#ಪ್ರಚಾರದ_ವಾಹನದ_ಚಾಲಕರು_ಮತ್ತು_ಬಾಷಣಕಾರರೂ_ಆಗಿದ್ದ
#ಸಾಗರದ_ಛಾಯಾ_ಹೋಟೆಲ್_ಬೀಮಣ್ಣರ_ಬಗ್ಗೆ
#ಮಾಜಿ_ಶಾಸಕರಾದ_ಬಿ_ಸ್ವಾಮಿರಾವ್_ಆತ್ಮ_ಚರಿತ್ರೆ
#ನಾನು_ಹೇಳುವುದೆಲ್ಲಾ_ಸತ್ಯ_ಪುಸ್ತಕದಲ್ಲಿ_ಉಲ್ಲೇಖಿಸಿದ್ದಾರೆ.
#ಪ್ರಚಂಡ_ವಾಗ್ಮಿ_ಅಭಿನವ_ಚಾಣಕ್ಯ_ಅವರು.
ಸಾಗರ ಸೀಮೆಯಲ್ಲಿ #ಛಾಯಾ_ಹೋಟೆಲ್_ಬೀಮಣ್ಣ ಎಂದರೆ ಯಾರೂ ಗೊತ್ತಿಲ್ಲ ಅನ್ನುವುದಿಲ್ಲ ಈಗ ಅವರ ಪ್ರಖ್ಯಾತಿಗೆ ಕಾರಣ ಆಗಿದ್ದ ಸಾಗರದ ಮಾರಿಕಾಂಬಾ ದೇಗುಲ ದ ಹಿಂಬಾಗದ ಛಾಯಾ ಹೋಟೆಲ್ ಇಲ್ಲ ಆದರೆ ಅಗ್ರಹಾರದಲ್ಲಿ ಅವರ #ವರದಶ್ರೀ_ಲಾಡ್ಜ್ ಪ್ರಖ್ಯಾತವಾಗಿದೆ ಅವರ ಪುತ್ರರಾದ ಕವಲಕೋಡು ವೆಂಕಟೇಶ್ ಮತ್ತು ಪ್ರಸಾದ್ ನೋಡಿಕೊಳ್ಳುತ್ತಾರೆ.
ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್ ಅವರ ಆತ್ಮವೃತ್ತಾಂತ #ನಾನು_ಹೇಳುವುದೆಲ್ಲಾ_ಸತ್ಯ ಹೊಸನಗರದ ಪತ್ರಕರ್ತ ಶ್ರೀಕಂಠ ಬರೆದಿದ್ದಾರೆ (ಪುಸ್ತಕ ಬೇಕಾದವರು ಅವರ ಫೋನ್ ನಂಬರ್ 9483016851 ಸಂಪರ್ಕಿಸಬಹುದು) ಅದರಲ್ಲಿ ಪುಟ ಸಂಖ್ಯೆ 20 ಮತ್ತು 21 ರಲ್ಲಿ #ಮೊದಲ_ಚುನಾವಣಾ_ಸ್ಪರ್ಧೆ ಅಧ್ಯಾಯದಲ್ಲಿ ಬೀಮಣ್ಣರ ಉಲ್ಲೇಖ ಮಾಡಿದ್ದಾರೆ...
1962ರಲ್ಲಿ ಬಿ. ಸ್ವಾಮಿ ರಾವ್ ಹೊಸನಗರ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿ ಆಗಿ ಸ್ಪರ್ಧಿಸಿದಾಗ ಬೀಮನಕೋಣೆ ವಾಸಿ ಬೀಮಣ್ಣ ಅವರ ಪೋರ್ಡ್ ಕಾರ್ ಬಾಡಿಗೆಗೆ ಪಡೆದಿದ್ದರಂತೆ ಅದಕ್ಕೆ ಬೀಮಣ್ಣರೇ ಚಾಲಕರು.
