#ಸ್ಥಳೀಯ_ಪತ್ರಿಕೆಗಳ_ಕಳೆದು_ಹೋದ_ಕಾಲ
#ಈಗ_ರಾಜ್ಯ_ಮಟ್ಟದ_ಪತ್ರಿಕೆಗಳೇ_ಆ_ಸ್ಥಾನ_ಅಕ್ರಮಿಸಿದೆ
#ಸ್ಥಳೀಯ_ಪತ್ರಕತ೯ರಿಗೆ_ಆ_ಕಾಲದಲ್ಲಿ_ರಕ್ಷಣೆ_ಇರಲಿಲ್ಲ
#ಆಗಿನ_ಪತ್ರಕರ್ತರ_ಸಂಘಟನೆ_ಈಗಿನಂತೆ_ಬಲಿಷ್ಟವಾಗಿರಲಿಲ್ಲ
#ಆಗಿನ_ಜನಪ್ರತಿನಿಧಿಗಳಿಗೆ_ಅಧಿಕಾರಿಗಳು_ಸ್ಥಳೀಯ_ಪತ್ರಿಕೆಗಳ_ಬಗ್ಗೆ_ಭಯ_ಗೌರವ_ಇತ್ತು.
#ಜನ_ಸಾಮಾನ್ಯರು_ಸ್ಥಳೀಯ_ಪತ್ರಿಕೆಗಳಿಗೆ_ಬೆಂಬಲಿಸುತ್ತಿದ್ದರು.
ಎಪ್ಪತ್ತರ ದಶಕದಿಂದ ಹೆಚ್ಚು ಕಡಿಮೆ 2000 ಇಸವಿ ತನಕ ಎಲ್ಲಾ ತಾಲೂಕು ಕೇಂದ್ರದಿಂದ ಪ್ರಕಟವಾಗುತ್ತಿದ್ದ ದಿನ ಪತ್ರಿಕೆಗಳು ಪ್ರಸಿದ್ಧಿ ಪಡೆದಿದ್ದವು ಇಲ್ಲಿ ಪ್ರಕಟಿಸಿರುವ #ನ್ಯಾಯದ_ತಕ್ಕಡಿ ದಿನಪತ್ರಿಕೆ ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪನವರದ್ದು ಅದನ್ನು ಸಂಪಾದಕರಾಗಿ ನಡೆಸಿದವರು ತೀ.ನಾ. ಶ್ರೀನಿವಾಸ್ 1984 ರಲ್ಲಿ ಅದರ ಬೆಲೆ 15 ಪೈಸೆ.
ಇದೇ ರೀತಿ ತೀರ್ಥಹಳ್ಳಿಯಿಂದ ಪ್ರಕಟವಾಗಿ ಶಿವಮೊಗ್ಗ ಜಿಲ್ಲೆಯ ಅರ್ದ ಭಾಗ ಪ್ರಸರಣವಾಗುತ್ತಿದ್ದ #ಛಲಗಾರ ದಿನಪತ್ರಿಕೆ ಸಂಪಾದಕರು ಗಣಪತಿಯವರು 1990ರಲ್ಲಿ ಇದರ ಬೆಲೆ 35 ಪೈಸೆ.
ಆಗ ಅಧಿಕಾರಿ ಬಳಗ, ಜನಪ್ರತಿಗಳು ಪತ್ರಿಕೆಗಳನ್ನ ಭಯ ಮತ್ತು ಗೌರವದಿಂದ ಕಾಣುತ್ತಿದ್ದ ಕಾಲ, ಜನ ಸಾಮಾನ್ಯರೂ ಸ್ಥಳಿಯ ಪತ್ರಿಕೆಗಳಿಗೆ ಯಾರಿಂದಲಾದರೂ ತೊಂದರೆ ಎದುರಾದರೆ ಪತ್ರಿಕೆ ಪರವಾಗಿ ಮುಂದೆ ಬಂದು ನಿಲ್ಲುತ್ತಿದ್ದರು.
