ಹಜ್_ಯಾತ್ರೆ (ಭಾಗ-1)
ಇಸ್ಲಾಂ ಧರ್ಮದಲ್ಲಿ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.
2026ರ ( ಹಿಜರ ಶಕೆ 1447 AH) ಸೌದಿ ಅರೇಬಿಯಾದಲ್ಲಿ ಚಂದ್ರನ ವೀಕ್ಷಣೆಗೆ ಒಳಪಟ್ಟುಮೇ ತಿಂಗಳ ದಿನಾಂಕ 25-30 ರ ಪ್ರಮುಖ ದಿನಗಳನ್ನು ನಿರೀಕ್ಷಿಸಲಾಗಿದೆ.
ಹಜ್ ಮೆಕ್ಕಾ ಯಾತ್ರೆಯಲ್ಲಿ ಭಾರತದಿಂದ ಎಷ್ಟು ಇಸ್ಲಾಂ ಧರ್ಮದ ಅನುಯಾಯಿಗಳು ಭಾಗವಹಿಸುತ್ತಾರೆ?...
ಇದಕ್ಕೆ ಮಾನದಂಡ ಏನು?... ಇತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರದ ಮೂಲಕ ಮಾಹಿತಿ ನೀಡುವ ಸರಣಿ ಲೇಖನ ಓದಿ.
ಈ ವರ್ಷ 2026ರ ಹಜ್ ಯಾತ್ರೆಗೆ ಅಲ್ಲಿನ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರಗಳ ಒಪ್ಪಂದದಂತೆ ನಿಗದಿ ಪಡಿಸಿದ ಒಂದು ಲಕ್ಷದ ಎಪ್ಪತ್ತೈದು ಸಾವಿರದ ಇಪ್ಪತ್ತೈದು ಇಸ್ಲಾಂ ಧರ್ಮಿಯ ಯಾತ್ರಿಗಳು ಮಾತ್ರ ಭಾರತದಿಂದ ಹಜ್ ಯಾತ್ರೆ ಮಾಡಲು ಸಾಧ್ಯವಿದೆ.
ಸೌದಿ ಅರೇಬಿಯಾ ಜೊತೆಗಿನ ಹೊಸ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಭಾರತವು 2026 ಕ್ಕೆ 175,025 ಹಜ್ ಯಾತ್ರೆಗೆ ಅವಕಾಶಗಳನ್ನು ಪಡೆದುಕೊಂಡಿದೆ, ಕಳೆದ ವರ್ಷ 2025ರಲ್ಲೂ ಇಷ್ಟೇ ಸಂಖ್ಯೆಯ ಯಾತ್ರಿಗಳು ಅವಕಾಶ ಕಲ್ಪಿಸಲಾಗಿತ್ತು.
ಭಾರತ ದೇಶ ವಿಶ್ವದ ಎರಡನೆ ಅತಿ ಹೆಚ್ಚು ಹಜ್ ಯಾತ್ರಿಗಳು ಭಾಗವಹಿಸಲು ಅವಕಾಶ ಪಡೆದ ದೇಶವಾಗಿದೆ.
ವಿಶ್ವದ ಅತಿ ಹೆಚ್ಚು ಹಜ್ ಯಾತ್ರಿಗಳ ಅವಕಾಶ ಪಡೆಯುವ ದೇಶ ಇಂಡೋನೇಷಿಯ, ಅಲ್ಲಿಂದ ಪ್ರತಿ ವರ್ಷ ಹಜ್ ಯಾತ್ರೆಗೆ ಸೌದಿ ಅರೇಬಿಯಾದ ಜೊತೆ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ಎರೆಡು ಲಕ್ಷದ ಇಪ್ಪತ್ತು ಸಾವಿರ ಯಾತ್ರಾರ್ಥಿಗಳಿಗೆ ಹಜ್ ಯಾತ್ರೆ ಅವಕಾಶ ಪಡೆದಿದೆ.
ಮೆಕ್ಕಾದಲ್ಲಿನ ಹಜ್ ಯಾತ್ರೆಯ ಕಡ್ಡಾಯ ಧಾರ್ಮಿಕ ವಿಧಿವಿಧಾನಗಳು ಕೇವಲ 5 ರಿಂದ 6 ದಿನಗಳವರೆಗೆ (ಧು ಅಲ್-ಹಿಜ್ಜಾದ 8 ರಿಂದ 13ನೇ ದಿನ) ನಡೆಯುತ್ತವೆ.
ಆದರೆ ಭಾರತದಿಂದ ತೆರಳುವ ಯಾತ್ರಿಕರು ಪ್ರಯಾಣ ಮತ್ತು ಇತರ ಇಸ್ಲಾಮಿಕ್ ಪದ್ಧತಿಗಳಿಗಾಗಿ ಒಟ್ಟಾರೆಯಾಗಿ 30 ರಿಂದ 40 ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆಯುತ್ತಾರೆ.
ಈ ವರ್ಷ ವಿಶ್ವದಾದ್ಯಂತ 2026ರ ಹಜ್ ಯಾತ್ರೆಯಲ್ಲಿ ಸುಮಾರು 2.5 ಮಿಲಿಯನ್ ಅಂದರೆ 25 ಲಕ್ಷ ಹಜ್ ಯಾತ್ರಿಗಳು ಹಜ್ ನಿರ್ವಹಿಸುತ್ತಿದ್ದಾರೆ.