" ಅಂದು ಕ್ಷೇತ್ರದಾದ್ಯಂತ ತನ್ನ ಪರವಾಗಿ ಬಾಷಣ ಮಾಡುವಂತ ಯಾವುದೇ ಭಾಷಣಕಾರ ಇಲ್ಲದಿದ್ದದ್ದು ನನ್ನ ಪಾಲಿನ ದೌರ್ಬಾಗ್ಯವಾಗಿತ್ತು... ನಾನೊಬ್ಬನೇ ಎಷ್ಟು ಭಾಷಣ ಮಾಡಲಿ? ಗಂಟಲು ಒಣಗಿ ಹೋಗುತ್ತಿತ್ತು ಆಗಷ್ಟೇ ನನ್ನ ರಾಜಕಾರಣದ ಬದುಕು ಆರಂಭಗೊಂಡಿತ್ತು ಈ ನಡುವೆ ಬೀಮಣ್ಣನವರೇ ಸಮಯ ಸಿಕ್ಕಾಗಲೆಲ್ಲಾ ನನ್ನ ಪರ ಪ್ರಚಾರ ಬಾಷಣ ಮಾಡಲು ಪ್ರಾರಂಬಿಸಿದ್ದರು, ಅವರೊಬ್ಬ ಅದ್ಭುತ ಭಾಷಣಕಾರ ಅಲ್ಲಲ್ಲಿ ಜನ ಗುಂಪು ಕಟ್ಟಿ ನಿಂತು ಬೀಮಣ್ಣರ ಬಾಷಣ ಆಲಿಸಿ ತಲೆ ತೂಗುತ್ತಿದ್ದರು.. ಅವರೇ ನನ್ನ ಪ್ರಚಾರದ ವಾಹನದ ಮಾಲಿಕ ಮತ್ತು ಚಾಲಕ, ಹಗಲು ರಾತ್ರಿ ಎನ್ನದೆ ನನ್ನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಹನಾ ಮೂರ್ತಿ" ...... ಎಂದು ಸುಮಾರು 62 ವರ್ಷದ ಹಿಂದಿನ ತಮ್ಮ ಮೊದಲ ಚುನಾವಣೆ ನೆನಪಿನಲ್ಲಿ ಛಾಯಾ ಹೋಟೆಲ್ ಬೀಮಣ್ಣರ ಸಹಾಯ ಸ್ಮರಿಸಿದ್ದಾರೆ.
ಬೀಮಣ್ಣ ಪರೋಪಕಾರಿ ಅವರು ನನಗೆ ಹೋಟೆಲ್ ಉದ್ಯಮದ ಬಗ್ಗೆ ಸಲಹೆ ಕೇಳಲು ಹೋದಾಗ ನೀಡಿದ ಸಲಹೆ ನಾನು ಜೀವಮಾನ ಪೂರ್ತಿ ಮರೆಯಲಾರೆ ಅದು ಎಲ್ಲಾ ಹೋಟೆಲ್ ಉದ್ಯಮ ಮಾಡುವವರಿಗೆ ನೀತಿ ಪಾಠ ಆಗಿದ್ದರಿಂದ ಇಲ್ಲಿ ನೆನಪಿನಿಂದ ದಾಖಲಿಸಿದ್ದೇನೆ ನೋಡಿ...
ಶಿವಮೊಗ್ಗ ಮತ್ತು ಸಾಗರ ಮಧ್ಯದ ಆನಂದಪುರಂ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಯಡೇಹಳ್ಳಿ ವೃತ್ತದಲ್ಲಿ ದಿನಾಂಕ 28- ಸೆಪ್ಟೆಂಬರ್ -2012ರಲ್ಲಿ ನಾವು ಪ್ರಾರಂಭಿಸಿದ #ಮಲ್ಲಿಕಾ_ವೆಜ್ ಯಾವುದೇ ಪೂವ೯ಯೋಚಿತ ಪ್ರಾಜೆಕ್ಟ್ ಆಗಿರಲಿಲ್ಲ, ಅನಿರಿಕ್ಷಿತ ಮತ್ತು ಅನಿವಾಯ೯ದಿಂದ ಪ್ರಾರಂಬಿಸಿದ್ದು.
