Skip to main content

3592. ಅತ್ಯಂತ ಹಿಂದುಳಿದ ಕುಣಬಿ ಸಮಾಜದ ಮೊದಲ ಡಾಕ್ಟರೇಟ್ ಪದವಿ

#ಡಾಕ್ಟರ್_ವಸುಂಧರಿ
 ಮಲೆನಾಡಿನ #ಕುಣಬಿ ಸಮುದಾಯದ ಅಧ್ಯಯನ ಎಂಬ ಮಹಾ ಪ್ರಬಂದಕ್ಕೆ ಪಿ.ಹೆಚ್.ಡಿ. ಪಡೆದ ಮಹಾನ್ ಸಾದನೆ ಮಾಡಿದ್ದಾರೆ.

   ಈ ಡಾಕ್ಟರೇಟ್ ನಮ್ಮ ರಾಜ್ಯದ ಮೊದಲ ಕುಣಬಿ ಸಮಾಜದ ಡಾಕ್ಟರೇಟ್ ಆಗಿದೆ, ಅತ್ಯಂತ ಹಿಂದುಳಿದ ಈ ಸಮಾಜದ ಮಹಿಳೆಯ ಈ ಸಾಧನೆ ವಿಶೇಷ.

    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದ ಕಮಲಮ್ಮ ನಾರಾಯಣಪ್ಪ ದಂಪತಿಗಳ ಪುತ್ರಿ ಆದ ವಸುಂದರಿ ಕುಣಬಿ ಸಮುದಾಯದಲ್ಲಿ ಪಿಹೆಚ್‌ಡಿ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 

  ಸದ್ಯ ಶಿವಮೊಗ್ಗದ  #ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

  ಇವರು ಕುವೆಂಪು ವಿಶ್ವ ವಿದ್ಯಾಲಯಕ್ಕೆ ಕನ್ನಡ ವಿಷಯದಲ್ಲಿ ಸಲ್ಲಿಸಿದ #ಮಲೆನಾಡಿನ_ಕುಣಬಿ_ಸಮುದಾಯದ ಅಧ್ಯಯನ (ಶಿವಮೊಗ್ಗ ಜಿಲ್ಲೆಯಲ್ಲಿನ) ಎಂಬ ಮಹಾಪ್ರಬಂಧಕ್ಕೆ 35ನೇ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಲಭಿಸಿದೆ.

   ಇವರಿಗೆ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹಾಲಮ್ಮ ಎಂ. ಮಾರ್ಗದರ್ಶನ ಮಾಡಿದ್ದರು.

 #ಕುಣಬಿ_ಸಮಾಜದ_ನನ್ನ_ಒಡನಾಟ...

   ಶಿವಮೊಗ್ಗ ಜಿಲ್ಲೆಯ ಮೊದಲ ಕುಣಬಿ ಜನಾಂಗದ ಜಿಲ್ಲಾ ಸಮಾವೇಶ ಸಾಗರ ತಾಲೂಕಿನ ಆನಂದಪುರಂನ ರಂಗನಾಥ ಸ್ವಾಮಿ ಕಲ್ಯಾಣ ಮಂದಿರದಲ್ಲಿ 1995 ರಲ್ಲಿ ನನ್ನ ನೇತೃತ್ವದಲ್ಲಿ ನಡೆದಿತ್ತು ಇದಕ್ಕೆ ಕಾರಣರಾದವರು ಕುಣಬಿ ಸಮುದಾಯದ ಈಗ ಸಾಗರ ನ್ಯಾಯಾಲಯದಲ್ಲಿ ವಕೀಲರಾಗಿರುವ #ಬಳ್ಳಿಬೈಲು_ಮಂಜಪ್ಪ, #ಯ0ಕಟಪ್ಪ ಮತ್ತು ವಾರಾಹಿ ಮುಳುಗಡೆ ಸಂತ್ರಸ್ತರಾಗಿ ನಮ್ಮಲ್ಲಿಗೆ ಬಂದು ಘಂಟಿನಕೊಪ್ಪದಲ್ಲಿ ನೆಲೆಸಿದ್ದ #ಕಂಚಿನಕಲ್ಲು_ಈರಪ್ಪಣ್ಣ. ಆಗ ನಾನು ಆನಂದಪುರಂ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೆ.

