Skip to main content

Blog number 2242. ಮಂಗಳೂರಿನಲ್ಲಿ ಪ್ರಮುಖ ರಸ್ತೆಗೆ ಜಾರ್ಜ್ ಪರ್ನಾಂಡಿಸ್ ಹೆಸರಿನ ನಾಮಕರಣ

#ಜಾರ್ಜ್_ಪರ್ನಾಂಡೀಸರ_ಮಂಗಳೂರಿನ_ಕಡೆಯ_ರಾತ್ರಿ

#ದೇಶದ_ರಕ್ಷಣಾ_ಮಂತ್ರಿ_ಸ್ವತಃ_ಮೆಲಕು_ಹಾಕಿದ_ನೆನಪು

#ಮಂಗಳೂರಿನ_ಸರ್ಕಿಟ್_ಹೌಸ್_ಬಿಜೈ_ಸರ್ಕಲ್_ರಸ್ತೆಗೆ

#ಜಾರ್ಜ್_ಪರ್ನಾಂಡೀಸ್_ರಸ್ತೆ_ಎಂದು_ನಾಮಕರಣ_ಮಾಡಲಾಗಿದೆ.
  ನಿನ್ನೆ (6 - ಜುಲೈ-2024 ಶನಿವಾರ) ಮಂಗಳೂರು ಮಹಾ ನಗರ ಪಾಲಿಕೆ ಮಂಗಳೂರಿನ ಸರ್ಕಿಟ್ ಹೌಸ್ ನಿಂದ ಬಿಜೈ ವೃತ್ತದ ರಸ್ತೆಗೆ #ಜಾರ್ಜ್_ಪರ್ನಾಂಡಿಸ್_ರಸ್ತೆ ಎಂದು ನಾಮಕರಣ ಮಾಡಿದೆ.
  ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಶಾಸಕರಾದ ವೇದ ವ್ಯಾಸ್ ಕಾಮತ್ ಮತ್ತು ಜಾರ್ಜ್ ರ ಸಹೋದರ ಮೈಕಲ್ ಪರ್ನಾಂಡಿಸ್ ಉದ್ಘಾಟನೆ ನೆರವೇರಿಸಿದರು.
  ಮಂಗಳೂರು ಮೂಲದ ಜಾರ್ಜ್ ಪರ್ನಾಂಡೀಸರಿಗೆ ಮಂಗಳೂರು ನಾಗರೀಕರು ನೀಡಿದ ಈ ಗೌರವ ಅಭಿನಂದನೀಯ, ಈ ಭಾಗದ ರೈಲು ಮಾರ್ಗ ಕೊಂಕಣ್ ರೈಲ್ವೆ ಜಾರ್ಜ್ ರ ಕೊಡುಗೆ.
  ಜಾರ್ಜ್ ಪರ್ನಾಂಡೀಸರು ಮಂಗಳೂರಿನಲ್ಲಿನ ಕೊನೆಯ ರಾತ್ರಿಯ ಕಥೆ ಅವರೇ ಹೇಳಿದ್ದು ಈ ಸಂದರ್ಭದಲ್ಲಿ ನೆನಪಾಯಿತು. . . . . .
  ಸ್ವತಃ ಜಾರ್ಜ್ ಪನಾ೯೦ಡೀಸರೆ ಹೇಳಿದ್ದು, ಇವರ ಸಮಾಜ ಸೇವೆ ಹೋರಾಟದಿಂದ ಇವರ ತಂದೆ ಇವರನ್ನು ಒಂದು ರಾತ್ರಿ ಮಂಗಳೂರಿನ ಮನೆಯಿಂದ ಹೊರ ಹಾಕುತ್ತಾರೆ.     