ತಂದೆ ತಾಯಿ ಹೆಸರಲ್ಲಿ #ಕೃಷ್ಣ_ಸರಸ_ಕಲ್ಯಾಣ_ಮಂಟಪ (ಬಾಲ್ಯದ ಕನಸು) ನಿರ್ಮಿಸಿದ ಮೇಲೆ ಅದನ್ನು ನಿರ್ವಹಣೆ ಮಾಡಲು ನಿತ್ಯ ಕೆಲಸಗಾರರು ಬೇಕಾಯಿತು ಅದಕ್ಕಾಗಿ ಹತ್ತು ರೂಮಿನ ಲಾಡ್ಜ್ #ಹೊ೦ಬುಜ_ರೆಸಿಡೆನ್ಸಿ ಪ್ರಾರಂಬಿಸಿದೆ, ಲಾಡ್ಜನಲ್ಲಿ ತಂಗುವವರಿಗಾಗಿ ಊಟ ಉಪಹಾರಕ್ಕೆ ರೆಸ್ಟೋರೆಂಟ್ ಅನಿವಾಯ೯ ಆಯಿತು.
ರೆಸ್ಟೋರೆಂಟ್ ನಡೆಸಲು ಅನೇಕರಿಗೆ ಆಹ್ವಾನಿಸಿದೆ ಆದರೆ ಅವರೆಲ್ಲರ ಅಭಿಪ್ರಾಯ ಯಡೇಹಳ್ಳಿ ಸರ್ಕಲ್ ನಲ್ಲಿ ಹೋಟೆಲ್ ನಡೆಯೊಲ್ಲ ಇತ್ಯಾದಿ... ಕುಂದಾಪುರದ ಗೆಳೆಯರೊಬ್ಬರ ಪರಿಚಯದಲ್ಲಿ ಹೈದ್ರಾಬಾದಿನಲ್ಲಿ ಹೋಟೆಲ್ ನಡೆಸುವವರೊಬ್ಬರು ಬಂದು ನೋಡಿ ಹೋಟೆಲ್ ಪ್ರಾರಂಬಿಸುವ ತೀರ್ಮಾನ ಮಾಡಿದರು ಅವರ ಕಂಡಿಷನ್ ರೆಸ್ಟೋರಂಟ್ ಪೀಠೋಪಕರಣ, ಕಿಚನ್ ಪೂರ್ಣ ಸೆಟ್ ಮಾಡಿ ಕೊಡಿ ದಿನಕ್ಕೆ ಇಷ್ಟು ಬಾಡಿಗೆ ಅಂತ.
ಎಲ್ಲಾ ತಯಾರು ಮಾಡಿಸಿದೆ ಮುಂಗಡ ಕೊಡಲು ಬಂದವರು ಹೈದ್ರಾಬಾದಿನ ತಮ್ಮ ಹೋಟೆಲ್ ನಲ್ಲಿ ಸಪ್ಲೈ ಮಾಡುವವ ನಿಮ್ಮ ಊರಿನವ ಒಬ್ಬ ಇದ್ದ ಅಂತ ನೆನಪು ಮಾಡಿದರು ಆದರೆ ಅವರ ಹತ್ತಿರ ಅವನ ವಿಳಾಸ ಇರಲಿಲ್ಲ ಅವನ ಹೆಸರು ವಯಸ್ಸು ರೂಪದ ಅಂದಾಜಿನ ಮೇಲೆ ನಮ್ಮ ಹುಡುಗರು ಅವನನ್ನು ಪತ್ತೆ ಹಚ್ಚಿದರು, ಅವನು ಸಂತೆ ಮಾರ್ಕೆಟ್ ಹತ್ತಿರ ಸಣ್ಣ ಕ್ಯಾಂಟೀನ್ ಗಾಡಿ ಮಾಡಿಕೊಂಡಿದ್ದ ಮತ್ತು ಅಲ್ಲಿಗೆ ಇವರನ್ನು ಕರೆದುಕೊಂಡು ಹೋಗಿ ಬಿಟ್ಟರು.
ಅಲ್ಲಿಗೆ ಹೋದವರು ಬರಲೇ ಇಲ್ಲ... ನಂತರ ಗೊತ್ತಾಗಿದ್ದು ಆತ ಪಿಟ್ಟಿಂಗ್ ಇಟ್ಟಿದ್ದ!! ಅವರೆಲ್ಲ ರವಡಿಗಳು ಕ್ರಿಮಿನಲ್ ಗಳು ಮತ್ತು ಅಲ್ಲಿ ವ್ಯಾಪಾರ ಬರುವುದಿಲ್ಲ ಅಂತ ವ್ಯಾಪಾರ ಮುರಿದುಬಿಟ್ಟಿದ್ದ !!.