ಸೌದಿ ಅರೇಬಿಯಾ ಕ್ರಮೇಣ ಹಜ್ ಯಾತ್ರಿಗಳ ಸಂಖ್ಯೆಯನ್ನು 5 ಮಿಲಿಯನ್ ಅಂದರೆ 50 ಲಕ್ಷ ಜನರಿಗೆ ಹೆಚ್ಚಿಸಲು ಉದ್ದೇಶಿಸಿದೆ ಆದರೆ ಅದು ಕಾರ್ಯಸಾಧ್ಯವಾಗಲು ಮೆಕ್ಕಾದಲ್ಲಿ ಹೆಚ್ಚಿನ ಮೂಲಸೌಕರ್ಯ ಅಭಿವೃದ್ಧಿ ಮಾಡಬೇಕಾಗಿದೆ.
ಸೌದಿ ಅರೇಬಿಯಾದ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ನಿಯಮದ ಪ್ರಕಾರ ಪ್ರತಿ ದೇಶದ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ಒಂದು ಸಾವಿರ (1,000) ಮುಸ್ಲಿಮರಿದ್ದರೆ ಅಲ್ಲಿ ಒಬ್ಬರಿಗೆ ಮಾತ್ರ ಹಜ್ ಯಾತ್ರೆಗೆ ಅನುಮತಿ ನೀಡಲಾಗುತ್ತದೆ.
ಸೌದಿ ಸರ್ಕಾರವು ಈ ಕೋಟಾವನ್ನು ನಿರ್ಧರಿಸುವಾಗ ಆಯಾ ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
ಉದಾಹರಣೆಗೆ ಸುಮಾರು 20 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಸೌದಿ ಅರೇಬಿಯಾ ಸರ್ಕಾರವು ಸುಮಾರು 1,75,025 ಯಾತ್ರಿಕರ ಕೋಟಾವನ್ನು ನಿಗದಿಪಡಿಸಿದೆ.
ಮುಸ್ಲಿಂ ಧರ್ಮಿಯರ ಹಜ್ ಯಾತ್ರೆ ವಾರ್ಷಿಕ ತೀರ್ಥಯಾತ್ರೆಯಾಗಿದೆ.
2026ರ ( ಹಿಜರ ಶಕೆ 1447 AH) ಸೌದಿ ಅರೇಬಿಯಾದಲ್ಲಿ ಚಂದ್ರನ ವೀಕ್ಷಣೆಗೆ ಒಳಪಟ್ಟುಮೇ ತಿಂಗಳ ದಿನಾಂಕ 25-30 ರ ಪ್ರಮುಖ ದಿನಗಳನ್ನು ನಿರೀಕ್ಷಿಸಲಾಗಿದೆ.
ಇಸ್ಲಾಂ ಧರ್ಮದ ಹಿಜರಿ ಶಕೆಯ ಚಂದ್ರಮಾನದ ಕ್ಯಾಲೆಂಡರ್ ಇಂಗ್ಲೀಷ್ ಗ್ರೆಗೋರಿಯನ್ ಕ್ಯಾಲೆಂಡರ್ ಗಿಂತ 11 ದಿನಗಳು ಕಡಿಮೆ ಇರುವುದರಿಂದ ಹಜ್‌ನ ಗ್ರೆಗೋರಿಯನ್ ಕ್ಯಾಲೆಂಡರ್ ದಿನಾಂಕವು ಪ್ರತಿ ವರ್ಷ ಬದಲಾಗುತ್ತದೆ ಮತ್ತು ಕಾಲಾನಂತರದಲ್ಲಿ ತೀರ್ಥಯಾತ್ರೆ ಎಲ್ಲಾ ತಿಂಗಳುಗಳು ಮತ್ತು ಋತುಗಳಲ್ಲಿ ಬರುತ್ತದೆ.
ಹಜ್ ಯಾತ್ರೆಯ ನನ್ನ ಈ ಲೇಖನ ಸರಣಿಯಲ್ಲಿ ಹಜ್ ಯಾತ್ರೆ ಇತಿಹಾಸ - ದುರಂತಗಳು - ಧಾರ್ಮಿಕ ಕ್ರಮಗಳ ವಿವರಗಳು ವಿಶೇಷವಾಗಿ ಮುಸ್ಲೀಮೇತರರು ತಿಳಿಯುವಂತೆ ಬರೆಯಲಾಗುತ್ತದೆ.
ಈ ಲೇಖನ ಸರಣಿ ದೀರ್ಘವಾಗಿರುವುದರಿಂದ ಅದನ್ನು ಕೆಲವು ಭಾಗಗಳಾಗಿ ವಿಂಗಡಿಸಿ ಪ್ರಕಟಿಸಲಾಗುತ್ತದೆ ಭಾಗ -2 ಮುಂದಿನ ದಿನದಲ್ಲಿ ನಿರೀಕ್ಷಿಸಿ.
#hujj #mecca #madina #UAENews #islam
#indonesia #indian #muslim #hijari #grogeriancalender #moon
Comments
Post a Comment