Blog number 2252.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಬಿಸಲಿದ್ದಾರೆ ಡಾಕ್ಟರ್ ಡಿ.ಸುರೇಶ್ ರಾವ್
#ನನ್ನ_ಇವತ್ತಿನ_ಅತಿಥಿ
#ಡಾಕ್ಟರ್_ಡಿ_ಸುರೇಶ್
#ತೀರ್ಥಹಳ್ಳಿ_ಆಗುಂಬೆ_ಮೂಲದವರು
#ಇವರ_ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿಯಲ್ಲಿ_ಸುಸಜ್ಜಿತ
#ಕ್ಯಾನ್ಸರ್_ಆಸ್ಪತ್ರೆ_ಶೀಘ್ರದಲ್ಲೇ_ಕಾರ್ಯಾರಂಭ_ಮಾಡಲಿದೆ
#ಈಗಾಗಲೇ_ಮಂಗಳೂರಿನಲ್ಲಿ_ಇವರ_ಆಸ್ಪತ್ರೆ_MIO_HOSPITAL_ಪ್ರಸಿದ್ದಿ_ಪಡೆದಿದೆ
#ಮಂಗಳೂರು_ಇನ್ಸ್ಟಿಟ್ಯೂಟ್_ಆಫ್_ಆಂಕಾಲಜಿ_ಉಡುಪಿಯಲ್ಲೂ_ಡೇ_ಕೇರ್_ಸೆಂಟರ್_ಇದೆ.
ಡಾಕ್ಟರ್ ಡಿ.ಸುರೇಶ್ ಮಂಗಳೂರಿನ ಕಂಕನಾಡಿಯ ಪಂಪ್ ವೆಲ್ ನಲ್ಲಿ ಸುಸಜ್ಜಿತವಾದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ (MIO) ಪ್ರಸಿದ್ಧಿ ಮತ್ತು ಪ್ರಖ್ಯಾತಿ ಪಡೆದಿದೆ ಇವರ ಸಂಸ್ಥೆಯ ಬ್ರಾಂಚ್ ಉಡುಪಿಯಲ್ಲೂ ಇದೆ.
ಡಾಕ್ಟರ್ ಡಿ.ಸುರೇಶ್ ತೀರ್ಥಹಳ್ಳಿ ಮೂಲದವರು ಇವರಿಗೆ ಮಲೆನಾಡಿನ ಶಿವಮೊಗ್ಗ, ಉತ್ತರ ಕನ್ನಡ,ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ತೀರ್ಥಹಳ್ಳಿಯಲ್ಲಿ 80 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಮಾಡಿದ್ದಾರೆ.
ಕಳೆದ ವರ್ಷ 15 ಮೇ 2023 ರಂದು ತೀಥ೯ಹಳ್ಳಿಯ ನೆರಟೂರು ಗ್ರಾಮ ಪಂಚಾಯಿತಿಯಲ್ಲಿ MIO HOSPITAL ತೀರ್ಥಹಳ್ಳಿಯ ಭೂಮಿ ಪೂಜೆ ಇವರು ನೆರವೇರಿಸಿದ್ದರು.
ಶಿವಮೊಗ್ಗ ಭದ್ರಾವತಿ ಮಧ್ಯದ #ಮಲ್ನಾಡ್_ಕ್ಯಾನ್ಸರ್_ಆಸ್ಪತ್ರೆ ಮತ್ತು ಸಧ್ಯದಲ್ಲೇ ಪ್ರಾರಂಭ ಆಗಲಿರುವ ಯಡ್ಯೂರಪ್ಪರ ನಾರಾಯಣ ಹೃದಯಾಲಯದ ಕ್ಯಾನ್ಸರ್ ಆಸ್ಪತ್ರೆ ಜೊತೆ ತೀರ್ಥಹಳ್ಳಿಯ ಡಾ. ಡಿ.ಸುರೇಶರ ಕ್ಯಾನ್ಸರ್ ಆಸ್ಪತ್ರೆ ಮೂರನೆಯದು.
BPL ಕಾರ್ಡ್ ಇದ್ದವರಿಗೆ ಉಚಿತ ಕ್ಯಾನ್ಸರ್ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಇವರ ಆಸ್ಪತ್ರೆಯಲ್ಲಿ ಲಭಿಸಲಿದೆ, ಎಲ್ಲಾ ಆರೋಗ್ಯ ವಿಮೆ ಸೌಲಭ್ಯ ಇದ್ದವರಿಗೂ ಇಲ್ಲಿ ಚಿಕಿತ್ಸೆ ಪಡೆಯ ಬಹುದು.
ಅನಾವಶ್ಯಕ ಪರೀಕ್ಷೆಗಳು ದುಭಾರಿ ವೆಚ್ಚದ ಔಷದಗಳನ್ನ ಈಗಿನ ಹೆಚ್ಚಿನ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ರೋಗಿಗಳು ಭರಿಸಬೇಕಾದ ಇಂತಹ ದಿನಗಳಲ್ಲಿ ಈ ಕ್ಷೇತ್ರದಲ್ಲಿ ತಜ್ಞ ವೈದ್ಯರಾಗಿ ಮಂಗಳೂರಿನಲ್ಲಿ ಯಶಸ್ವಿ ಕ್ಯಾನ್ಸರ್ ಆಸ್ಪತ್ರೆ ನಡೆಸುತ್ತಿರುವ ಡಾ.ಸುರೇಶ್ ಕೇವಲ ಲಾಭದ ದೃಷ್ಟಿ ಇಟ್ಟುಕೊಂಡಿದ್ದರೆ ಅವರು ತೀರ್ಥಹಳ್ಳಿಯಲ್ಲಿ ಯಾಕೆ ಕ್ಯಾನ್ಸ್ ರ್ ಆಸ್ಪತ್ರೆ ತೆರೆಯುತ್ತಿದ್ದರು! ಅಗ ಅವರಿಗೆ ಸೂಕ್ತವಾದ ಸ್ಥಳ ಶಿವಮೊಗ್ಗ ಪೇಟೆ ಆಗಿರುತ್ತಿತ್ತು.
ಇವರ ಜೊತೆ ಇವರ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಶಿವಮೊಗ್ಗದ ಸಾಹಸಿ ಯೌವತ್ ಹಾಸ್ಟೆಲ್, ಸಂಸ್ಕೃತ ಭವನದ ಇತ್ತೀಚಿಗೆ ತಮ್ಮ 61ನೇ ವಯಸ್ಸಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ BA ಪದವಿ ವ್ಯಾಸಂಗ ಮಾಡಿದ ಆ. ನಾ. ವಿಜೇಂದ್ರ ಆಗಮಿಸಿದ್ದರು.
Comments
Post a Comment