ನಂತರ ನಾನು ಒಂದು ತೀರ್ಮಾನ ಮಾಡಿದೆ ನನಗೆ ಅನುಭವ ಇಲ್ಲದಿದ್ದರೂ ಅನುಭವ ಇರುವ ಸಾಗರದ #ಛಾಯಾ_ಹೋಟೆಲ್_ಭೀಮಣ್ಣರಿಂದ ಮಾರ್ಗದರ್ಶನ ಪಡೆದು ಪ್ರಾರಂಬಿಸುವುದೆಂದು ಸಾಗರದಲ್ಲಿ ಅವರ ವರದಾ ಲಾಡ್ಜ್ ನಲ್ಲಿ ಬೇಟಿ ಮಾಡಿದೆ.
ಬೀಮಣ್ಣ ಹೇಳಿದ್ದೇನೆಂದರೆ "ನೀವು ಹೋಟೆಲ್ ಪ್ರಾರಂಬಿಸಿ ಎರೆಡು ಮಳೆಗಾಲ ಕಳೆದರೆ ಮಾತ್ರ ನೀವು ನಿಜವಾಗಿ ಹೋಟೆಲ್ ಮಾಲಿಕರು " ಅಂದರು, ಅವರ ಮಾತುಗಳು ಒಗಟಿನಂತೆ ಪ್ರಾಸದ್ದು, ಇದರ ವಿವರ ಅವರು ವಿವರಿಸಿದ್ದು ಏನೆಂದರೆ, ಹೋಟೆಲ್ ಬೇಸಿಗೆ ಮಾರ್ಚ್ ಏಪ್ರಿಲ್ ನಲ್ಲಿ ಹುಡುಗರು ಪ್ರಾರಂಬಿಸುತ್ತಾರೆ ಅದು ಒಳೇ ಸೀಜನ್ ದಿನದಿಂದ ದಿನಕ್ಕೆ ಹೆಚ್ಚುವ ವ್ಯಾಪಾರ ಮತ್ತು ಸುತ್ತುವರಿಯುವ ಹೊಸ ಗೆಳೆಯರು, ಚೀಟಿ - ಪಿಗ್ಮಿ - ಗೆಳೆಯರ ಪಾರ್ಟಿಗಳು, ಗೆಳೆಯರ ಸಂಬಂದಿಗಳ ಮದುವೆಗೆಲ್ಲ ಹೊಸ ಹೋಟೆಲ್ ಮಾಲಿಕ ಅತಿಥಿ ಆಗಿ ಬೇಕೇ ಬೇಕು ಎನ್ನುವಷ್ಟು ಸಲಿಗೆ ಇದರ ಮಧ್ಯ ಹಣದ ಅಡಚಣೆ ಬಂದರೆ ಬಡ್ಡಿ ಸಾಲದವರೂ ದಾರಳ ಸಾಲ ನೀಡುತ್ತಾರಂತೆ.
ಹಾಗೆ ಮೇ ಜೂನ್ ನಲ್ಲಿ ಮಳೆಗಾಲ ಶುರುವಾಗುತ್ತೆ, ಪೇಟೆಗೆ ಬರುವವರು ಕ್ರಮೇಣ ಕಡಿಮೆ ಆಗುತ್ತಾರೆ, ವ್ಯಾಪಾರ ನಷ್ಟಕ್ಕೆ ಬರುತ್ತದೆ, ಗೆಳೆಯರು ದೂರಾಗುತ್ತಾರೆ.
ಕೆಲಸದವರಿಗೆ ಸಂಬಳ ಕೊಡಲೂ ಕಷ್ಟ ಇಂತ ಸಂದರ್ಭದಲ್ಲಿ ಬಡ್ಡಿ ಸಾಲದವರೂ ಒತ್ತಡ ಜಾಸ್ತಿ ಮಾಡುತ್ತಾರೆ ಹಾಗಾಗಿ ಆಗಸ್ಟ್ ಸೆಪ್ಟೆಂಬರ್ ನಲ್ಲಿ ಹೋಟೆಲ್ ಮಾಲಿಕ ಓಡಿ ಹೋಗುತ್ತಾನೆ....ಅದಕ್ಕೆ ಹೇಳುವುದು ಎರೆಡು ಮಳೆಗಾಲ ನಿರಂತರ ಹೋಟೆಲ್ ನಡೆಸಿದರೆ ಮಾತ್ರ ಗ್ಯಾರಂಟಿ ಮಾಲಿಕ ಅಂದಿದ್ದರು.
