Skip to main content

3595. ಕಾಟು ಮಾವಿನ ಹಣ್ಣಿನ ಸಾಸಿವೆ


#ಕಾಟು_ಮಾವು.

 ಇವತ್ತು ನಮ್ಮ ಆಸ್ತಾನದ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರು ತಂದದ್ದು.

   ಇದರ ತಳಿ ಸಂರಕ್ಷಣೆ ಮಾಡ ಬೇಕು ಅಷ್ಟು ರುಚಿಕರವಾದ ಕಾಟು ಮಾವು ಇದು.

  ಬೂದ್ಯಪ್ಪ ಗೌಡರ ಮನೆಯ ಈ ಕಾಟು ಮಾವು ತಳಿ ವಿಶಿಷ್ಟವಾದ ರುಚಿ - ಘಮ ಮತ್ತು ಗಾತ್ರದ್ದು.

    ಜೀರಿಗೆ ಸುವಾಸನೆಯ, ಸಿಹಿ ಹುಳಿಯ ಸಮ್ಮಿಶ್ರದ ಗಾಡ ಬಣ್ಣದ ಚಿಕ್ಕ ಗಾತ್ರದ ಅದರಲ್ಲೂ ಗಿಳಿ ಮೂತಿಯ ಕಾಟು ಮಾವು.

   ಇದು ವರ್ಷ ಬಿಟ್ಟು ವರ್ಷ ಫಸಲು ನೀಡುವ ಮರ ಈ ಕಾಟು ಮಾವಿನ ಸಿಪ್ಪೆ ಕೂಡ ನೀವು ತಿಂದರೆ ಬಿಡುವುದಿಲ್ಲ.

  ಮಾವಿನ ತಳಿ ಸಂರಕ್ಷಣೆ ಮಾಡುವ ಮಲೆನಾಡಿನ ಅಪ್ಪೆ ಮಿಡಿ ನರ್ಸರಿಯವರು ಈ ಮರ ಒಮ್ಮೆ ಬಂದು ನೋಡ ಬೇಕು.

   ಮಲೆನಾಡಿನಲ್ಲಿ ಕಾಟು ಮಾವುಗಳು ಸಾವಿರಾರು ರುಚಿ ಮತ್ತು ಗಾತ್ರದಲ್ಲಿ ಇದೆ.

    ನೈಸರ್ಗಿಕವಾಗಿ ತಳಿ ಸಂಕಿರಣದಿಂದ ಹೊಸ ಹೊಸ ರುಚಿಯ ಕಾಟು ಮಾವಿನ ಹಣ್ಣು ಬರಬಹುದು.

   ಕಾಟು ಮಾವಿನ ಹಣ್ಣುಗಳಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ ಆದ್ದರಿಂದ ಅಲ್ಲಿನ ತರಕಾರಿ ಅಂಗಡಿಗಳಲ್ಲಿ ತರಹೇವಾರಿ ಕಾಟು ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುತ್ತಾರೆ.

   ಆದರೆ ಮಲೆನಾಡಿನಲ್ಲಿ ಅಷ್ಟೆಲ್ಲ ವಿದದ ಕಾಟು ಮಾವಿನ ಹಣ್ಣುಗಳ ಮರ ಇದ್ದರೂ ಅದು ಮಾರಾಟಕ್ಕೆ ಇಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ಕಾಟು ಮಾವಿನ ಹಣ್ಣಿನ ಸಾಸಿವೆ ಹೆಚ್ಚಿನವರು ತಯಾರಿಸುವುದಿಲ್ಲ ಮತ್ತು ಬಳಸುವುದಿಲ್ಲ.

   ಇದು ಸುಲಭವಾಗಿ ಖರ್ಚಿಲ್ಲದೇ ತಯಾರಿಸುವ ರುಚಿಕರ ಖಾದ್ಯ ಒಮ್ಮೆ ತಯಾರಿಸಿ ತಿಂದು ನೋಡಿ, ಇನ್ನೊಂದು ವಿನಂತಿ ಕಾಟು ಮಾವಿನ ಹಣ್ಣೇ ಆಗಬೇಕಿಲ್ಲ ನಿಮಗೆ ಸಿಗುವ ಯಾವುದೇ ಮಾವಿನ ಹಣ್ಣಿನಲ್ಲೂ ಇದನ್ನು ಮಾಡ ಬಹುದು.

   ಆದರೆ ಕಾಟು ಮಾವಿನ ಹಣ್ಣಿನ ರುಚಿ ಮತ್ತು ಘಮದ ಲೆವೆಲ್ಲೇ ಬೇರೆ.

   ಇವತ್ತು ಈ ವಿಶೇಷ ಕಾಟು ಮಾವಿನ ಹಣ್ಣು ತರುವುದಾಗಿ ಬೂಧ್ಯಪ್ಪ ಗೌಡರು ತಿಳಿಸಿದ್ದರಿಂದ ಅವರಿಗೆ ಕಾಯುತ್ತಾ ಅಡುಗೆ ತಯಾರಿ ಮಾಡಿದ್ದೆ.

   ನನ್ನ ಪತ್ನಿ ಮಗಳ ಬಾಣಂತನಕ್ಕೆ ಬೆಂಗಳೂರಿಗೆ ಹೋಗಿರುವುದರಿಂದ ನಮ್ಮ ಮನೆಯ ನಿತ್ಯದ ಅಡುಗೆ ನನ್ನದೇ ಆಗಿದೆ.

