Blog number 1079. ರಿಪ್ಪನ್ ಪೇಟೆಯ ಅಶ್ವಲ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳು ಹಿಮಾಲಯನ್ ಬೈಕ್ ನಲ್ಲಿ ಗೋವಾದಲ್ಲಿ ನಡೆದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮ್ಯಾನಿಯಾ 2022 ರಲ್ಲಿ ಭಾಗವಹಿಸಿದ ಇದಕ್ಕಾಗಿ 900 ಕಿ ಮಿ ಸುರಕ್ಷಿತ ಬೈಕ್ ರೈಡಿಂಗ್ ಮಾಡಿದ ಅನುಭವ ವಾಪಾಸಾಗುವಾಗ ಈ ಯುವಕರ ಸಾಹಸ ಪ್ರೋತ್ಸಾಹಿಸಲು ಮಲ್ಲಿಕಾ ವೆಜ್ ನಲ್ಲಿ ಸಂಜೆ ಉಪಹಾರಕ್ಕೆ ಆಹ್ವಾನಿಸಿದ್ದೆ.
#ಗೋವಾದಲ್ಲಿ_ನಡೆದ_ರಾಯಲ್_ಎನಪೀಲ್ಡ್_ರೈಡರ್ಸ್_ಮ್ಯಾನಿಯಾ_2022ರಲ್ಲಿ_ಭಾಗವಹಿಸಿದ_ನಮ್ಮ_ಹುಡುಗರು #ವಿದೇಶಿ_ಸಾಹಸಿಗಳ_ಈ_ಹವ್ಯಾಸ_ನಮ್ಮ_ಹಳ್ಳಿ_ಹುಡುಗರಿಗೂ_ಆಕರ್ಷಿಸುತ್ತಿದೆ. #ಇದರಿಂದ_ಯುವಜನತೆ_ಉತ್ತಮ_ಹವ್ಯಾಸದ_ಕಡೆ_ಸಾಗುವ_ಸಾಧ್ಯತೆ #ರೈಡರ್ಸ್_ಸಾಹಸ_ಯಾತ್ರೆಯನ್ನು_youtubeನಲ್ಲಿ_ಪ್ರಕಟಿಸಿ_ಹಣಗಳಿಸುವ_ಲಾಭದ_ದಾರಿಯೂ_ಇದೆ. #ರಿಪ್ಪನಪೇಟೆ_ಅಶ್ವಲ್_900_ಕಿಮಿ_ಹಿಮಾಲಯನ್_ಬೈಕಲ್ಲಿ_ಚೊಚ್ಚಲ_ರೈಡಿಂಗ್_ಅನುಭವ. ಈಗೆಲ್ಲ ಹಳ್ಳಿಗಳಲ್ಲಿ ಯುವಕ ಯುವತಿಯರು ಪ್ರತ್ಯೇಕವಾಗಿ ಬೈಕ್ - ಸ್ಕೂಟಿ ಖರೀದಿಸದೇ ಇರುವುದಿಲ್ಲ ಆದ್ದರಿಂದ ಪ್ರತಿ ಹೋಬಳಿಯಲ್ಲಿ ಬೈಕ್ ಮಾರಾಟದ ಶೋರೂಂಗಳಿದೆ, ಸರ್ವಿಸ್ ಸ್ಟೇಷನ್ ಮತ್ತು ಪೆಟ್ರೋಲ್ ಬಂಕ್ ಗಳಾಗಿದೆ. ಬೈಕ್ ಸಂಖ್ಯೆ ಹೆಚ್ಚಿದಂತೆ ಅಪಘಾತವೂ ಹೆಚ್ಚಾಗಿದೆ, ಅಮಲು ಪದಾರ್ಥ ಸೇವಿಸಿ ಆಗುವ ಅನಾಹುತ, ವಿಪರೀತ ವೇಗದಿಂದ ಜಡ್ಜಮೆಂಟ್ ಇಲ್ಲದೆ ಅಪಘಾತಗಳು ಸಾಮಾನ್ಯವಾಗಿದೆ, ಸಾವಿನ ಸಂಖ್ಯೆ ಕೂಡ ಹೆಚ್ಚು. ಇದರಿಂದ ಪೋಷಕರು ಮಕ್ಕಳಿಗೆ ಬೈಕ್ ಕೊಡಿಸಲು ಹೆದರುತ್ತಾರೆ ಆದರೆ ಈಗಿನ ಮಕ್ಕಳ ಬೇಡಿಕೆ ತಿರಸ್ಕರಿಸಲಾಗದೇ ಸಾಲ ಮಾಡಿ ಬೈಕ್ ಕೊಡಿಸುತ್ತಾರೆ. ಈ ರೀತಿ ಬೈಕ್ ಖರೀದಿಸುವ ಯುವ ಜನಾಂಗಕ್ಕೆ ತದ್ವಿರುದ್ಧವಾದ ಹೊಸ ಖಯಾಲಿಯ ಯುವ ಜನತೆ ತಮ್ಮ ಬೈಕ್ ನಲ್ಲಿ ದೇಶ ಮತ್ತು ಅಂತರ್ ರಾಷ್ಟ್ರೀಯ ಪ್ರವಾಸ ಮಾಡುವ ವಿದೇಶಿ ಸಾಹಸಿ ಪ್ರವಾಸಿಗಳಂತೆ ನಮ್ಮ ಹಳ್ಳಿ...