Skip to main content

4007. ಲಕ್ಷ್ಮಣ್ ಹೂಗಾರ್

ಲಕ್ಷ್ಮಣ್_ಹೂಗಾರ್

ದಿಡೀರ್ ಆಗಿ ಸುದ್ದಿ ಸಮಾಚಾರ
ಪ್ರಪಂಚದ ಸೆಲೆಬ್ರಿಟಿ ಸ್ಥಾನ ಒದ್ದು ಹೋದ ಪತ್ರಕರ್ತ.

  ಕೃಷಿಯಲ್ಲಿ ತಲ್ಲೀನರಾಗಿದ್ದಾರೆ ಇಂತಹವರು ಅಪರೂಪದಲ್ಲಿ ಅಪರೂಪ.

  ಟೀವಿ ಮಾಧ್ಯಮದಲ್ಲಿ ಇವರನ್ನ ನೋಡದೇ ಇರುವವರಿಲ್ಲ ಅಷ್ಟು ಪ್ರಸಿದ್ಧಿ ಪಡೆದಿದ್ದ ಇವರ ಮಾತು - ಧ್ವನಿ ಮತ್ತು ಬಾಡಿ ಲಾಂಗ್ವೇಜ್ ಆ ಕಾಲದಲ್ಲಿ ಹೆಚ್ಚು ಆಕರ್ಷಣೆ ಆಗಿತ್ತು.

   ಐಟಿ ಇಂಜಿನಿಯರ್ ಓದಿ ನಂತರ ಪತ್ರಕರ್ತರಾಗಿ ಪ್ರಸಿದ್ಧಿ ಪಡೆದು ನಂತರ ಅದೆಲ್ಲ ಬಿಟ್ಟು ಕೃಷಿ ಕ್ಷೇತ್ರಕ್ಕೆ ತಲುಪಿದ್ದಾರೆ ಲಕ್ಷಣ ಹೂಗಾರ್.

   ಇವರನ್ನ ಹುಡುಕಿ ಹೋಗಿ ಬೇಟಿ ಮಾಡಿದ ಕೆಲ ಸುದ್ದಿ ಮಾಧ್ಯಮಗಳಿಂದ ಮತ್ತು ಅಂತರ್ಜಾಲದಲ್ಲಿ  ಲಕ್ಷ್ಮಣ್ ಹೂಗಾರ್ ಬಗ್ಗೆ ತಿಳಿದ ಸುದ್ದಿಗಳು ಇಲ್ಲಿದೆ ನೋಡಿ.

  ಲಕ್ಷ್ಮಣ್ ಹೂಗಾರ್ ಅವರು ಕರ್ನಾಟಕದ ಜನಪ್ರಿಯ ಮತ್ತು ಅನುಭವಿ ಪತ್ರಕರ್ತರಲ್ಲಿ ಒಬ್ಬರು.

   ಅವರು ಪ್ರಮುಖ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

  ಹುಟ್ಟಿದ್ದು ಗುಲ್ಬರ್ಗಾದ ಆಳಂದ-ವೃತ್ತಿ ಕಟ್ಟಿಕೊಟ್ಟಿದ್ದು ಬೆಂಗಳೂರು-ಬದುಕು ನೀಡಿದ್ದು ಚಿತ್ರದುರ್ಗ.

  ಲಕ್ಷ್ಮಣ್‌ ಹೂಗಾರ್‌ ಅವರದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕು.. ಮನೆಯಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲವಂತೆ ಇದರ ನಡುವೆ  ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದರಿಂದಲೇನೋ ಆಳುವ ವ್ಯವಸ್ಥೆ ಬಗೆಗೊಂದು ಆಕ್ರೋಶ ಮನಸಲ್ಲಿ ಮೂಡಿಸಿಕೊಂಡು ಅದನ್ನೇ ಹೋರಾಟಕ್ಕೆ ಮಾರ್ಗ ಮಾಡಿಕೊಂಡ‌ವರು ಲಕ್ಷ್ಮಣ್ ಹೂಗಾರ್.

