Skip to main content

Blog number 2232. ಆನಂದಪುರಂನಲ್ಲಿ ಜನಿಸಿದ ದ್ವಾರಕಾ ಸಂಶೋಧಿಸಿದ S.R. ರಾವ್ ಅವರ 102 ನೇ ಜನ್ಮೋತ್ಸವ (2-ಜುಲ್ಟೆ-1922)

#ದ್ವಾರಕೆ_ಸಂಶೋಧಿಸಿದ_S_R_ರಾವ್_102ನೇ_ಜನ್ಮ_ಮಹೋತ್ಸವ
  
#ಡಾಕ್ಟರ್_ಶಿಕಾರಿಪುರ_ರಂಗನಾಥರಾವ್_ಹುಟ್ಟಿದ್ದು_ಆನಂದಪುರಂನಲ್ಲಿ.

 #ಶ್ರೀಕೃಷ್ಣನ_ಮುಳುಗಿದ_ದ್ವಾರಕಾ_ನಗರಿ

#ಇಂಡಸ್_ನಾಗರಿಕತೆಯ_ಹರಪ್ಪ_ಮಹೆಂಜೊದಾರ್_ಉತ್ಕನನ

#ಇಂಡಸ್_ಕಾಲದ_ಬಂದರು_ಲೋಥಲ್_ಹೀಗೆ_ಅನೇಕ_ಸಂಶೋದನೆ_ಉತ್ಕನದ_ನೇತೃತ್ವ_ಇವರದ್ದು.

