Blog number 2249. ಅಮರ ಸುಳ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅಪರಾಂಪರ ಬಿದನೂರು ನಗರ ರೈತ ದಂಗೆಯ ನೇತಾರ ಬೂದಿ ಬಸಪ್ಪ ನಾಯಕರೇ !?
#ಕೊಡಗಿನ_ಜನರ_ಸ್ವಾಭಿಮಾನಿ_ಕಥನ_ಒಂದೂವರೆ_ಶತಮಾನ_ಕಾಲಗಭ೯ದಲ್ಲಿ_ಹೂತು_ಹೋಗಿತ್ತು.
#ಅಮರ_ಸುಳ್ಯ_1837_ಬ್ರಿಟೀಶ್_ವಸಾಹುತಶಾಹಿ_ವಿರುದ್ದದ_ಸಶಸ್ತ್ರ_ಹೋರಾಟ.
#ಸಾಹಿತಿ_ಕೆ_ಆರ್_ತೇಜಕುಮಾರ್_ಬಡ್ಡಡ್ಕರ_ಸಹೋದರ_ವಿದ್ಯಾದರ_ಕುಡೆಕಲ್_ಪ್ರಕಟಿಸಿದ_ಪುಸ್ತಕ
#ನವೆಂಬರ್_19_2022ರಂದು_ಅಮರ_ಸುಳ್ಯ_ಹೋರಾಟದ_ನೇತಾರ_ಕೆದಂಬಾಡಿ_ರಾಮಯ್ಯಗೌಡರ_ಪ್ರತಿಮೆ_ಅನಾವರಣ_ಆಗಿದೆ.
#ಈ_ಪುಸ್ತಕದ_ಅಧ್ಯಾಯ_4ರಲ್ಲಿ_ಪುಟ_ಸಂಖ್ಯೆ_50ರಿಂದ_70ರವರೆಗೆ_ಸ್ವಾಮಿ_ಅಪರಂಪಾರ_ಚರಿತ್ರೆ_ದಾಖಲಾಗಿದೆ
#ಇವರೇ_ನಗರ_ರೈತ_ದಂಗೆಯ_ಬೂದಿಬಸಪ್ಪ_ಕೆಳದಿ_ಕೊನೆಯ_ರಾಜ_ಚೆನ್ನಬಸಪ್ಪನಾಯಕರ_ಪುತ್ರರೇ?
#ಕೆಳದಿ_ಇತಿಹಾಸ_ಸಂಶೋದನೆ_ಏಕೆ_ನಿಂತ_ನೀರಾಗಿದೆ ?
#ಕೆಳದಿ_ಇತಿಹಾಸದ_ಶಿವಮೊಗ್ಗ_ಜಿಲ್ಲೆಯಲ್ಲಿ_ಬೂದಿಬಸಪ್ಪ_ದೊಂಡಿಯಾವಾಘ್_ರಾಜವೆಂಕಟಪ್ಪನಾಯಕ_ರಾಣಿಚಂಪಕಾ
#ಮುಂತಾದವರ_ಪ್ರತಿಮೆ_ಪುಸ್ತಕಗಳು_ಬರುವ_ದಿನಕ್ಕಾಗಿ_ಕಾಯೋಣ
ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ದದ ಸಶಸ್ತ್ರ ಹೋರಾಟ ಎಂಬ #ವಿದ್ಯಾದರ_ಕುಡೇಕಲ್ಲು ಬರೆದ ಇತಿಹಾಸದ ಪುಸ್ತಕ,150 ವಷ೯ದಿಂದ ಇತಿಹಾಸದ ಗರ್ಭದಲ್ಲಿ ಹುದುಗಿ ಹೋದ ಸ್ವಾಭಿಮಾನಿ ಕೊಡಗಿನ ಜನರ ಸ್ವಾತಂತ್ರ್ಯದ ಹೋರಾಟ, ಕೆಳದಿ ವ೦ಶಸ್ಥ ಬೂದಿ ಬಸಪ್ಪ ನಾಯಕರು ನಗರ ರೈತ ದಂಗೆ ನಂತರ ಕೊಡಗಿಗೆ ಹೋಗುತ್ತಾರಾ? ಕೆಳದಿ ಇತಿಹಾಸ ಸಂಶೋದನೆ ನಿಂತ ನೀರಾಗಿದೆ.