   ಆಗ ಶಿವಮೊಗ್ಗ ಜಿಲ್ಲಾ ಸಹಕಾರ ಸಂಸ್ಥೆಗಳ ಜಿಲ್ಲಾ ರಿಜಿಸ್ಟ್ರಾರ್ ಆಗಿದ್ದ #ಕಾಳೇಶ್ವರ_ಧರ್ಮಪ್ಪ ಸಾಹೇಬರಿಂದ ಶಿವಮೊಗ್ಗ ಜಿಲ್ಲಾ ಮೊದಲ ಕುಣಬಿ ಸಮಾಜದ ಸಮಾವೇಶ ಉದ್ಘಾಟನೆ ಮಾಡಿಸಿದ್ದೆ.

   ಅದರ ಮರುವರ್ಷ ಸಾಗರ ತಾಲೂಕಿನ #ನಾಗವಳ್ಳಿಯ #ದೇವಗಾರು ಎಂಬ ಊರಲ್ಲಿ ಎರಡನೆ ಜಿಲ್ಲಾ ಸಮಾವೇಶ ಅದ್ದೂರಿಯಾಗಿ ನೆರವೇರಿತ್ತು ಹೀಗಾಗಿ ಶಿವಮೊಗ್ಗ ಜಿಲ್ಲೆಯ ಕುಣಬಿ ಸಮಾಜದ ಒಡನಾಟ ನನಗೆ ಹೆಚ್ಚು ಲಭಿಸಿತು.

   ಕುಂದಾಪುರದ ಕಮಲಶಿಲೆ ಸಮೀಪದ ಯಡಮೊಗೆಯ ಶ್ರೀಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠ ಕುಣಬಿ ಸಮಾಜದವರ ಮಠವೂ ಆಗಿದೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಹಲವರಿ ಮಠ, ಇದು ಉತ್ತರ ಪ್ರದೇಶದ ಗೋರಕ್ ಪುರದ ನಾಥ ಪಂಥದ ಶಾಖಾ ಮಠ ಆಗಿದೆ, ಇದರ ಮಹಾಂತರು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು.

   ಪ್ರತಿ 12 ವರ್ಷಕ್ಕೊಮ್ಮೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆಯುವ ಕುಂಬಮೇಳದ ಕೊನೆಯ ಶಾಹಿ ಸ್ಥಾನದ ಮರುದಿನ ದೇಶದಾದ್ಯಂತ ಬಂದು ಸೇರುವ ನೂರಾರು ಸಾದು ಸಂತರು ನಾಸಿಕ್ ನಿಂದ ನಮ್ಮ ರಾಜ್ಯದ ಮಂಗಳೂರಿನ ಕದ್ರಿಯ ಜೋಗಿಮಠಕ್ಕೆ ನಡೆದು ಬರುವ #ಬಾರಾಪಂಥ್ ಯಾತ್ರೆಗೆ ಕುಣಬಿ ಸಮಾಜದವರು ಕಾಯುತ್ತಾರೆ ಮತ್ತು ಭಕ್ತಿಯಿಂದ ನಡೆದುಕೊಳ್ಳುತ್ತಾರೆ.

   ಕುಣಬಿ ಸಮಾಜದವರಲ್ಲಿ ಬ್ರಹ್ಮಪೋದೇಶ ಪದ್ಧತಿ ಕಡ್ಡಾಯ ಆಚರಣೆ ಇದೆ, ಜನಿವಾರ ದಾರಣೆ ಇವರ ಜನಾಂಗದಲ್ಲಿ ಕಡ್ಡಾಯ.