  ವಿದ್ಯಾರ್ಥಿದಿಸೆಯಿಂದ್ಲೇ ಹೋರಾಟಕ್ಕೆ ಧುಮುಕಿದವರು, ಗುಲ್ಬರ್ಗಾದಿಂದ ಸುಮಾರು 600 ಕಿಲೋ ಮೀಟರ್‌ ದೂರದ ಬಯಲುಸೀಮೆಯ ಊರಾದ ಚಿತ್ರದುರ್ಗದ ಸಂಪರ್ಕ ಸಿಕ್ಕಿದ್ದು ಕೂಡ ಇದೇ ಹೋರಾಟಗಳ ಕಾರಣಕ್ಕೆ.

   ಚಿತ್ರದುರ್ಗದಲ್ಲಿದ್ದ ಸಮಾನಮನಸ್ಕ ಸ್ನೇಹಿತರ ಒಡನಾಟಕ್ಕೆ ಸಿಲುಕಿದ ಹೂಗಾರ್‌ ಹೆಚ್ಚಿನ ಸಮಯವನ್ನು ಚಿತ್ರದುರ್ಗದಲ್ಲೇ ಕಳೆಯುವಂತಾಯ್ತು.

   ಇದೇ ಸಮಯದಲ್ಲಿ ತೀವ್ರ ಕಾವು ಪಡೆದ ಹೋರಾಟ ಭದ್ರಾ ಮೇಲ್ದಂಡೆ ಯೋಜನೆ..

   ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಎನ್ನುವ ಗ್ರಾಮದಲ್ಲಿ ಕೃಷಿ ಜಮೀನು ಖರೀದಿಸಿ ಅಪ್ಪಟ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ. 

  ನಿಂಬೆ-ನುಗ್ಗೆ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಪ್ರಗತಿಪರ ರೈತನಾಗಿ ಬದುಕುತ್ತಿದ್ದಾರೆ.

   ದಶಕಕ್ಕಿಂತಲೂ ಹೆಚ್ಚು ಅವಧಿಯಿಂದಲೂ ಅವರು ರೈತರಾಗಿ ದುಡಿಯುತ್ತಿದ್ದು ಬೆಳಗ್ಗೆಯಿಂದ ಸಂಜೆವರಗೆ ಹೊಲದಲ್ಲಿ ಬೆವರಳಿಸಿ ಕೆಲಸ ಮಾಡುತ್ತಿದ್ದಾರೆ.

  ಹೆಚ್ಚಿನ ಸಮಯವನ್ನು ಹೊಲದಲ್ಲೇ ಕಳೆಯುವುದರಿಂದ ಹೊರಗಿನ ಸುದ್ದಿ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದ್ದಾರಂತೆ.

  ಒಬ್ಬ ಹೋರಾಟಗಾರನಾಗಿದ್ದ ನನಗೊಂದು ಐಡೆಂಟಿಟಿ ತಂದುಕೊಟ್ಟಿದ್ದು ಪತ್ರಿಕೋದ್ಯಮ ಅದಕ್ಕೆ ನಾನು ಸದಾ ಋಣಿ ಎನ್ನುತ್ತಾರೆ.

  ಮುದ್ರಣ ಮಾದ್ಯಮದಲ್ಲಿ #ಜೆಸುನಾ ನನ್ನ ಗಾಡ್‌ ಫಾದರ್‌, ದೃಶ್ಯ ಮಾದ್ಯಮದಲ್ಲಿ ದಿ ಗ್ರೇಟ್‌ #ಮಹೇಂದ್ರಮಿಶ್ರಾ ಹಾಗೂ #ಶಿವಶಂಕರ್(‌ ಈಗಿನ ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರು) ಎನ್ನುತ್ತಾರೆ ಲಕ್ಷ್ಮಣ್‌ ಹೂಗಾರ್.