ಇನ್ನೊಂದು ನೆಂಟರಿಷ್ಟರನ್ನು ವ್ಯವಹಾರದ ಹತ್ತಿರ ಇಡಬಾರದು ಇದಕ್ಕೆ ಅವರದ್ದೇ ಅನುಭವ ಹಾಸ್ಯಮಯವಾಗಿ ಅನುಭವಿ ಭೀಮಣ್ಣ ಹೇಳಿದ್ದು ಕೇಳಿ...
ಅವರ ಸಾಗರದ ಮಾರಿಕಾಂಭಾ ದೇವಾಲಯದ ಹಿಂಬಾಗದ #ಛಾಯಾ ಹೋಟೆಲ್ ಉತ್ತುಂಗದಲ್ಲಿದ್ದಾಗಲೇ ಅವರ ಶ್ರೀಮತಿ ತಮ್ಮ ತಮ್ಮನನ್ನು ಜೊತೆಗೆ ಇಟ್ಟುಕೊಳ್ಳಿ ನಿಮಗೆ ಸ್ವಲ್ಪ ವಿಶ್ರಾಂತಿ ಸಿಗುತ್ತೆ ಅಂತ ಸಲಹೆ ನೀಡಿದಾಗ ಇವರು ನೆಂಟರಿಷ್ಟರು ಬೇಡವೇ ಬೇಡ ಅಂದರೂ ಪತ್ನಿಯ ಒತ್ತಾಯಕ್ಕೆ ಒಪ್ಪಿದರಂತೆ.
ಪ್ರಾರಂಭದ ದಿನಗಳಲ್ಲಿ ಬಾವನೆಂಟನ ಹುರುಪು ಶ್ರಮಗಳ ನೋಡಿ ಬೀಮಣ್ಣ ತಮ್ಮ ಅಭಿಪ್ರಾಯ ತಪ್ಪೆಂದು ಬಾವಿಸಿದರಂತೆ ಕ್ರಮೇಣ ಬಾವನೆಂಟನ ಮೇಲೆ ಅವಲಂಬಿಸಿ ನಿತ್ಯ ತಡವಾಗಿ ಬರಲು ಮತ್ತು ಹೆಚ್ಚು ವಿಶ್ರಾಂತಿ ಪಡೆಯಲು ಶುರುಮಾಡಿದ್ದರಂತೆ.
ಒಂದು ದಿನ 12 ಗಂಟೆ ಸಮಯಕ್ಕೆ ಹೋಟೆಲ್ ಗೆ ಹೋದರೆ ಅಡುಗೆಯವರು ಯಾರೂ ಬಂದಿರಲಿಲ್ಲವಂತೆ, 1 ಗಂಟೆಗೆಲ್ಲ ಜನ ಊಟಕ್ಕೆ ಬರುತ್ತಾರೆ ಹೀಗಿರುವಾಗ ಇವರೆಲ್ಲ ಎಲ್ಲಿ ಹೋದರು?... ನೋಡಿದರೆ ಭಾವನೆಂಟ ಅಡುಗೆ ಭಟ್ಟರನ್ನೂ ಕರೆದುಕೊಂಡು ನಾಪತ್ತೆ (ಬಾವ ಭೀಮಣ್ಣನಿಗೆ ಬುದ್ಧಿ ಕಲಿಸುತ್ತೇನೆ ಅಂತ )ಅಂದರು.
ಆಗ ನೀವೇನು ಮಾಡಿದರಿ? ಅಂತ ಕಥೆಯು ಕ್ಲೈಮಾಕ್ಸ್ ನಲ್ಲಿ ನಿಂತಿದಕ್ಕೆ ಪ್ರಶ್ನಿಸಿದೆ " ಇನ್ನೇನು ಮಾಡಲಿ ಯೋಚಿಸಲು ಸಮಯ ಇಲ್ಲ, ತಕ್ಷಣ ಬಟ್ಟೆ ಬದಲಿಸಿ ನಾನೊಬ್ಬನೆ ಅಡಿಗೆ ಪ್ರಾರಂಬಿಸಿದೆ, ಸರಿಯಾಗಿ ಒಂದು ಗಂಟೆಗೆ ಬರಲು ಪ್ರಾರಂಬಿಸಿದ ಗಿರಾಕಿಗಳಿಗೆ ಅಂತೂ ಊಟ ಕೊಟ್ಟೆ ಅಂದರು.