    ದಕ್ಷಿಣ ಗೋವಾದ ಕಾಣ್ ಕೋಣದ #ಅಸಲಿ_ಗಾಂವ್_ಡೊಂಗ್ರಿಮ್ ನಲ್ಲಿರುವ #ಮಲ್ಲಿಕಾರ್ಜುನ ದೇವಾಲಯ ಇವರ ಮೂಲ ಆರಾದ್ಯ ಸ್ಥಾನ, ವರ್ಷದಲ್ಲಿ ಮೂರು ತಿಂಗಳು ಗರ್ಭಗುಡಿ ಒಳಗಿನ ಪೂಜೆ ಕುಣಬಿ ಸಮಾಜದವರದ್ದು ಉಳಿದ 9 ತಿಂಗಳು ಬ್ರಾಹ್ಮಣ ಅರ್ಚಕರದ್ದು.

   ಪೋರ್ಚುಗೀಸರು ಇವರನ್ನ ಮತಾಂತರ ಮಾಡಲು ಪ್ರಯತ್ನಿಸಿದಾಗ ಆ ಕಾಲದಲ್ಲಿ ಅಲ್ಲಿನ ಕುಣಬಿ ಜನಾಂಗದವರು ಗೆರಿಲ್ಲಾ ಮಾದರಿ ಹೋರಾಟ ಮಾಡಿ ಪೋರ್ಚುಗೀಸರ ರುಂಡ ಚೆಂಡಾಡಿದ ಇತಿಹಾಸ ಅಲ್ಲಿನ ಇತಿಹಾಸ ದಾಖಲೆಯಲ್ಲಿದೆ.

   ಗೋವಾ ಪ್ರಾಂತ್ಯದ ಕುಣಬಿ ಸಮಾಜದವರು ಮಾಂಸಹಾರ ಸೇವಿಸುತ್ತಾರೆ ಆದರೆ ಕೋಳಿಯನ್ನು ಯಾವ ಕಾರಣಕ್ಕೂ ಅಡಿಗೆಗೆ ಬಳಸುವುದಿಲ್ಲ.

   ಪ್ರತಿ ವರ್ಷ ಶಿವರಾತ್ರಿಯಂದು #ಕೊಡಚಾದ್ರಿ ಬೆಟ್ಟದ ತುಟ್ಟ ತುದಿಯ ಸರ್ವಜ್ಞ ಮಂಟಪದ ಎದುರು ಮೂರು ಸೀಮೆಯ ಮೂರು ಕೊಳಗದ ದೀಪಕ್ಕೆ ಮೂರು ಸೀಮೆಯಿಂದ ದೀಪದ ಎಣ್ಣೆ ಸಂಗ್ರಹಿಸಿ ತಂದು ಬೆಳಗುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿದವರು ಇಲ್ಲಿನ ಕುಣಬಿ ಜನಾಂಗದವರು.

  ಹೋಳಿ ಹಬ್ಬದಲ್ಲಿ ಇಡೀ ಒಂದು ರಾತ್ರಿ ಪೂರ ಹಾಡುವ ಕೊಡಚ್ಚಾದ್ರಿ ಚರಿತ್ರೆಯ ಹಾಡಿನ ಸಂಶೋಧನೆ ಮತ್ತು ಸಂಗ್ರಹ ಮಾಡುವ ಕೆಲಸ ಇತಿಹಾಸ ಮತ್ತು ಜನಪದ ಸಂಶೋದಕರು ಮಾಡಬೇಕು.

   ಕುಣಬಿ ಸಮುದಾಯ #ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಬಿರುದಾಂಕಿತ ಜೈನ ರಾಣಿ #ಚೆನ್ನಬೈರಾದೇವಿ ಆಸ್ಥಾನದಲ್ಲಿ ಇದ್ದವರು.

