#ಡಾ_ಕೆ_ಎನ್_ಗಣೇಶಯ್ಯ_ಬರೆದ
#ಬಳ್ಳಿ_ಕಾಳ_ಬೆಳ್ಳಿ_ರೋಚಕ_ಕಾದಂಬರಿ
#ಗೇರುಸೊಪ್ಪೆಯ_ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿಯ
#ಗುಪ್ತ_ನಿದಿ_ಅಪಹರಿಸಲು_ಬರುವ_ವಿದೇಶಿ_ಮಾಪಿಯಾದ_ಕಾಲ್ಪನಿಕ_ಕಥೆ
#ಆದರೆ_ಇದು_ನಿಜಕಥೆ
https://youtu.be/r4I48MJMX1Q?si=OJrgXyyTD3_yUKY6
ನಮ್ಮ ಜಿಲ್ಲೆಯಲ್ಲಿ ಉಗಮವಾಗಿ ನದಿಯಾಗಿ ಹರಿದು ಉತ್ತರಕನ್ನಡ ಜಿಲ್ಲೆಯ ಗಡಿಯಲ್ಲಿ ವಿಶ್ವ ಸುಂದರ ಜಲಪಾತವಾಗಿ ಗೇರುಸೊಪ್ಪೆ ಜಲಪಾತ / ಜೋಗ ಜಲಪಾತ ಎಂದು ಹೆಸರಾಗಿ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಗ್ರಾಮದ ಮೂಲಕ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ನದಿ ದಂಡೆಯ ಗೇರುಸೊಪ್ಪ ಸಂಸ್ಥಾನ ಜೈನ ರಾಣಿ ಚೆನ್ನಬೈರಾದೇವಿ ಆಡಳಿತ ಕಾಲದಲ್ಲಿ ಉತ್ತುಂಗಕ್ಕೆ ತಲುಪಿತ್ತು.
ಇಡೀ ಯುರೋಪು ಖಂಡಕ್ಕೆ ಬೇಕಾದ ಕಾಳುಮೆಣಸು ರಾಣಿ ಚೆನ್ನಬೈರಾದೇವಿ ಒಬ್ಬಳ ಏಕಾದಿಪತಿಗೆ ಸೇರಿತ್ತು ಆಗ ರಾಣಿ ಕಾಳುಮೆಣಸನ್ನ ಬೆಳ್ಳಿಗಟ್ಟಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಳು ಇದರಿಂದ ಅವಳ ಖಜಾನೆಗೆ ಸೇರಿದ್ದ ಅಪಾರ ಬೆಳ್ಳಿಗಟ್ಟಿಗಳನ್ನ ಅಪಹರಿಸಲು ವಿದೇಶಿ ಮಾಫಿಯ ಪ್ರಯತ್ನ ಮಾಡುವ ಕಥೆ ಡಾ.ಕೆ.ಎನ್. ಗಣೇಶಯ್ಯ ಬಳ್ಳಿ ಕಾಳ ಬೆಳ್ಳಿ ಎಂಬ ರೋಚಕ ಕಾದಂಬರಿ ಆಗಿ ಬರೆದಿದ್ದಾರೆ.
ಅವರು ಇದನ್ನು ಕಾಲ್ಪನಿಕ ಕಾದಂಬರಿ ಎಂದು ಬರೆದಿದ್ದಾರೆ ಆದರೆ ಇದು ನಿಜ ಕಥೆಯೇ ಆಗಿದೆ ಜೋಗ ಜಲಪಾತದಿಂದ ಕೇವಲ 25 ಕಿ.ಮಿ. ದೂರದಲ್ಲಿದೆ ಗೇರುಸೊಪ್ಪ ಆದ್ದರಿಂದ ನಾವೆಲ್ಲ ಈ ಪುಸ್ತಕ ಓದಲೇ ಬೇಕು.
ಆನ್ ಲೈನ್ ನಲ್ಲಿ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ನಲ್ಲಿ ಈ ಪುಸ್ತಕ ಲಭ್ಯವಿದೆ.
Comments
Post a Comment