  ಸುವರ್ಣ ಸಿಇಓ ಆಗಿದ್ದ #ಶ್ಯಾಮ್_ಸುಂದರ್‌, ಪಬ್ಲಿಕ್‌ ಟಿವಿಯ #ರಂಗನಾಥ್ ಅವರು ತಮ್ಮ ಬೆಳವಣಿಗೆಗೆ ಅಸಾಧಾರಣವಾದ ಪ್ರಭಾವ ಬೀರಿದವರು ಎನ್ನುತ್ತಾರೆ.

  ದಿಢೀರ್‌ ಮರೆಯಾಗೊಕ್ಕೆ ಕಾರಣವೇನು? ಎನ್ನುವ ಪ್ರಶ್ನೆಗೆ ಅವರ ಉತ್ತರ ಟಿವಿ ಪರದೆಯಿಂದ ದಿಢೀರ್‌ ತೆರೆಮರೆಗೆ ಸರಿಯೊಕ್ಕೆ ಬೇರೆ ಕಾರಣಗಳೇನು ಇರಲಿಲ್ಲ ಎನ್ನುವ ಅವರು ಈ ಕ್ಷೇತ್ರ ತೊರೆಯಲು ಅವರು ನೀಡುವ ಉತ್ತರ...

   ದಶಕಗಳ ಕಾಲ ದುಡಿದ ಪತ್ರಿಕೋದ್ಯಮ ಕಾಲ ಕಳೆದಂತೆಲ್ಲಾ ತನ್ನ ವೃತ್ತಿಪಾವಿತ್ರ್ಯತೆ ಹಾಗೂ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತಿದೆ.

 ಎಲ್ಲಾ ಸಂಸ್ಥೆಗಳಲ್ಲಿಯೂ ಒಂದೇ ವಾತಾವರಣವಿದೆ ಅದಲ್ಲದೇ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವಾಗಿದ್ದ ಪತ್ರಿಕೋದ್ಯಮ ಇವತ್ತು ಮಾರಕವಾಗ್ತಿದೆ.

   ಅದೆಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿ,ಸಮಾಜ ಹಾಗೂ  ದೇಶದ ವ್ಯವಸ್ಥೆಯನ್ನು ಪತ್ರಿಕೋದ್ಯಮ ಸುಧಾರಿಸುತ್ತದೆ ಎನ್ನುವ ಮಾತು ಸಂಪೂರ್ಣ ಹುಸಿಯಾಗಿದೆ.

  ಇಂಥಾ ಅಪಾಯಕಾರಿ ಹಾಗೂ ಸಂಕೀರ್ಣ ಪರಿಸ್ತಿತಿಯಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದೆನಿಸಿದ ಕಾರಣಕ್ಕೆ ಬೆಂಗಳೂರಿನ ಸಂಪರ್ಕವನ್ನೇ ತೊರೆದು ಇದ್ದಕ್ಕಿದ್ದಂತೆ ಊರಿಗೆ ಬಂದುಬಿಟ್ಟೆ ಎನ್ನುತ್ತಾರೆ.

   ಜನಪ್ರಿಯತೆ ನಡುವೆ ಬಿಟ್ಟುಬಂದೆ ಎನ್ನುವ ಬೇಸರವೂ ಇಲ್ಲ,ಇನ್ನೂ ಇರಬೇಕಿತ್ತೇನೋ  ಎನ್ನುವ ಕೊರಗು ನನಗಿಲ್ಲ.. ಎನ್ನುತ್ತಾರೆ.

 ಪತ್ರಿಕೋದ್ಯಮದಲ್ಲಿ ದುಡಿದಿದ್ದು ಸಾಕೆನಿಸಿದ ಕಾರಣಕ್ಕೆ ಹಳ್ಳಿಗೆ ಬಂದು ಕೃಷಿಯನ್ನು ಮುಂದುವರೆಸಿದೆ ಅಷ್ಟೆ
ಎನ್ನುವುದನ್ನು ತಮ್ಮ ಮಾತಿನಲ್ಲಿ ಸೇರಿಸುತ್ತಾರೆ ಲಕ್ಷ್ಣಣ್‌ ಹೂಗಾರ್.