   ರಾಣಿ ಚೆನ್ನಬೈರಾದೇವಿಯ ಆಪ್ತ ಸೈನಿಕ ಬಳಗದವರಾದ ಈ ಕುಣಬಿ ಸಮಾಜದವರು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಕೆಳದಿ ಸೈನ್ಯ ರಾಣಿ ಚೆನ್ನ ಬೈರಾದೇವಿಯನ್ನ ಬಂದಿಸಿ ಮೇನೆಯಲ್ಲಿ #ಆನಂದಪುರಂ ಕೋಟೆಗೆ ಕರೆದೊಯ್ಯುವಾಗ ಬಾರೀ ಪ್ರತಿರೋದ ತೋರಿ, ಗೆರಿಲ್ಲಾ ಮಾದರಿಯಲ್ಲಿ ಅಡೆ ತಡೆ ಮಾಡಿ ತಮ್ಮ ಕವಣೆಯಿಂದ ಕಲ್ಲಿನ ಸುರಿಮಳೆ ಸುರಿಸುತ್ತಾರೆ.

   ಅಂತಿಮವಾಗಿ ಕುಣಬಿ ಜನಾಂಗದ #ಕೆಂಪಿ ಎಂಬ ಮಹಿಳೆ ಕೆಳದಿ ಸೈನಿಕರ ಮಧ್ಯೆ ನುಗ್ಗಿ ಹೋಗಿ  ರಾಣಿ ಚೆನ್ನ ಬೈರಾದೇವಿ ಬಂದಿಸಿ ಕರೆದೊಯ್ಯುತ್ತಿದ್ದ ಮೇನೆಯನ್ನ ತನ್ನೆರೆಡು ಕೈಯಿಗಳಿಂದ ಭದ್ರವಾಗಿ ಹಿಡಿದು ನಿಲ್ಲಿಸಿ ತನ್ನ ಆರಾಧ್ಯ ದೇವಿ #ಅವ್ವರಸಿ ಯನ್ನು ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾಳೆ ...ಆಗ್ರಹಿಸುತ್ತಾಳೆ...

   ಕೆಳದಿ ಸೈನಿಕರು ಎಷ್ಟು ಶ್ರಮಪಟ್ಟರೂ ಕುಣಬಿ ಜನಾಂಗದ ಕೆಂಪಿ ಕೈ ಮೇನೆಯಿಂದ ಬಿಡಿಸಲು ಸಾಧ್ಯವಾಗದಿದ್ದಾಗ ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ಖಡ್ಗದಿಂದ ಕೆಂಪಿಯ ಎರೆಡೂ ಕೈ ಕತ್ತರಿಸಿ ಮೇನೆಯನ್ನ ಆನಂದಪುರಂ ಕೊಟೆ ಕಡೆಗೆ ಸಾಗಿಸುತ್ತಾರೆ.

   ಈ ಹೋರಾಟದಲ್ಲಿ ತನ್ನ ಪತಿಯನ್ನು ಕಳೆದುಕೊಂಡು ತನ್ನ ಎರೆಡೂ ಕೈಗಳನ್ನು ಕಳೆದುಕೊಂಡ ಕುಣಬಿ ಕೆಂಪಿ ಕಥೆ ಇತಿಹಾಸದಲ್ಲಿ ದಾಖಲಾಗಲಿಲ್ಲ ಆದರೆ ಗೇರುಸೊಪ್ಪೆಯ ವ್ಯಾಪ್ತಿಯ ಪ್ರತಿ ಜೈನ ಧರ್ಮದ ಕುಟುಂಬದಲ್ಲಿ ಜನಪದ ಕಥೆ ಆಗಿ ಉಳಿದಿದೆ.

   ಆ ಸಂದರ್ಭದಲ್ಲಿ ಕೆಳದಿ ಅರಸರ ಸಂಸ್ಥಾನಕ್ಕೆ ಕುಣಬಿ ಕೆಂಪಿ ನೀಡಿದ ಶಾಪ ಸತ್ಯವಾಯಿತು ಎನ್ನುತ್ತಾರೆ, ಕೆಳದಿ ಅರಸರ ವಂಶದಲ್ಲಿ ಮುಂದೆ ದತ್ತು ಪಡೆದವರೇ ರಾಜ್ಯ ಆಳಿದರು.