   ಕಾಟು ಮಾವಿನ ಹಣ್ಣಿನ ಸಾಸಿವೆ ಒಂದು ಸಾಂಪ್ರದಾಯಿಕ ವಿಧಾನವಾಗಿದೆ, ಸಿಹಿ ಮತ್ತು ಹುಳಿ ಮಿಶ್ರಿತ ಮಲೆನಾಡು ಶೈಲಿಯ ಖಾದ್ಯಇದು.

   ಕಾಡು ಮಾವಿನ ಹಣ್ಣು, ತೆಂಗಿನಕಾಯಿ, ಸಾಸಿವೆ ಮತ್ತು ಬೆಲ್ಲ ಬಳಸಿ ತಯಾರಿಸುವ ಸುಲಭವಾದ ಮತ್ತು ರುಚಿಕರವಾದ ಸಾಸಿವೆ ಅಥವ ಈ ಗೊಜ್ಜು ಬಿಸಿ ಅನ್ನದೊಂದಿಗೆ ತಿನ್ನಲು  ಅತ್ಯುತ್ತಮ ಕಾಂಬಿನೇಶನ್ ಆಗಿದೆ.

  ಚೆನ್ನಾಗಿ ತೊಳೆದ ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆದು ರಸವನ್ನು ಕಿವುಚಿ ಗೊರಟಿನೊಂದಿಗೆ ಪಾತ್ರೆಯಲ್ಲಿಡಿ.

    ತೆಂಗಿನತುರಿ, ಒಣ ಮೆಣಸಿನಕಾಯಿ ಅಥವಾ ಹಸಿರು ಮೆಣಸಿನಕಾಯಿ,ಸಾಸಿವೆ ಮತ್ತು ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    ರುಬ್ಬಿದ ಮಸಾಲೆಯನ್ನು ಮಾವಿನ ಹಣ್ಣಿನ ರಸಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ.

  ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ.

   ಮಾವಿನ ಹಣ್ಣು ತುಂಬಾ ಹುಳಿಯಾಗಿದ್ದರೆ ಹೆಚ್ಚಿನ ಬೆಲ್ಲ ಬಳಸಿ,ಗಾಂಧಾರಿ ಮೆಣಸಿನಕಾಯಿ (Green chilli) ಬಳಸಿದರೆ ವಿಶಿಷ್ಟ ರುಚಿ ಸಿಗುತ್ತದೆ.

   ಇವತ್ತಿನ ಈ ಕಾಟು ಮಾವಿನ ಹಣ್ಣಿನ ಮಾಲಿಕರಾದ #ಬೂಧ್ಯಪ್ಪಗೌಡರಿಗೆ ಸ್ವಲ್ಪ ಖಾರ ಜಾಸ್ತಿ ಬೇಕು ಆದ್ದರಿಂದ ಒಣ ಮೆಣಸು ಮತ್ತು ಸಾಸಿವೆ ಕಾಳು ಜಾಸ್ತಿ ಹಾಕಿದ್ದೆ ನಂತರ ಒಗ್ಗರಣೆ ನೀಡಿದೆ.

   ಸೆಮಿ ಪಾಲಿಶ್ ಅಕ್ಕಿಯ ಅನ್ನ ಮಾಡಿ ಅದರ ಅರ್ದ ಬಾಗ ಮೊಸರನ್ನ ಮಾಡಿ ಬಾಳೆ ಎಲೆಯಲ್ಲಿ ಕಟ್ಟಿ ಇಟ್ಟಿದ್ದೆ.

   ಗೋಕರ್ಣ ಮಜ್ಜಿಗೆ ಮೆಣಸು ಹುರಿದು, ನಾನೇ ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ ಜೊತೆ ಊಟ ಮಾಡಿದ ನಮ್ಮ ಆಸ್ತಾನ ಜೋತಿಷಿಗಳು ನನ್ನ ಕೈ ರುಚಿಗೆ ಫಿದಾ ಆಗಿದ್ದಾರೆ.

   ಮೇಷ ರಾಶಿಗೆ ರಾಜ ಯೋಗ ಜೂನ್ 1 ರಿಂದ ನಿಮ್ಮ ಬಾಗ್ಯದ ಬಾಗಿಲು ತೆರೆಯಲಿದೆ ಎಂದು ಭವಿಷ್ಯ ಬೇರೆ ಹೇಳಿ ಹೋದರು.

    ನಮ್ಮಿಷ್ಟದ ರುಚಿಕರ - ಶುಚಿಕರ ಅಡುಗೆ ನಾವೇ ತಯಾರಿಸಲು ಹೆಚ್ಚಿನ ಶ್ರಮ ಬೇಡ ಆದರೆ ಹೆಚ್ಚಿನ ತಾಳ್ಮೆ ಮಾತ್ರ ಬೇಕು.

   ಜೋತಿಷಿ ಬೂಧ್ಯಪ್ಪ ಗೌಡರ ಮನೆಯ ಈ ಕಾಟು ಮಾವಿನ ತಳಿ ಸಂರಕ್ಷಣೆ ಮಾಡುವ ಆಸಕ್ತಿ ಇರುವವರಿಗೆ ಇವರ ಸಂಪರ್ಕ ಮಾಡಲು ವಿಳಾಸ ಮತ್ತು ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ.

#selfcooking #selfcook #localverity #mango 
#receipe #mydish #mangoseason

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...