ಈಗ ಕಾಲ ಬದಲಾಗಿದೆ ಇದೆಲ್ಲಾ ತಿರುಗಾ ಮುರುಗಾ ಆಗಿದೆ ಒಂದು ಕಾಲದ ಬಹುತೇಕ ಪತ್ರಿಕೆಗಳು ಇಲ್ಲವೇ ಇಲ್ಲ ಈಗ ರಾಜ್ಯ ಮಟ್ಟದ ಪತ್ರಿಕೆಗಳೇ ಜಿಲ್ಲಾ ಪತ್ರಿಕೆಗಳಾಗಿದೆ, ರಾಜ್ಯ ಮಟ್ಟದ ಪತ್ರಿಕೆಗಳು ಆಯಾ ಜಿಲ್ಲೆಗೊಂದು ಮುಖಪುಟ ವಿನ್ಯಾಸ ಮಾಡುತ್ತಿದೆ.
ಆ ಕಾಲದ ಪತ್ರಕರ್ತರು ಬಹುತೇಕ ಬಡತನದಲ್ಲೇ ಜೀವನ ಕಳೆದರು ಸಂವಿದಾನ ಸಂರಕ್ಷಣೆ- ಆದಶ೯ಗಳ ಪಾಲನೆಗಾಗಿ ಅವರ ಜೀವಮಾನ ಮುಡುಪಾಗಿಟ್ಟರು ಸಾರ್ವಜನಿಕವಾಗಿ ಪತ್ರಕರ್ತರ ಹುದ್ದೆಗೆ ಅಪಾರ ಗೌರವ ಇತ್ತು.
ಪತ್ರಕರ್ತರು ಕೂಡ ಮೌಲ್ಯಗಳನ್ನು ಪರಿಪಾಲಿಸುವ ಪ್ರಜಾಪ್ರಭುತ್ವದ ನಾಲ್ಕನೆ ಸ್ಥಂಭ ಅನ್ನಿಸಿದ್ದರು ಆದರೆ ಆಗ ಸ್ಥಳೀಯ ಪತ್ರಕರ್ತರ ಸಂಘಟನೆ ಈಗಿನಂತೆ ಬಲಿಷ್ಟ ಆಗಿರಲಿಲ್ಲ ಆದ್ದರಿಂದ ಪತ್ರಕರ್ತರಿಗೆ ರಕ್ಷಣೆ ಇರಲಿಲ್ಲ.
ಕಾಗೋಡು ತಿಮ್ಮಪ್ಪನವರು ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿದ್ದಾಗ ಅವರಿಗೆ ಶಿವಮೊಗ್ಗದ ಸಂಯುಕ್ತ ಕರ್ನಾಟಕ ದಿನ ಪತ್ರಿಕೆ ವರದಿಗಾರ ಹುಲಿಮನೆ ತಿಮ್ಮಪ್ಪ, ಹಿಂದೂ ಪತ್ರಿಕೆ ವರದಿಗಾರ ಪ್ರಮೋದ್ ಮತ್ತು ಇಂಡಿಯನ್ ಎಕ್ಸಪ್ರೆಸ್ ವರದಿಗಾರ ಅರುಣ್ ನೀಡಿದ ಸಲಹೆ ಕಾರ್ಯರೂಪಕ್ಕೆ ಬಂದು ಇಡೀ ರಾಜ್ಯದಾದ್ಯಂತ ಪತ್ರಕರ್ತರಿಗೆ ರಾಜ್ಯ ಗೃಹ ಮಂಡಳಿಯಿಂದ #ಪತ್ರಕರ್ತರ_ಕಾಲೋನಿ ನಿರ್ಮಿಸಿ ಪತ್ರಕರ್ತರಿಗೆ ಜಿಲ್ಲಾ ಕೇಂದ್ರಗಳಲ್ಲಿ ನಿವೇಶನ ಹಂಚಿಕೆ ಮಾಡಿಸುವ ಕೆಲಸ ಮಾಡಿದ್ದು ಈಗ ನೆನಪುಗಳು.
#Press_club_Bangalore #press_shimoga
#ಜಿಲ್ಲಾಪತ್ರಕರ್ತರಸಂಘ_ಶಿವಮೊಗ್ಗ
Comments
Post a Comment