#ಪ್ರವೇಶ_ಪರೀಕ್ಷೆ
#ಜನಿವಾರದ_ವಿವಾದ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಪರೀಕ್ಷೆಯನ್ನು ದಿನಾಂಕ ಮೇ 3, 2026 ಭಾನುವಾರ ನಡೆಸಲಿದೆ.
ಮಧ್ಯಾಹ್ನ 2:00 ರಿಂದ ಸಂಜೆ 5:20 ರವರೆಗೆ ಒಂದೇ ಪಾಳಿಯಲ್ಲಿ ಪೆನ್ನು-ಪೇಪರ್ (ಆಫ್‌ಲೈನ್) ಮೋಡ್‌ನಲ್ಲಿ ನಡೆಯಲಿದೆ.
ಈ ಪರೀಕ್ಷೆಗಳಲ್ಲಿ ವಾಮ ಮಾರ್ಗದಲ್ಲಿ ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಇತ್ಯಾದಿ ವಂಚನೆ ಮಾಡುವುದನ್ನ ತಡೆಗಟ್ಟಲು, ಆಧುನಿಕ ತಂತ್ರಜ್ಞಾನದ ಗುಪ್ತ ಕ್ಯಾಮೆರಾ ಮತ್ತು ಮೈಕ್ರೋ ಫೋನ್ ಇತ್ಯಾದಿ ಪರೀಕ್ಷಾ ಕೇಂದ್ರದ ಒಳಗೆ ತರದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅನೇಕ ನಿಷೇಧಗಳನ್ನ ಹೇರಿದೆ ಮತ್ತು ಏನನ್ನ ತರಬಹುದು ಎಂದು ಮಾರ್ಗಸೂಚಿ ಪ್ರಕಟಿಸಿದೆ.
ಪರೀಕ್ಷ ಕೇಂದ್ರ ಪ್ರವೇಶದ ಮುನ್ನ ಕಡ್ಡಾಯ ತಪಾಸಣೆ ಮೂಲಕ ಪ್ರವೇಶ ನೀಡುತ್ತದೆ ಈ ಕಾರಣದಿಂದ ಸುಲಭ ತಪಾಸಣೆಗಾಗಿ ಡ್ರೆಸ್ ಕೋಡ್ ಮಾಡಿದೆ.
ಅನೇಕ ಧಾರ್ಮಿಕ ಕಾರಣದ ವಿನಾಯಿತಿ ಮತ್ತು ಆರೋಗ್ಯ ಕಾರಣದ ವಿನಾಯಿತಿಗಳನ್ನ ನೀಡಿದೆ ಅಂತವರು ಪರೀಕ್ಷಾ ಕೇಂದ್ರಕ್ಕೆ ಆದಷ್ಟು ಮೊದಲಿಗೆ ಹೋಗಿ ತಮ್ಮ ತಪಾಸಣೆಗಳನ್ನು ಪೂರ್ಣಗೊಳಿಸಬೇಕು.
ನೀಟ್ ಪರೀಕ್ಷೆಯಲ್ಲಿ ಜನಿವಾರ ಧರಿಸುವ ಪ್ರಮುಖ ಅಂಶಗಳು ಮತ್ತು ವಿವಾದಗಳು ಹೆಚ್ಚು ಸುದ್ದಿ ಮಾಡುತ್ತಿದೆ.
ಏಪ್ರಿಲ್ 2026 ರಲ್ಲಿ ಕರ್ನಾಟಕದ ಕೆಲವು ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ಬ್ರಾಹ್ಮಣ/ ವೈಶ್ಯ ಮತ್ತು ಕ್ಷತ್ರಿಯ ವಿದ್ಯಾರ್ಥಿಗಳಿಗೆ ತಮ್ಮ ಧಾರ್ಮಿಕ ಆಚರಣೆಯ ಪವಿತ್ರ ದಾರವಾದ ಜನಿವಾರ ತೆಗೆಯುವಂತೆ ಕೆಲವು ಅಧಿಕಾರಿಗಳು ಒತ್ತಾಯಿಸಿ ತೆಗೆಸಿದ್ದರು ಇದು ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿಗೆ ವಿರುದ್ಧವಾಗಿದ್ದರಿಂದ ಅಂತವರ ಮೇಲೆ ಸರ್ಕಾರ ಕಾನೂನು ಕ್ರಮ ಜರುಗಿಸಿದೆ.