ಸ್ಟಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ದಾಸ್ಯದ ವಿರುದ್ದದ ಎಲ್ಲಾ ಹೋರಾಟಗಾರರನ್ನು ದಂಗೆಕೋರರು, ದರೋಡೆಕೋರರೆಂದೇ ದಾಖಲಿಸಲಾಗಿದೆ, ಸ್ವಾತಂತ್ರ್ಯ ನಂತರವೂ ಜನಪರ ಹೋರಾಟ ಮಾಡಿದವರನ್ನು ಆಡಳಿತಕ್ಕೆ ತಡೆ ಮಾಡಿದವರೆಂದು ಬಂದಿಸಿ ಜೈಲಿಗೆ ಕಳಿಸಿ ರವಡಿ ಲಿಸ್ಟ್ ಒಪನ್ ಮಾಡಿದಂತೆ.
ಆದ್ದರಿಂದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆದ ಸಶಸ್ತ್ರ ಹೋರಾಟವಾದ ಅಮರ ಸುಳ್ಯ ಹೋರಾಟ ದರೋಡೆ ಅನ್ನುವಂತೆ ದಾಖಲಾಗಿದೆ.
ಯಾವ ಕಥನವು ಕೊಡಗಿನ ಜನರ ಸ್ವಾಭಿಮಾನ, ಆತ್ಮಸ್ಥೆರ್ಯಕ್ಕೆ ಸಾಕ್ಷಿಯಾಗಿತ್ತೋ ಆ ಕಥನವು ಚರಿತ್ರೆಯ ಕಾಲಗರ್ಭದಲ್ಲಿ ಒಂದೂವರೆ ಶತಮಾನದಿಂದ ಕಾಲಗರ್ಭದಲ್ಲಿ ಹೂತು ಹೋಗಿತ್ತು ಎಂದು ಈ ಪುಸ್ತಕದ ಮುನ್ನುಡಿ ಬರೆದ #ಡಾ_ವಿಜಯಪೂಣಚ್ಚತಂಬಂಡ ಹೇಳಿದ್ದಾರೆ.
2022ರ ನವೆ೦ಬರ್ 19 ರಂದು ಈ ಸಶಸ್ತ್ರ ಹೋರಾಟ ಅಮರ ಸುಳ್ಯ ಹೋರಾಟದ ರೂವಾರಿ ನೇತಾರ #ಕೆದಂಬಾಡಿ_ರಾಮಯ್ಯ_ಗೌಡರ ಕಂಚಿನ ಪ್ರತಿಮೆ ಮಂಗಳೂರಿನಲ್ಲಿ ಲೋಕಾರ್ಪಣೆ ಆಗಿದೆ.
ಆಡಳಿತ ಶಾಹಿ ಅರಸೊತ್ತಿಗೆ ಸ್ವಾತಂತ್ರ್ಯದ ಸಶಸ್ತ್ರ ಹೋರಾಟದ ಇತಿಹಾಸವನ್ನೇ ಸುಮಾರು 150 ವರ್ಷ ದರೋಡೆಕೊರರ ದಂಗೆ ಎಂಬಂತೆ ಬಿಂಬಿಸಿತ್ತು ಮತ್ತು ಅದನ್ನು ಜನತೆ ನಂಬಿತ್ತು.
ಆದರೆ ಈಗಿನ ಹೊಸ ತಲೆಮಾರು ರಾಜಾಶ್ರಯದ ಇತಿಹಾಸಕಾರರ ಸುಳ್ಳಿನ ಕಥನಕ್ಕೆ ಸತ್ಯದ ಬಾಷ್ಯಾ ಬರೆಯುವ ಮೂಲಕ ಮುಚ್ಚಿ ಹಾಕಿದ ಇತಿಹಾಸ ತೆರೆಯುವಂತಾಗಿದೆ.