    ಇಂತಹ ಸ್ವಾಮಿನಿಷ್ಟ ಕುಣಬಿ ಸಮಾಜದವರನ್ನ ಪಶ್ಚಿಮ ಘಟ್ಟದ ಅರಣ್ಯದ ಕಾವಲು ಪಡೆಯಾಗಿ ನೇಮಕ ಮಾಡಿದವರು ಮರಾಠ ಸಾಮ್ರಾಟ #ಶಿವಾಜಿ ಮಹಾರಾಜರು.

   ಈಗಲೂ ಗುಜರಾತಿನಿಂದ,ಮಹಾರಾಷ್ಟ್ರದ ರತ್ನಗಿರಿಯಿಂದ, ಗೋವಾ ರಾಜ್ಯ, ಕರ್ನಾಟಕ ಮತ್ತು ಕೇರಳದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟದ ಅರಣ್ಯವಾಸಿಗಳು ಈ ಕುಣಬಿ ಜನಾಂಗದವರು.

    ಗೋವಾ ಮಹಾರಾಷ್ಟ್ರ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಕುಣಬ ಜನಾಂಗ ಸೇರಿದೆ ಅಲ್ಲಿ ಶಾಸಕರು ಸಂಸದರು ಮಂತ್ರಿಗಳು ಆಗಿದ್ದಾರೆ ಆದರೆ ಕರ್ನಾಟಕ ರಾಜ್ಯದಲ್ಲಿ ಇವರನ್ನ ಬಿಸಿಎಂ A ಗೆ ಸೇರಿಸಿದೆ ಸರ್ಕಾರ.

    ಕರಾವಳಿ - ಗೋವಾ - ದಾಂಡೇಲಿ ಮತ್ತು ಯಲ್ಲಾಪುರದ ಕುಣಬಿ ಸಮಾಜದವರು ಅನೇಕ ಗೆಡ್ಡೆ ಗೆಣಸು ತಳಿ ಸಂರಕ್ಷಣೆ ಮಾಡಿದ್ದಾರೆ.

    ಕೆಲ ವರ್ಷಗಳ ಹಿಂದೆ ರಾಷ್ಟ್ರಮಟ್ಟದ ಕುಣಬಿ ಸಮಾಜದ ಸಮಾವೇಶ ಗೇರುಸೊಪ್ಪೆಯ ಮಾರುತಿ ಸ್ವಾಮಿಗಳ ಸಹಕಾರದಿಂದ ನಡೆದಿತ್ತು.

   ಈ ವರ್ಷದ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಸಂಶೋದನೆ ಮಾಡಿ ಡಾಕ್ಟರೇಟ್ ಪಡೆದ ಡಾಕ್ಟರ್ ವಸುಂದರಿ ಸಾದನೆ ಈ ಎಲ್ಲಾ ಕಾರಣಗಳಿಂದ ಸಾಮಾನ್ಯದ್ದಲ್ಲ.
  
    ಅದರಲ್ಲೂ ವಸುಂದರಿ ಅವರ ಸಂಶೋಧನೆ ಮತ್ತು ಪ್ರಬಂದದ ವಿಷಯ #ಮಲೆನಾಡಿನ_ಕುಣಬಿ_ಸಮುದಾಯದ_ಅಧ್ಯಯನ ಅಂದರೆ ಅವರ ಸಮೂದಾಯ ಕುರಿತದ್ದದ್ದೇ ಆಗಿದ್ದು ಇನ್ನೂ ವಿಶೇಷ.

    1997 ರಲ್ಲಿ ನಾನು, ಕಾಗೋಡು ಹೋರಾಟದ ನೇತಾರ ಹೆಚ್. ಗಣಪತಿಯಪ್ಪ, ವಿದಾನ ಪರಿಷತ್ ಮಾಜಿ ಸದಸ್ಯರಾಗಿದ್ದ  ಜಿ. ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು ಮತ್ತು ಹೋರಾಟಗಾರ ಕಲ್ಲೂರು ಮೇಘರಾಜ್ ಅನೇಕ ಬಾರಿ ಡಾಕ್ಟರೇಟ್ ಪಡೆದ ವಸುಂದರಿ ಊರು #ಬಸವಾಪುರಕ್ಕೆ ನಡೆದು ಹೋಗಿದ್ದೆವು.