ಈ ವಿಚಾರ ಹೈಕೋರ್ಟ್ ನಲ್ಲಿ ತಮ್ಮ ದಾರ್ಮಿಕ ಹಸ್ತಕ್ಷೇಪ ಮತ್ತು ಕಿರುಕುಳ ಎಂಬ ದೂರುಗಳಿಗೆ ಕಾರಣವಾಯಿತು.
ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿಗಳು ಮತ್ತು ಡ್ರೆಸ್ ಕೋಡ್ ಪರೀಕ್ಷೆಯಲ್ಲಿ ದುಷ್ಕೃತ್ಯವನ್ನು ತಡೆಗಟ್ಟುವ ಏಕೈಕ ಗುರಿಯನ್ನು ಹೊಂದಿದೆ ಅದಕ್ಕಾಗಿ ಅದು ಅಭ್ಯರ್ಥಿಗಳ ದೇಹದ ಮೇಲೆ ಧರಿಸುವ ಲೋಹದ ವಸ್ತುಗಳನ್ನು ಮಾತ್ರ ತೆಗೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತದೆ.
ಯಾವುದೇ ಧಾರ್ಮಿಕ ಆಚರಣೆಯ ದಾರ ಧರಿಸಬಹುದು ಆದರೆ ಅದರ ಜೊತೆ ಲೋಹದ ಪದಕ, ಲಾಕೆಟ್ ಇತ್ಯಾದಿ ದರಿಸಲು ಅನುಮತಿ ಮಾತ್ರ ನಿರಾಕರಿಸಲಾಗಿದೆ.
ಆದರೂ ಕೆಲವು ಮೇಲ್ವಿಚಾರಕರು ಯಾವುದೇ ಲೋಹದ ವಸ್ತು ಜೋಡಿಸದ ಹತ್ತಿಯಿಂದ ತಯಾರಿಸಿದ ಜನಿವಾರದ ದಾರವನ್ನೂ ದರಿಸಿದರೆ ಪ್ರವೇಶ ನಿರಾಕರಿಸುವುದು ಮತ್ತು ಅದನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತಾರೆ ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.
ಬಟ್ಟೆ ಧರಿಸಬಹದು ಆದರೆ ಹತ್ತಿಯ ದಾರದ ಎಳೆಯ ಜನಿವಾರ ದರಿಸುವುದನ್ನ ನಿರಾಕರಿಸುವುದು ಏಕೆ? ಎಂಬ ಪ್ರಶ್ನೆ ಮೂಡುತ್ತದೆ.
ಈಗ ಈ ಚರ್ಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷ ರಾಜಕಾರಣಗಳು ಜೊತೆಯಾಗಿ ಹಿಂದೂ ಧರ್ಮದ ವರ್ಣ ವ್ಯವಸ್ಥೆಗಳ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಸಸ್ಯಹಾರಿಗಳಾದ ಬ್ರಾಹ್ಮಣ ವೈಶ್ಯರು ಮತ್ತು ಮಾಂಸಹಾರಿಗಳಾದ ಕ್ಷತ್ರಿಯರೂ ಜನಿವಾರ ಧರಿಸುತ್ತಾರೆ ಆದ್ದರಿಂದ ಈ ವಿಚಾರ ಜನಿವಾರ ಧರಿಸುವ
V/S ದರಿಸದವರ ತರ್ಕ ಮತ್ತು ಕುತರ್ಕದ ಚರ್ಚೆಗೆ ಕಾರಣವಾಗಿದೆ.
ಆದ್ದರಿಂದ ಪರೀಕ್ಷಾ ಸಂಸ್ಥೆ ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಗುರುತುಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
#ವಿನಾಯಿತಿಗಳು: ಮಂಗಳಸೂತ್ರವನ್ನು ಅನುಮತಿಸಲಾಗಿದೆ.
#ಧಾರ್ಮಿಕ_ಉಡುಪಿಗೆ_NEET_ಡ್ರೆಸ್_ಕೋಡ್
ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುತ್ತದೆ.