ಸಾಹಿತಿ #ತೇಜಕುಮಾರ_ಬಡ್ಡಡ್ಕರ ಸಹೋದರ ವಿದ್ಯಾದರ ಕುಡೇಕಲ್ಲು ಈ ಪುಸ್ತಕ ಬರೆದು ಬಂಟ ಮಲೆ ಪ್ರಕಾಶನ ಪ್ರಕಟಿಸಿದೆ.
ಈ ಪುಸ್ತಕದ 4 ನೇ ಅಧ್ಯಾಯ ಪುಟ ಸಂಖ್ಯೆ 50 ರಿಂದ 70 ಸ್ವಾಮಿ ಅಪರಂಪಾರ ವ್ಯಕ್ತಿತ್ವ ಮತ್ತು ಚಿಂತನೆಯ ವ್ಯಾಪ್ತಿ ನಮ್ಮ ಜಿಲ್ಲೆಯ ಕೆಳದಿ ರಾಜವಂಶಸ್ತ ಕೆಳದಿಯ ಕೊನೆಯ ರಾಜ ಚೆನ್ನಬಸಪ್ಪ ನಾಯಕರ ಪುತ್ರ ನಗರ ರೈತ ದಂಗೆಯ ರೂವಾರಿ #ಬೂದಿ_ಬಸಪ್ಪನವರದ್ದೇ ಚರಿತ್ರೆ ಆಗಿದೆ.
ಆದರೆ ಈವರೆಗೆ ಇದರ ಬಗ್ಗೆ ಯಾವುದೇ ಸಂಶೋದನೆ ಆಗಿಲ್ಲದಿರುವುದು ಕೆಳದಿ ಇತಿಹಾಸದ ಬಹುಪಾಲು ಸತ್ಯದ ಚರಿತ್ರೆ ಕತ್ತಲಲ್ಲೇ ಉಳಿದಿರುವುದಕ್ಕೆ ಸಾಕ್ಷಿ.
ಈ ಅಧ್ಯಾಯದಲ್ಲಿ ಹೀಗಿದೆ.....
ಮಡಿಕೆರೆ ಪತನಕ್ಕೆ ಆರು ತಿಂಗಳ ಮೊದಲು ಸ್ವಾಮಿ #ಅಪರಂಪಾರ ಎಂಬ ರಹಸ್ಯಮಯ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ.
ಈತ ಚಿಕ್ಕ ವೀರ ರಾಜನ ಪದಚ್ಯುತಿಯ ನಂತರ ಪುನಃ ಕೊಡಗಿಗೆ ಬೇಟಿ ನೀಡಿದಾಗ ತಾನು ಚಿಕ್ಕವೀರ ರಾಜನ ದೊಡ್ಡಪ್ಪ ಅಪ್ಪಾಜಿ ಅರಸನ ಮಗ ವೀರಪ್ಪಾಜಿ ಒಡೆಯ ಹಾಲೇರಿ ಸಂಸ್ಥಾನದ ಉತ್ತರಾಧಿಕಾರಿ ಎಂಬುದಾಗಿ ಸುದ್ದಿ ಹಬ್ಬಿಸುತ್ತಾನೆ.
ಈತನಿಗೆ ಕೊಡಗು ಮತ್ತು ಕೊಡಗಿನ ಅದೇ ತಾನೆ ಪ್ರತ್ಯೇಕಿಸಿದ ಕೆನರಾ ಜಿಲ್ಲೆಗೆ ಸೇರಿಸಲ್ಪಟ್ಟ ಕೆಳ ಕೊಡಗಿನ ಪ್ರದೇಶ ಇವೆರೆಡರಲ್ಲೂ ಅಪಾರ ಜನಬೆಂಬಲ ವ್ಯಕ್ತವಾಗುತ್ತದೆ.
ಆದರೆ 1835ರಲ್ಲಿ ಕೊಡಗಿನ ಹೋರಾಟ ಆರಂಬಿಸುವ ಪ್ರಯತ್ನದಲ್ಲಿ ತೊಡಗಿದಾಗ ಇವರನ್ನು ಬಂದಿಸಿ ಸೆರೆಮನೆಗೆ ಕಳಿಸುತ್ತಾರೆ, 1869 ರಲ್ಲಿ ತಿರುಚನಾಪಳ್ಳಿ ಸೆರೆಮನೆಯಿಂದ ಬಿಡುಗಡೆ ಆಗಿ 1870 ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೃತರಾಗುತ್ತಾರೆ.