    ಹೊಸನಗರ ತಾಲೂಕಿನ ಅರಸಾಳು ಸಮೀಪದ ಬಸವಾಪುರಕ್ಕೆ ಆಗ ರಸ್ತೆ ಇರಲಿಲ್ಲ ರೈಲು ಮಾರ್ಗದಲ್ಲೇ ನಡೆದು ಹೋಗಬೇಕು ಈಗಲೂ ಅಲ್ಲಿಗೆ ಭದ್ರಾ ಅಭಿಯಾರಣ್ಯದ ಕಾಡಾನೆಗಳು ಬರುತ್ತದೆ, ಇದು ಕಾಡಾನೆಗಳ ಕಾರಿಡಾರ್ ಆಗಿದೆ.

   ಒಮ್ಮೆ ಬಸವಾಪುರದಲ್ಲಿನ ಹುಲ್ಲಿನ ಗುಡಿಸಲಲ್ಲಿ ತಾತ್ಕಾಲಿಕ ಪ್ರಾಥಮಿಕ ಶಾಲೆಯನ್ನ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರಿಂದ ಉದ್ಘಾಟನೆ ಮಾಡಿದಾಗಲೂ ನಾನು ಹೋಗಿದ್ದೆ.

    ಇಂತಹ ಕುಗ್ರಾಮ ಬಸವಾಪುರದ ಗುಡ್ಡಗಾಡು ಜನಾಂಗವಾದ ಕುಣಬಿ ಸಮಾಜದ ಶ್ರೀಮತಿ ಕಮಲಮ್ಮ ಮತ್ತು ನಾರಾಯಣಪ್ಪ ದಂಪತಿ ಪುತ್ರಿ ವಸುಂದರಿ ಪದವಿ ವಿದ್ಯಾಬ್ಯಾಸ ಮಾಡಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಈಗ ಕುವೆಂಪು ವಿಶ್ವವಿದ್ಯಾಲಯದಲ್ಲಿನ 35ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪಡೆದದ್ದು ಮಹಾನ್ ಸಾದನೆ ಆಗಿದೆ.

    ವಸುಂದರಿ ಅವರ ತಂದೆ ತಾಯಿ ಮತ್ತು ಮಾರ್ಗದರ್ಶನ ಮಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಹಾಲಮ್ಮ ಎಂ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.

    ಈ ಮಹಾನ್ ಸಾಧನೆ ಮಾಡಿದ ಡಾಕ್ಟರ್ ವಸುಂದರಿ ಅವರಿಗೆ ಅಭಿನಂದಿಸುತ್ತೇನೆ.

   1995 ರಲ್ಲಿ ಮೊದಲ ಶಿವಮೊಗ್ಗ ಜಿಲ್ಲಾ ಕುಣಬಿ ಜನಾಂಗದ ಸಮಾವೇಶ ಮಾಡಿಸಿದ್ದ ನನಗೆ ಅವತ್ತಿನ ಶ್ರಮ ಸಾರ್ಥಕ ಅನ್ನಿಸಿತು.

    ನಿಜವಾದ ಗುಡ್ಡಗಾಡು ಅರಣ್ಯವಾಸಿಗಳಾದ ರಾಜ್ಯದ ಕುಣಬಿ ಜನಾಂಗವನ್ನು ಗುಜರಾತ್, ಗೋವಾ ರಾಜ್ಯದಂತೆ ನಮ್ಮ ರಾಜ್ಯದಲ್ಲೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸ ಆಗಬೇಕಾಗಿದೆ.

#kunbi #SahyadriCollege #shivamogga 
#hosanagara #arasalu #forest #doctarate

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...