ಆದಾಗ್ಯೂ ಅವರಿಗೆ ಕೇಂದ್ರದಲ್ಲಿ ಹೆಚ್ಚುವರಿ ತಪಾಸಣೆ ಬೇಕಾಗಬಹುದು ಆದ್ದರಿಂದ ಅವರು ಬೇಗನೆ ಪರೀಕ್ಷಾ ಕೇಂದ್ರ ತಲುಪುವುದರಿಂದ ಕೊನೆಯ ಕ್ಷಣದ ಒತ್ತಡವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
#ಅನುಮತಿಸಲಾದ_ವಸ್ತುಗಳು:
ನೀಟ್ ಪ್ರವೇಶ ಪತ್ರ,
ಪಾಸ್‌ಪೋರ್ಟ್ ಗಾತ್ರದ ಫೋಟೋ,
ಮಾನ್ಯ ಮಾಡಿದ ಗುರುತಿನ ಚೀಟಿ,
ಪಾರದರ್ಶಕ ನೀರಿನ ಬಾಟಲ್ ಮತ್ತು ಅಗತ್ಯವಿದ್ದರೆ ವೈದ್ಯಕೀಯ ದಾಖಲೆಗಳು.
#CE_2026ರ ಮತ್ತು KCET ಪರೀಕ್ಷಾ ಅಭ್ಯರ್ಥಿಗಳು ಧರಿಸಬೇಕಾದ ಡ್ರೆಸ್ ಕೊಡ್ ಹೇಗಿದೆ ಅಂದರೆ....
ದೊಡ್ಡ ಗುಂಡಿಗಳು ಅಥವಾ ಜಿಪ್‌ಗಳಿಲ್ಲದ ತಿಳಿ ಬಣ್ಣದ ಸರಳ ಅರ್ಧ ತೋಳಿನ ಉಡುಪುಗಳು,ಟಿ-ಶರ್ಟ್‌ಗಳು ಅಥವಾ ಕುರ್ತಾಗಳು ಧರಿಸಬಹುದು.
ಪೂರ್ಣ ತೋಳಿನ ಶರ್ಟ್‌ಗಳು, ಜಾಕೆಟ್‌ಗಳು, ಹೂಡೀಸ್ ಮತ್ತು ದಪ್ಪನೆಯ ಅಡಿಭಾಗದ ಬೂಟುಗಳನ್ನು ಧರಿಸಬಾರದು.
ಸ್ಯಾಂಡಲ್‌ಗಳು ಅಥವಾ ಚಪ್ಪಲಿಗಳಂತಹ ತೆರೆದ ಪಾದರಕ್ಷೆಗಳನ್ನು ಪರೀಕ್ಷೆ ಬರೆಯುವವರು ಆರಿಸಿಕೊಳ್ಳುವುದರಿಂದ ಸುಗಮವಾಗಿ ತಪಾಸಣೆ ಮುಗಿಸಿ,ಕಡಿಮೆ ಫ್ರಿಸ್ಕಿಂಗ್ ಪ್ರಕ್ರಿಯೆಯನ್ನು ಮುಗಿಸಿ ಪರೀಕ್ಷೆ ಬರೆಯಲು ಪ್ರವೇಶ ಪಡೆಯ ಬಹುದು.
#ಬಾಟಮ್_ವೇರ್
ಸರಳ ಪ್ಯಾಂಟ್, ಜೀನ್ಸ್ ಅಥವಾ ಸಲ್ವಾರ್-ಕಮೀಜ್.
#ಪಾದರಕ್ಷೆಗಳು
ಚಪ್ಪಲಿಗಳು, ಸ್ಯಾಂಡಲ್‌ಗಳು ಅಥವಾ ಕಡಿಮೆ ಹಿಮ್ಮಡಿಯ ಬೂಟುಗಳನ್ನು ಹೊಂದಿರುವ ಸ್ಯಾಂಡಲ್‌ಗಳು.
#ನಿಷೇಧಿತ_ವಸ್ತುಗಳು.
#ಲೋಹದ_ಪರಿಕರಗಳು, ಆಭರಣಗಳು ಮತ್ತು ತಲೆ ಹೊದಿಕೆಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗಿದೆ.
ಆಭರಣಗಳು,ಕಿವಿಯೋಲೆಗಳು, ಸರಗಳು, ಭಾರವಾದ ಬೆಲ್ಟ್‌ಗಳು, ಲೋಹದ ವಸ್ತುಗಳು,ಝಿಪ್ಪರ್‌ಗಳು, ಬ್ರೂಚೆಸ್, ಟೋಪಿಗಳು/ಕ್ಯಾಪ್‌ಗಳು ಮತ್ತು ಕೈಗಡಿಯಾರಗಳು.
