ಕಲ್ಯಾಣ್_ಜೀ_ ಭಗತ್ ಪ್ರಾರಂಬಿಸಿದ ಮೊದಲ ವರ್ಲಿ ಮಟಕಾ.
ಇದಕ್ಕೆ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.
ನನ್ನ ಹಿಂದಿನ ರತನ್ ಖತ್ರಿ ಲೇಖನ ಓದಿದವರು ಕಲ್ಯಾಣ್ ಜಿ ಮಟಕಾ ಮಾರ್ಕೆಟ್ ಬಗ್ಗೆ ಕೂಡ ಬರೆಯುಂತೆ ವಿನಂತಿಸಿದ್ದರಿಂದ ಈ ಲೇಖನ ಓದಿ...
#ರತನ್_ಲಾಲ್_ಖತ್ರಿಗಿಂತ ಮೊದಲಿಗರು ಕಲ್ಯಾಣ್ ಜಿ ಭಗತ್ ಇವರೇ ಭಾರತದ ಮೊದಲ ಮಟ್ಕಾ / ಓಸಿ ಜುಗಾರಿಯ ಪ್ರವರ್ತಕರು.
ಆದರೆ ಮಟ್ಕಾ ಕಿಂಗ್ ಬಿರುದು ಜನಪ್ರಿಯತೆ ಮಾತ್ರ ರತನ್ ಲಾಲ್ ಖತ್ರಿಗೆ ಸೀಮಿತವಾಯಿತು.
ಭಾರತದ ಮೊದಲ ಮಟಕಾ ಪ್ರವರ್ತಕರಾದ ಕಲ್ಯಾಣ್ ಜಿ ಭಗತ್ ಇವರ ಓಸಿ ಮಾರ್ಕೆಟ್ ಹೆಸರು #ವರ್ಲಿ_ಮಟಕಾ.
ಕಲ್ಯಾಣ್ ಜಿ
ಭಗತ್ 1962 ರಲ್ಲಿ ವರ್ಲಿ ಮಟಕಾ ಆರಂಭಿಸಿದರು.
ನಂತರ #ರತನ್_ಖತ್ರಿ #ರತನ್_ಮಟ್ಕಾ ಅಥವಾ 'ಮೇನ್ ಬಜಾರ್' ಆರಂಭಿಸಿದರು ಅವರು ಇಸ್ಪೀಟ್ ಎಲೆಗಳನ್ನು ಬಳಸಿ ನಂಬರ್ ಡ್ರಾ ಮಾಡುವುದರಿಂದ ಮಟಕಾ ಹೆಚ್ಚು ಪಾರದರ್ಶಕಗೊಳಿಸಿದರು.
ಈಗಿನ ಸ್ಕಿಲ್ ಗೇಮ್, ಆನ್ ಲೈನ್, ಜಂಗಲಿ ರಮ್ಮಿ ಇತ್ಯಾದಿಗಳಷ್ಟು ಮಟಕಾ ಮಾರಕವಲ್ಲ ಎನ್ನುತ್ತಾರೆ.
ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು #ಅಂಕದ_ಜುಗರ್' ಎಂದು ಕರೆಯಲಾಗುತ್ತಿತ್ತು.
1960ರ ದಶಕದಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್‌ಚೇಂಜ್ ದರ ರದ್ದಾದ ನಂತರ ಮಣ್ಣಿನ ಮಡಕೆಯಿಂದ ಚೀಟಿ ಎತ್ತುವ ಪದ್ಧತಿ ಜಾರಿಗೆ ಬಂದಿತು ಅದರಿಂದಲೇ ಇದಕ್ಕೆ #ಮಟಕಾ ಎಂಬ ಹೆಸರು ಚಾಲ್ತಿಗೆ ಬಂದಿದೆ.
1970 ರಿಂದ 90ರ ದಶಕದಲ್ಲಿ ಮಟ್ಕಾ ಉದ್ಯಮವು ಭಾರತದಲ್ಲಿ ಗರಿಷ್ಟ ಮಟ್ಟ ತಲುಪಿತ್ತು, ಆಗಿನ ಮಟಕಾ ದೈನಂದಿನ ವಹಿವಾಟು ರೂ 5 ಕೋಟಿ ದಾಟಿತ್ತಂತೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ 1975-1977 ರಲ್ಲಿ ರತನ್ ಖತ್ರಿ ಬಂಧನಕ್ಕೊಳಗಾದ ನಂತರ ಮಟಕಾ ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿತು.
ಪ್ರಸ್ತುತ ಮಟಕಾ ಜೂಜಾಟವು ಭಾರತದಲ್ಲಿ ಅಕ್ರಮವಾಗಿದ್ದರೂ,
ಸಂಪೂರ್ಣ ನಿಯಂತ್ರಣ ಅಸಾಧ್ಯ ಆಗಿದೆ.
ಅದು ಈಗ ಆನ್ ಲೈನ್ ಮೂಲಕ ಹೊಸ ಮಾರ್ಗದಲ್ಲಿ ಅನಧಿಕೃತವಾಗಿ ನಡೆಯುತ್ತಿದೆ.
ಕಲ್ಯಾಣ್ ಜಿ ಭಗತ್ ಗುಜರಾತ್‌ನ ಕಛ್‌ನ ಗೇಮ್ಸ್ ವಾಲಾದ ರತಾಡಿಯಾ ಗ್ರಾಮದಲ್ಲಿ ರೈತನ ಮಗನಾಗಿ ಜನಿಸಿದರು.