ನನಗೆ ಲಾಡ್ಜ್ ರೆಸ್ಟೋರಾಂಟ್ ನಡೆಸಲು ನನಗೆ ಅನೇಕ ಉಪಾಯಗಳ ಟಿಪ್ ಹೇಳಿಕೊಟ್ಟರು, ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.
ನಂತರ ರೆಸ್ಟೋರಾಂಟ್ ಪ್ರಾರಂಬಿಸಿದೆ ಮೊದಲ ತಿಂಗಳು 49 ಸಾವಿರ ಕೈ ಬಿಟ್ಟಿತು ಎರಡನೇ ತಿಂಗಳೂ ನಷ್ಟ ಪುನಾರಾವರ್ತಿಸಿತು, ಭಯ ಉಂಟಾದರೂ ದೈರ್ಯದಿಂದ ಮುಂದುವರಿಸಿದೆ 3 ನೇ ತಿಂಗಳ ನಂತರವೇ ಗೋವಾ ಕಾನುಕೋಣದ ಗಾಂವ್ಡೊಂಗ್ರಿಂ ನ ಮಲ್ಲಿಕಾಜು೯ನ ದೇವರ ಹೆಸರು ಸೇರಿಸಿ ಮಲ್ಲಿಕಾ ವೆಜ್ ಅಂತ ಬೋರ್ಡ್ ಹಾಕಿದೆ ಮಿತ್ರರಾದ ಗಂಗೊಳ್ಳಿ ರವೀಂದ್ರ ರಾವ್ ಪ್ರತಿ ಹಂತದಲ್ಲಿ ಹೆಚ್ಚಿನ ಸಲಹೆ ಸಹಕಾರ ನೀಡಿದ್ದರು.
ಇದೆಲ್ಲ ಇವತ್ತು ನೆನಪಿಗೆ ಬಂತು ಇವತ್ತಿಗೆ 12 ಮಳೆಗಾಲ ಕಳೆದಿದೆ, ಎರೆಡು ಅವದಿಯ ಲಾಕ್ ಡೌನ್ ಕಳೆದು ಪುನಃ ನಮ್ಮ ಮಲ್ಲಿಕಾ ವೆಜ್ ಪ್ರಾರಂಭ ಆಗಿದೆ, ಪಿಲ್ಟರ್ ಕಾಫಿ,ಟೀ ಜೊತೆ ಇಡ್ಲಿ -ವಡ -ದೋಸೆ- ಬನ್ಸ್- ಎಣ್ಣೆ ತಿಂಡಿಗಳು-ಊಟದ ಜೊತೆ ಈಗಿನ ವಿಶೇಷ ಪ್ರತಿನಿತ್ಯ ನಮ್ಮ ಪಶ್ಚಿಮ ಘಟ್ಟದ ಮಲೆನಾಡಿನ #ಹಲಸಿನ_ಎಲೆ_ಕಡಬು ಕಾಳಿನ ಪಲ್ಯ ಮತ್ತು ಕೆಂಪು ಚಟ್ನಿ #ಅಕ್ಕಿ_ರೊಟ್ಟಿ ಹಾಗೂ #ರಾಗಿ_ರೊಟ್ಟಿ ಚಟ್ನಿ ಪಲ್ಯ, ಗಿರ್ಮಿಟ್, ಗಿಣ್ಣ ಮತ್ತು ಊಟ ದೊರೆಯುತ್ತದೆ
ಸ್ತ್ರೀ-ಪುರುಷ ಗ್ರಾಹಕರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ವ್ಯವಸ್ಥೆ ಇದೆ ಇದೆಲ್ಲ ಛಾಯಾ ಹೋಟೆಲ್ ಬೀಮಣ್ಣರಿಂದ ಪಡೆದ ಸಲಹೆಯಿಂದ ಸಾಧ್ಯವಾಯಿತು.
#varadasrilodgesagar #chayahotelbeemanna #kavalagoduvenkatesh #sagartaluk #hotelmanagement #karnatakahotelassociation
Comments
Post a Comment