ಇಂಗ್ಲೀಷ್ ದಾಖಲೆ ಪ್ರಕಾರ ಇವರ ಹೆಸರು #ಕತ್ರಪ್ಪ_ಬಾಹು.
#ಡಾಕ್ಟರ್_ಪುರುಶೋತ್ತಮ_ಬಿಳಿಮಲೆಯವರ ಪ್ರಕಾರ ಶಿವಮೊಗ್ಗದ ನಗರ ರೈತ ಹೋರಾಟದ ನಾಯಕ ಬೂದಿ ಬಸಪ್ಪನೇ ಸ್ವಾಮಿ ಅಪರಂಪಾರ ಎಂದಿದ್ದಾರೆ.
ನಗರ ರೈತ ಹೋರಾಟದ ಅಂತ್ಯದಲ್ಲಿ ಬೂದಿ ಬಸಪ್ಪ ಹೈದರಾಬಾದಿಗೆ ಪಲಾಯನ ಮಾಡಿದರು ಎಂಬ ಇತಿಹಾಸದ ಮುಂದಿನ ಭಾಗವೇ ಇದು ಆಗಿರಬಹುದು.
1833 ರಲ್ಲಿ ಸ್ವಾಮಿ ಅಪರಂಪಾರ ಮಡಿಕೆರೆಗೆ ಏಕೆ ಬಂದಿದ್ದ ರು ಎಂಬುದು ಈವರೆಗೆ ಸಂಶೋದನೆ ಆಗಿಲ್ಲ.
ಅಮರ ಸುಳ್ಯ ಹೋರಾಟದ ಬಗ್ಗೆ ಅನೇಕ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದೆ,ಇಂಗ್ಲೀಷ್ ನಲ್ಲೂ ಒಂದು ಪುಸ್ತಕ ಬ೦ದಿರುವುದು ಇತಿಹಾಸದ ಚರ್ಚೆಗೆ ಕಾರಣವಾಗಿದೆ.
ನಮ್ಮ ಜಿಲ್ಲೆಯ ಕೆಳದಿ ಅರಸರ ಇತಿಹಾಸ ಸಂಶೋದನೆ ನಿಜಕ್ಕೂ ಆಗಿದೆಯಾ? ಕೇವಲ ಸರ್ಕಾರದ ಅನುದಾನದಲ್ಲಿ ಮಕ್ಕೀಕ ಮಕ್ಕಿ ಎಂಬಂತೆ ಕೆಳದಿ ರಾಜರ ಆಸ್ಥಾನ ಕವಿಗಳು ಬರೆದದ್ದೆ ಇತಿಹಾಸ ಎಂಬಂತೆ ಬಿಂಬಿಸಲ್ಪಟ್ಟಿದಿಯಾ? ಎಂಬ ಅನುಮಾನ ಇದೆ.
ಈ ಪುಸ್ತಕದ ಗೌರವ ಪ್ರತಿ ಕಳಿಸಿದ ಕೆ.ಆರ್. ತೇಜಕುಮಾರರಿಗೆ ಕೃತಜ್ಞತೆಗಳು.
#Let_facts_to_Speak.
ಪುಸ್ತಕದ ಬೇಕಾದವರು ಮತ್ತು ಐತಿಹಾಸಿಕ ಚರಿತ್ರೆಯ ಬಗ್ಗೆ ಪುಸ್ತಕ ಬರೆದ ವಿದ್ಯಾದರ ಕುಡೆಕಲ್ಲು ಅವರಿಗೆ ಅಭಿನಂದಿಸುವವರಿಗೆ ವಿದ್ಯಾದರ ಕುಡೆಕಲ್ಲು ಅವರ ಸಂಪಕ೯ ಸಂಖ್ಯೆ 916457 5765.
Comments
Post a Comment