ಕಲ್ಯಾಣ್‌ಜಿಯವರ ಕುಟುಂಬದ ಮೂಲ ಹೆಸರು ಗಾಲಾ ಮತ್ತು ಭಗತ್ ಎಂಬ ಹೆಸರು ಇದು ಭಕ್ತ ಎಂಬ ಪದದ ಮಾರ್ಪಾಡು ಇದು.
ಈ ಹೆಸರು ಕಛ್‌ನ ರಾಜನು ಇವರ ಧಾರ್ಮಿಕತೆಗಾಗಿ ಇವರ ಕುಟುಂಬಕ್ಕೆ ನೀಡಿದ ಬಿರುದಾಗಿದೆ.
ಕಲ್ಯಾಣ್ ಜಿ ಭಗತ್ ಅವರು 1941 ರಲ್ಲಿ ಬಾಂಬೆಗೆ ವಲಸೆ ಬಂದವರು ಆರಂಭದಲ್ಲಿ ಮಸಾಲಾ ಫೆರ್ರಿವಾಲಾ ಎನ್ನುವ ಮಸಾಲೆ ಪದಾರ್ಥಗಳ ಮಾರಾಟಗಾರರಾಗಿದ್ದರು ಮತ್ತು ದಿನಸಿ ಅಂಗಡಿಯನ್ನು ನಿರ್ವಹಿಸುವಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು.
1960 ರ ದಶಕದಲ್ಲಿ ಕಲ್ಯಾಣ್‌ಜಿ ಭಗತ್ ವರ್ಲಿಯಲ್ಲಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾಗ ನ್ಯೂಯಾರ್ಕ್ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಹತ್ತಿಯ ಆರಂಭಿಕ ಮತ್ತು ಮುಕ್ತಾಯ ದರಗಳ ಆಧಾರದ ಮೇಲೆ ಪಂತಗಳನ್ನು ಸ್ವೀಕರಿಸುವ ಮೂಲಕ ಮಟಕಾ ಜೂಜಾಟದ ಮೊದಲ ಮೂಲ ರೂಪವನ್ನು ಪ್ರಾರಂಭಿಸಿದರು .
ಅವರು ವರ್ಲಿಯಲ್ಲಿರುವ ತಮ್ಮ ಕಟ್ಟಡ ವಿನೋದ್ ಮಹಲ್‌ನ ಕಾಂಪೌಂಡ್‌ನಿಂದ ಮಟಕಾ ವ್ಯವಹಾರದ ಕಾರ್ಯ ನಿರ್ವಹಿಸುತ್ತಿದ್ದರು.
1990 ರ ದಶಕದ ಆರಂಭದಲ್ಲಿ ಕಲ್ಯಾಣ್ ಜಿ ಭಗತ್ ಮರಣದ ನಂತರ ಅವರ ಮಗ #ಸುರೇಶ್_ಭಗತ್ ಅವರ ವ್ಯವಹಾರವನ್ನು ವಹಿಸಿಕೊಂಡು ಮುಂದುವರಿಸಿದರು.
ಇವರ ವರ್ಲಿ ಮಟಕಾ ಹೆಚ್ಚಾಗಿ ಕಲ್ಯಾಣ್ ಮಟಕಾ ಅಥವ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.
ಮಟಕಾ ಜೂಜಾಟದ ಫಲಿತಾಂಶಗಳು, ಚಾರ್ಟ್‌ಗಳು ಮತ್ತು ಅಂದಾಜುಗಳನ್ನು ಸೂಚಿಸುವ ಚಾರ್ಟ್ ಗಳು /ಪತ್ರಿಕೆಗಳು ಇವರಿಂದ ಮುದ್ರಣವಾಗಿ ಪ್ರಸಾರವಾಗುತ್ತಿತ್ತು.
ಇದು ಅನೇಕ ದಶಕಗಳ ಕಾಲ ಭಾರತದ ಎಲ್ಲಾ ಭಾಷೆಗಳಲ್ಲಿ ರಹಸ್ಯವಾಗಿ ಮುದ್ರಣವಾಗಿ ಪ್ರಸಾರವಾಗುತ್ತಿತ್ತು.
ಈಗ ಇದು ಅಂತರ್ಜಾಲದ DPBoss ನಂತಹ ಸೈಟ್‌ಗಳಲ್ಲಿ ಲಭ್ಯವಿದೆ.
ಅಲ್ಲಿ ಪಂಟರುಗಳು ಹೆಚ್ಚಾಗಿ ಸರ್ಚ್ ಮಾಡುತ್ತಾರೆ ಇದರಲ್ಲಿ ಪ್ರತಿದಿನ ನಡೆಯುವ ಲೈವ್ ಮಟಕಾ ಫಲಿತಾಂಶಗಳನ್ನು ಕೂಡ ಒದಗಿಸುತ್ತದೆ.
ಮಟಕಾ ಜುಗಾರಿ ಕಾನೂನು ಬಾಹೀರ ಆದ್ದರಿಂದ ಅದು ಬಹಿರಂಗವಾಗಿ ಕಾಣುವುದಿಲ್ಲ ಆದರೆ ಕಾನೂನು ಬದ್ದವಾದ ಸ್ಕಿಲ್ ಗೇಮ್ ಗಳಿಂದ ಹಾಗೂ ಚೀನಾದ ಲೋನ್ ಶಾರ್ಕ್ ಗಳಿಂದ ಹೆಚ್ಚು ಆತ್ಮಹತ್ಯೆಗಳು ಆಗುತ್ತಿದೆ.
#mataka #gambling #bombay #mumbai
#illegalActivities #CrimeAlert #police
#loanshark #junglirummy #skillgame
Comments
Post a Comment