಡಿಸಿ ತಿಳಿಸುವ ತೋರಿಸುವ ಕೆಲಸ ಕೂಡ ಇತಿಹಾಸ ಸಂಶೋದನೆ ಆಗಿದೆ.
#ಗುಣಕ್ಕೆ_ಮತ್ಸರ ಬೇಡ ಜಿಲ್ಲೆಯ ಇತಿಹಾಸ ಅತ್ಯುತ್ತಮವಾಗಿ ತಿಳಿಸುತ್ತಿರುವ ನಂದಿನಿ ಮತ್ತು ಆಕರ್ಷ ದಂಪತಿಗಳ #ಡಿಜಿಟಲ್_ಮಾಧ್ಯಮಕ್ಕೆ ಅಭಿನಂದಿಸೋಣ.
ವೀರಶೈವ ಕೆಳದಿ ಸಂಸ್ಥಾನದ ಪತನಕ್ಕೆ ವೈಷ್ಣವರು ಕಾರಣ ಎಂಬ ಕಲ್ಯಾಣ ಕುಮಾರ್ ಬಾಂಡ್ಯ ಮಾತು ಸುಮಾರು 180 ವರ್ಷದ ಹಿಂದಿನ ದಿವಾನ್ ಪೂರ್ಣಯ್ಯರ ಕಾಲಕ್ಕೆ ಹೋಗುತ್ತದೆ ಇದು ಸತ್ಯವೂ ಕೂಡ ಕೇವಲ ಜಾತಿ ಕಾರಣದಿಂದ ಈಗ ನಾವು ಪರಸ್ಪರ ಕೆಸರೆರಚಾಟ ಮಾಡಬೇಕಾಗಿಲ್ಲ ಇತಿಹಾಸ ನಡೆದ ಕಾಲದಲ್ಲಿ ನಾವ್ಯಾರು ಹುಟ್ಟಿರಲಿಲ್ಲ.
ಕೇವಲ ಜಾತಿ ಆಧಾರದಲ್ಲಿ ರಾಜರ ಇತಿಹಾಸ ನೋಡದೆ #ರಾಜ_ಪ್ರತ್ಯಕ್ಷ_ದೇವ ಎಂಬ ನಾಣ್ಣುಡಿಯಂತೆ ಕೆಳದಿ ರಾಜರು ನಮ್ಮನ್ನಾಳಿದ ರಾಜ ರೂಪದ ದೇವರೆಂದೆ ಗೌರವಿಸೋಣ ಜೊತೆಗೆ ದಾಖಲಾಗದ ಸಾವಿರಾರು ಕೆಳದಿ ಇತಿಹಾಸದ ಕುರುಹುಗಳನ್ನ ದಾಖಲಿಸಿ ಸಂರಕ್ಷಿಸುವ ಕೆಲಸವೂ ನಡೆಯಲಿ.
Comments
Post a Comment