    ಮಂಗಳೂರಿನ ಪಾರ್ಕ್ ನಲ್ಲಿ ಕಲ್ಲು ಬೆಂಚಿನ ಮೇಲೆ ಮಲಗಿರುತ್ತಾರೆ... ಆಗ ಒಳ್ಳೆಯ ನಿದ್ದೆಯ ಮಧ್ಯರಾತ್ರಿ ಪೋಲಿಸರು ಬೆನ್ನಿನ ಮೇಲೆ ಲಾಠಿ ರುಚಿ ತೋರಿಸಿ ಎಬ್ಬಿಸುತ್ತಾರೆ, ಆಗ ಜಾರ್ಜ್ ರು ತಮ್ಮ ಸಮಸ್ಯೆ ಹೇಳಿ ಕೊಳ್ಳುತ್ತಾರೆ ಆದರೆ ಪೋಲಿಸರು ಕೇಳುವುದಿಲ್ಲ ತಮ್ಮ ಬೀಟಿನ ಪ್ರದೇಶದಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲ ಅನ್ನುತ್ತಾರೆ.
   ಅನಿವಾರ್ಯವಾಗಿ ಜಾರ್ಜ್ ರು ಮಂಗಳೂರಿನ ಹಂಪನಕಟ್ಟೆ ಸಮೀಪದ ಬಸ್ ಶೆಲ್ಟರ್ ಗೆ ಹೋಗಿ ಮಲಗುತ್ತಾರೆ..... ಅಲ್ಲೂ ಇನ್ನಿಬ್ಬರು ಪೋಲಿಸರು ಬಂದು ಪಾರ್ಕ್ ನಲ್ಲಿ ಎಬ್ಬಿಸಿ ಕಳಿಸಿದಂತೆ ಎಬ್ಬಿಸುತ್ತಾರೆ.
   ಇನ್ನು ಎಲ್ಲಿಗೆ ಹೋಗಲಿ? ಅಂತ ಸ್ವಲ್ಪ ಮಾತು ನಿಲ್ಲಿಸಿದ ಜಾರ್ಜ್ "ಆಗಷ್ಟೆ ಬೆಳಗು ಬೆಳಗು ಆಗುತ್ತಿತ್ತು, ಆ ಸಮಯದಲ್ಲಿ ಆ ಮಾರ್ಗದಲ್ಲಿ ಬಂದ ಲಾರಿಗೆ ಕೈ ತೋರಿಸಿದೆ, ಲಾರಿಯಲ್ಲಿದ್ದ ಕ್ಲೀನರ್ ಎಲ್ಲಿಗೆ? ಎಂದಾಗ ನನಗೇ ಎಲ್ಲಿಗೆ ಅಂತ ಗೊತ್ತಿಲ್ಲವಾದ್ದರಿಂದ ಅವನಿಗೆ ಕೇಳಿದೆ ನಿಮ್ಮ ಲಾರಿ ಎಲ್ಲಿಗೆ ಹೋಗುತ್ತೆ? ಅಂತ, ಆತ ಬೊಂಬಾಯಿ ಅಂದಾಗ ನಾನೂ ಅಲ್ಲಿಗೇ" ಅಂತ ಲಾರಿ ಹತ್ತಿದೆ.
    ಮುಂಬಾಯಿ ಸೇರಿ ಮಾಡಿದ ಹೋರಾಟಗಳು ನನ್ನನ್ನು ರಾಜಕಾರಣಿ ಮಾಡಿತು... ಅಂದಾಗ ಅಲ್ಲಿದ್ದ ನಾವೇ ಕೆಲವೇ ಕೆಲವು ಜನರಿಗೆ ಏನನ್ನಿಸಿರಬೇಡ?... ಇದು ದೇಶದ ಅವತ್ತಿನ ರಕ್ಷಣಾ ಸಚಿವ ಜಾರ್ಜ್ ಪರ್ನಾಂಡೀಸ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಉಡುಪಿ ಲೋಕಸಭಾ ಮಾಜಿ ಸದಸ್ಯರಾದ #ಐಎಂ_ಜಯರಾಂ_ಶೆಟ್ಟರ ಮನೆಯಲ್ಲಿ (ಆಗ ಐ.ಎಂ.ಜಯರಾಂ ಶೆಟ್ಟರು ಜಾರ್ಜರ ಸಮತಾ ಪಾರ್ಟಿ ರಾಜ್ಯದ್ಯಕ್ಷರಾಗಿದ್ದರು) ಹೇಳಿದ್ದು ಇನ್ನೂ ಕಿವಿಯಲ್ಲಿ ಗುಣುಗುಣುಗುತ್ತಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...