Skip to main content

Posts

Showing posts with the label BESTHARA RANI CHAMPAKA REVIEWS -5

ಬೆಸ್ತರ ರಾಣಿ ಚಂಪಕಾ ವಿಮಷೆ೯-5

ರತ್ನಾಕರ್ ಸಿ. ಕುನುಗೋಡು ಸಾಗರ ತಾಲ್ಲೂಕಿನ ತುಮರಿಯವರು, ಈಗ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಸಕಾ೯ರಿ ಪದವಿ ಕಾಲೇಜಿನ ಅಸಿಸ್ಟೆಂಟ್ ಪ್ರೋಪೆಸರ್ ಆಗಿದ್ದಾರೆ.  ಇವರು ಆನಂದಪುರಂನಲ್ಲಿ ವಿದ್ಯಾಬ್ಯಾಸ ಮಾಡುವಾಗ ಚಂಪಕ ಸರಸ್ಸು ಇವರ ಓದಿನ ತಾಣವಾಗಿತ್ತೆ೦ದು ತಿಳಿಸಿದ್ದಾರೆ.   ಚರಿತ್ರೆ ಓದಿ ಬೋದಿಸುವ ಇವರ ವಿಮಷೆ೯ ವಿಶೇಷವಾಗಿದೆ. ರಂಗೋಲಿಯ ಹುಡುಗಿ 'ಚಂಪಕಾ'ಳ ದುರಂತ ಪ್ರೇಮ ಕಥನ...   ನೆನ್ನೆ ಹಿರಿಯರಾದ 'ಕೆ.ಅರುಣ್ ಪ್ರಸಾದ್' ಅವರ  ಇತ್ತೀಚೆಗೆ ಬಿಡುಗಡೆಗೊಂಡ 'ಬೆಸ್ತರರಾಣಿ ಚಂಪಕಾ' ಕಾದಂಬರಿ ಕೈಸೇರಿತು. ಕೈಸೇರಿದ ಒಂದೇ ದಿನದಲ್ಲಿ ಪೂರ್ಣ ಓದಿಸಿಕೊಂಡು, ಮತ್ತೆ ಮತ್ತೆ ಕಾಡುತ್ತಿರುವ ಕಾರಣಕ್ಕಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ.    ಸೌರವ್ಯೂಹದಲ್ಲಿ ಜೀವಿ ಗಳಿರುವ ಏಕೈಕ ಗ್ರಹ ಭೂಮಿ. ಅದಕ್ಕೆ ಕಾರಣ 'ಜಲ'. ಜಲ ಮೂಲದಿಂದಲೇ ಜೀವಾಂಕುರವಾಗಿ  ಜೀವಜಗತ್ತು ಅಸ್ತಿತ್ವಕ್ಕೆ ಬಂದಿದ್ದು. ನಾಗರೀಕತೆ ವಿಕಾಸಗೊಂಡಿದ್ದು ನದಿಬಯಲಿನಲ್ಲೇ. ಈ ಜಲಮೂಲ ಪರಂಪರೆಯ ಇಂದಿನ ವಾರಸುದಾರರು 'ಬೆಸ್ತರು'. ನಮ್ಮೆಲ್ಲಾ ಮಹಾ ಪುರಾಣಗಳು ಜಲಪ್ರತೀಕವಾದ ಗಂಗೆಯಿಂದಲೇ ಆರಂಭಗೊಳ್ಳುತ್ತವೆ. ಇಂದಿಗೂ ನಮ್ಮೆಲ್ಲಾ ಆಚರಣೆ ಗಳಲ್ಲಿ ತುಂಬಿದಕೊಡದ ಕಳಸಕ್ಕೆ ಅಗ್ರಸ್ಥಾನ. ಇದು ಸೃಷ್ಟಿಯ ಮೂಲ ಜಲ ಪರಂಪರೆಯ ಸ್ಮರಣೆಯ ಭಾಗವಾಗಿದೆ. ಹೀಗೆ ಜಲಪರಂಪರೆಯೊಂದಿಗೆ ಬೆರತು ಅದನ್ನೇ ತಮ್ಮ ...