ಪೂರ್ಣ ತೋಳಿನ ಬಟ್ಟೆಗಳು, ಜಾಕೆಟ್‌ಗಳು, ಹೂಡಿಗಳು ಮತ್ತು ಅಲಂಕಾರಿಕ, ಪದರಗಳ ಉಡುಪುಗಳು.
ಕೈಚೀಲಗಳು, ಕನ್ನಡಕಗಳು, ಕೈಚೀಲಗಳು, ಹೇರ್‌ಪಿನ್‌ಗಳು ಮತ್ತು ಹೇರ್‌ಬ್ಯಾಂಡ್‌ಗಳು.
ಎಲೆಕ್ಟ್ರಾನಿಕ್ ಸಾಧನಗಳು (ದೂರವಾಣಿಗಳು, ಕ್ಯಾಲ್ಕುಲೇಟರ್‌ಗಳು, ಬ್ಲೂಟೂತ್ ಸಾಧನಗಳು, ಇಯರ್‌ಫೋನ್‌ಗಳು).
ಆಹಾರ ಪದಾರ್ಥಗಳು ಅಥವಾ ನೀರಿನ ಬಾಟಲಿಗಳು (ವೈದ್ಯಕೀಯ ಕಾರಣಗಳಿಗಾಗಿ ಅನುಮತಿಸದ ಹೊರತು).
#ಪರೀಕ್ಷಾ_ದಿನದ_ಪ್ರಮುಖ_ಮಾರ್ಗಸೂಚಿಗಳು ...
ಕಟ್ಟುನಿಟ್ಟಾದ, ದೀರ್ಘವಾದ, ಭದ್ರತಾ ತಪಾಸಣೆಗಳಿಗೆ ಸಮಯವನ್ನು ಅನುಮತಿಸಲು ಮುಂಚಿತವಾಗಿ ಆಗಮಿಸಿ.
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು: ಫೋನ್‌ಗಳು, ಬ್ಲೂಟೂತ್ ಸಾಧನಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಇರುವುದರಿಂದ ಅದನ್ನು ಯಾವ ಕಾರಣಕ್ಕೂ ತರಬೇಡಿ.
ಲೋಹ ಶೋಧಕ ತಪಾಸಣೆಯ ಸಮಯದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸರಳವಾದ ಉಡುಪನ್ನು ಕಾಪಾಡಿಕೊಳ್ಳಿ.
ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಯಾವುದೇ ನಿರ್ದಿಷ್ಟ, ಹೆಚ್ಚುವರಿ ಸೂಚನೆಗಳಿಗಾಗಿ ಅಭ್ಯರ್ಥಿಗಳು ತಮ್ಮ ಅಧಿಕೃತ KEA ಪ್ರವೇಶ ಪತ್ರವನ್ನು ಪರಿಶೀಲಿಸಬೇಕು.
ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಉನ್ನತ ಶಿಕ್ಷಣ ನೀಡುವ ಸಾಮರ್ಥ್ಯ ಸರ್ಕಾರಕ್ಕೆ ಸಾದ್ಯವಿಲ್ಲವಾದ್ದರಿಂದ ಅರ್ಹತೆಯ ಮಾನದಂಡದ ಪ್ರಕಾರ ಕೆಲವೇ ಕೆಲವರಿಗೆ ಆಯ್ಕೆ ಮಾಡಲು ಇಂತಹ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಮತ್ತು ಇಂತಹ ಪರೀಕ್ಷೆಗಳನ್ನ ಆಧುನಿಕ ತಂತ್ರಜ್ಞಾನದ ಮೈಕ್ರೋಫೋನ್ - ಕ್ಯಾಮೆರಾಗಳನ್ನ ಬಳಸಿ ನಕಲು ಮಾಡುವುದನ್ನ ತಡೆಯಲು ಕಡ್ಡಾಯ ತಪಾಸಣೆ ಹಾಗೂ ನಿಷೇಧಿತ ವಸ್ತುಗಳ ಪ್ರವೇಶಕ್ಕೆ ನಿರ್ಬಂದ ವಿದಿಸಿದೆ.
#neetexam #checking #exams #dresscode
#spycamera #microphone
Comments
Post a Comment