#ಈ_ವರ್ಷದ_ಕೃಷಿ_ವಿಶ್ವವಿದ್ಯಾಲಯದ_ಘಟಿಕೋತ್ಸವದಲ್ಲಿ_ಕಾಗೋಡು_ತಿಮ್ಮಪ್ಪನವರಿಗೆ
#ಗೌರವ_ಡಾಕ್ಟರೇಟ್_ಪದವಿ_ಪ್ರಧಾನ_ಮಾಡಲಿ.
#ಇದೇ_ಸಂದರ್ಭದಲ್ಲಿ_ಕೃಷಿ_ವಿಶ್ವವಿದ್ಯಾಲಯದವೃತ್ತಕ್ಕೆ_ದಿವಂಗತ_ಕುಂಬಾರ_ಪುಟ್ಟಶೆಟ್ಟರ
#ವೃತ್ತ_ಎಂದು_ನಾಮಕರಣ_ಕೂಡ_ಆಗಲಿ
#ಸಾಗರ_ತಾಲ್ಲೂಕಿನ_ಆನಂದಪುರಂ_ಹೋಬಳಿಯ_ಯಡೇಹಳ್ಳಿ_ಗ್ರಾಮ_ಪಂಚಾಯಿತಿಯ
#ಇರುವಕ್ಕಿ_ಗ್ರಾಮದ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಶ್ವವಿದ್ಯಾಲಯ
#ಇಲ್ಲಿ_ಸ್ಥಾಪಿಸಲು_ಕಾಗೋಡು_ತಿಮ್ಮಪ್ಪ_ಮತ್ತು_ಯಡೂರಪ್ಪ_ಮುಖ್ಯ_ಕಾರಣಕರ್ತರು.
ರಾಜ್ಯದ ಭೂ ಸುದಾರಣಾ ಕಾಯ್ದೆ ಸಾಗರ ತಾಲೂಕಿನಲ್ಲಿ ಪರಿಣಾಮಕಾರಿ ಅನೂಷ್ಟಾನ ಮಾಡಿದವರು ಕಾಗೋಡು ತಿಮ್ಮಪ್ಪನವರು ನಂತರ ಬಗರ್ ಹುಕುಂ ಭೂ ಮಂಜೂರಾತಿಯಲ್ಲಿ ಕೂಡ ಇವರ ಶ್ರಮದ ಫಲಾನುಭವಿಗಳು ಸಾವಿರಾರು ಕುಟುಂಬಗಳು.
ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಗ್ರಾಮದಲ್ಲಿ ಕಾಗೋಡು ತಿಮ್ಮಪ್ಪನವರು ಮತ್ತು ಯಡೂರಪ್ಪರ ಪ್ರಯತ್ನದಿಂದ ಆರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ದಿನಾಂಕ 17 - ಜೂನ್ - 2017 ರಂದು ಆಗಿನ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರಿಂದ ಶಂಕುಸ್ಥಾಪನೆ ಆಯಿತು.
23- ಜುಲೈ-2021 ರಂದು ಮುಖ್ಯಮಂತ್ರಿ ಯಡೂರಪ್ಪನವರಿಂದ ಬೆಂಗಳೂರಿಂದ ವಿಡಿಯೊ ಕಾನ್ಪರೆನ್ಸ್ ಮೂಲಕ ಉದ್ಫಾಟನೆ ಮಾಡಿದ್ದರು.
ಕಳೆದ ವರ್ಷ 21-ಜುಲೈ- 2023ರಂದು ಕೃಷಿ ವಿಶ್ವವಿದ್ಯಾಲಯದಿಂದ ಯಡೂರಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು
94ರ ವಯೋಮಾನದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಬಹುತೇಕ ರಾಜಕಾರಣದಿಂದ ದೂರವಿದ್ದಾರೆ ಅವರ ರೈತ ಪರ ಹೋರಾಟಗಳು, ಜನಪರ ಆಡಳಿತಗಳನ್ನು ನೋಡಿದ ಸಾಗರ ತಾಲ್ಲೂಕಿನ ನಮಗೆಲ್ಲ ನಮ್ಮ ತಾಲ್ಲೂಕಿನ ಕೃಷಿ ವಿದ್ಯಾಲಯದ ಈ ವರ್ಷದ ಘಟಿಕೋತ್ಸವದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿ ಎಂಬ ವಿನಮ್ರವಾದ ಮನವಿ ಮಾಡುತ್ತೇನೆ.
ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮತ್ತು ಜಿಲ್ಲಾ ಮಂತ್ರಿ ಮದುಬಂಗಾರಪ್ಪನವರು ಈ ಬಗ್ಗೆ ಪ್ರಯತ್ನಿಸಲು ವಿನಂತಿಸುತ್ತೇನೆ.
ಇದೇ ಸಂದರ್ಭದಲ್ಲಿ ಈ ಕೃಷಿ ವಿಶ್ವವಿದ್ಯಾಲಯದ ವೃತ್ತಕ್ಕೆ ದಿವಂಗತ #ಕುಂಬಾರ_ಪುಟ್ಟಶೆಟ್ಟರ_ವೃತ್ತ ಎಂದು ನಾಮಕರಣ ಕೂಡ ಮಾಡಿಸಲು ನೆನಪಿಸುತ್ತೇನೆ.
ಕುಂಬಾರ ಪುಟ್ಟ ಶೆಟ್ಟರ ಪರಿಚಯ ಇಲ್ಲಿದೆ
#ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.
#ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು
ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.
ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭಾವರು, ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು ವಿನೋಬಾ ಭಾವೆ ಎದರು ಹೊಗಳಿದ್ದರಂತೆ, ಇವರ ಮಗ ಕುಂಬಾರ್ ಬಸಪ್ಪ ಕೂಡ ಪ್ರಗತಿ ಪರ ಕೃಷಿಕರು ಮತ್ತು ಯಡೇಹಳ್ಳಿ ಮಂಡಲ್ ಪಂಚಾಯ್ತಿ ಸದಸ್ಯರಾಗಿದ್ದರು.
ಈ ಗ್ರಾಮದಲ್ಲಿ ಸುಮಾರು ಸಾವಿರ ಎಕರೆ ದಟ್ಟ ಅರಣ್ಯ ಪ್ರದೇಶ ಕಂದಾಯ ಭೂಮಿ ಆಗಿಯೇ ಉಳಿದಿದ್ದು ಆಶ್ಚಯ೯ವೇ ಇದನ್ನು ಮಂಜೂರಾತಿ ಕೇಳಿದ ನೂರಾರು ಸಂಸ್ಥೆಗಳು ಮಠಗಳಿಗೆ ಮಂಜೂರಾಗದೇ ಉಳಿಯಲು ಕಾರಣ ಇಲ್ಲಿದ್ದ ದಟ್ಟ ಅರಣ್ಯವೇ ಆಗಿತ್ತು.
Comments
Post a Comment