#ಭಾರತದ_ಮಹಾಭಾರತದ_ಶ್ರೀಕೃಷ್ಣ_ಕಾಲ್ಪನಿಕ_ಅಲ್ಲ_ಸತ್ಯ_ಎಂದು_ಸಾಬೀತು_ಮಾಡಿದ_ಇವರ_ಸಂಶೋದನೆ.
      ಇವರ ತಂದೆ ಕೃಷ್ಣ ಪ್ರಸಾದರು ಆನಂದಪುರದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ಶೇಖ್ದಾರರು,ಇವರು ಶಿಕಾರಿಪುರ ಮೂಲದ ಮಾದ್ವ ಬ್ರಾಹ್ಮಣರು,ಆನಂದಪುರಂ ನಲ್ಲಿ ಉದ್ಯೋಗಕ್ಕೆ ಬಂದಾಗ ಆನಂದಪುರದ ರಂಗನಾಥ ಸ್ವಾಮಿ ದೇವಾಲಯದ ಅಗ್ರಹಾರದ ವೇದನಾನಾರಾಯಣ ಭಟ್ಟರ ಕುಟುಂಬಕ್ಕೆ (ರಂಗನಾಥ ಭಟ್ಟರ ತಂದೆ) ಸೇರಿದ ಮನೆಯಲ್ಲಿ ವಾಸವಾಗಿರುತ್ತಾರೆ, ಈ ಮನೆ ಎದುರೇ ಮಾಧ್ವ ಬ್ರಾಹಣರಾದ ಶಿಕ್ಷಕರಾಗಿದ್ದ ಶೇಷಾಚಾರ್ ( ಪ್ರಾಣೇಶ್ ಆಚಾರ್ ತಂದೆ) ಮನೆ, ಈಗ S.R.ರಾವ್ ಜನಿಸಿದ ಮನೆ ಜಾಗದಲ್ಲಿ ರಂಗನಾಥ ಭಟ್ಟರ  ಸಹೋದರ ಸುಂದರೇಶ್ ಅವರ ಮನೆ ಇದೆ.
    ಒಂದು ವಿಶೇಷ ಘಟನೆ ಇಲ್ಲಿ ನಮೂದಿಸಬೇಕು, ಎಸ್.ಆರ್ . ರಾವ್ ಅವರ ತಾಯಿ ಹೊಟ್ಟೆಯಲ್ಲಿದ್ದಾಗ ನಡೆದದ್ದು.... ತಾಯಿಗೆ ಹೆರಿಗೆ ದಿನ ಸಮೀಪಿಸುವಾಗ ಅವರ ಸಂಪ್ರದಾಯದಂತೆ ನೀರು ಎರೆಸಿಕೊಳ್ಳಲು ತಯಾರಾಗಿ ತಮ್ಮ ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಭದ್ರಪಡಿಸಿಡುತ್ತಾರೆ.
    ಪ್ರಾಣೇಶ್ ಆಚಾರರ ಅಜ್ಜಿ ಆ ಕಾಲದಲ್ಲಿ ಪ್ರಸಿದ್ಧ ಪ್ರಸೂತಿ ತಜ್ಞರಾಗಿ ಹೆಸರುವಾಸಿ ಆಗಿದ್ದ ಭಾಗಿರಥೀ  ಬಾಯಿ ನೇತೃತ್ವದಲ್ಲಿ ನೀರು ಎರೆಯುತ್ತಾರೆ.
  ಅವತ್ತೇ ತಮ್ಮ ಉದ್ಯೋಗ ನಿಮಿತ್ತ ಸಾಗರಕ್ಕೆ ಹೋಗಿದ್ದ  ಪತಿ ಕೃಷ್ಣ ಪ್ರಸಾದರಿಗೆ ರಾತ್ರಿ ಮನೆಗೆ ವಾಪಾಸ್ ಬರಲಾಗುವುದಿಲ್ಲ, ಆದರೆ ಅವರಿಗೆ ಕನಸೊಂದು ಬೀಳುತ್ತದೆ ಕಳ್ಳ ಇವರ ಮನೆಗೆ ನುಗ್ಗಿ ಬಂಗಾರದ ಪೆಟ್ಟಿಗೆ ಕದ್ದೊಯ್ದು, ಆನಂದಪುರಂ ಮುರುಘಾ ಮಠಕ್ಕೆ ಹೋಗುವ ಗುಂಡಿಬೈಲು ಜಮೀನು ಮಧ್ಯದ ಹೆದ್ದಾರಿಯ ಮಟ್ಟಿ ಒಂದರಲ್ಲಿ ಅಡಗಿಸುವ೦ತ ಕನಸು ಅದಾಗಿರುತ್ತದೆ.
  ಬೆಳಿಗ್ಗೆ ಅವಸರದಿಂದ ಸಾಗರದಿಂದ ಆನಂದಪುರಂನ ಅವರ ಮನೆಗೆ ಬಂದಾಗ ಕನಸಿನಲ್ಲಿ ಕಂಡಂತೆ ಕಳ್ಳತನ ಆಗಿರುತ್ತದೆ, ಮನೆ ಕಳ್ಳತನದ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಅಮಾಲ್ದಾರರಿಗೆ ಕನಸಲ್ಲಿ ಕಂಡ ವಿಚಾರ ತಿಳಿಸಿದಾಗ ಎಲ್ಲರೂ ಸೇರಿ ಹೆದ್ದಾರಿಗೆ ಹೋಗಿ ಹುಡುಕಿದಾಗ,ಕನಸಲ್ಲಿ ಕಂಡಂತೆ ಆಭರಣದ ಪೆಟ್ಟಿಗೆ ಸಿಗುವುದು ಸೋಜಿಗದ ವಿಚಾರ ಅಗುತ್ತೆ. 
  ಇದರಿಂದ ಇಡೀ ಕುಟುಂಬ ಊರ ದೈವ ರಂಗನಾಥನೇ ತಮ್ಮನ್ನು ಕಾಪಾಡಿದನೆಂದು ಭಾವಿಸುತ್ತಾರೆ ಮತ್ತು ಹುಟ್ಟುವ ಮಗು ಗಂಡಾದರೆ ರಂಗನಾಥ ಎಂದು ನಾಮಕರಣ ಮಾಡುವುದಾಗಿ ಹರಕೆ ಹೊರುತ್ತಾರೆ.
   ಹೀಗೆ ದಿನಾಂಕ 1- ಜುಲೈ -1922ರಂದು ಜನಿಸಿದ ಮಗುವೇ ಈ ಮನೆತನದ ಶಿಕಾರಿಪುರ ಹೆಸರಿನ ಜೊತೆ ಆನಂದಪುರ ದೈವ ರಂಗನಾಥ ಸೇರಿಸಿ ಶಿಕಾರಿಪುರ ರಂಗನಾಥ (S.R.Rao) ಎಂದೇ ವಿಶ್ವ ವಿಖ್ಯಾತರಾಗುತ್ತಾರೆ.
 ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆಯುತ್ತಾರೆ, ಜವಹರಲಾಲ್ ಪೆಲೋಶಿಪ್ ಪಡೆಯುತ್ತಾರೆ, ಭಾರತೀಯ ಅಕಿ೯ಯಾಲಾಜಿ ಇಲಾಖೆ ಮುಖ್ಯಸ್ಥರಾಗುತ್ತಾರೆ, ಮೆರಿನ್ ಆಕಾ೯ಲಾಜಿ ಸಂಶೋದನಾ ಸಂಸ್ಥೆ ಸ್ಥಾಪಕರಾಗುತ್ತಾರೆ 1980ರಲ್ಲಿ ನಿವೃತ್ತರಾದರು ಕೇಂದ್ರ ಸರ್ಕಾರ ಇವರ ಅದ್ವಿತಿಯ ಸಾಧನೆಗಳಿಂದ ಇವರನ್ನು ಪುನಃ ವಿಶೇಷವಾಗಿ ASI ನಿರ್ದೇಶಕರಾಗಿ ನೇಮಿಸುತ್ತದೆ.
 ಕ್ರಿಸ್ತ ಪೂರ್ವದ ಒಂದು ಸಾವಿರ ವರ್ಷ ಭಾರತದ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾಗಿತ್ತು , ಶ್ರೀಕೃಷ್ಣನ ದ್ವಾರಕೆ ಮುಳುಗಿದ್ದು ಅಧಿಕೃತ ಎಂಬುದಿರಲಿಲ್ಲ ಆದರೆ ಹಿಂದೂ ಪವಿತ್ರ ಗ್ರಂಥ ಮಹಾಭಾರತದಲ್ಲಿ ಮಾತ್ರ ಇದು ಉಲ್ಲೇಖ ಆಗಿದ್ದರು ಇದೊಂದು ನೀತಿ ಕಥೆಯಾಗಿರಬೇಕೆಂಬ ತರ್ಕಗಳು ಇತ್ತು.
   ಡಾ. S.R. ರಾವ್ ರ ನೇತೃತ್ವದ ತಂಡ ಮುಳುಗಿದ ದ್ವಾರಕಾ ನಗರ ಸಂಶೋದನೆ ಮಾಡುತ್ತದೆ,ಕ್ರಿ.ಪೂ. 1528 ರಲ್ಲಿ ಈ ಸುಸಜ್ಜಿತ ನಗರ ಪುರಾಣದ ಉಲ್ಲೇಖದ ದ್ವಾರಕಾ ನಗರ ಎಂದು ಪ್ರಪಂಚಕ್ಕೆ ತಿಳಿಯುತ್ತದೆ.
  ಇವರ ಅನೇಕ ಸಂಶೋದನೆಗಳಲ್ಲಿ ಮುಖ್ಯವಾಗಿರುವ ಇಂಡಸ್ ವ್ಯಾಲಿ ನಾಗರೀಕತೆಯ ಹರಪ್ಪೊ ಸಂಶೋದನೆ ಸಿಪ್ರಸ್, ಸಿರಿಯಾದ ತಾಮ್ರಯುಗಕ್ಕಿಂತ ಪುರಾತನ ನಾಗರೀಕತೆ ಭಾರತದ್ದು ಎಂದು ಸಾಬೀತು ಪಡಿಸಿತು.
   ಪುರಾತನ ಲೋಥಲ್ ಬಂದರು ಉತ್ಕನನ ಸಂಶೋಧನೆ, ರಂಗಪುರ್, ಅಮರಲಿ, ಭಾಗತ್ರವ್, ಹನೂರು, ಐಹೊಳೆ, ಕಾವೇರಿಪಟ್ಟಣಂ ಉತ್ಕನನಗಳು, ತಾಜ್ ಮಹಲ್ ನಂತ ರಾಷ್ಟ್ರೀಯ ಸ್ಮಾರಕಗಳ ಸುರಕ್ಷಣೆ ಹೀಗೆ ಸಾಗುತ್ತದೆ ಇವರ ಮಹತ್ತರವಾದ ಕಾರ್ಯಗಳು .
 3 ಜನವರಿ 2013ರಲ್ಲಿ ಇಹಲೋಕ ತ್ಯಜಿಸಿದ ಮಹಾನ್ ವ್ಯಕ್ತಿ ಆನಂದಪುರದಲ್ಲಿ ಜನಿಸಿದರು, ಇವರ ತಂದೆ ಆನಂದಪುರದಲ್ಲಿ ಶೇಖ್ದಾರರಾಗಿದ್ದರು, ಇವರ ಹೆರಿಗೆ ಮಾಡಿಸಿದ ಬಾಗಿರಥೀ ಬಾಯಿ ಆನಂದಪುರಂ ನ ಪ್ರಖ್ಯಾತರಾಗಿದ್ದ ಶಿಕ್ಷಕರಾದ ಶೇಷಾಚಾರ್ ತಾಯಿ, ಇವರು ವಾಸ ಇದ್ದ ಮನೆ ಆನಂದಪುರಂನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದ ವೇದನಾರಾಯಣ ಭಟ್ಟರದ್ದು, ಆನಂದಪುರಂನ ಪುರ ದೇವರಾದ ಶ್ರೀರಂಗನಾಥನ ಕೃಪೆಯಿಂದ ಕಳ್ಳ ಕದ್ದಿದ್ದ ಆಭರಣ ಸಿಕ್ಕಿದ್ದು ಈ ಕಾರಣದಿಂದ ಜನಿಸಿದ ಮಗುವಿಗೆ ರಂಗನಾಥನೆಂದೇ ನಾಮಕಾರಣ ಮಾಡಿದ್ದು ಎಲ್ಲಾ ಆನಂದಪುರಂನ ಇತಿಹಾಸಕ್ಕೆ ಮುಕುಟವಾದ ಘಟನೆಗಳು.
  ಮುಂದೆ ಅವರು ವಿಶ್ವ ವಿಖ್ಯಾತರಾಗಿ #ಡಾಕ್ಟರ್_SR_ರಾವ್ ಎಂದೇ ಖ್ಯಾತಿ ಪಡೆಯುತ್ತಾರೆ.
  ತಾನು ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ಜನಿಸಿದ್ದೆಂದು ಎಲ್ಲಾ ಕಡೆ ಹೇಳುತ್ತಿದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...