ಲಕ್ಷ್ಮಣ್_ಹೂಗಾರ್ ದಿಡೀರ್ ಆಗಿ ಸುದ್ದಿ ಸಮಾಚಾರ ಪ್ರಪಂಚದ ಸೆಲೆಬ್ರಿಟಿ ಸ್ಥಾನ ಒದ್ದು ಹೋದ ಪತ್ರಕರ್ತ. ಕೃಷಿಯಲ್ಲಿ ತಲ್ಲೀನರಾಗಿದ್ದಾರೆ ಇಂತಹವರು ಅಪರೂಪದಲ್ಲಿ ಅಪರೂಪ. ಟೀವಿ ಮಾಧ್ಯಮದಲ್ಲಿ ಇವರನ್ನ ನೋಡದೇ ಇರುವವರಿಲ್ಲ ಅಷ್ಟು ಪ್ರಸಿದ್ಧಿ ಪಡೆದಿದ್ದ ಇವರ ಮಾತು - ಧ್ವನಿ ಮತ್ತು ಬಾಡಿ ಲಾಂಗ್ವೇಜ್ ಆ ಕಾಲದಲ್ಲಿ ಹೆಚ್ಚು ಆಕರ್ಷಣೆ ಆಗಿತ್ತು. ಐಟಿ ಇಂಜಿನಿಯರ್ ಓದಿ ನಂತರ ಪತ್ರಕರ್ತರಾಗಿ ಪ್ರಸಿದ್ಧಿ ಪಡೆದು ನಂತರ ಅದೆಲ್ಲ ಬಿಟ್ಟು ಕೃಷಿ ಕ್ಷೇತ್ರಕ್ಕೆ ತಲುಪಿದ್ದಾರೆ ಲಕ್ಷಣ ಹೂಗಾರ್. ಇವರನ್ನ ಹುಡುಕಿ ಹೋಗಿ ಬೇಟಿ ಮಾಡಿದ ಕೆಲ ಸುದ್ದಿ ಮಾಧ್ಯಮಗಳಿಂದ ಮತ್ತು ಅಂತರ್ಜಾಲದಲ್ಲಿ ಲಕ್ಷ್ಮಣ್ ಹೂಗಾರ್ ಬಗ್ಗೆ ತಿಳಿದ ಸುದ್ದಿಗಳು ಇಲ್ಲಿದೆ ನೋಡಿ. ಲಕ್ಷ್ಮಣ್ ಹೂಗಾರ್ ಅವರು ಕರ್ನಾಟಕದ ಜನಪ್ರಿಯ ಮತ್ತು ಅನುಭವಿ ಪತ್ರಕರ್ತರಲ್ಲಿ ಒಬ್ಬರು. ಅವರು ಪ್ರಮುಖ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಹುಟ್ಟಿದ್ದು ಗುಲ್ಬರ್ಗಾದ ಆಳಂದ-ವೃತ್ತಿ ಕಟ್ಟಿಕೊಟ್ಟಿದ್ದು ಬೆಂಗಳೂರು-ಬದುಕು ನೀಡಿದ್ದು ಚಿತ್ರದುರ್ಗ. ಲಕ್ಷ್ಮಣ್ ಹೂಗಾರ್ ಅವರದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕು.. ಮನೆಯಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲವಂತೆ ಇದರ ನಡುವೆ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹತ್ತಿರದಿಂದ ನೋಡಿಕೊಂಡು ಬ...