 ತಮ್ಮ ದಶಕಗಳವರೆಗಿನ ಪತ್ರಿಕೋದ್ಯಮದಲ್ಲಿ ಕೆಲಸ ಕೊಟ್ಟು ಅನ್ನಹಾಕಿದ ಎಲ್ಲಾ ಮಾದ್ಯಮ ಸಂಸ್ಥೆಗಳಿಗೆ ತಾನು ಋಣಿ ಎನ್ನುತ್ತಾರೆ.

  ಐದಾರು ವರ್ಷಗಳಿಂದ ಪತ್ರಿಕೆಗಳನ್ನು ಓದಿಲ್ಲ,ಟಿವಿ ನೋಡಿಲ್ಲವಂತೆ,ಪತ್ರಿಕೆಗಳನ್ನು ಓದಿದರೆ,ಟಿವಿ ನ್ಯೂಸ್‌ ನೋಡಿದ್ರೆ ಅದರಿಂದ ಪ್ರಯೋಜನ ವಾಗುತ್ತದೆ ಎನ್ನುವ ಸ್ಥಿತಿಯಲ್ಲಿ ಇವತ್ತು ಮಾದ್ಯಮಗಳಿಲ್ಲ ಎನ್ನುತ್ತಾರೆ. 

  ಮಾದ್ಯಮಗಳು ಆಳುವ ವರ್ಗಗಳನ್ನು ಓಲೈಸುವ, ಬಹುಪರಾಖ್ ಹಾಕುವ ಸ್ತಿತಿಯಲ್ಲಿವೆ,ಪ್ರಯೋಜನವಿಲ್ಲದ ಇಂಥಾ ಸುದ್ದಿಗಳನ್ನು ಓದಿ ಆಕ್ರೋಶಗೊಳ್ಳುವುದಕ್ಕಿಂತ ತಾನಾಯ್ತು ತನ್ನ ಪಾಡಾಯ್ತು ಎಂದು ಸುಮ್ಮನಿರುವುದು ಒಳ್ಳೇದಲ್ವಾ ಎಂದು ಕೃಷಿ, ಜಮೀನು, ಬೆಳೆ, ಮಳೆ,ಕುಟುಂಬದಂಥ ವಿಚಾರಗಳಲ್ಲೇ ಬ್ಯುಸಿಯಾಗಿಬಿಡ್ತೇನೆ ಎನ್ನುತ್ತಾರೆ.

   ಜಗತ್ತಿನ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ ತನ್ನ ಹೊಲ, ಬೆಳೆ, ಇಳುವರಿಗೆ ಹೆಚ್ಚಿನ ಆಧ್ಯತೆ ಕೊಟ್ಟರೆ ಉದ್ದಾರವಾದ್ರೂ ಆಗ್ತೇನೆ ಎನ್ನುವ ತತ್ವದ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರೆ.

   ಕಳೆದು ಹೋಗಿದ್ದು ಕಳೆದಿದ್ದಾಗಿದೆ,ಉಳಿದಿರುವ ಜೀವನವನ್ನು ಅಪ್ಪಟ ಕೃಷಿಕನಾಗಿ ಕಳೆಯುವುದು ನನ್ನ ನಿರ್ದಾರ ಇದೇ ನನಗೆ ತೃಪ್ತಿ ಕೊಟ್ಟಿದೆ ಎನ್ನುತ್ತಾರೆ ಒಂದು ಕಾಲದ ಜನಪ್ರಿಯ ಪತ್ರಕರ್ತರಾಗಿದ್ದ ಈಗ ಕೃಷಿಕರಾಗಿ ಬದಲಾಗಿರುವ ಲಕ್ಷ್ಮಣ್ ಹೂಗಾರ್.

#press #reporter #laxmanhugar #tv9 #publictv 
#agricultur #it #bangalore #PressClub

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...